ಇಂದು 22 ಏಪ್ರಿಲ್ 2025 ಮಂಗಳವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿ. ಮಧ್ಯಾಹ್ನ 03:29 ರಿಂದ 05:02 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರು ಯಾವುದೋ ವಿಚಾರವಾಗಿ ಗೊಂದಲ ಅನುಭವಿಸುವಿರಿ. ಮೀನ ರಾಶಿಯವರು ಸಾಲದ ಸುಳಿಯಿಂದ ಹೊರ ಬರಲಿದ್ದೀರಿ.
ಮೇಷ ರಾಶಿ
ಯಾವುದೋ ವಿಚಾರವಾಗಿ ಇಂದು ಗೊಂದಲ ಅನುಭವಿಸುವಿರಿ, ಪ್ರಮುಖವಾಗಿ ಸರ್ಕಾರಿ ಕೆಲಸದಲ್ಲಿ ಹಿನ್ನೆಡೆ ಆಗಲಿದೆ. ವರ್ಗಾವಣೆ ಬಯಸುತ್ತಿರುವವರಿಗೆ ನಿರಾಸೆ ಉಂಟಾಗಲಿದೆ. ಸಾಲ ಮಾಡುವ ಸಂಭವವಿದೆ. ಆರ್ಥಿಕ ಸಮಸ್ಯೆ ಕಾಡಲಿದೆ, ನಿಮ್ಮ ಖರ್ಚು ವೆಚ್ಚದ ಬಗ್ಗೆ ನಿಗಾ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಲಾಭಕ್ಕಿಂತ ನಷ್ಟವೇ ಉಂಟಾಗುತ್ತದೆ. ಎಚ್ಚರಿಕೆಯಿಂದ ಹೂಡಿಕೆ ಮಾಡಿ.
ವೃಷಭ ರಾಶಿ
ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಮತ್ತೊಬ್ಬರ ಕೆಲಸದ ಹೊರೆ ನಿಮ್ಮ ಹೆಗಲೇರಲಿದೆ. ಇದರಿಂದ ನೀವು ನಿರಾಸೆಗೊಳ್ಳುವಿರಿ. ಎಚ್ಚರದಿಂದ ಕೆಲಸ ಮಾಡಿ. ಬಹಳ ದಿನಗಳಿಂದ ಮತ್ತೊಬ್ಬರ ಬಳಿ ಸಿಲುಕಿರುವ ನಿಮ್ಮ ಹಣ ಇಂದು ನಿಮ್ಮ ಕೈ ಸೇರಲಿದೆ. ಹೊಸ ಆಭರಣ ಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ
ಯಾವುದೋ ವಿಚಾರಕ್ಕೆ ನಿಮ್ಮ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಆಟೋ ಚಾಲಕರು, ಕ್ಯಾಬ್ ಚಾಲಕರಿಗೆ ಲಾಭ ಕಡಿಮೆ. ಹೋಟೆಲ್ ಉದ್ಯಮದವರಿಗೆ ಉತ್ತಮ ಲಾಭವಿರುತ್ತದೆ. ರಾಜಕೀಯದಲ್ಲಿರುವವರಿಗೂ ಕೊಂಚಮಟ್ಟಿನ ಹಿನ್ನೆಲೆ ಇದೆ. ಆದ್ದರಿಂದ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ.
ಕಟಕ ರಾಶಿ:
ಈ ದಿನ ಎಲ್ಲಾ ಕೆಲಸಗಳಲ್ಲೂ ನಿಮ್ಮ ಮನಸ್ಸಿಗೆ ತೃಪ್ತಿ ದೊರೆಯುತ್ತದೆ. ಈ ದಿನ ಆರಾಮದಾಯಕವಾಗಿ ಆರಂಭವಾಗುತ್ತದೆ. ಭೂಮಿಯನ್ನು ಖರೀದಿ ಮಾಡಲು ಯೋಚಿಸುತ್ತಿರುವರು ಜಾಗ್ರತೆಯಿಂದ ಮುಂದುವರೆಯಬೇಕು.
ಸಿಂಹ ರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಇಷ್ಟು ದಿನ ಕೌಟುಂಬಿಕ ಜಂಜಾಟ ಅನುಭವಿಸುತ್ತಿರುವವರಿಗೆ ಪರಿಹಾರ ದೊರೆಯಲಿದೆ. ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ದಾಯಾದಿಗಳೊಂದಿಗೆ ಕಲಹ ಉಂಟಾಗಬಹುದು, ಯಾರೊಂದಿಗಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಕೆಲಸದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಿ ಅರ್ಧಕ್ಕೆ ನಿಲ್ಲಬಹುದು, ಮನಸ್ಸು ಬಹಳ ಗೊಂದಲಕ್ಕೆ ಒಳಗಾಗುತ್ತದೆ. ದೂರದ ಸ್ಥಳಕ್ಕೆ ಧಾರ್ಮಿಕ ಪ್ರವಾಸ ಕೈಗೊಳ್ಳುವಿರಿ. ಇಷ್ಟದೇವರ ದರ್ಶನ ಮಾಡಿದರೆ ಬಹುತೇಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ತುಲಾ ರಾಶಿ
ಕೆಲಸ ಕಾರ್ಯಗಳಲ್ಲಿ ಯಥೇಚ್ಛ ಲಾಭ ದೊರೆಯಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸಿನಿಮಾ ಕ್ಷೇತ್ರ, ರಾಜಕೀಯದಲ್ಲಿರುವವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಇದುವರೆಗೂ ನೀವು ಅನುಭವಿಸಿದ ಕಷ್ಟಗಳಿಗೆ ಪ್ರತಿಫಲ ದೊರೆಯಲಿದೆ. ಬಹಳ ದಿನಗಳಿಂದ ನೀವು ಆರಂಭಿಸಬೇಕೆಂದುಕೊಂಡಿದ್ದ ಕೆಲಸಕ್ಕೆ ಇಂದು ಚಾಲನೆ ದೊರೆಯಲಿದೆ. ಯಾವುದೇ ಕೆಲಸ ಮಾಡಿದರೂ ಏಕಾಗ್ರತೆ ಇರಲಿ.
ವೃಶ್ಚಿಕ ರಾಶಿ
ಚಿನ್ನದ ವ್ಯಾಪಾರ ಮಾಡುವವರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಇಂದು ಲಾಭ ಕಡಿಮೆ ಇರಲಿದೆ. ಆದ್ದರಿಂದ ಎಚ್ಚರಿಕೆಯಿಂದ ಇರಿ. ಹಾಲು ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚಾಗಿರಲಿದೆ. ಮನಸ್ಸಿಗೆ ನೆಮ್ಮದಿ ಇರಲಿದೆ. ಆತ್ಮೀಯರ ಚುಚ್ಚುಮಾತುಗಳಿಂದ ನಿಮ್ಮ ಮನಸ್ಸಿಗೆ ನೋವುಂಟಾಗಬಹುದು, ತಾಳ್ಮೆಯಿಂದಿರಿ.
ಧನು ರಾಶಿ
ಈ ದಿನ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಸೌಂದರ್ಯ ಸಾಧನ, ಬಟ್ಟೆ ಬಿಸ್ನೆಸ್ ಮಾಡುವವರಿಗೆ ನಷ್ಟ ಉಂಟಾಗಬಹುದು. ಎಚ್ಚರಿಕೆಯಿಂದ ಮುಂದುವರೆಯಿರಿ. ಕೃಷಿಕರಿಗೆ ದ್ವಿಗುಣ ಲಾಭ ದೊರೆಯಲಿದೆ.
ಮಕರ ರಾಶಿ
ಮತ್ತೊಬ್ಬರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದಿರಿ, ಇಲ್ಲದಿದ್ರೆ ಸಮಸ್ಯೆಗೆ ಸಿಲುಕಬಹುದು. ಮನೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಆದ್ದರಿಂದ ಜಾಗ್ರತೆಯಿಂದ ಹೆಜ್ಜೆ ಇಡಿ. ವ್ಯಾಪಾರದಲ್ಲಿ ಲಾಭ ಹೆಚ್ಚಲಿದೆ. ಮರದ ಕೆಲಸ, ಕಬ್ಬಿಣದ ಕೆಲಸ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯಲಿದೆ. ವಾಹನದಲ್ಲಿ ಓಡಾಡುವಾಗ ಎಚ್ಚರಿಕೆಯಿಂದಿರಿ.
ಕುಂಭ ರಾಶಿ
ಹಿತಶತ್ರುಗಳಿಂದ ನೀವು ಸಮಸ್ಯೆ ಅನುಭವಿಸಬಹುದು. ಜಾಗ್ರತೆಯಿಂದಿರಿ. ಬಟ್ಟೆ, ಹೂ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರೆಯಲಿದೆ. ಪಾಲುದಾರಿಕೆಯಲ್ಲಿ ಬಿಸ್ನೆಸ್ ಮಾಡುವವರಿಗೆ ನಷ್ಟ ಉಂಟಾಗಬಹುದು. ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಮನಸ್ಸಿಗೆ ಖುಷಿ ಇರಲಿದೆ. ಸಾಲದ ಸುಳಿಯಿಂದ ಹೊರ ಬರಲಿದ್ದೀರಿ. ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ನೀವು ನಂಬಿದವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಎಚ್ಚರಿಕೆ ಅಗತ್ಯ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.



