ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಅದ್ಯಾಕೋ ಗೊತ್ತಿಲ್ಲ ಪೂರ್ಣ ಪ್ರಮಾಣದ ಸರ್ಕಾರ ಬಂದರೂ ಸಿದ್ದರಾಮಯ್ಯ ಅವರಿಗೆ ಕಳೆದ ಬಾರಿಯ ಹಾಗೆ ಈ ಬಾರಿ ಸುಲಲಿತವಾಗಿ ಅಧಿಕಾರ ನಡೆಸುವುದಕ್ಕೆ ಸಾಧ್ಯನೇ ಆಗ್ತಾ ಇಲ್ಲ. ಒಂದು ಕಡೆ ವಿಪಕ್ಷದವರು ಆಗಿಂದಾಗಲೇ ಸರ್ಕಾರವನ್ನ ಕೆಣಕುತ್ತಲೇ ಇದ್ದಾರೆ. ಹೇಗೋ ವಿಪಕ್ಷದವರಿಗೆ ಸರಿಯಾದ ತಿರ್ಗೇಟು ನೀಡ್ತಾ ಇದ್ದಾರೆ. ಆದರೆ ಸ್ವಪಕ್ಷದವರಿಂದಲೇ ಬಿರುಸಾದಂತಹ ಬಾಣಗಳು ಬಂದು ತಾಗುತ್ತಿವೆ.
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡ ಸ್ವಪಕ್ಷದವರ ಒಂದಲ್ಲ ಒಂದು ಆರೋಪ, ಸಿಟ್ಟು, ಬೆದರಿಕೆ, ಬಹಿರಂಗ ಅಸಮಾಧಾನ ಇವೆಲ್ಲವನ್ನೂ ಅನುಭವಿಸುತ್ತದೆ ಇದ್ದಾರೆ ಸಿಎಂ ಸಿದ್ದರಾಮಯ್ಯ. ಈಗ ಅಂತಹದ್ದೇ ಮತ್ತೊಂದು ಸಂಕಷ್ಟಕ್ಕೆ ಸಿಎಂ ಸಿಲುಕಿದ್ದಾರೆ. ಹಿರಿಯ ಶಾಸಕರುಗಳು ಸರ್ಕಾರದ ವಿರುದ್ಧ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಇಂದೂ ಕೂಡ ಸರ್ಕಾರದ ವಿರುದ್ಧ ಮತ್ತಿಬ್ಬರು ಶಾಸಕರು ಸಿಡಿದೆದ್ದಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ದ ಸ್ವಪಕ್ಷೀಯ ಶಾಸಕರೇ ಸಿಡಿದೆದ್ದಿದ್ದಾರೆ. ವಸತಿ ಯೋಜನೆಗಳಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ರಾಜಿನಾಮೆಗೆ ಕೈ ಶಾಸಕರೇ ಒತ್ತಾಯ ಮಾಡ್ತಿದ್ದಾರೆ. ಬಿ.ಆರ್ ಪಾಟೀಲ್ ಬಳಿಕ ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ತಿರುಗಿಬಿದ್ದಿದ್ದಾರೆ. ದುಡ್ಡು ಕೊಟ್ಟೋರಿಗೆ ಮಾತ್ರ ವಸತಿ ಯೋಜನೆಯಲ್ಲಿ ಮನೆ ಸಿಗೋದು ಅಂತಾ ಹಿರಿಯ ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಹಾಕಿದ್ದ, ಬಾಂಬ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಸಚಿವರ ವಿರುದ್ದ ಒಬ್ಬೊಬ್ಬರೇ ತಿರುಗಿ ಬೀಳ್ತಿದ್ದಾರೆ. ಅರ್ಹ ಫಲಾನುಭವಿಗಳನ್ನ ಬಿಟ್ಟು, ದುಡ್ಡು ಕೊಟ್ಟೋರಿಗೆ ವಸತಿ ಇಲಾಖೆಯಲ್ಲಿ ಮನೆಗಳನ್ನ ನೀಡ್ತಿರೋದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಸಿಡಿದೆದಿದ್ದಾರೆ. ವಸತಿ ಸಚಿವರು ರಾಜೀನಾಮೆ ನೀಡೋದು ಒಳ್ಳೇದು ಅಂತಾ ಆಗ್ರಹಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಹಿರಿಯ ಸದಸ್ಯರೊಬ್ಬರು ದನಿಯೆತ್ತಿದ್ದಾರೆ.. ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡಬೇಕು. ಅಲ್ಲಿಯವರೆಗೂ ರಾಜೀನಾಮೆ ನೀಡುವುದು ಒಳ್ಳೆಯದು. ತನಿಖೆ ಮುಗಿದ ಬಳಿಕ ಬೇಕಾದರೆ ಮತ್ತೆ ಮಂತ್ರಿ ಆಗಲಿ. ಬೇರೆ ಬೇರೆ ಹಗರಣಗಳಲ್ಲೂ ಕೂಡ ಹಲವರು ರಾಜೀನಾಮೆ ಕೊಟ್ಟಿದ್ದಾರೆ ಅಂತಾ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.
ಶಾಸಕ ಬಿಆರ್ ಪಾಟೀಲ್ ಮತ್ತೆ ಸಿಡಿದಿದ್ದಾರೆ. ಹಗರಣಗಳ ಬಗ್ಗೆ ಇನ್ನೂ ಹಲವರು ಮಾತನಾಡುವರಿದ್ದಾರೆ. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಅಂತ ತಮ್ಮ ನಿಲುವು ಹೇಳಿದ್ದಾರೆ. ಇತ್ತ ಬಿ ಆರ್ ಪಾಟೀಲ್ ಹೇಳಿಕೆ ಭಾರೀ ಚರ್ಚೆಗೆ ಒಳಗಾಗ್ತ ಇರೋ ಬೆನ್ನಲ್ಲೇ
25 ನೇ ತಾರೀಖು ಬಂದು ಮಾತನಾಡಲು ಬಿ. ಆರ್ ಪಾಟೀಲ್ ಗೆ ಸೂಚನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಶಾಸಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರೋ ಡಿಸಿಎಂ ಡಿಕೆ ಶಿವಕುಮಾರ್, ನಾನು ಏನನ್ನ ಹೇಳಬೇಕೋ ಅದನ್ನ ಹೇಳಿದ್ದೀನಿ.. ಉಳಿದಿದ್ದನ್ನ ಸಿಎಂ, ವಸತಿ ಸಚಿವರು ಹೇಳಬೇಕು ಅಂದ್ರು.. ರಾಜುಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಅಂದ್ರು..
ಇತ್ತ ಬಿ.ಆರ್.ಪಾಟೀಲ್ ಆಡಿಯೋ ಬಾಂಬ್ ಹೈಕಮಾಂಡ್ ಅಂಗಳಕ್ಕೂ ಹೋಗಿದೆ. ಸ್ವಪಕ್ಷದ ಹಿರಿಯ ಶಾಸಕರ ಹೇಳಿಕೆಯಿಂದ ಸರ್ಕಾರ ಮಾತ್ರವಲ್ಲದೇ ಹೈಕಮಾಂಡ್ ಕೂಡ ಮುಜುಗರಕ್ಕೊಳಗಾಗಿದೆ. ಪಾಟೀಲ್ ಹೇಳಿಕೆ ಬಗ್ಗೆ ಹೈಕಮಾಂಡ್ ಮಾಹಿತಿ ಕೇಳಿದೆ. ಇಂದು ಸಂಜೆ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್
ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಮಾಡಲಿದ್ದಾರೆ. ಈ ವೇಳೆ
ಜಮೀರ್ ವಿರುದ್ಧದ ಆರೋಪದ ಬಗ್ಗೆ ಮಾಹಿತಿ ನೀಡೋ ಸಾಧ್ಯತೆ ಇದೆ.
ಇತ್ತ ರಾಜು ಕಾಗೆ ಕೂಡ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳ ನಡೆಗೆ ತೀವ್ರ ವೇಸರ ವ್ಯಕ್ತಪಡಿಸಿದ್ದಾರೆ. ನಾನು ಶಾಸಕನಾಗಿಬೊಂದು ಚರಂಡಿ ಮಾಡಿಸೋದು ಕಷ್ಟ ಆಗಿದೆ. ಒಂದು ಸ್ಕೂಲ್ ಕಟ್ಟಿಸೋದಕ್ಕೆ ಆಗ್ತಾ ಇಲ್ಲ. ಎಂಥ ಹೀನಾಯ ಪರಿಸ್ಥಿತಿ ಇದೆ. ಹೀಗೆ ಆದರೆ ರಾಜಿನಾಮೆ ಕೊಡುವ ಅನಿವಾರ್ಯತೆ ಕೂಡ ಬರಬಹುದು ಎಂದಿದ್ದಾರೆ. ಸದ್ಯ ಶಾಸಕರುಗಳ ಈ ಬಹಿರಂಗ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಒಳಗಾಗೋದ್ರ ಜೊತೆಗೆ ಪಕ್ಷಕ್ಕೆ ಮುಜುಗರ ಕೂಡ ಆಗ್ತಾ ಇದೆ.



