ಬಿಗ್ ಬಾಸ್ ಕನ್ನಡ ಸೀಸನ್11 ಈಗ ಫಿನಾಲೆ ಹಂತ ತಲುಪಿದೆ. ಮನೆಯೊಳಗೆ ಈಗ 9 ಜನ ಸದಸ್ಯರಿದ್ದು ಫಿನಾಲೆ ತಲುಪೋದು ಯಾರು ಎನ್ನುವ ವಿಚಾರ ಈಗ ಭಾರಿ ಚರ್ಚೆ ಆಗುತ್ತಿದೆ. ಈ ವಾರ ನೀಡಿರುವ ಟಾಸ್ಕ್ ನ ಅನುಸಾರ ಈ ವಾರವೆ ಒಬ್ಬರು ಫಿನಾಲೆ ತಲುಪೋದು ಖಚಿತ. ಈ ಸೀಸನ್ ನ ಫಿನಾಲೆಗೆ ಉಳಿದಿರುವುದು ಇನ್ನು 3 ವಾರಗಳು ಅಷ್ಟೇ ಎಂದು ಸುದೀಪ್ ಅವರು ಹೇಳಿದ್ದರು, ಈಗಾಗಲೇ ಒಂದು ವಾರ ಮುಗಿಯುತ್ತಾ ಬಂದಿದೆ, ಜನವರಿ 26ರಂದು ಫಿನಾಲೆ ನಡೆಯಲಿದೆ. ಫಿನಾಲೆ ದಿನಾಂಕ ಹತ್ತಿರ ಬರುತ್ತಿದ್ದ ಹಾಗೆ ಎಲ್ಲರಲ್ಲಿ ಕುತೂಹಲ ಹೆಚ್ಚಾಗಿದೆ. ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ಗೆದ್ದವರು ನೇರವಾಗಿ ಫಿನಾಲೆ ತಲುಪುತ್ತಾರೆ. ಈ ಸಮಯದಲ್ಲಿ ಬೇರೆಯದೇ ವಿಷಯ ಚರ್ಚೆ ಆಗುತ್ತಿದೆ.
ಬಿಗ್ ಬಾಸ್ ಮನೆಯ ಒಳಗೆ ಈಗ 9 ಸ್ಪರ್ಧಿಗಳಿದ್ದು, ತ್ರಿವಿಕ್ರಂ, ಮೋಕ್ಷಿತಾ, ಧನರಾಜ್, ಹನುಮಂತ, ಚೈತ್ರಾ, ರಜತ್, ಗೌತಮಿ, ಮಂಜು ಹಾಗೂ ಭವ್ಯ ಈ 9 ಸ್ಪರ್ಧಿಗಳಿದ್ದು, ಇವರುಗಳ ಪೈಕಿ ಒಬ್ಬೊಬ್ಬರಿಗೆ ಫ್ರೆಂಡ್ಶಿಪ್ ಇದೆ. ಅದರಲ್ಲಿ ಚೈತ್ರಾ ಹಾಗೂ ಮೋಕ್ಷಿತಾ ಅವರು ಯಾರ ಫ್ರೆಂಡ್ಶಿಪ್ ಗೆ ಸಿಲುಕಿಕೊಂಡಿಲ್ಲ. ತಮ್ಮ ಪಾಡಿಗೆ ತಾವಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಿರುವವರಲ್ಲಿ ಕೆಲವರಿಗೆ ಹೊರಗಿನಿಂದಲೇ ಪರಿಚಯ ಇರುತ್ತದೆ. ಅದನ್ನು ಮನೆಯಲ್ಲಿ ಚೆನ್ನಾಗಿ ಬಳಸಿಕೊಳ್ಳುವವರು ಇದ್ದಾರೆ. ಆದರೆ ಈ ಸೀಸನ್ ನಲ್ಲಿ ಸ್ವಲ್ಪ ಬದಲಾವಣೆ ಥರ ಆಗಿದೆ ಎಂದರು ತಪ್ಪಲ್ಲ. ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಈ ವಿಷಯ..

ಮೋಕ್ಷಿತಾ ಹಾಗೂ ಧನರಾಜ್ ಇಬ್ಬರೂ ಸಹ ಬಿಗ್ ಬಾಸ್ ಮನೆಯ ಒಳಗೆ ತಮಗೆ ಯಾರ ಪರಿಚಯ ಸಹ ಇಲ್ಲ ಎನ್ನುವ ಹಾಗೆ ನಡೆದುಕೊಂಡರು. ಜೋಡಿ ಟಾಸ್ಕ್ ನಲ್ಲಿ ಜೊತೆಯಾಗಿ ಆಡಿದ್ದರು ಸಹ ಒಬ್ಬರಿಗೊಬ್ಬರು ಗೊತ್ತೇ ಇಲ್ಲವೇನೋ ಎನ್ನುವ ಹಾಗಿತ್ತು ಇವರಿಬ್ಬರ ವರ್ತನೆ ಆದರೆ ಧನರಾಜ್ ಹಾಗೂ ಮೋಕ್ಷಿತಾ ಇಬ್ಬರಿಗೂ ಮೊದಲೇ ಪರಿಚಯ ಇತ್ತು ಎನ್ನುವಂತಹ ಒಂದೆರಡು ವಿಡಿಯೋಗಳು ಈಗ ವೈರಲ್ ಆಗಿದೆ. ಹೌದು, ಮೋಕ್ಷಿತಾ ಅವರು ಪಾರು ಧಾರಾವಾಹಿ ಮೂಲಕ ಬಹಳ ಫೇಮಸ್ ಆದವರು, ಇನ್ನು ಧನರಾಜ್ ಅವರು ಗಿಚ್ಚಿ ಗಿಲಿಗಿಲಿ ಶೋ ಹಾಗೂ ಅಬ್ಬಬ್ಬಾ ಎನ್ನುವ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಇವರಿಬ್ಬರು ಜೊತೆಯಾಗಿ ಒಂದು ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ..
ಮೋಕ್ಷಿತಾ ಹಾಗೂ ಧನರಾಜ್ ನಟಿಸಿರುವ ವೆಬ್ ಸೀರೀಸ್ ನ ಹೆಸರು ಮಧುಮಗ, ಈ ವೆಬ್ ಸೀರೀಸ್ ಟಾಕೀಸ್ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿದ್ದು, ಇದೀಗ ಮೋಕ್ಷಿತಾ ಹಾಗೂ ಧನರಾಜ್ ನಟನೆಯ ಕೆಲವು ದೃಶ್ಯಗಳು ವೈರಲ್ ಆಗಿದೆ. ಇಬ್ಬರ ನಡುವೆ ಮದುವೆ ಮಾತುಕತೆ ನಡೆಯುವಂಥ ದೃಶ್ಯ ಇದಾಗಿದ್ದು, ಮಂಗಳೂರಿನ ಬಗ್ಗೆ ಇಬ್ಬರೂ ಮಾತನಾಡುತ್ತಾರೆ. ಈ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಇದನ್ನು ನೋಡಿ, ಆಶ್ಚರ್ಯ ಪಟ್ಟಿದ್ದಾರೆ. ಮೋಕ್ಷಿತಾ ಹಾಗೂ ಧನರಾಜ್ ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ ಎಂದು ಯಾರಿಗೂ ಸಹ ಗೊತ್ತಿರಲಿಲ್ಲ.

ಇವರಿಬ್ಬರು ಜೊತೆಯಾಗಿ ನಟಿಸಿದ್ದಾರೆ, ಒಟ್ಟಿಗೆ ಕೆಲಸ ಮಾಡಿದ್ದಾರೆ ಆದರೆ ಬಿಗ್ ಬಾಸ್ ಮನೆಯ ಒಳಗೆ ಗೊತ್ತೇ ಇಲ್ಲ ಎನ್ನುವ ಹಾಗೆ ಯಾಕೆ ನಡೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರ ನಡುವೆ ಚರ್ಚೆ ಶುರುವಾಗಿದೆ. ಮೋಕ್ಷಿತಾ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಪರ್ಧಿಯನ್ನು ಬಿಟ್ಟುಕೊಡುತ್ತಿಲ್ಲ. ಒಂದು ದಿವಸ ಜೊತೆಯಲ್ಲಿ ಕೆಲಸ ಮಾಡಿ, ಹಾಯ್ ಬಾಯ್ ಎಂದು ಹೇಳಿ ಹೋಗಿರಬಹುದು. ಪರ್ಸನಲ್ ಇಬ್ಬರಿಗೂ ಪರಿಚಯ ಇಲ್ಲದೇ ಇರಬಹುದು ಎಂದು ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ..ಮೋಕ್ಷಿತಾ ಹಾಗೂ ಧನರಾಜ್ ವಿಡಿಯೋ ಅಂತೂ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ ಎಂದರೆ ಖಂಡಿತ ತಪ್ಪಲ್ಲ. ಇವರಿಬ್ಬರಲ್ಲಿ ಯಾರು ಫಿನಾಲೆ ತಲುಪುತ್ತಾರೆ ಎಂದು ಕಾದು ನೋಡಬೇಕಿದೆ.



