ಆರ್ ಸಿ ಬಿ… ಆರ್ ಸಿಬಿ… ಆರ್ ಸಿಬಿ… ಇದು ಕೇವಲ ಹೆಸರಲ್ಲ. ಇದು ಕನ್ನಡಿಗರ ನಾಡಿ ಮಿಡಿತ. ಪ್ರತಿ ಕನ್ನಡಿಗ ಕಾಯುತ್ತಿದ್ದ ದಿನ. ಇದಕ್ಕಾಗಿ ಕಾದಿದ್ದು ಒಂದೆರಡು ವರ್ಷ ಅಲ್ಲ. ಬರೋಬ್ಬರಿ ೧೮ ವರ್ಷ. ಆರ್ ಸಿಬಿ ಯ ಒಂದೊಂದು ವರ್ಷವೂ ಶಬರಿ ಕಾದಂತೆ ಕಾದಿದ್ದು ಕನ್ನಡಿಗರು. ಫೈನಲಿ ಆ ದಿನ ನಿನ್ನೆ ಬಂದೇ ಬಿಡ್ತು. ಇಷ್ಟು ದಿನ ಈ ಸಲ ಕಪ್ ನಮ್ದೇ ಅಂತಿದ್ದವರು ಈ ಸಲ ಕಪ್ ನಮ್ದು ಅಂತಿದ್ದಾರೆ.

ಈ ಸಂಭ್ರಮಾಚರಣೆ ಹಬ್ಬದ ರೀತಿ ಆಚರಿಸಲಾಗುತ್ತಿದೆ. ಈ ದಿನವನ್ನ ತಮ್ಮ ಮನೆಯ ಸಂಭ್ರಮದ ರೀತಿ ನೋಡಲಾಗುತ್ತಿದೆ. ಇದೇ ಕನ್ನಡಿಗರ, ಕರುನಾಡಿನ ಸಂಸ್ಕೃತಿ. ಇದು ಕೇವಲ ಕನ್ನಡಿಗರಲ್ಲ ಸರ್ಕಾರವೂ ಸಂಭ್ರಮ ಪಡುತ್ತಿರೋ ದಿನ. ಈ ದಿನ ಎಂದಿಗೂ ಇತಿಹಾಸದಲ್ಲಿ ಉಳಿಯಲಿ ಅಂತ ಸಂಭ್ರಮಾಚರಣೆಗೆ ಮುಂದಾಗಿದೆ.

ಈ ಬಗ್ಗೆ ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಕರ್ನಾಟಕಕ್ಕೆ ಆರ್ ಸಿಬಿ ಹುಡುಗರು ಗೌರವ, ಹೆಮ್ಮೆ ತಂದಿದ್ದಾರೆ
ಅವರನ್ನ ಅಭಿನಂದಿಸುತ್ತೇನೆ,ಅವರಿಗೆ ನಾವು ಗೌರವ ಸಲ್ಲಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರಾಫಿಕ್ ಗೂ ಸಮಸ್ಯೆ ಆಗಬಾರದು, ಸಾಕಷ್ಟು ಯುವಕರು ಭಾಗವಹಿಸುತ್ತಾರೆ. ಆರ್ಸಿಬಿಯವ್ರು ಅವರು ಶೆಡ್ಯೂಲ್ ಹಾಕೊತಾರೆ. ಆದರೆ ಕಂಟ್ರೋಲ್ ಮಾಡೋದು ಯಾರು ನಾವಲ್ವ, ಸರ್ಕಾರ ನಮ್ಮ ಪೊಲೀಸರು ಅಲ್ವ. ಹೋಂ ಮಿನಿಸ್ಟರ್ , ಪೊಲೀಸ್ ಕಮೀಷನರ್ ಎಲ್ಲಾ ಕೂತು ಮಾತನಾಡಿ ನಿರ್ಧಾರ ಮಾಡ್ತಾರೆ. ನಾನು ಕೂಡ ಸಂಪೂರ್ಣ ಮ್ಯಾಚ್ ನೋಡಿದ್ದೇನೆ.
ಆರ್ಸಿಬಿ ಟೀಂ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಸನ್ಮಾನ ನಡೆಸೋ ಬಗ್ಗೆ ಮಾತಾಡುತ್ತಿದ್ದೇವೆ.

ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಆರ್ಸಿಬಿ ಗೆದ್ದಿದೆ, ನಾನು ಎಲ್ಲ ಆರ್ಸಿಬಿ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅವರ ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ದೇಶ, ರಾಜ್ಯ ಹೆಮ್ಮೆ ಪಡುತ್ತಿದೆ.ಯಾಕೆಂದರೆ ಬೆಂಗಳೂರು ಆರ್ಸಿಬಿ ಯಾವತ್ತೂ ಗೆದ್ದಿರಲಿಲ್ಲ. ಇದು 18 ನೇ ಆವೃತ್ತಿ, ಗೆದ್ದಿದ್ದಾರೆ. ತುಂಬ ಅತೀವ ಸಂತೋಷವನ್ನುಂಟು ಮಾಡಿದೆ. ಸಂಜೆ ನಾಲ್ಕು ಗಂಟೆಗೆ ಗ್ರ್ಯಾಂಡ್ ಸ್ಟೇಪ್ ಮೇಲೆ ನಾನು ಬಹುಮಾನ ಕೊಡ್ತಿದಿನಿ. ಅವರು ಗೆದ್ದಿರೋ ಬಹುಮಾನವನ್ನೇ ವಾಪಸ್ ಕೊಡ್ತಿದ್ದಿನಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.



