ಸಿಎಂ ಕನಸು ಕಾಣ್ತಾ ಇದ್ದ ಡಿಕೆ ಶಿವಕುಮಾರ್ ಗೆ ಆಗಿಂದ್ಲಾಗೆ ತಡೆ ಆಗ್ತಲೇ ಇದೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಸಿಗುತ್ತೆ ಅನ್ನೋ ಭರವಸೆ ಡಿಕೆಶಿ ಹಾಗೂ ಅವರ ಹಿಂಬಾಲಕರಿಗೆ ಇತ್ತು. ಅದನ್ನೂ ಮೀರಿ ಮೂರು ವರ್ಷ ಆದರಾದ್ರೂ ಸಿಗುತ್ತೆ ಅನ್ನೋ ತವಕವೂ ಇತ್ತು. ಆದರೆ ಇದ್ಯಾಕೋ ಕೈಗೂಡುವಂತೆ ಕಾಣ್ತಾ ಇಲ್ಲ. ಒಂದಾದರ ಮೇಲೊಂದರಂತೆ ಅಡೆ ತಡೆಗಳು ಬರ್ತಾನೆ ಇದ್ದಾವೆ. ಇದೀಗ ಆರ್ಸಿಬಿಯ ಕಾಲ್ತುಳಿತದ ದುರಂತ ಕೂಡ ಮತ್ತೊಂದು ತಡೆಯಾಗುವ ಸಾಧ್ಯತೆ ಇದೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರಂತದಲ್ಲಿ ೧೧ ಜನ ಸಾವನ್ನಪ್ಪಿದ್ದಾರೆ. ಜನ ಹೆಚ್ಚಾದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಆಗಿದೆ. ಈ ವೇಳೆ ನಲವತ್ತು ಜನರಿಗೆ ಗಾಯಗಳಾಗಿದೆ. ಆರ್ಸಿಬಿಯ ಸಂಭ್ರಮವನ್ನ ಕರುನಾಡು ಸಂಭ್ರಮಿಸಲಿ ಅಂತ ಸರ್ಕಾರ ಕಾರ್ಯಕ್ರಮ ಮಾಡಿತ್ತು. ಆ ಕಾರ್ಯಕ್ರಮ ಸೂತಕದ ಮನೆಯಾಯ್ತು. ಇದರ ಮಧ್ಯೆ ಇದು ಡಿಕೆ ಶಿವಕುಮಾರ್ ನಿಂದಲೇ ಆಗಿದ್ದು ಅಂತ ವಿಪಕ್ಷಗಳು ಟೀಕೆ ಮಾಡ್ತಾ ಇವೆ. ಡಿಕೆ ಶಿವಕುಮಾರ್ ರನ್ನ ಸಂಪುಟದಿಂದ ವಜಾ ಮಾಡಬೇಕು ಅಂತ ಒತ್ತಾಯ ಮಾಡ್ತಾ ಇವೆ.
ಇಂದು ಕೂಡ ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಸುದ್ದಿಗೋಷ್ಟಿ ನಡೆಸಿ ಸುದೀರ್ಘ ಹೇಳಿಕೆಯನ್ನ ನೀಡಿದೆ. ಅವರ ಇಡೀ ಸುದ್ದಿಗೋಷ್ಟಿ ಸಾರಾಂಶ ಡಿಕೆ ಶಿವಕುಮಾರ್ ನಿಂದಲೇ ಈ ಅವಘಡ ನಡೆದಿದೆ. ಹಾಗಾಗಿ ಅವರನ್ನ ಸಂಪುಟದಿಂದ ವಜಾ ಮಾಡಬೇಕು ಅಂತ ಒತ್ತಾಯ ಮಾಡ್ತಾ ಇವೆ. ಇದರ ಮಧ್ಯೆ ಮಾಜಿ ಸಂಸದ ಡಿಕೆ ಸುರೇಶ್ ವಿಪಕ್ಷಗಳ ಮಾತಿಗೆ ಕೆಂಡವಾಗಿದ್ದಾರೆ. ಅವರು ಸಿಎಂ ಆಗ್ತಾರೆ ಅಂತ ಹೀಗೆ ಮಾಡ್ತಾ ಇದ್ದಾರಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಂಡ್ಯದಲ್ಲಿ ಮಾತನಾಡಿರುವ ಅವರು, ಎಲ್ಲಿ ಏನೇ ಆದ್ರೂ ಡಿ.ಕೆ.ಶಿವಕುಮಾರ್ ಮಾತ್ರ ಕಾರಣ. ಡಿಕೆಶಿ ಟಾರ್ಗೆಟ್ ಮಡೋದು ಬಿಟ್ರೆ ಅವರಿಗೆ ಬೇರೆ ಏನೋ ಗೊತ್ತಿಲ್ಲ. ಡಿಕೆಶಿ ಒಬ್ಬರೇ ಎಲ್ಲರಿಗೂ ಕಾಣೋದು. ಯಾವ ಕಾರಣಕ್ಕೆ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಮಾಧ್ಯಮದವರು ಹುಡುಕಿ ಎಂದಿದ್ದಾರೆ. ಜೊತೆಗೆ ಈ ದುಂರಂತಕ್ಕೆ, ಸಾವುನೋವಿಗೆ ಎಲ್ಲರೂ ಕಾರಣ. ಎಲ್ಲರೂ ಈ ವಿಚಾರಕ್ಕೆ ತಲೆತಗ್ಗಿಸಬೇಕಿದೆ. ಇದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ಪೆಹಲ್ಗಾಮ್ ನಲ್ಲಿ ಆದ ದುರಂತ ಕೇಂದ್ರ ಸರ್ಕಾರದ ವೈಫಲ್ಯ ಅಲ್ವಾ.? ಕುಮಾರಸ್ವಾಮಿ ಅವ್ರು ಪ್ರಧಾನಮಂತ್ರಿ, ಹೋಂ ಮಿನಿಸ್ಟರ್ ರಾಜಿನಾಮೆ ಕೇಳಿದ್ರಾ.? ಹೌದು ಅದು ಉಗ್ರರ ಅಟ್ಟಹಾಸ, ಅಮಾಯಕರು ಬಲಿಯಾದ್ರು. ಅದರಲ್ಲಿ ನಾವು ರಾಜಕೀಯ ಮಾಡಲಿಲ್ಲ, ವಿಪಕ್ಷಗಳು ಬೆಂಬಲ ಕೊಡಲಿಲ್ವಾ.? ಈ ಕಾಲ್ತುಳಿತ ಪ್ರಕರಣ ಕೂಡಾ ಅನಿರೀಕ್ಷಿತ ಅವಘಡ. ಲಕ್ಷಾಂತರ ಜನರು ಒಂದೇಕಡೆ ಅನಿರೀಕ್ಷಿತ ಘಟನೆ ನಡೆಯೋದು ಸಹಜ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಾ.ರಾಜಕುಮಾರ್ ಅಂತ್ಯಕ್ರಿಯೆಯಲ್ಲಿ ಅವಘಡ ಆಯ್ತು. ಕುಮಾರಸ್ವಾಮಿ ಆಗ ರಾಜಿನಾಮೆ ಕೊಟ್ರಾ.? ಆಗ ಅವಿತುಕೊಂಡ್ರು ಕೂತಿದ್ರು. ಇದನ್ನ ಕುಮಾರಸ್ವಾಮಿಗೆ, ಅಶೋಕ್ ಗೆ, ವಿಜಯೇಂದ್ರಗೆ ಕೇಳಿ. ಇದರಲ್ಲಿ ರಾಜಕೀಯ ಬಿಡಿ, ರಾಜಕೀಯ ಹೊರತುಪಡಿಸಿ ಇದನ್ನ ನೋಡಿ.
ಲೋಪ ಆಗಿರೋದು ನಿಜಾ, ಅದನ್ನ ಸರಿಪಡಿಸೋದು ಸರ್ಕಾರದ ಜವಾಬ್ದಾರಿ.
ಇದರಲ್ಲಿ ರಾಜಕೀಯ ಮಾಡುವವರಿಗೆ ತಿಳಿಹೇಳಬೇಕು ಎಂದು ಕಿಡಿ ಕಾರಿದ್ದಾರೆ.
ಇನ್ನು ಮುಂದುವರೆದು ಮಾತನಾಡಿರುವ ಅವರು, ಕಾಲ್ತುಳಿತ ಪ್ರಕರಣದಲ್ಲಿ ಡಿಕೆಶಿದು ಡ್ರಾಮಾ ಕಣ್ಣೀರು ಎಂಬ ಹೆಚ್ಡಿಕೆ ಹೇಳ್ತಾರೆ. ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್ಫರ್ಟ್.! ಅದು ಇಡೀ ರಾಜ್ಯದ ಜನರಿಗೆ ಗೊತ್ತು. ಯಾವ ಸಂದರ್ಭದಲ್ಲಿ ಯಾವರೀತಿ ಡ್ರಾಮ ಆಡಬೇಕು, ವಿಷಯಗಳನ್ನ ಯಾವರೀತಿ ತಿರುಚಬೇಕು ಅನ್ನೊದು ಗೊತ್ತಿದೆ. ಅವರಿಗೆ ಸತ್ತವರ ಬಗ್ಗೆ ಅನುಕಂಪ ಇದ್ಯೋ, ರಾಜಕೀಯ ಇದ್ಯೋ ಅಂತ ಪ್ರಶ್ನೆ ಮಾಡಿದರು. ಅವರು ಯಾವತ್ತೂ ಸತ್ತವರ ಮೇಲೆ ರಾಜಕಾರಣ ಮಾಡೊಕೊಂಡು ಬೆಳೆದು ಬಂದವರು. ಅವರಿಗೆ ಯಾವತ್ತೂ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಗೌರವ ಇಲ್ಲ.
ಇವತ್ತೂ ರಾಜಕೀಯಕ್ಕಾಗಿ ಆರೋಪ ಮಾಡ್ತಿದ್ದಾರೆ.
ಸರ್ಕಾರದ ಕಾರ್ಯಕ್ರಮ ಇದ್ದಿದ್ದರಿಂದ ಡಿಕೆಶಿ ಡಿಕೆಶಿ ಅಲ್ಲಿ ಹೋಗಿದ್ರು. ವಿಧಾನಸೌದದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಕಾಲ್ತುಳಿತ ಆಗಿದೆ ಅಂತ ಗೊತ್ತಾಯ್ತು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮ ವೈಂಡಪ್ ಮಾಡಿಸೋಕೆ ಹೋಗಿದ್ರು.
ಬಳಿಕ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಲಾಗಿದೆ. ರಾಜಕೀಯವಾಗಿ ಏನೋ ಹೇಳಬೇಕು ಅಂತ ಕುಮಾರಸ್ವಾಮಿ ಹೇಳ್ತಿದ್ದಾರೆ. ವಿಜಯೇಂದ್ರಗೆ ಹೇಳಿ ಮೊದಲು ಮೋದಿ ಹಾಗೂ ಅಮಿತ್ ಶಾ ರನ್ನ ಮೊದಲು ಎ1,ಎ2 ಮಾಡಲಿ. ಪ್ರಯಾಗರಾಜ್ ನಲ್ಲಿ ನಡೆದ ಘಟನೆಗೆ ಎ 1, ಎ2 ಮಾಡಲಿ
ಕುಮಾರಸ್ವಾಮಿ ಇದರ ನೈತಿಕ ಹೊಣೆ ಹೊರ್ತಾರಾ.? ಅಂತ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ರು.
ಸದ್ಯ ಈ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಅವರಿಗೆ ನ್ಯಾಯ ಕೊಡಿಸಬೇಕಾದ ವಿಪಕ್ಷಗಳು ರಾಜಕೀಯ ಆಟ ಶುರು ಮಾಡಿವೆ. ಜೊತೆಗೆ ಸರ್ಕಾರದ ವಿರುದ್ಧ ಅಸ್ತ್ರ ಸಿಕ್ಕಿದೆ ಅನ್ನೋ ಕಾರಣಕ್ಕೆ ದಿನಕ್ಕೊಂದು ಹೇಳಿಕೆ ನೀಡ್ತಾ ಇವೆ. ಸರ್ಕಾರದ ಕಿವಿ ಹಿಂಡಿ ಕೆಲಸ ಮಾಡಬೇಕಾದ ವಿಪಕ್ಷವೇ ತೀರ್ಪು ಕೊಡ್ತಾ ಇರೋದು ದುರಂತ.



