ಸ್ಯಾಂಡಲ್ ವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾದ ಭಾವನಾ ರಾಮಣ್ಣ 90ರ ದಶಕ ಮುಗಿಯುವ ವೇಳೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಇವರು ನಟಿಸಿದ್ದು ಕೆಲವು ಸಿನಿಮಾಗಳಲ್ಲಿ ಮಾತ್ರ ಆಗಿದ್ದರು ಸಹ, ಅದರಿಂದ ಇವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಎರಡು ಸಹ ಸಿಕ್ಕಿತು. ಭಾವನಾ ಅವರನ್ನು ನೆನಪಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡಿದ ಪ್ರಮುಖ ಸಿನಿಮಾ ಚಂದ್ರಮುಖಿ ಪ್ರಾಣಸಖಿ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಕೂಡ ಭಾವನಾ. ಸಿನಿಮಾದಲ್ಲಿ ಸೂಕ್ಷ್ಮವಾದ ಪಾತ್ರದಲ್ಲಿ ನಟಿಸಿರುವ ಇವರ ಅಭಿನಯವನ್ನು ಇಂದಿಗೂ ಯಾರು ಮರೆತಿಲ್ಲ. ಆದರೆ ಇದೀಗ ಭಾವನಾ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಯಾವ ಕಾರಣಕ್ಕೆ ಎಂದರೆ, ಇವರು ಧರಿಸಿರುವ ಸೀರೆಯಲ್ಲಿ ಬೆತ್ತಲೆ ಬೆನ್ನು ತೋರಿಸಿದ್ದಾರೆ ಎನ್ನುವ ಕಾರಣಕ್ಕೆ. ಭಾವನಾ ಅವರು ಹೀಗ್ಯಾಕೆ ಮಾಡಿದರು ಎನ್ನುವ ಪ್ರಶ್ನೆ ಜನರಲ್ಲಿ ಸಹ ಕಾಡುತ್ತಿದೆ!
ನಟಿ ಭಾವನಾ ಅವರು ಈಗಲೂ ಆಕ್ಟಿವ್, ಆದರೆ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತಾರೆ. 2 ದಶಕಗಳ ಹಿಂದೆ ಭಾವನಾ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇತ್ತು. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಮ್ ಕುಮಾರ್ ಅವರು, ರಮೇಶ್ ಅವರು ಇವರಿಂದ ಹಿಡಿದು ದರ್ಶನ್ ಅವರ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಇವರು ನಟಿಸಿದ್ದ ಪಾತ್ರಗಳಲ್ಲಿ ಮರೆಯಲು ಅಸಾಧ್ಯ ಎನ್ನಿಸುವಂಥದ್ದು ಚಂದ್ರಮುಖಿ ಪ್ರಾಣಸಖಿ ಸಿನಿಮಾ. ಈ ಸಿನಿಮಾದಲ್ಲಿ ನಟಿ ಪ್ರೇಮಾ, ನಟಿ ಭಾವನಾ ನಾಯಕಿಯರಾಗಿ ನಟಿಸಿದರೆ, ರಮೇಶ್ ಅವರು ನಾಯಕರಾಗಿದ್ದರು. ಇದೊಂದು ಭಾವನಾತ್ಮಕ ಸಿನಿಮಾ ಆಗಿತ್ತು. ಇದರಲ್ಲಿ ಭಾವನಾ ಅವರ ಪಾತ್ರದ ಹೆಸರು ಕೂಡ ಭಾವನಾ.

ಭಾವನಾ ಅವರು ಪ್ರೇಮಾ ಅವರ ತಂಗಿಯ ಪಾತ್ರದಲ್ಲಿ ನಟಿಸಿ, ಸೂಕ್ಷ್ಮವಾದ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೊಂದೇ ಸಿನಿಮಾ ಅಲ್ಲದೇ ಇನ್ನು ಹಲವು ಉತ್ತಮವಾದ ಸಿನಿಮಾಗಳಲ್ಲಿ ಭಾವನಾ ಅವರು ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಭಾವನಾ ಅವರು ರಾಜಕೀಯದಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಸಾರಿ ಇವರು ನೀಡಿರುವ ಹೇಳಿಕೆಗಳು ಸಹ ವೈರಲ್ ಆಗಿದೆ. ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ವೈರಲ್ ಆದಾಗ, ಭಾವನಾ ಅವರು ಆಡಿದ್ದ ಕೆಲವು ಮಾತುಗಳು ಬಹಳ ವೈರಲ್ ಆಗಿದ್ದವು. ಅದಷ್ಟೇ ಅಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಆದ ಕ್ಯಾಸ್ಟಿಂಗ್ ಕೌಚ್ ವಿಚಾರದ ಬೆಳವಣಿಗೆ ಬಗ್ಗೆ ಕೂಡ ಇವರು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಯಿತು. ಕಳೆದ ವರ್ಷ ನಡೆದ ಘಟನೇ ಇದು.
ಮಲಯಾಳಂ ಚಿತ್ರರಂಗದ ನಟಿಯರು ಸೇರಿ ಹೇಮಾ ಕಮಿಟಿಯನ್ನು ರಚಿಸಿ, ಮಲಯಾಳಂ ನಲ್ಲಿ ನಡೆಯುತ್ತಿರುವ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಇದರಿಂದ ತೊಂದರೆ ಅನುಭವಿಸಿದ್ದ ಅನೇಕರು ತಮಗಾದ ನೋವನ್ನು ಹಂಚಿಕೊಂಡು, ಸ್ಟಾರ್ ನಟರು ಏನೆಲ್ಲಾ ಮಾಡಿದ್ದಾರೆ ಎನ್ನುವುದನ್ನು ಎಕ್ಸ್ಪೋಸ್ ಮಾಡಿದ್ದರು. ಹೇಮಾ ಕಮಿಟಿ ರಿಪೋರ್ಟ್ ಇಂದಾಗಿ ಹಲವು ನಟರು ಜೈ*ಲಿಗೆ ಹೋಗಿ ಬಂದಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಇದು ದೊಡ್ಡ ಸಂಚಲನ ಸೃಷ್ಟಿಸಿತು, ಇದೇ ಪ್ರೇರಣೆಯಲ್ಲಿ ತೆಲುಗು ಚಿತ್ರರಂಗದಲ್ಲಿ ಸಹ ಇಂಥದ್ದೇ ಕಮಿಟಿ ತರಬೇಕು ಎಂದು ತೆಲುಗು ನಟಿಯರು ಕೂಡ ಇಂಗಿತ ವ್ಯಕ್ತಪಡಿಸಿದರು. ಸಮಂತಾ ಅವರು ಕೂಡ ಇದಕ್ಕಾಗಿ ಧ್ವನಿ ಎತ್ತಿದ್ದರು ಎಂದು ನಮಗೆಲ್ಲ ಗೊತ್ತೇ ಇದೆ. ಈ ವಿಚಾರದಲ್ಲಿ ಕನ್ನಡದಲ್ಲಿ ಕೂಡ ಚರ್ಚೆ ಆಗಿತ್ತು.

ಕನ್ನಡದಲ್ಲಿ ಕ್ಯಾಸ್ಟಿಂಗ್ ಕೌಚ್ ಇದೆಯಾ ಎನ್ನುವ ಒಂದು ವಿಷಯ ಶುರುವಾಗಿ, ಕನ್ನಡದಲ್ಲೂ ಇಂಥದ್ದೊಂದು ಕಮಿಟಿ ಶುರು ಮಾಡಬೇಕು ಎನ್ನುವ ಚರ್ಚೆ ಶುರುವಾದಾಗ, ನಟಿ ಭಾವನಾ ರಾಮಣ್ಣ ಅವರು ನೀಡಿದ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಯಿತು. “ಈಗಿನ ಕಾಲದಲ್ಲಿ ನಡೆಯೋ ಮದುವೆಗಳ ಪೈಕಿ 10 ಮದುವೆಗಳು ಕೂಡ ಉಳಿಯೋದಿಲ್ಲ. ಅಕಸ್ಮಾತ್ ನಮ್ಮ ಚಿತ್ರರಂಗದಲ್ಲಿ ಅಂಥದ್ದೇನಾದರು ನಡೆದರೆ, ಯಾರು ಕೂಡ ಅದಕ್ಕೆ ಸಪೋರ್ಟ್ ಮಾಡಬೇಡಿ. ನಮ್ಮ ಕನ್ನಡ ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇಲ್ಲ..”ಎಂದಿದ್ದರು ನಟಿ ಭಾವನಾ. ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಹಳಷ್ಟು ಮಹಿಳೆಯರು ಇದರಿಂದ ಸಮಸ್ಯೆ ಅನುಭವಿಸಿದ್ದಾರೆ. ಅಂಥದ್ದರಲ್ಲಿ ಭಾವನಾ ಅವರು ಈ ರೀತಿ ಹೇಳಿ ಬಿಟ್ರಲ್ಲ ಎನ್ನುವ ಅಭಿಪ್ರಾಯ ಜನರಲ್ಲಿ ಕೇಳಿ ಬಂದಿತ್ತು.
ಇದೆಲ್ಲವೂ ಒಂದು ಕಡೆಯಾದರೆ, ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಭಾವನಾ ಅವರು ಸರಿಗಮಪ ಕಾರ್ಯಕ್ರಮಕ್ಕೆ ಬಂದ ವಿಚಾರ ವೈರಲ್ ಆಗಿದೆ. ಕಳೆದ ವಾರ ಸರಿಗಮಪ ಕಾರ್ಯಕ್ರಮದಲ್ಲಿ ನಟ ರಮೇಶ್ ಅವರು ಚಿತ್ರರಂಗಕ್ಕೆ 40 ವರ್ಷ ಪೂರೈಸಿದ್ದಕ್ಕೆ ವಿಶೇಷ ಕಾರ್ಯಕ್ರಮ ಮಾಡಿ, ಅವರನ್ನು ಗೌರವಿಸಲಾಯಿತು. ಚಂದ್ರಮುಖಿ ಪ್ರಾಣಸಖಿ ಸಿನಿಮಾದಲ್ಲಿ ಭಾವನಾ ಅವರು ರಮೇಶ್ ಅವರಿಗೆ ಜೋಡಿಯಾಗಿ ನಟಿಸಿದ್ದ ಕಾರಣ ವಿಶೇಷ ಅತಿಥಿಯಾಗಿ ಅವರು ಕೂಡ ಬಂದಿದ್ದರು. ಆದರೆ ಈ ವೇಳೆ ಭಾವನಾ ಅವರು ಧರಿಸಿ ಬಂದಿದ್ದ ಬ್ಲೌಸ್ ವಿಚಾರದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇವರು ಬೆನ್ನು ಇಲ್ಲದ ಬ್ಲೌಸ್ ಹಾಕಿಕೊಂಡಿದ್ದ ಕಾರಣಕ್ಕೆ ಟ್ರೋಲ್ ಗೆ ಸಹ ಒಳಗಾಗಿದ್ದಾರೆ. ಭಾವನಾ ಅವರ ಹೊಸ ಅವತಾರ ನೆಟ್ಟಿಗರಿಗೆ ಶಾಕ್ ಕೊಟ್ಟಿದೆ ಎಂದರು ತಪ್ಪಲ್ಲ.

ಒಟ್ಟಿನಲ್ಲಿ ಈ ಬ್ಲೌಸ್ ಇಂದ ಭಾವನಾ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕೆಲವರು ಬ್ಲೌಸ್ ಹಾಕಿಕೊಂಡು ಬರಬಾರದ ಮೇಡಂ ಎಂದಿದ್ದಾರೆ. ಇನ್ನು ಕೆಲವರು ಇದೆಲ್ಲಾ ಈ ವಯಸ್ಸಲ್ಲಿ ಬೇಕಿತ್ತಾ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಭಾವನಾ ಅವರ ಈ ಬ್ಯಾಕ್ ಲೆಸ್ ಬ್ಲೌಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಕ್ಕೆ ಸುದ್ದಿಯಾಗಿದೆ ಎಂದರೆ, ಇನ್ಸ್ಟಾಗ್ರಾಮ್ ಒಂದೇ ವೇದಿಕೆಯಲ್ಲಿ ಈ ವಿಡಿಯೋ 50 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಬಂದಿದೆ, 3 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಜನರು ಸಾವಿರಾರು ಕಾಮೆಂಟ್ಸ್ ಬರೆದಿದ್ದಾರೆ. ಒಂದು ಬ್ಲೌಸ್ ಮೂಲಕ ಭಾರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ನಟಿ ಭಾವನಾ. ಈ ವಿಡಿಯೋ ಬೇರೆ ಪ್ಲಾಟ್ ಫಾರ್ಮ್ ಗಳ ವೀಕ್ಷಣೆಯನ್ನು ನೋಡಿದರೆ, ಬಹುತೇಕ 80 ಲಕ್ಷ ವೀಕ್ಷಣೆ ಪಡೆದಿರುವುದರಲ್ಲಿ ಸಂಶಯವಿಲ್ಲ.



