ಕಿಚ್ಚ ಸುದೀಪ್ ಅವರು ನಟಿಸಿರುವ ಮ್ಯಾಕ್ಸ್ ಸಿನಿಮಾ ಕಳೆದ ಬುಧವಾರ ಕ್ರಿಸ್ಮಸ್ ಹಬ್ಬದ ದಿವಸ ತೆರೆಕಂಡು, ಬ್ಲಾಕ್ ಬಸ್ಟರ್ ರಿವ್ಯೂ ಪಡೆದುಕೊಂಡಿದೆ. ಈ ವರ್ಷ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಮ್ಯಾಕ್ಸ್ ಆಗಿದ್ದು, ಅತಿಹೆಚ್ಚು ಹಣಗಳಿಕೆ ಸಹ ಮಾಡಿದೆ. ಮ್ಯಾಕ್ಸ್ ಸಿನಿಮಾ ನೋಡಿದವರು ಪಕ್ಕಾ ಮಾಸ್ ಕಿಚ್ಚ ಸುದೀಪ್ ಇಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೆಲ್ಲವೂ ಒಂದು ಕಡೆಯಾದರೆ, ಬಿಗ್ ಬಾಸ್ ಮನೆಯೊಳಗೆ ಇರುವ ಉಗ್ರಂ ಮಂಜು ಅವರು ಹೊರಗಡೆ ಬಂದು, ಮ್ಯಾಕ್ಸ್ ಸಿನಿಮಾ ನೋಡಿಕೊಂಡು ಹೋಗಿದ್ದಾರೆ ಎಂದು ಒಂದು ವಿಷಯ ವೈರಲ್ ಆಗಿದೆ.

ಎಕ್ಸ್ ನಲ್ಲಿ ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದು, ಬೆಂಗಳೂರಿನ ಮಾಲ್ ಒಂದರಲ್ಲಿ ಕ್ಯಾಪ್ಚರ್ ಮಾಡಿರುವ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಥಿಯೇಟರ್ ಒಳಗೆ ಇರುವ ಜನರಿಗೆ ಸೆಲ್ಫಿ ಕೊಡುತ್ತಿದ್ದು, ಈ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಮನೆಯೊಳಗೆ ಇರುವ ಉಗ್ರಂ ಮಂಜು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಯ ಒಳಗೆ ಇರುವ ವ್ಯಕ್ತಿ ಹೊರಗಡೆ ಬಂದು ಸಿನಿಮಾ ನೋಡೋಕೆ ಹೇಗೆ ಸಾಧ್ಯ ಎಂದು ಹಲವರು ಪ್ರಶ್ನೆ ಕೇಳಿದ್ದರು..ಇದರ ಬಗ್ಗೆ ಮಾಹಿತಿ ನೋಡುವುದಾದರೆ, ನಿಜಕ್ಕೂ ಉಗ್ರಂ ಮಂಜು ಬಂದಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ..
ನಿಜಕ್ಕೂ ಮಾಹಿತಿಯನ್ನು ಕ್ರಾಸ್ ಚೆಕ್ ಮಾಡಿ ನೋಡುವುದಾದರೆ, ಇದೊಂದು ಸುಳ್ಳು ಸುದ್ದಿ ಆಗಿದ್ದು, ಡಿಸೆಂಬರ್ 29ರಂದು ಉಗ್ರಂ ಮಂಜು ಅವರು ಹೊರಗಡೆ ಬಂದು ಸಿನಿಮಾ ನೋಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಡಿಸೆಂಬರ್ 29ರಂದು ಅಂದರೆ ನಿನ್ನೆ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದರು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದ್ದು, ಈ ರೀತಿಯಾಗಿ ಉಗ್ರಂ ಮಂಜು ಅವರು ಹೊರಗಡೆ ಬಂದಿಲ್ಲ, ಇದೊಂದು ಫೇಕ್ ವ್ಯಕ್ತಿಯ ವಿಡಿಯೋ ಆಗಿದೆ ಎಂದು ತಿಳಿದುಬಂದಿದೆ. ನಿಜಕ್ಕೂ ಮಂಜು ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆಯೇ ಬಂದಿಲ್ಲ. ಬೇರೆ ಯಾರನ್ನೋ ನೋಡಿ ಅದು ಬಿಗ್ ಬಾಸ್ ಮಂಜು ಎಂದು ಅಂದುಕೊಳ್ಳಲಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.
ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ. ಇನ್ನು ವೀಕೆಂಡ್ ಸಂಚಿಕೆಯಲ್ಲಿ ಸಹ ಉಗ್ರಂ ಮಂಜು ಅವರು ಸಹ ಇದ್ದರು. ಸುದೀಪ್ ಅವರು ನ್ಯೂ ಇಯರ್ ವಿಚಾರವಾಗಿ ಮಂಜು ಅವರ ಜೊತೆಗೆ ಬಹಳಷ್ಟು ತಮಾಷೆ ಸಹ ಮಾಡಿದ್ದರು. ಹಾಗಾಗಿ ಮಂಜು ಅವರ ವಿಚಾರದಲ್ಲಿ ವೈರಲ್ ಆಗಿರುವ ಈ ವಿಡಿಯೋ ಫೇಕ್ ಎಂದು ಖಚಿತ ಮಾಹಿತಿ ಸಿಕ್ಕಿದೆ. ಇನ್ನು ಬಿಗ್ ಬಾಸ್ ಮನೆಯ ಒಳಗೆ ಉಗ್ರಂ ಮಂಜು ಅವರು ಸ್ವಲ್ಪ ವೀಕ್ ಆಗಿದ್ದಾರೆ..ಆರಂಭದಲ್ಲಿ ಬಹಳ ಸ್ಟ್ರಾಂಗ್ ಆಗಿದ್ದು, ಎಲ್ಲಾ ಟಾಸ್ಕ್ ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ಕೊಡುತ್ತಿದ್ದರು ಮಂಜು, ಆದರೆ ಈಗ ಮಂಜು ಅವರು ವೀಕ್ ಆಗಿದ್ದಾರೆ..
ಇಂದು ಬೆಳಿಗ್ಗೆ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು #MaxTheMovie ಸಿನಿಮಾ ನೋಡಿ ಮರಳಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ #MaxReview #MaximumMassMax #MAXimumBlockbuster #KicchaSudeep pic.twitter.com/oygV6e9SPQ
— ಬಡವ ರಾಸ್ಕಲ್ ᵐᵃˣ (@shashii_twitz) December 29, 2024ಈ ಬಗ್ಗೆ ಸುದೀಪ್ ಅವರು ಸಹ ಹಲವು ಬಾರಿ ಮಂಜು ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಆಟವನ್ನು ಚೆನ್ನಾಗಿ ಆಡಬೇಕು ಎಂದು ಹೇಳಿದ್ದಾರೆ.. ಆದರೆ ಆ ಮಾತನ್ನು ಮಂಜು ಅವರು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ಶುರುವಿನಲ್ಲಿ ಇದ್ದ ಹಾಗೆ ಮಂಜು ಅವರು ಉತ್ತಮವಾದ ಪ್ರದರ್ಶನ ನೀಡಿದರೆ, ಬಹುಶಃ ಮಂಜು ಅವರು ಫಿನಾಲೆ ತಲುಪಿ ವಿನ್ನರ್ ಸಹ ಆಗಬಹುದು. ಹೊರಗಡೆ ಮಂಜು ಅವರಿಗೆ ಒಳ್ಳೆಯ ಅಭಿಮಾನಿ ಬಳಗ ಸಹ ಇದೆ. ಇನ್ನು ಮ್ಯಾಕ್ಸ್ ಸಿನಿಮಾ ರಿಲೀಸ್ ಆದಮೇಲೆ ಆ ಸಿನಿಮಾದಲ್ಲಿ ಮಂಜು ಅವರ ಅಭಿನಯ ಎಲ್ಲರಿಗು ಇಷ್ಟವಾಗಿದೆ.. ಮುಂದಿನ ದಿನಗಳಲ್ಲಿ ಮಂಜು ಅವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗಬಹುದು ಎನ್ನಲಾಗುತ್ತಿದೆ.



