ಸೆಲೆಬ್ರಿಟಿಗಳ ಮಕ್ಕಳು ಎಂದರೆ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಜನರಲ್ಲಿ ಇರುತ್ತದೆ. ಸೆಲೆಬ್ರಿಟಿಗಳು ಮಕ್ಕಳನ್ನ ಹೇಗೆ ಬೆಳೆಸುತ್ತಾರೆ? ಅವರ ಮಕ್ಕಳನ್ನು ಯಾವ ಶಾಲೆಗೆ ಸೇರಿಸುತ್ತಾರೆ? ಏನು ಓದಿಸುತ್ತಾರೆ? ಅವರ ಮಕ್ಕಳು ಹೇಗಿರುತ್ತಾರೆ? ಹೀಗೆ ಜನರಿಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಎಲ್ಲಾ ಸೆಲೆಬ್ರಿಟಿಗಳ ವಿಚಾರದಲ್ಲಿ ಕೂಡ ಇದು ತುಂಬಾ ಕಾಮನ್. ಕಿಚ್ಚ ಸುದೀಪ್ ಅವರ ಮಗಳ ವಿಷಯದಲ್ಲಿ ಕೂಡ ಇದೇ ಆಗಿದೆ. ಸಾನ್ವಿ ಓದಿರೋದೇನು? ಈಗ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಇದಕ್ಕೆಲ್ಲ ಸಾನ್ವಿ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಉತ್ತರ ಕೊಟ್ಟಿದ್ದಾರೆ. ಸಾನ್ವಿ ಬಗ್ಗೆ ಈ ವಿಷಯಗಳು ಎಲ್ಲಿಯೂ ಕೇಳಿಬಂದಿರಲಿಲ್ಲ, ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಈಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಸಾನ್ವಿ ಹೆಚ್ಚಾಗಿ ಗುರುತಿಸಿಕೊಂಡಿರುವುದು ಹಾಡುವ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಹಾಡಿರುವ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾನ್ವಿ ವಾಯ್ಸ್ ಗೆ ಸಾಕಷ್ಟು ಫ್ಯಾನ್ಸ್ ಕೂಡ ಇದ್ದಾರೆ. ಇನ್ನು ಸುದೀಪ್ ಅವರ ಸಹೋದರಿಯ ಮಗ ಸಂಚಿತ್ ಅವರ ಜಿಮ್ಮಿ ಸಿನಿಮಾದ ಫಸ್ಟ್ ಲುಕ್ ಟೀಸರ್ ನ ಹಾಡಿಗೆ ಸಾನ್ವಿ ಅವರೇ ಧ್ವನಿ ಆಗಿದ್ದರು. ಸಾನ್ವಿ ಅವರದ್ದು ವಿಭಿನ್ನವಾದ ಕಂಠ, ತಂದೆಯ ಹಾಗೆ ಅದ್ಭುತವಾಗಿ ಹಾಡುತ್ತಾರೆ. ಈ ಕಾರಣಕ್ಕೆ ಸುದೀಪ್ ಅವರ ಫ್ಯಾನ್ಸ್ ಗೆ ಕೂಡ ಸಾನ್ವಿ ಅವರನ್ನು ಕಂಡರೆ ತುಂಬಾ ಇಷ್ಟ. ಸಾನ್ವಿ ಅವರು ಸಹ ಅಷ್ಟೇ ಟ್ಯಾಲೆಂಟೆಡ್ ಹುಡುಗಿ ಆಗಿದ್ದಾರೆ..

ಇನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾಗ, ಅವರಿಗೆ ದೊಡ್ಡ ಸರ್ಪ್ರೈಸ್ ಒಂದನ್ನು ನೀಡಲಾಗಿತ್ತು. ಸಾನ್ವಿ ಅವರು ಸುದೀಪ್ ಅವರಿಗಾಗಿ ಹಾಡನ್ನು ಹಾಡಿದ್ದರು. ಮಗಳು ಹಾಡೋದನ್ನ ಕೇಳಿ ಕಿಚ್ಚ ಸುದೀಪ್ ಅವರು ಭಾವುಕರಾಗಿದ್ದರು. ಸಾನ್ವಿ ಅವರು ತಂದೆಗಾಗಿ ಒಂದು ದಿವಸ ಮೊದಲೇ ಸರಿಗಮಪ ವೇದಿಕೆಗೆ ಬಂದು, ಪ್ರಾಕ್ಟೀಸ್ ಮಾಡಿಕೊಂಡು ಹಾಡಿದ್ದರು. ಸಾನ್ವಿ ಯಾವತ್ತೂ ಹಾಗೆ ಪ್ರಾಕ್ಟೀಸ್ ಮಾಡಿದವರಲ್ಲ ಎಂದು ಸುದೀಪ್ ಅವರು ಸಹ ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಇನ್ನು ವೀಕ್ಷಕರು ಸಹ ಸಾನ್ವಿ ಹಾಡೋದನ್ನ ಮೆಚ್ಚಿಕೊಂಡಿದ್ದರು. ಸಾನ್ವಿ ಅವರ ಕಂಠ ಬಹಳ ಚೆನ್ನಾಗಿದೆ ಎಂದು ಹಲವು ಕಾಮೆಂಟ್ಸ್ ಗಳು ಬಂದಿದ್ದವು. ಜಡ್ಜ್ ಗಳು ಸಹ ಅಷ್ಟೇ ಸಂತೋಷದಿಂದ ಮಾತನಾಡಿದ್ದರು.

ಇನ್ನು ಸಾನ್ವಿ ಸುದೀಪ್ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಇತ್ತೀಚಿಗೆ ಒಂದು ಪಾಡ್ ಕಾಸ್ಟ್ ಇಂಟರ್ವ್ಯೂ ಒಂದರಲ್ಲಿ ಸಾನ್ವಿ ಪಾಲ್ಗೊಂಡಿದ್ದು ತಮ್ಮ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾನ್ವಿ ಓದಿರುವುದು ಎಷ್ಟು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇದೇ ಪ್ರಶ್ನೆಯನ್ನು ಸಾನ್ವಿ ಅವರಿಗೆ ಕೇಳಿದಾಗ, ಅವರು ಕೊಟ್ಟ ಉತ್ತರ ಏನು ಎಂದರೆ, ಬೆಂಗಳೂರಿನಲ್ಲಿ ಪಿಯುಸಿ ಓದುವವರಿಗೆ ಸಾನ್ವಿ ಅವರಿಗೆ ಸಾಕಾಗಿ ಹೋಗಿತ್ತಂತೆ. ಕ್ರಿಯೇಟಿವ್ ಕೆಲಸಗಳ ಬಗ್ಗೆ ಆಸಕ್ತಿ ಇರೋರಿಗೆ ಓದು ಅಷ್ಟು ತಲೆಗೆ ಹೋಗೋದಿಲ್ಲ ಎನ್ನುತ್ತಾರೆ ತಮ್ಮದು ಕೂಡ ಅದೇ ಕೇಸ್ ಎಂದು ಹೇಳಿದ್ದಾರೆ ಸಾನ್ವಿ. ಪಿಯುಸಿ ಓದಿದ ನಂತರ ಓದಿಗೆ ವಿರಾಮ ಕೊಟ್ಟಿದ್ದಾರೆ ಸಾನ್ವಿ. ಮತ್ತೆ ಓದುವುದಕ್ಕೆ ಆಸಕ್ತಿ ಬಂದಿದಲ್ಲವಂತೆ.
ಆದರೆ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ಸಾನ್ವಿ ಅವರು 4 ತಿಂಗಳ ಆಕ್ಟಿಂಗ್ ಕೋರ್ಸ್ ಮಾಡಿದ್ದಾರಂತೆ. ಕಿಚ್ಚನ ಮಗಳು ಹಾಡುವುದರಲ್ಲಿ ಮಾತ್ರವಲ್ಲ, ಆಕ್ಟಿಂಗ್ ನಲ್ಲಿ ಕೂಡ ಅಷ್ಟೇ ಚೆನ್ನಾಗಿ ಇರುತ್ತಾರೆ ಎಂದು ಗೊತ್ತಿದೆ. ಇದೇ ಸಂದರ್ಶನದಲ್ಲಿ ಸಾನ್ವಿ ಅವರು ತಾವು ಚಿತ್ರರಂಗಕ್ಕೆ ಬರುವ ಬಗ್ಗೆ ಕೂಡ ಸೂಚನೆ ಕೊಟ್ಟಿದ್ದಾರೆ. ಶೀಘ್ರದಲ್ಲೇ ಬರುವುದಾಗಿಯು ಹೇಳಿದ್ದಾರೆ. ಸಾನ್ವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಅಥವಾ ಯಾವ ಥರದ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ. ಸಾನ್ವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ತಮ್ಮ ಕ್ರಶ್ ಸಿದ್ಧಾರ್ಥ್ ಮಲ್ಹೋತ್ರಾ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಅವರ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿ ಕೂಡ ಅಪ್ಡೇಟ್ ಮಾಡುತ್ತಾ ಇರುತ್ತಾರೆ.

ಹಾಗೆಯೇ ಈ ಇಂಟರ್ವ್ಯೂ ನಲ್ಲಿ ಯಶ್ ಅವರ ಮೇಲೆ ಸಾನ್ವಿಗೆ ಕ್ರಶ್ ಆಗಿತ್ತಾ ಎಂದು ನಿರೂಪಕಿ ಕೇಳಿದ್ದು, ಅದಕ್ಕೆ ಸಾನ್ವಿ ತಂದೆಯ ಫ್ರೆಂಡ್ ಮೇಲೆ ಕ್ರಶ್ ಆಗೋಕೆ ಹೇಗೆ ಸಾಧ್ಯ ಎಂದಿದ್ದಾರೆ. ತಂದೆಯ ಪಾರ್ಟಿಗಳಿಗೆ ಯಶ್ ಅವರು ಬರುತ್ತಿದ್ದರು, ಅವರನ್ನು ಹಲವು ಸಾರ್ ಭೇಟಿ ಮಾಡಿದ್ದೇನೆ., ಅವರ ಜೊತೆ ಆಟ ಆಡಿದ್ದೇನೆ. ನನಗೆ ಅವರ ಮೇಲೆ ಕ್ರಶ್ ಇಲ್ಲ. ನನಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಲ್ಲು ಅರ್ಜುನ್ ಅವರ ಮೇಲೆ ಕ್ರಶ್ ಇದೆ. ಪುಷ್ಪ2 ಸಿನಿಮಾ ನೋಡೋಕೆ ಅಲ್ಲು ಅರ್ಜುನ್ ಅವರ ಫೋಟೋ ಇರುವ ಟೀ ಶರ್ಟ್ ಹಾಕಿಕೊಂಡು ಸಿನಿಮಾ ನೋಡೋಕೆ ಹೋಗಿದ್ದೆ ಎಂದಿದ್ದಾರೆ ಸಾನ್ವಿ. ಒಟ್ಟಿನಲ್ಲಿ ಯಶ್ ಅವರ ಬಗ್ಗೆ ಸಾನ್ವಿ ಅವರಿಗೆ ಬಹಳ ಗೌರವ ಇದೆ ಎನ್ನುವುದು ಗೊತ್ತಾಗಿ, ಅಭಿಮಾನಿಗಳಿಗೆ ಕೂಡ ಬಹಳ ಸಂತೋಷ ಆಗಿದೆ.

ಇನ್ನು ಸಾನ್ವಿ ಅವರು ಅನೇಕ ವಿಚಾರಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ತಾವು ಬಹಳ ದಪ್ಪ ಇದ್ದುದರಿಂದ ಸಣ್ಣ ಆಗಬೇಕು ಎಂದು ಜಿಮ್ ಗೆ ಹೋಗಿ, ಡಯೆಟ್ ಮಾಡಿ, ವರ್ಕೌಟ್ ಮಾಡಿ ಸಣ್ಣ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ಸ್ಕಿನ್ ಬಗ್ಗೆ ಕೂಡ ಗಮನ ಕೊಟ್ಟ ಕಾರಣ ಸಾನ್ವಿ ಟ್ರಾನ್ಸ್ಫಾರ್ಮ್ ಆಗಿದ್ದಾರೆ ಎಂದು ಹೇಳಿದ್ದಾರೆ. ಕಿಚ್ಚನ ಮಗಳಿಗೆ ಈಗ 21 ವರ್ಷ, ಸಾನ್ವಿ ಈಗಾಗಲೇ ಸಿನಿಮಾ ಇಂಡಸ್ಟ್ರಿಗೆ ಬರೋದಕ್ಕೆ ತಯಾರಿ ನಡೆಸಿಕೊಂಡಿದ್ದು, ಮಗಳನ್ನು ಸುದೀಪ್ ಅವರು ಯಾವ ರೀತಿ ಲಾಂಚ್ ಮಾಡುತ್ತಾರೆ, ಕಿಚ್ಚನ ಮಗಳ ಸಿನಿಮಾ ಎಷ್ಟು ಸ್ಪೆಷಲ್ ಆಗಿರುತ್ತದೆ ಎಂದು ಕಾದು ನೋಡಬೇಕಿದೆ. ಸಾನ್ವಿ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಂದೆಯ ಹಾಗೆ ಮಗಳು ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸೋಣ.