ಮೂಲತಃ ಕರಾವಳಿಯ ಹುಡುಗಿ, ಬಾಲಿವುಡ್ ಬೆಡಗಿ ನಟಿ ಪೂಜಾ ಹೆಗ್ಡೆ ಅವರು ಸಾಲು ಸಾಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಯಾವೊಂದು ಸಿನಿಮಾವೂ ಕೂಡಾ ನಟಿಗೆ ಹೇಳಿಕೊಳ್ಳುವಂತಹ ಬ್ರೇಕ್ ತಂದು ಕೊಟ್ಟಿಲ್ಲ. ಈ ನಡುವೆ ಪೂಜಾ ಹೆಗ್ಡೆ ಮಾಲ್ಡೀವ್ಸ್ಗೆ ಹಾರಿದ್ದು, ಅಲ್ಲಿನ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸೋನು ಗೌಡ ಬಳಿಕ ಮಾಲ್ಡೀವ್ಸ್ನಲ್ಲಿ ಗುಲ್ಲೆಬ್ಬಿಸಿರವ ನಟಿಯ ಬೋಲ್ಡ್ ಅವತಾರ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.


ತಮ್ಮ 33 ವರ್ಷದ ಬರ್ತ್ಡೆ ಆಚರಣೆಗಾಗಿ ಮಾಲ್ಡೀವ್ಸ್ಗೆ ತೆರಳಿರುವ ಪೂಜಾ ಹೆಗ್ಡೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಾಲ್ಡೀವ್ಸ್ನ ಸಮುದ್ರ ತೀರದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತೆಗೆದ ಬೋಲ್ಡ್ ಫೋಟೋಗಳ ಮೂಲಕ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ. ಸೋನು ಗೌಡ ಬಳಿಕ ಮಾಲ್ಡೀವ್ಸ್ನಲ್ಲಿ ಪೂಜಾ ಹೆಗ್ಡೆ ಹೊಡೆಸಿಕೊಂಡ ಈ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಪೂಜಾ ಹೆಗ್ಡೆ ಹಿಲ್ಟನ್ ಮಾಲ್ಡೀವ್ಸ್ನಲ್ಲಿ ನೀಲಿ ಸಮುದ್ರದಲ್ಲಿ ಬಲೆಯ ಮೇಲೆ ತುಂಡುಡುಗೆ ಧರಿಸಿ ರೊಮ್ಯಾಂಟಿಕ್ ಭಂಗಿಯಲ್ಲಿ ಮಲಗಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ನಾನು ಸದ್ಯಕ್ಕೆ ಲಭ್ಯವಿಲ್ಲ ಎಂಬ ಕ್ಯಾಪ್ಷನ್ ಮೂಲಕ ಶಾರ್ಟ್ ಸ್ಕರ್ಟ್ ಧರಿಸಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ರೊಮ್ಯಾಂಟಿಕ್ ರೂಪದಲ್ಲಿ ನೆಚ್ಚಿನ ನಟಿಯನ್ನು ಕಂಡಿರುವ ಫ್ಯಾನ್ಸ್ ಫುಲ್ ಥ್ರಿಲ್ಲ್ ಆಗಿದ್ದು, ಬಗೆಬಗೆಯ ಕಮೆಂಟ್ ಹಾಕುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿವೆ.



