ಸರಿಗಮಪ ಕಾರ್ಯಕ್ರಮ ಹಲವು ಜನರಿಗೆ ವೇದಿಕೆ ಆಗಿದೆ, ಒಂದಷ್ಟು ಜನರಿಗೆ ಜೀವನ ಕೊಟ್ಟಿದೆ, ಸಾಕಷ್ಟು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದೆ. ಇದೆಲ್ಲವೂ ನಮಗೆ ಗೊತ್ತಿರುವ ವಿಚಾರ. ಇದುವರೆಗೂ ಸರಿಗಮಪ ಕಾರ್ಯಕ್ರಮ 20 ಸೀಸನ್ ಗಳು ನಡೆದಿವೆ. ಮುಂದೆ ಇನ್ನು ಹೆಚ್ಚು ಸೀಸನ್ ಗಳು ಬರಲಿದೆ. ಕಾರ್ಯಕ್ರಮ ಯಶಸ್ವಿಯಾಗಿ, ಎಲ್ಲವೂ ಚೆನ್ನಾಗಿ ಹೋಗುವ ವೇಳೆ, ಸರಿಗಮಪ ಕಾರ್ಯಕ್ರಮದ ಮೂಲಕ ಗಾಯಕಿಯಾಗಿ ಗುರುತಿಸಿಕೊಂಡಿರುವ ಪೃಥ್ವಿ ಭಟ್ ಮದುವೆ ವಿಚಾರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೃಥ್ವಿ ಭಟ್ ಅವರ ತಂದೆ ತಮ್ಮ ಮಗಳ ಮೇಲೆ ವಶೀಕರಣ ಆಗಿದೆ, ನಮಗೆ ಗೊತ್ತಾಗಲೇ ಎಂದು ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಅವರ ಮೇಲೆ ಆ*ರೋಪ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಘಟನೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಸರಿಗಮಪ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರುವ ಪೃಥ್ವಿ ಭಟ್ ಕಳೆದ ತಿಂಗಳು 27ರಂದು ಜೀಕನ್ನಡದಲ್ಲೇ ಕೆಲಸ ಮಾಡುವ ಅಭಿಷೇಕ್ ಎನ್ನುವವರ ಜೊತೆಗೆ ಮದುವೆಯಾಗಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರು ಹೊಸ ಜೀವನ ಶುರು ಮಾಡಿರುವುದು ಸಂತೋಷದ ವಿಚಾರವೇ. ಆದರೆ ತಂದೆ ತಾಯಿಗೆ ಇಷ್ಟವಿಲ್ಲದೇ, ತಂದೆ ತಾಯಿಗೆ ಗೊತ್ತೇ ಇಲ್ಲದೇ ಓಡಿ ಹೋಗಿ ಮದುವೆ ಆಗಿದ್ದಾರೆ. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರ, ಇದೀಗ ಪೃಥ್ವಿ ಭಟ್ ಅವರ ತಂದೆ ಮಗಳ ಬಗ್ಗೆ ಮಾತನಾಡಿದ್ದು, ತಮ್ಮ ಮಗಳಿಗೆ ವ*ಶೀಕರಣ ಆಗಿರಬಹುದು ಎಂದು ಹೇಳಿರುವ ಆಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಸರಿಗಮಪ ಕಾರ್ಯಕ್ರಮ ಜ್ಯುರಿ ಗಳಲ್ಲಿ ಒಬ್ಬರಾದ ನರಹರಿ ದೀಕ್ಷಿತ್ ಅವರ ಮೇಲೆ ಆರೋಪ ಮಾಡಿದ್ದಾರೆ.

ಪೃಥ್ವಿ ಭಟ್ ಅವರ ತಂದೆಯ ಹೆಸರು ಶಿವ ಪ್ರಸಾದ್, ಇವರು ಮಗಳನ್ನು ಸಂಪ್ರದಾಯಬದ್ಧವಾಗಿ ಬೆಳೆಸಿರುವ ತಂದೆ. ಇದೀಗ ಇವರು ಮಗಳು ಪೃಥ್ವಿ ಭಟ್, ತಂದೆ ತಾಯಿಗೆ ಗೊತ್ತೇ ಆಗದ ಹಾಗೆ ಓಡಿ ಹೋಗಿ ಅಭಿಷೇಕ್ ಜೊತೆಗೆ ಮದುವೆಯಾಗಿದ್ದಾರೆ. ಇವರ ತಂದೆ ಈಗ ಮಾತನಾಡಿದ್ದು, ನಮ್ಮ ಮಗಳು ನಮ್ಮನ್ನು ಬಿಟ್ಟು ಓಡಿ ಹೋಗಿ ಮದುವೆಯಾಗಿ 20 ದಿನ ಕಳೆದು ಹೋಗಿದೆ, ಧಾರೆ ಎರೆಯುವ ಭಾಗ್ಯ ನಮಗೆ ಸಿಗಲಿಲ್ಲ. ಅಮ್ಮ ಅಪ್ಪನ ನೆನಪು ಅವಳಿಗೆ ಆಗುತ್ತಿಲ್ಲ ಎಂದಿದ್ದಾರೆ. ಆ ದಿವಸ ಮಾರ್ಚ್ 27ರಂದು ರೆಕಾರ್ಡಿಂಗ್ ಇದೆ ಎಂದು ಹೇಳಿದಾಗ ತಂದೆಯವರೇ ಪೃಥ್ವಿ ಅವರನ್ನು ಕರೆದುಕೊಂಡು ಹೋಗಿ ಸ್ಟುಡಿಯೋಗೆ ಬಿಟ್ಟುಬಂದರಂತೆ. ಅಂದು ಮಧ್ಯಾಹ್ನ ಪೊಲೀಸ್ ಸ್ಟೇಶನ್ ಇಂದ ಕಾಲ್ ಮಾಡಿ ಪೃಥ್ವಿ ನಿಮ್ಮ ಮಗಳಾ ಎಂದು ಕೇಳಿದರಂತೆ.
ಅದಕ್ಕೆ ಅವರು ಹೌದು ಎಂದಾಗ, ಅಭಿಷೇಕ್ ಎನ್ನುವವರನ್ನು ಅವರು ಮದುವೆ ಆಗಿದ್ದಾರೆ, ಇನ್ನೇನು ಸ್ವಲ್ಪ ಹೊತ್ತಲ್ಲಿ ನಿಮ್ಮ ಮನೆಗೆ ಬರುತ್ತಾರೆ ಎಂದಾಗ, ಶಿವ ಪ್ರಸಾದ್ ಅವರು ಅವಳು ನಮ್ಮ ಮನೆಗೆ ಬರುವುದು ಬೇಡ ಎಂದು ಹೇಳಿದರಂತೆ. ಆಮೇಲೆ ಪೃಥ್ವಿ ಭಟ್ ಒಂದೆರಡು ಸಾರಿ ಕಾಲ್ ಮಾಡಿ, ಸಾರಿ ಅಮ್ಮ ಅಪ್ಪ ಎಂದು ಹೇಳಿದರಂತೆ. ಆದರೆ ಇವರು ಏನು ಮಾತನಾಡಿಲ್ಲ, ನಂತರ ಮಗಳು ಮತ್ತೆ ಏನು ಕಾಲ್ ಮಾಡಿಲ್ಲವಂತೆ. ಮಗಳು ಮದುವೆ ಆಗಿರುವ ಹುಡುಗ ಹವ್ಯಕ ಅಲ್ಲ, ಬ್ರಾಹ್ಮಣ ಕೂಡ ಅಲ್ಲ, ಮಗಳೇ ಹೋದಮೇಲೆ ಜಾತಿ ಕಟ್ಟಿಕೊಂಡು ಏನಾಗಬೇಕು ಎಂದು ಹೇಳುತ್ತಾರೆ ಅವರ ತಂದೆ. ಮಗಳು ಈ ರೀತಿ ಓಡಿ ಹೋಗಿರುವುದು ಅವರ ಮನಸ್ಸಿಗೆ ಬಹಳ ಬೇಸರ ತಂದಿದೆ.

ತಮ್ಮ ಮಗಳು ಈ ರೀತಿ ಓಡಿ ಹೋಗಿರುವುದಕ್ಕೆ, ಅವಳ ಮದುವೆಯನ್ನು ಬೇರೆಯವರು ಮಾಡಿರುವುದಕ್ಕೆ ಕಾರಣ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯುರಿ ಆಗಿರುವ ನರಹರಿ ದೀಕ್ಷಿತ್ ಅವರು ಎಂದಿದ್ದಾರೆ. ನರಹರಿ ದೀಕ್ಷಿತ್ ಅವರು ಆಗಾಗ ಪೃಥ್ವಿ ಭಟ್ ಅವರ ಮನೆಗೆ ಬಂದು ಹೋಗುತ್ತಿದ್ದರಂತೆ. ಕಳೆದ ತಿಂಗಳು ಅವರು ಮನೆಗೆ ಬಂದಾಗ, ನಮ್ಮ ಮಗಳಿಗೆ ಮದುವೆ ಮಾಡಬೇಕು ಅಂದುಕೊಂಡಿದ್ದೀವಿ, ನಿಮ್ಮ ಶಿಷ್ಯರ ಪೈಕಿ ಹವ್ಯಕರು ಇದ್ದರೆ ಹೇಳಿ ಎಂದು ಹೇಳಿದ್ದರಂತೆ. ಅದಕ್ಕೆ ನರಹರಿ ಅವರು, ಜೀಕನ್ನಡದ ಅಭಿಷೇಕ್ ಎನ್ನುವ ಹುಡುಗ ನಿಮ್ಮ ಮಗಳ ಹಿಂದೆ ಬಿದ್ದಿದ್ದಾನೆ, ಅದರಿಂದ ಮೊದಲು ಬಿಡಿಸಿಕೊಳ್ಳಿ ಎಂದರಂತೆ. ಈ ವಿಚಾರ ಗೊತ್ತಾಗಿ ಶಿವಪ್ರಸಾದ್ ಅವರು ತಮ್ಮ ಮಗಳಿಗೆ ಕೇಳಿದಾಗ,, ಅವರು ತುಂಬಾ ದಿನದಿಂದ ನನ್ನನ್ನು ಪ್ರೀತಿಸುತ್ತಿದ್ದಾರೆ, ನಿಮಗೆ ಒಪ್ಪಿಗೆಯಾದರೆ ಮಾತ್ರ ಮದುವೆ ಆಗುತ್ತೇನೆ ಎಂದು ಹೇಳಿದರಂತೆ ಪೃಥ್ವಿ. ಅದಕ್ಕೆ ಅವರ ತಂದೆ ಪ್ರಮಾಣ ಮಾಡಲು ಹೇಳಿದರಂತೆ.
ದೇವರ ಮನೆಗೆ ಕರೆದುಕೊಂಡು ಹೋಗಿ, ದೇವರ ಮೇಲೆ ಪ್ರಮಾಣ ಮಾಡುವುದಕ್ಕೆ ಹೇಳಿದರಂತೆ, ಪೃಥ್ವಿ ಅವರು ದೇವರ ಮೇಲೆ ಮತ್ತು ತಂದೆಯ ತಲೆಮೇಲೆ ಕೈಯಿಟ್ಟು ಪ್ರಮಾಣ ಮಾಡಿದರಂತೆ. ನಿಮ್ಮ ಒಪ್ಪಿಗೆ ಇಲ್ಲದೇ ಯಾರನ್ನು ಮದುವೆ ಆಗುವುದಿಲ್ಲ ಎಂದು. ಮಗಳು ಈ ರೀತಿ ಹೇಳಿದ ನಂತರ ಅವರ ತಂದೆ ಕೂಡ ಮಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಈ ರೀತಿಯ ಘಟನೆ ನಡೆದಿದೆ. ನರಹರಿ ಅವರು ಮನೆಗೆ ಬಂದು ಹೋದ ನಂತರ ಅವರ ಪೃಥ್ವಿ ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತಂತೆ. ಅದನ್ನು ಇವರು ಸರಿಯಾಗಿ ಗಮನಿಸಿಲ್ಲ. ವಶೀಕರಣ ಮಾಡಿದ ಹಾಗೆ ಇತ್ತಂತೆ ಪೃಥ್ವಿ ಅವರ ನಡವಳಿಕೆ. ಮಗಳಲ್ಲಿ ಆದ ಬದಲಾವಣೆಯನ್ನು ಗಮನಿಸಿದ್ದರೆ, ಈ ರೀತಿ ಆಗುತ್ತಿರಲಿಲ್ಲ ಎಂದು ಶಿವಪ್ರಸಾಫ್ ಅವರು ಬೇಸರ ಮಾಡಿಕೊಂಡಿದ್ದಾರೆ.

ನಂತರ ನರಹರಿ ದೀಕ್ಷಿತ್ ಅವರೇ ತಮ್ಮ ಮಗಳಿಗೆ ಧಾರೆ ಎರೆಡು ಕೊಟ್ಟಿರುವುದು ಎಂದಿದ್ದಾರೆ. ಮಗಳಿಗೆ ಧಾರೆ ಎರೆಯುವ ಅವಕಾಶವನ್ನು ಆತ ತಪ್ಪಿಸಿಬಿಟ್ಟ. ಯಾಕೆ ಧಾರೆ ಎರೆದೆ ಎಂದು ಕೇಳಿದರೆ, ಜೀಕನ್ನಡದವರು ಹೇಳಿದರು ಅದಕ್ಕೆ ಧಾರೆ ಎರೆದೆ ಎಂದು ಹೇಳುತ್ತಾನೆ, ಇಂಥವರಿಗೆ ಏನು ಹೇಳುವುದು, ಆವತ್ತು ನಮ್ಮ ಮನೆಗೆ ಬಂದಾಗ, ಪರಿಸ್ಥಿತಿ ಕೈಮೀರಿ ಹೋಗಿದೆ ನಿಮ್ಮ ಮಗಳು ಅವನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದಾಳೆ ಅನ್ನೋ ವಿಷಯವನ್ನ ಆ ವ್ಯಕ್ತಿ ಹೇಳಲೇ ಇಲ್ಲ ಎಂದು ಪೃಥ್ವಿ ಅವರ ತಂದೆ ತಿಳಿಸಿದ್ದಾರೆ. ನಡೆದಿದ್ದರ ಹಿಂದಿನ ಕಾರಣ ಏನೇ ಇದ್ದರೂ, ಪೃಥ್ವಿ ಭಟ್ ಅವರು ತಂದೆ ತಾಯಿಯ ಮನಸ್ಸಿಗೆ ನೋ*ವು ಮಾಡಿ, ಈ ರೀತಿ ಮದುವೆ ಆಗಿರುವುದು ಸರಿ ಎಂದು ಅನ್ನಿಸುವುದಿಲ್ಲ.



