ನಟಿ ರಶ್ಮಿಕಾ ಮಂದಣ್ಣ ಈಗ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ರಶ್ಮಿಕಾ. ಇವರು ಅಭಿನಯಿಸುತ್ತಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದೆ. ಇತ್ತೀಚೆಗೆ ತೆರೆಕಂಡ ಪುಷ್ಪ2 1500 ಕೋಟಿ ಹಣಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾ ಇಂದ ರಶ್ಮಿಕಾ ಅವರಿಗೆ ಇರುವ ಬೇಡಿಕೆ ಇನ್ನು ಜಾಸ್ತಿ ಆಗಿದೆ ಎಂದರೆ ತಪ್ಪಲ್ಲ. ಇದೀಗ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ದೊಡ್ಡ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಸಲ್ಮಾನ್ ಖಾನ್ ಅವರ ಸಿಕಂದರ್ ಸಿನಿಮಾದಲ್ಲಿ. ಸಲ್ಮಾನ್ ಖಾನ್ ಅವರು ಈ ಸಿನಿಮಾಗಾಗಿ ರಶ್ಮಿಕಾ ಅವರಿಗೆ ಭಾರಿ ಸಂಭಾವನೆ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..
ರಶ್ಮಿಕಾ ಮಂದಣ್ಣ ಅವರು ನಟನೆ ಶುರು ಮಾಡಿದ್ದು ಕನ್ನಡದಿಂದ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ಸಾನ್ವಿ ಪಾತ್ರದಲ್ಲಿ ಅಭಿನಯಿಸಿದ್ದ ರಶ್ಮಿಕಾ ಅವರಿಗೆ ತೆಲುಗಿನಿಂದ ಹೆಚ್ಚು ಆಫರ್ ಗಳು ಬರುವುದಕ್ಕೆ ಶುರುವಾದವು. ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ ರಶ್ಮಿಕಾ ಅವರು ಕನ್ನಡದಲ್ಲಿ ಸಹ ಆಗೊಮ್ಮೆ ಈಗೊಮ್ಮೆ ಸಿನಿಮಾ ಮಾಡುತ್ತಿದ್ದರು. ಬಳಿಕ ತಮಿಳು ಹಾಗೂ ಹಿಂದಿ ಚಿತ್ರರಂಗಕ್ಕೆ ಸಹ ಎಂಟ್ರಿ ಕೊಟ್ಟರು. ತಮಿಳು ಹಾಗೂ ಹಿಂದಿಯಲ್ಲಿ ಕೂಡ ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ದಳಪತಿ ವಿಜಯ್ ಅವರ ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸಿದರು ರಶ್ಮಿಕಾ, ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಹಿಂದಿಯಲ್ಲಿ ರಣಬೀರ್ ಕಪೂರ್ ಅವರ ಜೊತೆಗೆ ನಟಿಸಿದ ಅನಿಮಲ್ ಸಿನಿಮಾ ಕೂಡ ರಶ್ಮಿಕಾ ಅವರ ಕೆರಿಯರ್ ಗೆ ಪ್ಲಸ್ ಪಾಯಿಂಟ್ ಆಗಿದೆ. ಅನಿಮಲ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಅದಾದ ಬಳಿಕ ಪುಷ್ಪ2 ಸಿನಿಮಾ ಇವರಿಗೆ ಇದ್ದ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ. ರಶ್ಮಿಕಾ ಅವರಿಗೆ ಈಗ ಬಿಗ್ ಆಫರ್ ಗಳು ಸಿಗುತ್ತಿದೆ ಎಂದರೆ ತಪ್ಪಲ್ಲ. ಒಂದರ ನಂತರ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಇದೀಗ ಇವರು ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಅವರ ಜೊತೆಗೆ ಸಿಕಂದರ್ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಈ ಸಿನಿಮಾದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆ ಆಗಿದ್ದು, ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಿಕಂದರ್ ಸಿನಿಮಾಗೆ ರಶ್ಮಿಕಾ ಅವರು ಪಡೆದಿರುವ ಸಂಭಾವನೆ ವಿಚಾರ ಈಗ ವೈರಲ್ ಆಗಿದೆ. ಪುಷ್ಪ2 ಸಿನಿಮಾಗೆ ರಶ್ಮಿಕಾ ಅವರು 4 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಈಗ ಸಿಕಂದರ್ ಸಿನಿಮಾಗೆ ಅದಕ್ಕಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸಿಕಂದರ್ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಅವರಿಗೆ ಬರೋಬ್ಬರಿ 13 ಕೋಟಿ ರೂಪಾಯಿಗಳ ಸಂಭಾವನೆ ಕೊಡಲಾಗಿದೆಯಂತೆ. ಹೌದು, ಇದು ಬಹಳ ದುಬಾರಿ ಸಂಭಾವನೆ ಆಗಿದ್ದು, ರಶ್ಮಿಕಾ ಅವರ ರೇಂಜ್ ಈಗ ಬೇರೆ ಹಂತವನ್ನೇ ತಲುಪಿದೆ ಎನ್ನುವ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಸಿಕಂದರ್ ಸಿನಿಮಾ ಇವರಿಗೆ ಹೆಚ್ಚು ಜನಪ್ರಿಯತೆ ಹಾಗೂ ಹೆಸರು ತಂದುಕೊಡುವುದರಲ್ಲಿ ಯಾವುದೇ ಸಂಶಯ ಇಲ್ಲ..
ರಶ್ಮಿಕಾ ಮಂದಣ್ಣ ಈಗ ಬಾಲಿವುಡ್, ಟಾಲಿವುಡ್ ಎಂದು ಬ್ಯುಸಿ ಇದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡ್ತಾರೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಹಾಗೆಯೇ ರಶ್ಮಿಕಾ ಅವರ ಮದುವೆ ವಿಷಯ ಸಹ ಭಾರಿ ಸುದ್ದಿ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಇಬ್ಬರು ಸಹ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಮುಂದಿನ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಜಯ್ ದೇವರಕೊಂಡ ಅವರಾಗಲಿ, ರಶ್ಮಿಕಾ ಅವರಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇವರಿಬ್ಬರ ಮದುವೆ ಬಗ್ಗೆ ವದಂತಿಗಳು ಕೇಳಿ ಬರುತ್ತಿದೆ.