ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 745ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾಗೆ ಹೆಜ್ಜೆ ಹೆಜ್ಜೆಗೂ ಸವಾಲು ಎದುರಾಗುತ್ತಿದೆ. ಸಿಟಿ ಆಫ್ ಲೈಟ್ಸ ಹೋಟೆಲ್ನಲ್ಲಿ ಕೆಲಸ ಕಳೆದುಕೊಂಡ ಭಾಗ್ಯಾ ರೆಸಾರ್ಟ್ ಒಂದರಲ್ಲಿ ಜೋಕರ್ ಕೆಲಸ ಪಡೆದುಕೊಂಡಿದ್ದಳು, ಆದರೆ ಈಗ ಆ ಕೆಲಸವೂ ಕೈ ತಪ್ಪಿ ಹೋಗಿದೆ. ಭಾಗ್ಯಾ ಸರಿಯಾಗಿ ಕೆಲಸಕ್ಕೆ ಹಾಜರಾಗದ ಕಾರಣ ಅವಳನ್ನು ಕೆಲಸದಿಂದ ತೆಗೆಯಲಾಗಿದೆ. ಭಾಗ್ಯಾ ಎಷ್ಟೇ ಮನವಿ ಮಾಡಿದರೂ ಮ್ಯಾನೇಜರ್ ಅವಳ ಬಗ್ಗೆ ಕನಿಕರ ತೋರುತ್ತಿಲ್ಲ.
ಸರಿಯಾಗಿ ಕೆಲಸ ಮಾಡದಿದ್ದಕ್ಕೆ ಸಂಬಳ ಕಟ್ ಮಾಡಿದ್ದೇನೆ ಎಂದು ಮ್ಯಾನೇಜರ್ ಒಂದಿಷ್ಟು ಹಣವನ್ನು ಭಾಗ್ಯಾ ಕೈಗೆ ಇಡುತ್ತಾನೆ. ಭಾಗ್ಯಾ ವಿಧಿ ಇಲ್ಲದೆ ಮನೆಗೆ ಹೊರಡಲು ಮುಂದಾಗುತ್ತಾಳೆ. ಆದರೆ ಅಲ್ಲಿ ತಾಂಡವ್-ಶ್ರೇಷ್ಠಾ ಎದುರಾಗುತ್ತಾರೆ. ಭಾಗ್ಯಾ ಕುಣಿಯುವುದನ್ನು ತೋರಿಸಲು ತಾಂಡವ್, ಶ್ರೇಷ್ಠಾಳನ್ನು ಕರೆತರುತ್ತಾನೆ. ಆದರೆ ಮ್ಯಾನೇಜರ್, ಅವಳನ್ನು ಕೆಲಸದಿಂದ ತೆಗೆದಿದ್ದನ್ನು ನೋಡಿ ಇನ್ನಷ್ಟು ಖುಷಿಯಾಗುತ್ತಾರೆ. ನಮ್ಮ ಪ್ಲ್ಯಾನ್ ಸಕ್ಸಸ್ ಆಗೇ ಆಗುತ್ತೆ ನೋಡು, ಭಾಗ್ಯಾ ಮುಂದಿನ ತಿಂಗಳು ಇಎಂಐ ಕಟ್ಟದೆ ಮನೆ ಕಳೆದುಕೊಳ್ಳುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಜೀವನ ನಡೆಸುವುದು ಎಂದರೆ ಅಡುಗೆ ಮಾಡಿದಂತೆ ಅಲ್ಲ, ಈಗಲೂ ಕಾಲ ಮಿಂಚಿಲ್ಲ, ನೀನು ಬಹಳ ಕಷ್ಟಪಡುತ್ತಿದ್ದೀಯ. ಕೈ ಮುಗಿದು ತಪ್ಪಾಯ್ತು ಎಂದು ಕೇಳು, ನಿನಗೆ ಸಹಾಯ ಮಾಡುತ್ತೇನೆ ಎಂದು ತಾಂಡವ್ ಹೇಳುತ್ತಾನೆ.
ತಾಂಡವ್ ಮೂದಲಿಕೆಯಲ್ಲೂ ಭಾಗ್ಯಾಗೆ ಜೀವನ ನಡೆಸಲು ದಾರಿ ದೊರೆಯುತ್ತದೆ. ನೀವು ಚೆನ್ನಾಗಿ ಜೋಕ್ ಮಾಡುತ್ತೀರಿ, ನಿಮ್ಮ ಬಳಿ ಕ್ಷಮೆ ಕೇಳೋದಾ, ಅದು ಸಾಧ್ಯವಿಲ್ಲ. ನಾನು ಏನು ಮಾಡಬಲ್ಲೆ ಎಂದು ತೋರಿಸುವೆ ಎಂದು ಭಾಗ್ಯಾ ಅಲ್ಲಿಂದ ಮನೆಗೆ ಹೊರಡುತ್ತಾಳೆ. ಭಾಗ್ಯಾ ಇಷ್ಟು ಬೇಗ ಮನೆಗೆ ಬಂದಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇಷ್ಟು ಬೇಗ ಕೆಲಸ ಮುಗೀತಾ ಎಂದು ಕುಸುಮಾ ಕೇಳುತ್ತಾಳೆ. ನಾನು ಇನ್ಮುಂದೆ ಕೆಲಸಕ್ಕೆ ಹೋಗುವುದಿಲ್ಲ ಅತ್ತೆ ಎಂದು ಭಾಗ್ಯಾ ಹೇಳುತ್ತಾಳೆ. ಸೊಸೆಯ ಮಾತಿನಿಂದ ಕುಸುಮಾ ಒಂದು ಕ್ಷಣ ಶಾಕ್ ಆದರೂ ಸರಿ ಮಗಳೇ ನಿನಗೆ ಏನು ಅನ್ನಿಸುತ್ತೋ ಹಾಗೇ ಮಾಡು, ನೀನು ಕೆಲಸಕ್ಕೆ ಹೋಗದಿದ್ದರೆ ಏನೂ ಸಮಸ್ಯೆ ಇಲ್ಲ. ಮನೆಯಲ್ಲಿ ರೆಸ್ಟ್ ಮಾಡು ಎನ್ನುತ್ತಾಳೆ.
ನಾನು ಕೆಲಸ ಬೇಡವೆಂದು ಬಿಟ್ಟಿಲ್ಲ, ಅವರೇ ನನ್ನನ್ನು ಕೆಲಸದಿಂದ ತೆಗೆದದ್ದು ಎಂದು ಭಾಗ್ಯಾ ಹೇಳುತ್ತಾಳೆ. ಒಂದು ಮಾತು ಆಡದೆ ಇದ್ದಕ್ಕಿದ್ದಂತೆ ಕೆಲಸದಿಂದ ಹೇಗೆ ತೆಗೆಯುತ್ತಾರೆ ಎಂದು ಕುಸುಮಾ ಕೋಪಗೊಳ್ಳುತ್ತಾಳೆ. ನಾನು ತುಂಬಾ ದಿನ ಕೆಲಸಕ್ಕೆ ಸರಿಯಾಗಿ ಹೋಗಿಲ್ಲ. ಎಷ್ಟೋ ದಿನ ತಡವಾಗಿ ಹೋಗಿದ್ದೆ, ಬಹಳ ದಿನಗಳು ಅಲ್ಲಿಂದ ಬೇಗ ಮನೆಗೆ ಬಂದಿದ್ದೆ ಆದ್ದರಿಂದ ಹೀಗೆಲ್ಲಾ ಆಯ್ತು, ನನಗೆ ಈ ಕೆಲಸ ಹೊಂದುತ್ತಿಲ್ಲ. ಆದ್ದರಿಂದ ನನಗೆ ಹೊಂದುವ ಕೆಲಸವನ್ನೇ ಮಾಡೋಣ ಎಂದು ನಿರ್ಧರಿಸಿದ್ದೇನೆ ಎನ್ನುತ್ತಾಳೆ. ಕುಸುಮಾಗೆ ಸೊಸೆ ಮಾತು ಅರ್ಥವಾಗುವುದಿಲ್ಲ. ಎಷ್ಟೋ ಜನರು ತಮ್ಮ ಊರಿನಿಂದ ಇಲ್ಲಿಗೆ ಕೆಲಸಕ್ಕೆ, ವಿದ್ಯಾಭ್ಯಾಸಕ್ಕೆ ಬಂದಿರುತ್ತಾರೆ. ಅವರು ಮನೆ ಊಟವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾನು ಮನೆಯಲ್ಲೇ ಅಡುಗೆ ಮಾಡಿ ಕೊಡುತ್ತೇನೆ ಎಂದು ಭಾಗ್ಯಾ ತನ್ನ ಉದ್ದೇಶವನ್ನು ವಿವರಿಸಿ ಹೇಳುತ್ತಾಳೆ.
ಮಗಳ ಮಾತುಗಳನ್ನು ಸುನಂದಾ ಬಾಗಿಲಿನಲ್ಲಿ ಕೇಳಿಸಿಕೊಂಡು ನಿಲ್ಲುತ್ತಾಳೆ. ಸೊಸೆ ನಿರ್ಧಾರಕ್ಕೆ ಕುಸುಮಾ ಒಪ್ಪಿಗೆ ಕೊಟ್ಟರೂ ಸುನಂದಾ ಕೋಪಗೊಳ್ಳುತ್ತಾಳೆ. ನೀನು ಈ ಬಿಸ್ನೆಸ್ ಶುರು ಮಾಡಿ ಏನೋ ದೊಡ್ಡ ಸಾಧನೆ ಮಾಡುತ್ತೇನೆ ಎಂದುಕೊಳ್ಳಬೇಡ, ಎಲ್ಲವೂ ನೀನು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಬಂಡವಾಳ ಹಾಕಬೇಕು, ಲಾಸ್ ಆದರೆ ಕಷ್ಟ ಸುಮ್ಮನೆ ಇದನ್ನೆಲ್ಲಾ ಬಿಟ್ಟುಬಿಡು ಎನ್ನುತ್ತಾಳೆ. ಸುನಂದಾ, ಭಾಗ್ಯಾ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾಳೆ. ನೀವು ಯೋಚನೆ ಮಾಡಬೇಡಿ ಎಂದು ಕುಸುಮಾ ಹಾಗೂ ಧರ್ಮರಾಜ್ ಹೇಳುತ್ತಾರೆ. ನೀವು ಈ ರೀತಿ ಇವಳು ಮಾಡಿದ್ದಕ್ಕೆಲ್ಲಾ ಸಪೋರ್ಟ್ ಮಾಡುತ್ತಾ ಬಂದಿದ್ದಕ್ಕೆ ನನ್ನ ಮಗಳ ಜೀವನ ಈ ರೀತಿ ಆಗಿರುವುದು ಎಂದು ಬೇಸರ ವ್ಯಕ್ತಪಡಿಸುತ್ತಾಳೆ.
ಭಾಗ್ಯಾ, ಅಮ್ಮನನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾಳೆ. ನಾಳೆ ನನ್ನ ಮಗಳು ಭಿಕ್ಷೆ ಎತ್ತಲು ಹೋದರೂ ನೀವು ಸುಮ್ಮನಿರುತ್ತೀರಿ, ಹೋಗು ಭಾಗ್ಯಾ ನಿನ್ನ ಬೆಂಬಲಕ್ಕೆ ನಾವಿದ್ದೇವೆ ಎಂದು ಕಳಿಸುತ್ತೀರಿ ಎಂದು ಸುನಂದಾ ಸಿಟ್ಟಿನಿಂದ ಹೇಳುತ್ತಾಳೆ. ತಾಯಿ ಮಾತು ಕೇಳಿ ಭಾಗ್ಯಾ ಕೋಪಗೊಳ್ಳುತ್ತಾಳೆ. ನಿನಗೆ ಹೇಗೆ ನಾನು ಮಗಳೋ, ಅವರಿಗೆ ಸೊಸೆ, ನಿನಗೆ ನನ್ನ ಮೇಲೆ ಎಷ್ಟು ಪ್ರೀತಿ, ಕಾಳಜಿ ಇದೆಯೋ ಅವರಿಗೂ ಅಷ್ಟೇ ಇದೆ, ಇನ್ನೊಮ್ಮೆ ಹೀಗೆಲ್ಲಾ ಮಾತನಾಡಬೇಡ ಎನ್ನುತ್ತಾಳೆ. ಮಗಳ ಮಾತು ಕೇಳಿ ಸುನಂದಾ ಸುಮ್ಮನಾಗುತ್ತಾಳೆ. ಅಮ್ಮ ನಾನು ಈ ರೀತಿ ಮಾಡತನಾಡಿದ್ದಕ್ಕೆ ಕ್ಷಮಿಸು. ನೀನು ನನ್ನ ಜೊತೆ ಇರು ಸಾಕು ನಾನು ಇದರಲ್ಲಿ ಖಂಡಿತ ಯಶಸ್ಸು ಗಳಿಸುತ್ತೇನೆ ನೋಡುತ್ತಿರು ಎಂದು ಧೈರ್ಯ ಹೇಳುತ್ತಾಳೆ. ಕುಸುಮಾ, ಸೊಸೆ ಬೆಂಬಲಕ್ಕೆ ನಿಲ್ಲುತ್ತಾಳೆ. ಅವಳ ಬೆನ್ನು ತಟ್ಟಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾಳೆ.
ಭಾಗ್ಯಾ ಹೊಸ ಬುಸ್ನೆಸ್ನಲ್ಲಿ ಗೆಲ್ಲುತ್ತಾಳಾ? ಅಥವಾ ಸುನಂದಾ ಹೇಳಿದಂತೆ ಮತ್ತೆ ಸೋಲುತ್ತಾಳಾ? ಮುಂದೆ ತಿಳಿಯಲಿದೆ.



