ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಯಾರು ಯಾರ ಬಗ್ಗೆ ಆದರೂ ಸುಲಭವಾಗಿ ಮಾತನಾಡುತ್ತಾರೆ. ಕಾಮೆಂಟ್ಸ್ ಮೂಲಕ ಇಲ್ಲ ಸಲ್ಲದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ತಮಗೆ ಗೊತ್ತೇ ಇರದವರ ಬಗ್ಗೆ ಪುಟಗಟ್ಟಲೆ ಕೆಟ್ಟದಾಗಿ ಬರೆಯುತ್ತಾರೆ. ಇದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ನಡೆಯುವುದೇ. ಅದರಲ್ಲೂ ಸೆಲೆಬ್ರಿಟಿಗಳ ಬಗ್ಗೆ ಬಹಳ ಸುಲಭವಾಗಿ ಮಾತನಾಡುತ್ತಾರೆ..ನಮ್ಮ ಹಾಗೆ ಅವರು ಕೂಡ ಮನುಷ್ಯರು, ಅವರಿಗೂ ಫ್ಯಾಮಿಲಿ ಸಂಸಾರ ಇರುತ್ತದೆ ಎಂದು ನೆಟ್ಟಿಗರು ಅರ್ಥ ಮಾಡಿಕೊಳ್ಳುವುದಿಲ್ಲ. ತಮ್ಮ ಮನಸ್ಸಿಗೆ ಬಂದ ಹಾಗೆ ಸೆಲೆಬ್ರಿಟಿಗಳ ಬಗ್ಗೆ ಮಾತನಾಡುತ್ತಾರೆ. ಸುಲಭವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂಬಂಧ ಕಟ್ಟಿಬಿಡುತ್ತಾರೆ. ಅರ್ಥ ಮಾಡಿಕೊಳ್ಳುವವರ ವಿಚಾರ ಆದರೆ ಅದು ಒಂದು ರೀತಿ. ಆದರೆ ಯಾವುದೋ ಒಂದು ಫೋಟೋ ಇಂದ, ವಿಡಿಯೋ ಇಂದ ಏನೋ ಒಂದು ಕಥೆ ಕಟ್ಟಿಬಿಡುತ್ತಾರೆ..

ಕೆಲವು ಸೆಲೆಬ್ರಿಟಿಗಳು ಬಹಳ ಸೆನ್ಸಿಟಿಗ್ ಆಗಿರುವವರು ಈ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು, ಮನಸ್ಸಿಗೆ ನೋವು ಮಾಡಿಕೊಂಡು ಇರುತ್ತಾರೆ. ಆದರೆ ಕೆಲವರು ಇಂಥ ಯಾವುದೇ ವಿಚಾರ್ ಇದ್ದರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೋ ಮಾತನಾಡೋ ಮಾತಿಗೆ ನಾವು ಯಾಕೆ ಉತ್ತರ ಕೊಡಬೇಕು, ತಲೆ ಕೆಡಿಸಿಕೊಳ್ಳಬೇಕು ಅನ್ನೋ ಮೈಂಡ್ ಸೆಟ್ ನಲ್ಲಿ ಇರುತ್ತಾರೆ. ಇದೀಗ ಸೃಜನ್ ಲೋಕೇಶ್ ಅವರು ಕೂಡ ಅದೇ ರೀತಿ ಆಗಿದ್ದಾರೆ. ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್ ಆಗಿ ಖ್ಯಾತಿ ಹೊಂದಿರುವವರು. ನಗಿಸುವ ಕಾರ್ಯಕ್ರಮಗಳನ್ನು ಎಷ್ಟು ಅಚ್ಚುಕಟ್ಟಾಗಿ ನಡೆಸಿಕೊಡುತ್ತಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಸೃಜನ್ ಲೋಕೇಶ್ ಬಹಳ ಸರಳ ಹಾಗೂ ತಮಾಷೆ ಮಾಡುವ ಸ್ವಭಾವದ ವ್ಯಕ್ತಿ. ಕಿರುತೆರೆಯಲ್ಲಿ ಇವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ..

ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್, ಮಜಾ ವೀಕೆಂಡ್ ಇಂಥ ಸೂಪರ್ ಹಿಟ್ ಕಾರ್ಯಕ್ರಮಹಾಳನ್ನು ನಿರೂಪಣೆ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇವರ ಸೂಪರ್ ಹಿಟ್ ಶೋ ಮಜಾ ಟಾಕೀಸ್ ಈಗಷ್ಟೇ ಮತ್ತೆ ಶುರುವಾಗಿದೆ. ಮಜಾ ಟಾಕೀಸ್ ಶೋ ಎಂದರೆ ವೀಕ್ಷಕರಿಗೆ ವಿಶೇಷವಾದ ಪ್ರೀತಿ. ಹಲವು ವರ್ಷಗಳಿಂದ ಈ ಶೋ ನಡೆದುಕೊಂಡು ಬರುತ್ತಿದೆ. ಈ ವರ್ಷ ಬಿಗ್ ಬಾಸ್ ಮುಗಿದ ನಂತರ ಮಜಾ ಟಾಕೀಸ್ ಶೋ ಶುರುವಾಗಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಹಿಂದಿನ ಮಜಾ ಟಾಕೀಸ್ ನಲ್ಲಿ ಎಲ್ಲರಿಗೂ ಜಾಸ್ತಿ ಇಷ್ಟವಾಗಿದ್ದ ಅಪರ್ಣಾ ಅವರ ಒನ್ ಅಂಡ್ ಓನ್ಲಿ ವರಲಕ್ಷ್ಮೀ ಪಾತ್ರ ಇಂದು ಇಲ್ಲ. ಅಪರ್ಣಾ ಅವರು ಇಲ್ಲ ಎನ್ನುವ ನೋವು ತಂಡಕ್ಕೆ ಮಾತ್ರವಲ್ಲ, ಜನರಲ್ಲಿಯು ಇದೆ..
ವರಲಕ್ಷ್ಮೀ ಪಾತ್ರವನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿರುವುದು ಒಳ್ಳೆಯದು. ಅದರ ಜೊತೆಗೆ ಕಾರ್ಯಕ್ರಮ ಚೆನ್ನಾಗಿಯು ಸಾಗುತ್ತಿದೆ. ಕಾರ್ಯಕ್ರಮ ಹಾಗೂ ಇನ್ನಿತರ ಬ್ಯುಸಿ ಕೆಲಸಗಳ ನಡುವೆ, ಸೃಜನ್ ಲೋಕೇಶ್ ಅವರು ಇದೀಗ ಮಯೂರ ರಾಘವೇಂದ್ರ ಅವರ ಪಾಡ್ ಕಾಸ್ಟ್ ನಲ್ಲಿ ಪಾಲ್ಗೊಂಡಿದ್ದು, ಈ ಇಂಟರ್ವ್ಯೂ ನಲ್ಲಿ ಇವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿಮ್ಮ ಬಗ್ಗೆ ನೆಗಟಿವ್ ಆಗಿ ಸುದ್ದಿಗಳು ಸ್ಪ್ರೆಡ್ ಆದರೂ ಕೂಡ ಅದಕ್ಕೆಲ್ಲಾ ನೀವು ಯಾವುದೇ ರೀತಿಯ ಪ್ರತಿಕ್ರಿಯೆ ಯಾಕೆ ಕೊಡೋದಿಲ್ಲ ಎಂದು ಕೇಳಿದ್ದಕ್ಕೆ ಖಡಕ್ ಆದ ಉತ್ತರ ಕೊಟ್ಟಿದ್ದಾರೆ ಸೃಜನ್ ಲೋಕೇಶ್. ಸೋಷಿಯಲ್ ಮೀಡಿಯಾದಲ್ಲಿ ಬರುವ ನೆಗಟಿವ್ ಕಾಮೆಂಟ್ಸ್ ಗಳ ಬಗ್ಗೆ ಸೃಜನ್ ಲೋಕೇಶ್ ಅವರು ಮಾತನಾಡಿದ್ದು, “ಯಾರೋ ಮೂರನೇ ವ್ಯಕ್ತಿ, ಗುರುತು ಪರಿಚಯ ಇಲ್ಲದೇ ಇರೋರು ಮಾತನಾಡಿದ್ದರ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು.

ಯಾವುದೇ ಗಾಸಿಪ್ ಗಳು ಬಂದಾಗ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಒಬ್ಬ ಫ್ರೆಂಡ್ ಆಗಿ ಯಾರಾದರೂ ಏನಾದರು ಹೇಳಿದರೆ ಕನ್ಸಿಡರ್ ಮಾಡ್ತೀನಿ. ಗೊತ್ತಿಲ್ಲದವರ ಕಾಮೆಂಟ್ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ? ಅವರಿಗೆ ಯಾಕೆ Importance ಕೊಡಬೇಕು? ಕೆಲವೊಮ್ಮೆ ಪರ್ಸನಲ್ ಲೈಫ್ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ಏನಾಗಿದೆ ಎಂದು ಗೊತ್ತಿಲ್ಲದವರಿಗೆ ಅದರ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಇರುವುದಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಇದು ಹೀಗೆ ಎಂದು ಅಂದುಕೊಂಡರೆ, ಅದಕ್ಕಿಂತ ದಡ್ಡತನ ಇನ್ನೊಂದಿಲ್ಲ. ನನಗೂ ನಿನಗೂ ಸಂಬಂಧಕಟ್ಟಿ ಇದು ಹೀಗೆ ಎಂದು ಹೇಳಿಬಿಡುತ್ತಾರೆ. ನಿನಗೆ ಹೇಗೆ ಗೊತ್ತು ಗುರು? ನನಗೂ ಹೆಂಡತಿ ಮಕ್ಕಳು ಇಲ್ವಾ? ಅವರಿಗೆ ಬೇಜಾರಾಗುತ್ತೆ ಅಂತ ಸ್ವಲ್ಪ ಆದರೂ ಯೋಚನೆ ಮಾಡೋದು ಬೇಡ್ವಾ? ನನ್ನ ಬಗ್ಗೆ ಡಿಸೈಡ್ ಮಾಡೋಕೆ ನೀವು ಯಾರು?

ಸಾಕ್ಷಿ ಇಟ್ಟುಕೊಂಡು ಮಾತಾಡ್ತೀರಾ? ಏನು ಇಲ್ಲ ಅಂದಮೇಲೆ ಒಂದು ರಿಲೇಶನ್ಷಿಪ್ ನ ಯಾಕೆ ಹಾಳು ಮಾಡ್ತೀರಾ? ಈ ಕಾರಣಕ್ಕೆ ನಾನು ಎಲ್ಲಾ ಗಾಸಿಪ್ ಗಳನ್ನು Ignore ಮಾಡಿಬಿಡ್ತೀನಿ..” ಎನ್ನುತ್ತಾರೆ ಸೃಜನ್ ಲೋಕೇಶ್. ಮುಂದುವರೆದು ಮಾತನಾಡಿ, “ಇವತ್ತು ಒಬ್ಬರಿಗೆ ಕ್ಲಾರಿಫಿಕೇಶನ್ ಕೊಟ್ಟರೆ, ನಾಳೆ ಮತ್ತೊಬ್ಬರಿಗೆ, ಹಾಗೆ ಇನ್ನೊಬ್ಬರಿಗೆ ಎಲ್ಲರಿಗೂ ಉತ್ತರ ಕೊಡುತ್ತಾ ಹೋಗಬೇಕು. ಅದಕ್ಕಿಂತ ಸುಮ್ಮನೆ ಇರೋದು ಒಳ್ಳೆಯದು. ನಾವಲ್ಲ, ನಮ್ಮ ಕೆಲಸ ಮಾತನಾಡಬೇಕು ಅನ್ನೋ ವಿಷಯದ ಬಗ್ಗೆ ನಾನು ನಂಬಿಕೆ ಇಟ್ಟಿರುವವನು. ಈ ಕಾರಣಕ್ಕೆ ಯಾವ ವಿಷಯಕ್ಕೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ..”ಎಂದು ಸೃಜನ್ ಲೋಕೇಶ್ ಅವರು ಮಯೂರ ರಾಘವೇಂದ್ರ ಅವರ ಇಂಟರ್ವ್ಯೂ ನಲ್ಲಿ ತಿಳಿಸಿದ್ದಾರೆ.

ಇನ್ನು ಫ್ಯಾಮಿಲಿ ಬಗ್ಗೆ ಮಾತನಾಡಿ, “ನನಗೆ ಪ್ರಶ್ನೆ ಮಾಡೋ ಹಕ್ಕು ನನ್ನ ಅಮ್ಮ, ಅಕ್ಕ, ಹೆಂಡತಿ, ಮಕ್ಕಳು ಮತ್ತು ನನ್ನ ಶತ್ರುಗಳಿಗೂ ಇದೆ. ಅವರಿಗೆಲ್ಲಾ ನಾನು ನನ್ನ ಲೈಫ್ ನಲ್ಲಿ ಸ್ಥಾನ ಕೊಟ್ಟಿದ್ದೀನಿ. ನಾವೆಲ್ಲ ಒಬ್ಬರ ಬಗ್ಗೆ ಏನಾದರೂ ಹೇಳಬೇಕು ಅಂದ್ರೆ 10 ಸಾರಿ ಯೋಚನೆ ಮಾಡ್ತೀವಿ. ಆದರೆ ಈಗ ಜನರು ಹಾಗಲ್ಲ, ಯಾರ ಬಗ್ಗೆನಾದ್ರು ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಮೊಬೈಲ್ ಇರೋರೆಲ್ಲಾ ಜರ್ನಲಿಸ್ಟ್ ಆಗಿದ್ದಾರೆ..” ಎಂದು ಈಗಿನ ಸೋಷಿಯಲ್ ಮೀಡಿಯಾ ಸ್ಥಿತಿಯನ್ನು ವಿವರಿಸಿದ್ದಾರೆ ಸೃಜನ್ ಲೋಕೇಶ್. ದರ್ಶನ್ ಅವರ ವಿಚಾರಕ್ಕೆ ಹಾಗೂ ಇನ್ನು ಕೆಲವು ವಿಷಯಕ್ಕೆ ಸೃಜನ್ ಲೋಕೇಶ್ ಅವರ ಬಗ್ಗೆ ಕೆಲವು ಗಾಸಿಪ್ ಗಳು ಕೇಳಿಬಂದಿದ್ದವು. ಅದಕ್ಕೆಲ್ಲಾ ಈ ರೀತಿಯಾಗಿ ಉತ್ತರ ಕೊಟ್ಟಿದ್ದಾರೆ.



