ರಿಯಲ್ ಸ್ಟಾರ್ ಉಪೇಂದ್ರ ‘ಈ ಪ್ರೀತಿ, ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ’ ಅಂದಾಗ ಎಲ್ಲರಿಗೂ ನಗು ಬಂದಿತ್ತು. ಆದರೆ ಇತ್ತೀಚೆಗೆ ಪ್ರೀತಿ ಎಂಬುದು ಬದನೆಕಾಯಿಗಿಂತ ಕಡೆಯಾಗಿದೆ. ಇಂದಿನ ಪ್ರೀತಿಯಲ್ಲ ಬಹುತೇಕ ಬ್ರೇಕಪ್ ಗಳು ಗಲಾಟೆ, ಸೇಡಿನ ಮೂಲಕವೇ ಕೊನೆಗೊಳ್ಳುತ್ತವೆ.ಇದೀಗ ಅಂತದ್ದೊಂದು ಸೇಡಿನ ಬ್ರೇಕಪ್ ಕತೆ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನಿಗೆ ವಿಚಿತ್ರವಾದ ಗಿಫ್ಟ್ ಒಂದನ್ನು ಕೊಡುವ ಮೂಲಕ ಸೇಡು ತೀರಿಸಿಕೊಂಡಿದ್ದಾಳೆ.

ಕೇಳಲು ತುಸು ಅತಿರೇಕ ಅನಿಸಿದರೂ ಕೂಡ ಈ ಘಟನೆ ನಡೆದಿರುವುದು ನಿಜ. ಇಬ್ಬರು ಹುಡುಗ-ಹುಡುಗಿ ತುಂಬಾ ಪ್ರೀತಿಸುತ್ತಿದ್ದರು. ಆದರೆ ಯುವಕ ಯಾವುದೋ ಕಾರಣಕ್ಕೆ ಯುವತಿಯೊಂದಿಗೆ ಗಲಾಟೆ ಮಾಡಿ ಬ್ರೇಕಪ್ ಮಾಡಿಕೊಂಡಿದ್ದಾನೆ. ಇದೇ ಕೋಪಕ್ಕೆ ಯುವತಿಯು ಇತ್ತೀಚೆಗೆ ತನ್ನ ಮಾಜಿ ಪ್ರಿಯಕರನಿಗೆ ಕಸ ತುಂಬುವ ಪ್ಲಾಸ್ಟಿಕ್ ಚೀಲವನ್ನು ಪಾರ್ಸೆಲ್ ಮೂಲಕ ಗಿಫ್ಟ್ ನೀಡಿದ್ದಾಳೆ.
ಈ ಸೇಡಿನ ಪ್ರೇಮಕತೆಯನ್ನು ಮಾಜಿ ಪ್ರಿಯಕರನ ಗೆಳೆಯ ನಮನ್ ಎನ್ನುವ ಟ್ವಿಟ್ಟರ್ ಬಳೆಕೆದಾರನೊಬ್ಬ ಫೋಟೋ ಸಮೇತ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾನೆ. ಜೊತೆಗೆ ‘ಈ ವಿಚಿತ್ರ ಉಡುಗೊರೆಯನ್ನು ನನ್ನ ಗೆಳೆಯನ ಮಾಜಿ ಪ್ರೇಯಸಿ ಕಳುಹಿಸಿದ್ದಾಳೆ. ಇದನ್ನು ಕಂಡು ನನಗೆ ನಗು ತಡೆಯಲಾಗಲಿಲ್ಲ’ ಎಂದು ಬರೆದುಕೊಂಡಿದ್ದು, ಈ ಪೋಸ್ಟ್ ಸಕ್ಕತ್ ವೈರಲ್ ಆಗುತ್ತಿದೆ.



