ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾರ ಜೀವ ಅಥವಾ ಜೀವನ ಯಾವಾಗ ಅಂತ್ಯ ಆಗುತ್ತದೆ ಎಂದು ಊಹೆ ಮಾಡುವುದಕ್ಕೆ ಕೂಡ ಸಾಧ್ಯ ಆಗುವುದಿಲ್ಲ. ಇಂಥ ಹಲವು ಘಟನೆಗಳು ಇತ್ತೀಚೆಗೆ ನಡೆಯುತ್ತಲೇ ಇದೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ಈ ಯೂಟ್ಯೂಬರ್ ಗೆ ಕೇವಲ 17 ವರ್ಷ ವಯಸ್ಸು, ಸೋಷಿಯಲ್ ಮೀಡಿಯಾವನ್ನು ಒಳ್ಳೆಯ ಕಾರಣಕ್ಕೆ ಬಳಸಿಕೊಂಡು, ಅದರಿಂದ ಬಹಳ ಜನಪ್ರಿಯತೆ ಪಡೆದುಕೊಂಡಿದ್ದರು. ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ, ಮರುದಿನವೇ ಈಕೆಯ ಹ*ತ್ಯೆ ಆಗಿದೆ. ಗೊತ್ತಿರುವ ವ್ಯಕ್ತಿಯೇ ಇಂಥ ಕೆಲಸವನ್ನು ಮಾಡಿದ್ದು, ಇದೀಗ ಈ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಆಗಿದ್ದು ಏನು? ಈಕೆಗೆ ಈ ರೀತಿ ಆಗಿದ್ದು ಯಾಕೆ? ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.. ನೀವು ಕೂಡ ಇನ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಹುಷಾರಾಗಿರಿ.

ಸೋಷಿಯಲ್ ಮೀಡಿಯಾ ಅನ್ನೋದು ಸೆಲೆಬ್ರಿಟಿಗಳಿಗೆ ಮಾತ್ರ ಜೋರಾಗಿ ಸದ್ದು ಮಾಡುವ ಅವಕಾಶ ಸಿಗುತ್ತಿಲ್ಲ. ಸಾಕಷ್ಟು ಜನರು ಸೋಷಿಯಲ್ ಮೀಡಿಯಾ ಮೂಲಕ ಒಳ್ಳೆಯ ವಿಚಾರಗಳನ್ನು ಜನರಿಗೆ ನೀಡುತ್ತಾ, ಅದರಿಂದ ಜನಪ್ರಿಯತೆ ಮತ್ತು ಜನರ ಪ್ರೀತಿ ಎಲ್ಲವನ್ನು ಗಳಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್, ಫೇಸ್ ಬುಕ್, ಯೂಟ್ಯೂಬ್ ಇದೆಲ್ಲವೂ ಸಹ ಜನರಿಗೆ ಒಳ್ಳೆಯ ಪ್ಲಾಟ್ ಫಾರ್ಮ್ ಆಗಿದೆ. ಇವುಗಳಲ್ಲಿ ಜನರು ತಮ್ಮ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಮೂಲಕ, ಜನರನ್ನು ತಲುಪುತ್ತಿದ್ದಾರೆ. ಜನರು ನೆಗಟಿವ್ ವಿಚಾರಗಳನ್ನು ಮಾತ್ರ ಯಾವಾಗಲೂ ಹಂಚಿಕೊಳ್ಳುವುದಿಲ್ಲ, ಕೆಲವರು ಒಳ್ಳೆಯ ವಿಷಯಗಳನ್ನು ಸಹ ಹಂಚಿಕೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಸಹ ಮಾಡುತ್ತಾರೆ. ಇಂಥ ಕೆಲಸಗಳನ್ನು ಮಾಡುವುದರಿಂದ ಜನರು ಸಹ ಹಲವು ವಿಚಾರಗಳನ್ನು ಸಹ ತಿಳಿದುಕೊಳ್ಳುತ್ತಾರೆ.
ಈ ರೀತಿ ಒಳ್ಳೆಯ ವಿಚಾರಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಯೂಟ್ಯೂಬರ್ ಸನಾ ಯೂಸುಫ್. ಇವರು ಪಾಕಿಸ್ತಾನದ ಮೂಲದ ಖ್ಯಾತ ಯೂಟ್ಯೂಬರ್. ಇವರ ವಯಸ್ಸು 17 ಅಷ್ಟೇ, ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಇವರು ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ, ಮಹಿಳೆಯರ ಸಮಸ್ಯೆಗಳ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಹಾಗೆಯೇ ಸಮಾಜದ ಕಣ್ಣು ತೆರೆಸುವ ಇನ್ನಷ್ಟು ಹಲವು ವಿಚಾರಗಳ ಬಗ್ಗೆ ಸನಾ ಯೂಸುಫ್ ಅವರು ಶೇರ್ ಮಾಡಿಕೊಳ್ಳುತ್ತಿದ್ದರು. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಇವರು ಹೆಚ್ಚು ಜನರನ್ನು ತಲುಪಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಚಿಕ್ಕ ವಯಸ್ಸಿಗೆ ಸಾಕಷ್ಟು ಕನಸುಗಳನ್ನು ಕಂಡಿದ್ದ ಸನಾ ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕು ಎನ್ನುವ ಕನಸುಗಳನ್ನ ಸಹ ಕಂಡಿದ್ದರು. ಆದರೆ ಅದೆಲ್ಲವು ಅವರ್ಸ್ ಹುಟ್ಟುಹಬ್ಬ ನಡೆದ ಮರುದಿನವೇ ನುಚ್ಚುನೂರಾಗಿದೆ.

ಸನಾ ಯೂಸುಫ್ ಅವರು ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಎಲ್ಲರೊಡನೆ ಆಚರಿಸಿಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಚೆನ್ನಾಗಿ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಇವರ ಮನೆಯಲ್ಲೇ ಹತ್ಯೆ ನಡೆದಿದೆ. ಈ ರೀತಿಯ ಕೃತ್ಯ ಎಸಗಿದ್ದು ಮತ್ಯಾರು ಅಲ್ಲ, ಸನಾ ಅವರ ಸಂಬಂಧಿಯೇ ಎಂದು ಸಹ ತಿಳಿದುಬಂದಿದೆ. ಆ ವ್ಯಕ್ತಿ ಮಾಡಿದ ಕೆಲಸ ಏನು ಎಂದರೆ, ಸನಾ ಅವರು ನಿನ್ನೆಯಷ್ಟೇ ಅವರ ಮನೆಯಲ್ಲಿ ಎಂದಿನಂತೆ ಎಲ್ಲರೊಡನೆ ಮಾತನಾಡುತ್ತಾ ಚೆನ್ನಾಗಿದ್ದರು, ಅದೇ ವೇಳೆಗೆ ಸನಾ ಅವರ ಸಂಬಂಧಿಕರು ಮನೆಗೆ ಬಂದು, ಮನೆಯ ಹೊರಗಡೆ ನಿಂತು ಸನಾ ಅವರ ಜೊತೆಗೆ ಸಹ ಒಂದಷ್ಟು ಹೊತ್ತು ಮಾತನಾಡಿದ್ದಾನೆ. ನಂತರ ಸನಾ ಮನೆಯೊಳಗೆ ಹೋಗಿದ್ದಾರೆ. ಈ ವ್ಯಕ್ತಿ ತಕ್ಷಣವೇ ತಾನು ಕೂಡ ಸನಾ ಅವರನ್ನು ಹಿಂಬಾಲಿಸಿ ಮನೆಯೊಳಗೆ ಹೋಗಿ, ಹಲ್ಲೆ ಶುರು ಮಾಡಿಕೊಂಡಿದ್ದಾಜೆ. ಮನೆಯಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.
ಸನಾ ಅವರ ಮನೆಯ ಒಳಗೆ ಹೋದ ವ್ಯಕ್ತಿ, ಒಂದಷ್ಟು ಸಾರಿ ಇವರ ಮನೆಯ ಒಳಗಡೆ ಗುಂಡು ಹಾರಿಸಿದ್ದಾನೆ, ಎರಡು ಸಾರಿ ಎರಡು ಗುಂಡು ಸನಾ ಅವರಿಗೆ ತಾಗಿದ್ದು, ಇದರಿಂದ ಆಕೆ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ಘಟನೆ ಪಾಕಿಸ್ತಾನದ ಎಲ್ಲೆಡೆ ಬಹಳ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕೆಯ ಹತ್ಯೆಗೆ ನ್ಯಾಯ ಸಿಗಬೇಕು, ಅದು ಹೇಗೆ ಸಂಬಂಧಿಕರೆ ಬಂದು, ಈ ರೀತಿ ಮಾಡಿಬಿಡುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ರೀತಿ ಮಾಡಿದ ಆ ವ್ಯಕ್ತಿ ಇನ್ನು ಕೂಡ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಪ್ರಸ್ತುತ ಸನಾ ಅವರ ದೇಹವನ್ನು ಮರ*ಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಜೊತೆಗೆ ಸನಾ ಮೇಲೆ ವೈಯಕ್ತಿಕ ದ್ವೇಷ ಏನಾದರೂ ಇತ್ತಾ ಎನ್ನುವ ಬಗ್ಗೆ ಸಹ ತನಿಖೆ ಶುರುವಾಗಿದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಕೇಸ್ ಗಳು ಕೂಡ ಹೆಚ್ಚಾಗುತ್ತಲೇ ಇದೆ. ವೈಯಕ್ತಿಕ ದ್ವೇಷದ ಕಾರಣ, ಇನ್ನೇನೋ ತೊಂದರೆ ಇದ್ದಿರಬಹುದು ಅಥವಾ ಇನ್ನೇನೋ ನಡೆದಿರಬಹುದು, ಆ ಕಾರಣಕ್ಕೆ ದಿಢೀರ್ ಎಂದು ಬಂದ ವ್ಯಕ್ತಿ ಈ ರೇರ್ತಿಯ ಕೆಲಸ ಮಾಡಿದ್ದಾನೆ. ಪೊಲೀಸರು ಈತನನ್ನು ಹುಡುಕುತ್ತಿದ್ದು, ಈ ಕೃ*ತ್ಯದ ಹಿಂದಿನ ಕಾರಣ ಏನಿರಬಹುದು ಎಂದು ತನಿಖೆ ನಡೆಸುತ್ತಿದ್ದಾರೆ. ಈ ಕೇಸ್ ಭಾರಿ ಸಂಚಲನ ಸೃಷ್ಟಿಸಿದ್ದು, ಹೆಣ್ಣುಮಕ್ಕಳ ಜೀವಕ್ಕೆ ಸೇಫ್ಟಿ ಇಲ್ಲವೇನು ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಒಟ್ಟಿನಲ್ಲಿ ಈ ರೀತಿಯ ಕೇಸ್ ಗಳಿಗೆ ನ್ಯಾಯ ಸಿಗುವುದೇ ಕಷ್ಟ ಅನ್ನೋ ಹಾಗಿರುವಾಗ, ದಿನೇ ದಿನೇ ಇವುಗಳು ಜಾಸ್ತಿ ಆಗುತ್ತಿರುವುದು, ಮಾನವೀಯತೆಯ ಮೇಲೆ, ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವ ಹಾಗೆ ಮೂಡಿದೆ. ಎಲ್ಲಾ ಕಡೆ ಈ ಥರದ ಕೇಸ್ ಗಳು ನಡೆಯುತ್ತಿದೆ.
ಇನ್ನು 18 ಕೂಡ ತುಂಬದ ಚಿಕ್ಕ ಹುಡುಗಿ, ಇಷ್ಟು ಚಿಕ್ಕ ವಯಸ್ಸಿಗೆ ಬದುಕಲ್ಲಿ ಸಾಧಿಸಬೇಕು, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದು ಮನಸ್ಸು ಮಾಡಿದ್ದ ಹುಡುಗಿಯ ಅಂತ್ಯ ಈ ರೀತಿ ಆಯಿತು ಎನ್ನುವುದೇ ಬೇಸರದ ವಿಷಯ ಆಗಿದೆ. ಈ ಹುಡುಗಿಯ ಆತ್ಮಕ್ಕೆ ಶಾಂತಿ ಸಿಗಲಿ, ಇವರ ತಂದೆ ತಾಯಿ ಮತ್ತು ಕುಟುಂಬಕ್ಕೆ ಮಗಳ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಸಂಭವಿಸುವುದು ಕಡಿಮೆಯಾಗಲಿ ಎಂದು ನಾವು ಸಹ ದೇವರಲ್ಲಿ ಪ್ರಾರ್ಥಿಸೋಣ..



