ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಬಹಳ ಕ್ಯೂಟ್ ಆದ ಜೋಡಿ. ಈ ಜೋಡಿಯನ್ನ ನೋಡಿ ಮೆಚ್ಚಿಕೊಂಡವರು ಬಹಳಷ್ಟು ಜನ. ಇವರಿಬ್ಬರ ರೀಲ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಹೊಸ ಸುದ್ದಿ, ಸಿಹಿ ಸುದ್ದಿ ಕೊಡುತ್ತಾರೆ ಎಂದು ಇವರ ಫ್ಯಾನ್ಸ್ ಅಂದುಕೊಳ್ಳುವಾಗಲೇ, ದಿಢೀರ್ ಎಂದು ವಿಚ್ಛೇದನ ಪಡೆಯುವ ಮೂಲಕ ಶಾಕ್ ನೀಡಿದ್ದರು. ಚೆನ್ನಾಗಿದ್ದ ಇವರ ಸಂಸಾರ ವಿಚ್ಛೇದನದ ಹಾದಿ ಹಿಡಿದಿದ್ದು ಯಾಕೆ ಅನ್ನೋ ಒಂದು ಪ್ರಶ್ನೆ ನೆಟ್ಟಿಗರ ಮನಸ್ಸಲ್ಲಿ ಮೂಡಿದ್ದಂತೂ ಸತ್ಯ. ಆದರೆ ಇದೀಗ ನಿವೇದಿತಾ ಗೌಡ ಶೇರ್ ಮಾಡಿರುವ ಒಂದು ಪೋಸ್ಟ್ ಮತ್ತು ಅದಕ್ಕೆ ಬರೆದಿರುವ ಕ್ಯಾಪ್ಶನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪರೋಕ್ಷವಾಗಿ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣ ಏನು ಎಂದು ತಿಳಿಸಿರುವ ಹಾಗಿದೆ. ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ಇರೋದೇನು? ತಿಳಿಸುತ್ತೇವೆ ನೋಡಿ..
ಚಂದನ್ ಶೆಟ್ಟಿ ಬಹಳ ಕಷ್ಟಪಟ್ಟು ಸ್ಥಾನಮಾನ ಗಳಿಸಿಕೊಂಡು, ಹೆಸರು ಮಾಡಿದ ಪ್ರತಿಭೆ. ಕನ್ನಡದ ರಾಪರ್ ಎಂದೇ ಇವರು ಹೆಸರು ಮಾಡಿದ್ದಾರೆ. ಇವರ ಹಾಡುಗಳನ್ನ ವಿದೇಶಿ ಪಬ್ ಗಳಲ್ಲಿ ಕೂಡ ಪ್ಲೇ ಮಾಡುತ್ತಾ ಇದ್ದದ್ದನ್ನು ಮರೆಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಚಂದನ್ ಶೆಟ್ಟಿ ಹೆಸರು ಕೀರ್ತಿ ಗಳಿಸಿದವರು. ಇನ್ನು ಇವರ ಲೈಫ್ ನ ಪ್ರಮುಖ ಘಟ್ಟ ಬಿಗ್ ಬಾಸ್. ಈ ಶೋ ಇಂದ ಚಂದನ್ ಅವರಿಗೆ ಬಹಳ ಜನಪ್ರಿಯತೆ ಸಿಕ್ಕಿತು, ಅವರ ಟ್ಯಾಲೆಂಟ್ ಬಗ್ಗೆ ಸಾಮಾನ್ಯ ಜನರಿಗೆ ಕೂಡ ಇಷ್ಟವಾಯಿತು. ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಚಂದನ್ ಶೆಟ್ಟಿ ಅವರು ವಿನ್ನರ್ ಆಗಿ ಹೊರ ಹೊಮ್ಮಿದರು. ಇನ್ನು ಬಿಗ್ ಬಾಸ್ ಮನೆಯ ಒಳಗೆ ಇವರಿಗೇ ಪರಿಚಯ ಆಗಿದ್ದು ನಿವೇದಿತಾ ಗೌಡ. ಬಿಗ್ ಮನೆಯ ಒಳಗೆ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು.

ಆದರೆ ಬಿಗ್ ಬಾಸ್ ಮನೆಯ ಒಳಗೆ ಇಬ್ಬರೂ ಅಣ್ಣ ತಂಗಿ ಎಂದು ಹೇಳಿದ್ದು ಕೂಡ ಇದೆ. ಆದರೆ ಬಿಗ್ ಬಾಸ್ ಶೋ ಮುಗಿಸಿ ಹೊರಗಡೆ ಬಂದ ನಂತರ ಆಗಾಗ ಭೇಟಿ ಮಾಡುತ್ತಿದ್ದರು, ಚಂದನ್ ಶೆಟ್ಟಿ ಹಲವು ಬಾರಿ ಮೈಸೂರಿಗೆ ಬಂದು ನಿವೇದಿತಾ ಗೌಡ ಅವರ ಮನೆಗೆ ಭೇಟಿ ನೀಡಿ, ಇಬ್ಬರು ಸಮಯ ಕಳೆಯುತ್ತಿದ್ದರು. ಈ ಸ್ನೇಹವೇ ಇವರಿಬ್ಬರ ನಡುವೆ ಪ್ರೀತಿ ಚಿಗುರುವ ಹಾಗೆ ಮಾಡಿತು. ಯುವದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿದ್ದರು. ಅಲ್ಲಿಂದ ಇವರ ಪ್ರೀತಿ ಬಹಿರಂಗವಾಗಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುವುದಕ್ಕೆ ಶುರು ಮಾಡಿದರು. 2020ರಲ್ಲಿ ಅದ್ಧೂರಿಯಾಗಿ ಮೈಸೂರಿನಲ್ಲಿ ಮದುವೆ ಕೂಡ ಆದರು. ಇವರಿಬ್ಬರ ಮದುವೆ ಮಾದರಿಯಾಗಿತ್ತು ಎಂದು ಹೇಳಿದರು ಕೂಡ ತಪ್ಪಲ್ಲ.
ಚಂದನ್ ಹಾಗೂ ನಿವೇದಿತಾ ದಾಂಪತ್ಯ ಜೀವನ ಬಹಳ ಚೆನ್ನಾಗಿಯೇ ಇತ್ತು, ಇಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕಾರ್ಯಕ್ರಮಗಳಲ್ಲಿ ಕೈ ಕೈ ಹಿಡಿದು ಬರುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು, ಅಷ್ಟೇ ಅಲ್ಲದೇ ಇಬ್ಬರೂ ಕೂಡ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಶೋನಲ್ಲಿ ಸಹ ಇವರಿಬ್ಬರ ಜನಪ್ರಿಯತೆ ಜಾಸ್ತಿಯಾಗಿತ್ತು. ಇವರಿಬ್ಬರ ನಡುವೆ ಇರುವ ಹೊಂದಾಣಿಕೆ, ಪ್ರೀತಿ ಇದೆಲ್ಲವೂ ಕೂಡ ಜನರಿಗು ಇಷ್ಟವಾಗಿತ್ತು. ಚಂದನ್ ನಿವೇದಿತಾ ಇಬ್ಬರೂ ಚೆನ್ನಾಗಿರುತ್ತಾರೆ, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರೆ ಎಂದುಕೊಂಡವರಿಗೆ ಸಿಕ್ಕಿದ್ದು, ಇಬ್ಬರ ವಿಚ್ಛೇದನದ ಸುದ್ದಿ.. ಈ ಜೋಡಿ ವಿಚ್ಛೇದನ ಪಡೆಯಬಹುದು ಎಂದು ಯಾರು ಸಹ ನಿರೀಕ್ಷೆ ಮಾಡಿರಲಿಲ್ಲ..

ಅಷ್ಟು ಚೆನ್ನಾಗಿ ತಮಾಷೆ ಮಾಡಿಕೊಂಡು ಇರುತ್ತಿದ್ದ ಜೋಡಿ, ಕೋರ್ಟ್ ಗು ಕೈ ಕೈ ಹಿಡಿದುಕೊಂಡು ಬಂದು, ವಿಚ್ಛೇದನ ಪಡೆದಿದ್ದು ನೋಡುಗರೆಲ್ಲರಿಗೂ ಶಾಕ್ ನೀಡಿತ್ತು. ಇವರಿಬ್ಬರು ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಈ ನಿರ್ಧಾರಕ್ಕೆ ಯಾಕೆ ಬಂದರು, ಇವರ ರಿಲೇಶನ್ಷಿಪ್ ಹಾಳಾಗಿದ್ದು ಯಾಕೆ? ಹೀಗೆ ನೆಟ್ಟಿಗರಲ್ಲಿ ಮತ್ತು ಇವರ ಅಭಿಮಾನಿಗಳಲ್ಲಿ ಪ್ರಶ್ನೆ ಕೇಳಿಬಂದಿತ್ತು. ಕೆಲವು ದಿನಗಳ ಕಾಲ ಸುಮ್ಮನಿದ್ದರು, ಆದರೆ ನಿವೇದಿತಾ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಕೇಳಿಬರುವುದಕ್ಕೇ ಶುರುವಾದ ನಂತರ ಇಬ್ಬರು ಜೊತೆಯಾಗಿ ಪ್ರೆಸ್ ಮೀಟ್ ಮಾಡಿ, ತಾವು ಈ ನಿರ್ಧಾರಕ್ಕೆ ಬರುವುದಕ್ಕೆ ಕಾರಣ ಏನು ಎಂದು ತಿಳಿಸಿದರು. ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಇರುವುದೇ ವಿಚ್ಛೇದನ ಪಡೆಯೋಕೆ ಕಾರಣ, ಅದನ್ನು ಹೊರತುಪಡಿಸಿ ಇನ್ನೇನು ಇಲ್ಲ ಎಂದರು ಈ ಜೋಡಿ..
ಇನ್ನು ವಿಚ್ಛೇದನ ಪಡೆದ ಬಳಿಕ, ಇಬ್ಬರೂ ತಮ್ಮ ಲೈಫ್ ನಲ್ಲಿ ತಾವು ಬ್ಯುಸಿ ಆಗಿದ್ದಾರೆ. ನಿವೇದಿತಾ ಗೌಡ ಟ್ರಿಪ್, ಫ್ರೆಂಡ್ಸ್ ಎಂದು ಸಿಕ್ಕಾಪಟ್ಟೆ ಬ್ಯುಸಿ. ಒಂದು ಆಲ್ಬಮ್ ಸಾಂಗ್ ನಲ್ಲಿ ಕೂಡ ಕಾಣಿಸಿಕೊಂಡರು. ಆದರೆ ಇತ್ತೀಚೆಗೆ ನಿವೇದಿತಾ ಗೌಡ ಶೇರ್ ಮಾಡಿರುವ ಒಂದು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರು ವಿಚ್ಛೇದನ ಪಡೆಯೋದಕ್ಕೆ ಇದೇ ಕಾರಣ ಇರಬಹುದು ಎನ್ನಲಾಗುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ ಏನು ಎಂದರೆ, ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ, “ನನ್ನ ಬೆಸ್ಟ್ ಫ್ರೆಂಡ್ ಯಾವ ರೀತಿ ಲಿಮಿಟ್ ಸೆಟ್ ಮಾಡಿದ್ದಾಳೆ ಅಂದ್ರೆ.. ಈಗ ನನಗಾಗಿ ಬರೋ ಹುಡುಗ ಸಿಂಹಾಸನ, ಕಿರೀಟ ಮತ್ತು ರಾಜ್ಯವನ್ನ ತರಬೇಕು..” ಎಂದು ಬರೆದುಕೊಂಡಿದ್ದಾರೆ. ಹುಡುಗರ ಬಗ್ಗೆ ತಮ್ಮ ನಿರೀಕ್ಷೆ ಇಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ ನಿವೇದಿತಾ..

ಈ ಪೋಸ್ಟ್ ನೋಡಿದವರು ಬಹುಶಃ ಚಂದನ್ ಶೆಟ್ಟಿ ಜೊತೆ ಡೈವೋರ್ಸ್ ಪಡೆಯೋಕೆ ಇದೇ ಕಾರಣ ಇರಬಹುದು ಎನ್ನುತ್ತಿದ್ದಾರೆ. ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ ಎಂದು ಬರೆದಿದ್ದಾರೆ ಹೊರತು, ಆ ಬೆಸ್ಟ್ ಫ್ರೆಂಡ್ ಹುಡುಗನ ಅಥವಾ ಹುಡುಗಿನ ಎಂದು ಕೂಡ ಬರೆದಿಲ್ಲ. ಹಾಗಾಗಿ ಚಂದನ್ ನಿವೇದಿತಾ ದಾಂಪತ್ಯ ಜೀವನದಲ್ಲಿ ತಂದಿಟ್ಟಿದ್ದು ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ ಇರಬಹುದಾ ಎನ್ನುವ ಅನುಮಾನ ಶುರುವಾಗಿದೆ. ಚಂದನ್ ಶೆಟ್ಟಿ ಸಿಂಪಲ್ ಹುಡುಗ, ಇದ್ಯಾವುದನ್ನು ಮಾಡಲಿಲ್ಲ ಅನ್ನೋ ಕಾರಣಕ್ಕೆ ವಿಚ್ಛೇದನ ಕೊಟ್ಟಿದ್ದಾ ಅನ್ನೋ ಅನುಮಾನ ಈಗ ಶುರುವಾಗಿದೆ. ಒಟ್ಟಿನಲ್ಲಿ ನಿವೇದಿತಾ ಗೌಡ ಹೊಸ ಪೋಸ್ಟ್ ಸಿಕ್ಕಾಪಟ್ಟೆ ಕುತೂಹಲ ಮತ್ತು ಅನುಮಾನಗಳನ್ನ ಹುಟ್ಟು ಹಾಕಿರುವುದಂತೂ ಖಂಡಿತ.