ಕನ್ನಡದ ಹಿರಿಯನಟ ಮೈಸೂರು ಲೋಕೇಶ್ ಅವರ ಮಗಳು ನಟಿ ಪವಿತ್ರಾ ಲೋಕೇಶ್. 90ರ ದಶಕದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಿ. ಅಭಿಷೇಕ್ ಸಿನಿಮಾ ಮೂಲಕ ಪವಿತ್ರಾ ಅವರು ನಟನೆ ಶುರು ಮಾಡಿದರು. ಆರಂಭದಲ್ಲಿ ಒಳ್ಳೆಯ ಪಾತ್ರಗಳು ಸಿಗದ ಕಾರಣ ಪವಿತ್ರಾ ಅವರು ನಟನೆ ಬಿಟ್ಟು, ಒಂದು ಆಫೀಸ್ ನಲ್ಲಿ ಹೆಚ್. ಆರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಮತ್ತೆ ನಟನೆಗೆ ಅವಕಾಶ ಸಿಕ್ಕ ನಂತರ, ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡಿದರು. ಪವಿತ್ರಾ ಲೋಕೇಶ್ ಅವರು ಸೋಲೊ ಹೀರೋಯಿನ್ ಆಗಿ ನಟಿಸಿದ ಸಿನಿಮಾಗಳು ಬಹಳ ಕಡಿಮೆ. ಎರಡನೇ ನಾಯಕಿ, ಪೋಷಕ ಪಾತ್ರಗಳು ಇಂಥ ಪಾತ್ರಗಳಲ್ಲಿ ಅಷ್ಟೇ ನಟಿಸಿದರು.

ಹಾಗೆಯೇ ಹೈಲೈಟ್ ಆಗುವಂಥ ಪಾತ್ರಗಳು ಸಹ ಪವಿತ್ರಾ ಲೋಕೇಶ್ ಅವರಿಗೆ ಸಿಗಲಿಲ್ಲ. ಸಿನಿಮಾಗಳ ಜೊತೆಗೆ ಕನ್ನಡ ಧಾರಾವಾಹಿಗಳಲ್ಲಿ ಸಹ ಇವರು ನಟಿಸಿದ್ದಾರೆ. ಪವಿತ್ರಾ ಲೋಕೇಶ್ ಅವರು ಕನ್ನಡ ಮಾತ್ರವಲ್ಲದೇ, ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ಇವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಸಹ ಇದೆ. ಈಗಲೂ ಸಹ ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಾರೆ ಪವಿತ್ರಾ ಲೋಕೇಶ್. ಕನ್ನಡದಲ್ಲಿ ಸಹ ಆಗಾಗ ಸಿನಿಮಾಗಳಲ್ಲಿ ನಟಿಸುತ್ತಾರೆ. ಇನ್ನು ಪವಿತ್ರಾ ಲೋಕೇಶ್ ಅವರ ಆಸ್ತಿ ವಿಷಯ ಈಗ ಚರ್ಚೆ ಆಗುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಟಿ ಪವಿತ್ರಾ ಲೋಕೇಶ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು ಒಬ್ಬ ಕಲಾವಿದೆಯಾಗಿ ಇವರು ಇಷ್ಟು ವರ್ಷಗಳ ಅವಧಿಯಲ್ಲಿ ಸುಮಾರು 70 ಕೋಟಿ ರೂಪಾಯಿ ಆಸ್ತಿ ಗಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹೌದು, ಪವಿತ್ರಾ ಅವರು ಸ್ವತಃ ತಾವಾಗಿ ಸಂಪಾದನೆ ಮಾಡಿರುವ ಆಸ್ತಿ 70 ಕೋಟಿ ರೂಪಾಯಿಗಳು. ಆದರೆ ಅವರು ಜೋತೆಗೆ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರ ಜೊತೆಗೆ ಲಿವಿನ್ ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎನ್ನುವ ವಿಷಯ ಸಹ ನಮಗೆಲ್ಲಾ ಗೊತ್ತೇ ಇದೆ. ಇವರ ಕುಟುಂಬದ ಜೊತೆಗೆ ಪವಿತ್ರಾ ಚೆನ್ನಾಗಿಯೇ ಇದ್ದಾರೆ. ಇನ್ನು ನರೇಶ್ ಅವರ ಆಸ್ತಿ 1500 ಕೋಟಿ ರೂಪಾಯಿ ಆಗಿದೆ.

ಈ ಆಸ್ತಿಯಲ್ಲಿ ಒಂದಷ್ಟು ಪಾಲು ಕೂಡ ಪವಿತ್ರಾ ಲೋಕೇಶ್ ಅವರಿಗೆ ಸಿಗಲಿದೆ. ಒಟ್ಟಿನಲ್ಲಿ ಹಣದ ವಿಚಾರದಲ್ಲಿ ಪವಿತ್ರಾ ಲೋಕೇಶ್ ಅವರು ತಮ್ಮ ಜೀವನವನ್ನು ಬಹಳ ಸೆಕ್ಯೂರ್ ಆಗಿ ಮಾಡಿಕೊಂಡಿದ್ದಾರೆ. ತಮ್ಮ ಆಸ್ತಿಯ ಜೊತೆಗೆ ನರೇಶ್ ಅವರ ಆಸ್ತಿಯಲ್ಲಿ ಕೂಡ ಒಂದಷ್ಟು ಪಾಲು ಪವಿತ್ರಾ ಲೋಕೇಶ್ ಅವರಿಗೆ ಸಿಗಲಿದೆ. ಇನ್ನು ಪವಿತ್ರಾ ಲೋಕೇಶ್ ಅವರು ಮೊದಲಿಗೆ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಮದುವೆ ಆಗಿದ್ದರು, ಇವರಿಗೆ ಮಕ್ಕಳು ಸಹ ಜನಿಸಿವೆ. ಆದರೆ ಕಾರಣಾಂತರಗಳಿಂದ ಇಬ್ಬರೂ ಬೇರೆ ಆಗಿದ್ದು, ನರೇಶ್ ಅವರ ಜೊತೆಗೆ ಲಿವಿನ್ ರಿಲೇಶನ್ಷಿಪ್ ನಲ್ಲಿ ಇದ್ದಾರೆ..
ಈಗ ಪವಿತ್ರಾ ಅವರು ಬಹಳ ಎಂಜಾಯ್ ಮಾಡಿಕೊಂಡು, ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ನರೇಶ್ ಅವರ ವಿಷಯದಲ್ಲಿ ಎಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸಿದರು ಸಹ, ಪವಿತ್ರಾ ಅವರು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಸಂತೋಷವಾಗಿದ್ದಾರೆ. ಇನ್ನು ಇತ್ತೀಚೆಗೆ ಇವರು ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದರು. ಸ್ವಲ್ಪ ದಿನಕ್ಕೆ ಇವರ ಪಾತ್ರ ಕೊನೆ ಆಗಿತ್ತು. ಆದರೆ ಮುಂದೆ ಯಾವ ಸಿನಿಮಾದಲ್ಲಿ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ..



