ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ತಾವು ಬಹಳ ವರ್ಷಗಳ ಕಾಲ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 3 ದಿನಗಳ ಹಿಂದೆ ಮೆಹೆಂದಿ ಶಾಸ್ತ್ರದ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗಿದ್ದವು, ಮೊನ್ನೆ ಇವರಿಬ್ಬರ ಮದುವೆ ನಡೆದಿದ್ದು, ಮದುವೆಯ ವಿಡಿಯೋ ಸಹ ವೈರಲ್ ಆಗಿದೆ. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂದ್ರೆ ನಂಬೋದಕ್ಕೆ ಕಷ್ಟ. ಚೈತ್ರಾ ಅವರೇ ಹೇಳಿರುವ ಹಾಗೆ, 12 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇವರಿಬ್ಬರ ಪ್ರೀತಿ ಶುರುವಾಗಿತ್ತು. ಚೈತ್ರಾ ಅವರನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದ ಇರಿಟೇಟ್ ಆಗುತ್ತಿದ್ದ ಹುಡುಗನಿಗೆ ಕೊನೆಗೆ ಆಕೆಯ ಮೇಲೆಯೇ ಪ್ರೀತಿ ಶುರುವಾಯಿತು. ಕಾಲೇಜ್ ಕ್ಯಾಂಟೀನ್ ನಲ್ಲಿ ಚೈತ್ರಾ ಅವರನ್ನು ಬೈಕೊಂಡು ಓಡಾಡುತ್ತಿದ್ದರಂತೆ, ಅವರನ್ನು ಕಂಡರೆ ನನಗೆ ಆಗೋದಿಲ್ಲ ಎಂದು ಹೇಳುತ್ತಿದ್ದರಂತೆ ಆ ಹುಡುಗ..
ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಇಷ್ಟು ವರ್ಷಗಳ ಕಾಲ ಈ ಜೋಡಿ ಪ್ರೀತಿಸಿದ್ದು, ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡಿದ್ದು, ಮದುವೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರಿಬ್ಬರ ಮದುವೆ ಇಂದು ನಡೆದಿದ್ದು, ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚೈತ್ರಾ ಅವರ ಮದುವೆ ನಡೆದಿದೆ. ಇನ್ನು ಚೈತ್ರಾ ಅವರು ಮದುವೆ ಆಗಿರುವ ಹುಡುಗನ ಬಗ್ಗೆ ಹೆಚ್ಚು ಡೀಟೇಲ್ಸ್ ಇದುವರೆಗೂ ಸಿಕ್ಕಿರಲಿಲ್ಲ, ಇದೀಗ ಇವರು ಪತಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಇವರ ಹೆಸರು ಶ್ರೀಕಾಂತ್ ಕಶ್ಯಪ್. ಇವರು ಉಡುಪಿ ಜಿಲ್ಲೆಯ ಹಿರಿಯಡ್ಕ ಎನ್ನುವ ಊರಿನವರು. ಶ್ರೀಕಾಂತ್ ಅವರು ಅನಿಮೇಷನ್ ಓದಿದ್ದಾರೆ. ಆದರೆ ಇವರಿಗೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದು, ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ..
12 ವರ್ಷಗಳ ಕಾಲ ಚೈತ್ರಾ ಅವರನ್ನು ಲವ್ ಮಾಡಿ ಈಗ ಮದುವೆಯಾಗಿದ್ದಾರೆ. ಕೊನೆಗೂ ಚೈತ್ರಾ ಅವರು ಜೀವನದಲ್ಲಿ ದೊಡ್ಡ ಹಂತವನ್ನು ತಲುಪಿದ್ದು, ಮುಂದಿನ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮದುವೆಗಿಂತ ಮೊದಲೇ ಶ್ರೀಕಾಂತ್ ಕಶ್ಯಪ್ ಅವರನ್ನು ಭೇಟಿಯಾಗಿದ್ದರು, ಹುಡುಗ ತುಂಬಾ ಸಾಫ್ಟ್ ಚೈತ್ರಾ ಅವರ ಹಾಗೆ ಮಾತನಾಡೋದಿಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ತಿಳಿಸಿದ್ದರು. ಚೈತ್ರಾ ಅವರು ಲವ್ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನುವುದು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯ ಆಗದ ವಿಷಯ ಆಗಿದ್ದು, ಕೊನೆಗು ಇವರ ಮದುವೆ ನಡೆದಿದೆ. ಚೈತ್ರಾ ಅವರು ಬಹಳ ಸಂತೋಷದಿಂದ ಇದ್ದಾರೆ..
ಇನ್ನು ಚೈತ್ರಾ ಕುಂದಾಪುರ ಅವರ ಮದುವೆ ನಡೆದಿದ್ದು ಉಡುಪಿಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ. ಇವರ ಮದುವೆಗೆ ಬಿಗ್ ಬಾಸ್ ಶೋನ ಸಾಕಷ್ಟು ಸ್ಪರ್ಧಿಗಳು ಬಂದು ಶುಭ ಕೋರಿದರು. ಇನ್ನು ಚೈತ್ರಾ ಅವರ ಮದುವೆಯ ದಿವಸ ಉಗ್ರಂ ಮಂಜು ಅವರಿಗೆ ಮದುವೆಗೆ ಹೋಗಲು ಸಾಧ್ಯ ಆಗಿರಲಿಲ್ಲ. ಮರುದಿನ ಚೈತ್ರಾ ಅವರ ಮನೆಗೆ ಹೋಗಿ ಹೊಸ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಒಂದು ಸುಂದರವಾದ ಗಿಫ್ಟ್ ಅನ್ನು ಸಹ ನೀಡಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ, ಎಲ್ಲರೂ ಉಗ್ರಂ ಮಂಜು ಅವರನ್ನು ಅನ್ನ5 ಎಂದೇ ಕರೆಯುತ್ತಿದ್ದರು. ಎಲ್ಲರೂ ಅವರಿಗೆ ಅಣ್ಣನ ಸ್ಥಾನ ಕೊಟ್ಟಿದ್ದರು. ಅದೇ ಸ್ಥಾನದಲ್ಲಿ ಮಂಜು ಅವರು ಚೈತ್ರಾ ಕುಂದಾಪುರ ಅವರ ಮನೆಗೆ ಹೋಗಿ, ಹೊಸ ಜೋಡಿಗೆ ಅಣ್ಣನ ಸ್ಥಾನದಲ್ಲಿ ನಿಂತು ವಿಶ್ ಮಾಡಿದ್ದಾರೆ.



