ರಾಟ್ ಕೊಹ್ಲಿನ ಬೀದಿ ವ್ಯಾಪಾರಿಯಂತೆ ನೋಡ್ಕೊಂಡಿದ್ದಾರೆ ! ನಿಖಿಲ್ ಕುಮಾರಸ್ವಾಮಿ.. ಆರ್ ಸಿಬಿ ವಿಜಯೋತ್ಸವದಲ್ಲಿ ಘೋರ ದುರಂತ ಸಂಭವಿಸಿದ ಬಳಿಕ, ನಾನಾ ರೀತಿಯಲ್ಲಿ ಚರ್ಚೆಗಳು ಶುರುವಾಗ್ತಿವೆ. ಯಾವುದೋ ಪ್ರಾಂಚೈಸಿಯ ತಂಡ ಗೆಲುವು ಸಾಧಿಸಿದ್ರೆ, ಅದನ್ನ ಈ ಮಟ್ಟಿಗೆ ಸರ್ಕಾರ ಸೆಲೆಬ್ರೇಷನ್ ಮಾಡೋ ಅಗತ್ಯವಿತ್ತಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆರ್ ಸಿಬಿ ಕಪ್ ಗೆದ್ಮೇಲೆ ಅದ್ರಿಂದ ಕರ್ನಾಟಕಕ್ಕೇನೂ ಲಾಭ ಇಲ್ಲ.
ವಿದೇಶಿ ಕಂಪನಿಯೊಂದರ ಮಾಲೀಕತ್ವದ ಆರ್ ಸಿಬಿ ತಂಡಕ್ಕೆ ಭರ್ಜರಿ ಸನ್ಮಾನ ಸರ್ಕಾರ ಮಾಡಿದ ಮೇಲೆ ಹಲವಾರು ರೀತಿಯಲ್ಲಿ ವಿಮರ್ಶೆಗಳು ವ್ಯಕ್ತವಾಗ್ತಿವೆ. ಘನಘೋರ ಕಾಲ್ತುಳಿತದಿಂದ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಯಾರೊಬ್ರೂ ಜವಾಬ್ದಾರಿ ಹೊತ್ತುಕೊಳ್ಳೋಕೆ ರೆಡಿ ಇಲ್ಲ. ಸರ್ಕಾರವಂತೂ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿ ಕೈತೊಳೆದುಕೊಳ್ತಿದೆ. ಕೆಎಸ್ ಸಿಎನವರು ನಮಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿ ಮಾತಾಡ್ತಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಚಾಟಿ ಬೀಸುತ್ತಿದ್ದಾರೆ.

ವಿಜಯೋತ್ಸವ ಕಾರ್ಯಕ್ರಮ ನಮ್ಮದಲ್ಲ.. ಆದ್ರೆ ಕಪ್ ಮಾತ್ರ ನಮ್ಮದು ಅಂತ ಸಿಎಂ ಹೇಳ್ತಿದ್ದಾರೆ ಎಂದು ಆರ್ ಅಶೋಕ್ ಚಾಟಿ ಬೀಸಿದ್ದಾರೆ. ಅಲ್ಲದೇ ಪ್ಲೇಯರ್ಗಳಿಗೆ ಸನ್ಮಾನ ಮಾಡಲು ಹಾರ ತರಿಸಿದ್ದು ಯಾರು.? ತಿಂಡಿ ತರಿಸಿದ್ದು ಯಾರು.? ಸರ್ಕಾರದ ಕಾರ್ಯಕ್ರಮ ಅಲ್ಲದ ಮೇಲೆ ರಾಜ್ಯಪಾಲರನ್ನ ಹೇಗೆ ಕರೆಸಿದ್ರಿ. ವಿಧಾನಸೌಧದ ಭವ್ಯ ಮೆಟ್ಟಿಲ ಮೇಲೆ ಸನ್ಮಾನ ಹೇಗೆ ಮಾಡಿಸಿದ್ರಿ ಅಂತಾ ಕಿಡಿ ಕಾರುತ್ತಿದ್ದಾರೆ.
ಇದರ ಮಧ್ಯೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಕಿಡಿ ಕಾರಿದ್ದಾರೆ. ಮಾಡಿದ ಕಾರ್ಯಕ್ರಮ ಸರ್ಕಾರದ್ದಾ ಅಥವಾ ಕುಟುಂಬಕ್ಕಾ ಅಂತ ವ್ಯಂಗ್ಯವಾಡಿದ್ದಾರೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ಎರಡೂ ಕಡೆ ಸಂಭ್ರಮಾಚರಣೆ ಯಾಕೆ ಬೇಕಿತ್ತು..? ನಮ್ಮ ದೇಶವನ್ನ ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ ಅವರಿಗೆ ಯಾವ ರೀತಿ ಸನ್ಮಾನ ಮಾಡಿದ್ರಿ..? ಪ್ರೋಟೋಕಾಲ್ ಒಂದಾದರೂ ಪಾಲಿಸಿದ್ದೀರಾ..? ಸ್ಟೇಜ್ ಮೇಲೆ ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ನಿಂತಿದ್ರು.. ಅವರೆಲ್ಲಾ ಸುರಕ್ಷಿತವಾಗಿ ಇದ್ರು. ಅದೇಬಡಮಕ್ಕಳ ಗತಿ ಏನು ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ವಿರಾಟ್ ಕೊಯ್ಲಿ ಇಂಟರ್ ನ್ಯಾಷನಲ್ ಪ್ಲೇಯರ್. ಅವರನ್ನ ಯಾವ ರೀತಿ ನಡೆಸಿಕೊಂಡ್ರಿ, ಯಾವ ರೀತಿ ಅವರಿಗೆ ಸನ್ಮಾನ ಮಾಡಿದ್ರಿ. ಅವರನ್ನ ಬೀದಿವ್ಯಾಪಾರಿಯಂತೆ ನೋಡ್ಕೊಂಡಿದ್ದಾರೆ. ಮಧ್ಯಾಹ್ನ ಮೂರು ಗಂಟೆವರೆಗೂ ಯಾಕೆ ನೀವು ಗೇಟ್ ಓಪನ್ ಮಾಡಲಿಲ್ಲ. ಜನನಾ ನಿಭಾಯಿಸಲೇ ಇಲ್ಲ. ಒಂದಷ್ಟು ಜನ ಹೈ ಕೋರ್ಟ್ ಹತ್ತಿದ್ದಾರೆ. ಒಂದಷ್ಟು ಜನ ಮರ ಹತ್ತಿದ್ದರು. ಯಾವ್ಯಾವ ರೀತಿ ಸನ್ನಿವೇಶ ಸೃಷ್ಟಿ ಮಾಡಿದ್ರಿ ಎಂದು ಕಿಡಿ ಕಾರಿದ್ದಾರೆ.
ಒಟ್ನಲ್ಲಿ ಆರ್ ಸಿಬಿ ಕಪ್ ಎತ್ತಿ ಹಿಡಿದಾಗ ಇಡೀ ಕರ್ನಾಟಕ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಆದ್ರೆ ಈ ಕಾಲ್ತುಳಿತ ದುರಂತದ ಹೊಣೆ ಯಾರೂ ಹೊರೋಕೆ ರೆಡಿ ಇಲ್ಲ. ಆರ್ ಸಿಬಿ ವಿದೇಶಿ ಕಂಪನಿಯೊಂದರ ಮಲೀಕತ್ವದ ತಂಡ ಅಂತಾ ಬೆಳಕಿಗೆ ಬಂದಿದೆ. ಪೂರ್ವ ಸಿದ್ದತೆಗಳಿಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಿ, ದುರಂತಕ್ಕೆ ಸರ್ಕಾರ ಹಾಗೂ ಆರ್ ಸಿಬಿ ಮ್ಯಾನೇಜ್ ಮೆಂಟ್, ಕೆಎಸ್ ಸಿಎ ಎಡೆ ಮಾಡಿಕೊಟ್ಟಿದೆ ಎಂದು ಆಕ್ರೋಶ ಭುಗಿಲೆದ್ದಿದೆ. ಜೊತೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಕುಟುಂಬದವರೇ ಇದ್ದದ್ದೂ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.



