ಆರ್ ಸಿಬಿ ಅನ್ನೋದನ್ನ ಕನ್ನಡಿಗರು ಎಂದಿಗೂ ಮರೆಯೋದಿಲ್ಲ ಹಾಗೆ ಕೈ ಬಿಡೋದಿಲ್ಲ. ಅದಕ್ಕೆ ಉದಾಹರಣೆ ಸಾಕಷ್ಟಿವೆ. ಈ ಹಿಂದೆ ಅನೇ ಕ ಬಾರಿ ಈ ತಂಡ ಸೋತಾಗಲೂ ಜೊತೆಗೆ ನಿಂತಿದ್ದು ಕನ್ನಡಿಗರೇ. ಇದನ್ನ ಸ್ವತಃ ಕೊಹ್ಲಿಯೇ ಹೇಳಿದ್ದಾರೆ. ಇದನ್ನ ನಿನ್ನೆಯೂ ಪುನರ್ ಉಚ್ಚಾರ ಮಾಡಿದ್ದಾರೆ. ಈಗಾಗಲೇ ಕಪ್ ಗೆಲ್ಲುವ ಮೂಲಕ ಮತ್ತೊಮ್ಮೆ ಮಗದೊಮ್ಮೆ ಕನ್ನಡಿಗರ ಮನಸ್ಸು ಗೆಲ್ತಾನೆ ಇದ್ದಾರೆ. ಇದೆಲ್ಲದರ ನಡುವೆ ಸದ್ಯ ಚರ್ಚೆಯಾಗ್ತಾ ಇರುವ ಮತ್ತೊಂದು ವಿಚಾರ ಅಂದರೆ ತ್ರಿಮೂರ್ತಿಗಳ ವಿಚಾರ.

ಆರ್ ಸಿ ಬಿ ಗೆಲುವು ಕನ್ನಡಿಗರ ಗೆಲುವು ಅನ್ನೊದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಆ ಮೂರು ಜನರ ಶ್ರಮ ಅಂತಿದ್ದಾರೆ ಕೋಟಿ ಕೋಟಿ ಜನ. ಆ ಮೂರು ಜನರ ಪರಿಶ್ರಮ ಆ ಮೂರು ಜನರ ಒಗ್ಗಟ್ಟು ಆ ಮೂರು ಜನರ ಆಟ ಎಲ್ಲವೂ ಇಲ್ಲಿಯವರೆಗೆ ಆರ್ ಸಿಬಿಯನ್ನ ತಂದು ನಿಲ್ಲಿಸಿದೆ. ಇಂದು ಆರ್ ಸಿಬಿ ಏನೇ ಆಗಿದ್ದರೂ ಕೂಡ ಈ ಮೂವರಿಂದ ಅನ್ನೋದು ಅನೇಕರ ಮಾತು.

ಹೌದು, ಆ ತ್ರಿಮೂರ್ತಿಗಳು ಬೇರೆ ಯಾರೂ ಅಲ್ಲ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್. ಈ ಮೂರು ಜನ ಕಳೆದ 15 ವರ್ಷಗಳಿಂದ ಜೊತೆಯಾದವರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನೋ ತಂಡಕ್ಕೆ ತಮ್ಮದೆಲ್ಲವನ್ನೂ ಅರ್ಪಿಸಿದ ಆಟಗಾರರು. 2011 ರಲ್ಲಿ ಜೊತೆಯಾಗಿ ಆಟವಾಡಿದ್ದ ಈ ತ್ರಿಮೂರ್ತಿಗಳು ಹಲವು ವರ್ಷಗಳ ಕಾಲ ಆರ್ ಸಿಬಿ ತಂಡವ ಚಾಂಪಿಯನ್ ಆಗಬೇಕು ಅಂತ ಶ್ರಮಿಸಿದ್ದರು. ಆದರೆ ಅದು ಫಲ ನೀಡಿರಲಿಲ್ಲ. ಸದ್ಯ ಕೊಯ್ಲಿ ನೇತೃತ್ವದಲ್ಲಿ ಕಪ್ ಬಂದಿದೆ.

ಇನ್ನು ಕ್ರಿಸ್ ಗೇಲ್ ತಂಡದಿಂದ ಹೊರ ಹೋದ ಬಳಿಕವೂ ಕೂಡ ಆರ್ ಸಿಬಿ ಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ. ಅನೇಕ ಬಾರಿ ನಿರಾಸೆಯಿಂದಲೇ ವಾಪಸ್ಸಾಗಿದ್ದರು. ಆದರೆ. ಈ ಬಾರಿ ಹಾಗೆ ಆಗಿರಲಿಲ್ಲ. ಕಪ್ ತಮ್ಮದಾಗಿಸಿಕೊಂಡೇ ಅವರು ಈ ಬಾರಿ ವಾಪಸ್ ಆಗಿದ್ದಾರೆ. ಅಷ್ಟೆ ಅಲ್ಲ ಆ ಸಂಭ್ರಮದಲ್ಲಿ ಭಾಗೀ ಕೂಡ ಆದರು. ಅವರೂ ಕೂಡ ಕುಣಿದು ಕುಪ್ಪಳಿಸಿದರು. ಇತ್ತ ಎಬಿಡಿ ಕೂಡ ಫೈನಲ್ ಮ್ಯಾಚ್ ನೋಡಲು ಆಗಮಿಸಿದ್ದರು. ಗೆದ್ದ ಆ ಕ್ಷಣಗಳನ್ನು ಹಂಚಿಕೊಂಡಿರು.
ಪ್ರತಿ ಬಾರಿಯೂ ಎಲ್ಲರೂ ಹೇಳ್ತಾ ಇದ್ದಂತಹ ಒಂದು ಪದವನ್ನ ಕೊನೆಯ ಬಾರಿ ಕೇಳಲು ಆಗ್ತಾ ಇಲ್ಲ, ಗೆಲ್ತಾ ಇಲ್ಲ ಅನ್ನೋ ನಿರಾಸೆ ಅವರಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಕೆಲ ವರ್ಷಗಳಿಂದ ಒಂದು ಪದ ಬದಲಾವಣೆಗೆ ಕಾದು ಕುಳಿತಿದ್ದ ತ್ರಿಮೂರ್ತಿಗಳು ಕೊನೆಗೂ ಈ ಸಲ ಕಪ್ ನಮ್ದು ಎನ್ನೊ ಮೂಲಕ ಹೊಸ ಅಧ್ಯಾಯ ಬರೆದರು. ಮೂರು ಜನ ನಿಂತು ಈ ಸಲ ಕಪ್ ನಮ್ದು ಅಂತ ಕೂಗಿ ಹೇಳೋ ಮೂಲಕ ಇಡೀ ಕ್ರೀಡಾಂಗಣವನ್ನ ರೋಮಾಂಚನ ಗೊಳಿಸದರು.



