ಚಿತ್ರರಂಗದಲ್ಲಿ ನಟ ನಟಿಯರು ಹೆಚ್ಚು ಕಾಲ ಉಳಿದುಕೊಳ್ಳಬೇಕು ಎಂದರೆ, ಯಶಸ್ವಿ ಆಗಿರಬೇಕು ಎಂದರೆ ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳು ತುಂಬಾ ಮುಖ್ಯ. ಒಳ್ಳೇ ಕಥೆ ಆಯ್ಕೆ ಮಾಡಿಕೊಂಡು ಮನ ಮುಟ್ಟುವಂಥ ಸಿನಿಮಾ ಮಾಡಿದರೆ ಮಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಸಾಧ್ಯ. ಇಲ್ಲದೇ ಹೋದರೆ ನಮ್ಮ ಜನರು ಬಹಳ ಬೇಗ ಕಲಾವಿದರನ್ನ ಮರೆತು ಬಿಡುತ್ತಾರೆ. ಅದರಲ್ಲೂ ಈ ಹೊಸ ಕಾಲದಲ್ಲಿ, ಡಿಜಿಟಲ್ ಯುಗದಲ್ಲಿ ಮೊದಲಿನ ಹಾಗೆ ಹೆಚ್ಚು ಸಿನಿಮಾ ಬರುತ್ತಾ ಇಲ್ಲ, 10 ಸಿನಿಮಾ ಬಿಡುಗಡೆ ಆದರೆ ಜನರಿಗೆ ಇಷ್ಟ ಆಗೋದು ಒಂದು ಅಥವಾ ಎರಡು ಸಿನಿಮಾಗಳು ಮಾತ್ರ. ಸಿನಿಮಾಗಳಲ್ಲಿ ಕಾಂಟೆಂಟ್ ಇರುವುದು ಕೂಡ ಕಡಿಮೆ. ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳು ಬರುವುದು ಬಹಳ ಕಡಿಮೆ. ಅಂಥಾ ಸಿನಿಮಾಗಳು ಜನರನ್ನು ತಲುಪುವುದು ಕೂಡ ಕಡಿಮೆ. ಇನ್ನು ಸ್ಟಾರ್ ಹೀರೋಗಳ ಸಿನಿಮಾ ಅಂದ್ರೆ ಕೇಳೋದೇ ಬೇಡ..

ಸಿನಿಮಾ ನೋಡೋಕೆ ಜನ ಏನೋ ಬರುತ್ತಾರೆ, ಆದರೆ ಸಿನಿಮಾ ಚೆನ್ನಾಗಿರಬೇಕಲ್ಲ. ಸಿನಿಮಾ ಚೆನ್ನಾಗಿಲ್ಲ ಎಂದರೆ ಎರಡು ದಿವಸ ಅಥವಾ ಒಂದು ವಾರ ಮಾತ್ರ ಜನರು ಥಿಯೇಟರ್ ಗೆ ಬರಬಹುದು. ಅದಕ್ಕಿಂತ ಹೆಚ್ಚು ಸಮಯ ಬರೋದಿಲ್ಲ. ಹೀಗಿದ್ದಾಗ ಸಿನಿಮಾ ಗೆಲ್ಲೋದು ಎಲ್ಲಿಂದ ಆಗಬೇಕು? ಜೊತೆಗೆ ಈಗಿನ ಸಿನಿಮಾಗಳಲ್ಲಿ ಒಳ್ಳೆಯ ಕಥೆ ಇರೋದು ಕೂಡ ಕಡಿಮೆ. ಒಳ್ಳೆಯ ಕತೆಗಳನ್ನು ಕಥಾಪಾತ್ರಗಳನ್ನು ಹೆಣೆಯುವ ನಿರ್ದೇಶಕರು ಸಿಗೋದು ಕೂಡ ಕಡಿಮೆಯೇ. ಇನ್ನು ಸ್ಟಾರ್ ಹೀರೋಗಳು ಈಗ ಒಳ್ಳೆಯ ಕಥೆಗಿಂತ ನೇಮ್ ಫೇಮ್, ಪ್ಯಾನ್ ಇಂಡಿಯಾ ಎಂದು ತಲೆ ಕೆಡಿಸಿಕೊಂಡಿದ್ದಾರೆ. ವರ್ಷಕ್ಕೆ ಒಂದು ಸಿನಿಮಾ ಕೂಡ ಬರೋದಿಲ್ಲ. ಆಗೊಮ್ಮೆ ಈಗೊಮ್ಮೆ ಸ್ಟಾರ್ ಹೀರೋಗಳ ಸಿನಿಮಾಗಳು ತೆರೆ ಕಾಣುತ್ತದೆ. ದಕ್ಷಿಣ ಭಾರತದ ಅತ್ಯುತ್ತಮ ಸ್ಟಾರ್ ಹೀರೋಗಳ ಪೈಕಿ ದುಲ್ಕರ್ ಸಲ್ಮಾನ್ ಸಹ ಒಬ್ಬರು.
ಇವರು ಮಲಯಾಳಂ ಚಿತ್ರರಂಗದ ನಟ ಆಗಿದ್ದರೂ ಸಹ ಇವರಿಗೆ ಭಾರತದ ಎಲ್ಲೆಡೆ ಅಭಿಮಾನಿ ಬಳಗ ಇದೆ. ಕರ್ನಾಟಕದಲ್ಲಿ ಕೂಡ ದುಲ್ಕರ್ ಸಲ್ಮಾನ್ ಅವರನ್ನು ಇಷ್ಟಪಡುವ ಸಾಕಷ್ಟು ಜನ ಇದ್ದಾರೆ. ಇದಕ್ಕೆ ಕಾರಣ ಈ ವ್ಯಕ್ತಿ ಆಯ್ಕೆ ಮಾಡಿಕೊಳ್ಳುವ ಕಥೆಗಳು. ದುಲ್ಕರ್ ಸಲ್ಮಾನ್ ಅವರು ಮಲಯಾಳಂ ನ ಖ್ಯಾತ ನಟ ಮಮ್ಮುಟಿ ಅವರ ಮಗ, ತಂದೆ ದೊಡ್ಡ ಹೀರೋ ಆಗಿದ್ದರೂ ಸಹ ಅವರ ನೆರಳಿನಲ್ಲಿ ಇರದೇ, ತಮ್ಮ ಗುರುತನ್ನು ಸೃಷ್ಟಿಸಿಕೊಂಡಿರುವ ಕಲಾವಿದ ದುಲ್ಕರ್ ಸಲ್ಮಾನ್. ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾ ಕಥೆಗಳು ಸಾಮಾನ್ಯ ಜನರ ಜೀವನಕ್ಕೆ ಬಹಳ ಹತ್ತಿರ ಇರುತ್ತದೆ. ಈ ಕಾರಣಕ್ಕೆ ಎಲ್ಲರಿಗೂ ದುಲ್ಕರ್ ಸಲ್ಮಾನ್ ಮತ್ತು ಅವರ ಸಿನಿಮಾಗಳು ಬಹಳ ಇಷ್ಟ ಆಗೋದು. ಮಲಯಾಳಂ ನವರೇ ಆಗಿದ್ದರು ತಮಿಳು ಮತ್ತು ತೆಲುಗಿನಲ್ಲಿ ಸಹ ಸಿನಿಮಾ ಮಾಡಿದ್ದಾರೆ. ಹಿಂದಿಯಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಿ, ಹಿಟ್ ಗಳನ್ನು ಕೊಟ್ಟಿರುವ ನಟ ದುಲ್ಕರ್ ಸಲ್ಮಾನ್ ಅವರು. ಕಳೆದ ವರ್ಷ ಇವರು ತೆಲುಗಿನಲ್ಲಿ ನಟಿಸಿದ ಲಕ್ಕಿ ಭಾಸ್ಕರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇವರು ಅಭಿನಯಿಸುವ ಪ್ರತಿ ಸಿನಿಮಾ ಕೂಡ ಹಿಟ್ ಆಗುತ್ತದೆ. ಜನರಿಗೆ ಕನೆಕ್ಟ್ ಆಗುವಂಥ ಸಿನಿಮಾ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ದುಲ್ಕರ್. ಇವರು ಇತ್ತೀಚೆಗೆ ಒಂದು ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳದೇ ಬಿಟ್ಟರು.ಅದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಥೆಗಳನ್ನ ಆಯ್ಕೆ ಮಾಡಿಕೊಳ್ಳೋದು ಹೇಗೆ ಅಂತ ದುಲ್ಕರ್ ಸಲ್ಮಾನ್ ಅವರಿಂದ ಕಲಿಯಬೇಕು. ಆ ಸಿನಿಮಾವನ್ನ ಬಿಟ್ಟು ಒಳ್ಳೇ ಕೆಲಸವನ್ನೇ ಮಾಡಿದರು ಎಂದು ಅಭಿಮಾನಿಗಳು ದುಲ್ಕರ್ ಸಲ್ಮಾನ್ ಅವರಿಗೆ ಮೆಚ್ಚುಗೆ ಕೊಡುತ್ತಿದ್ದಾರೆ. ಅದು ಯಾವ ಸಿನಿಮಾ ವಿಷಯಕ್ಕೆ ಗೊತ್ತಾ? ಇತ್ತೀಚೆಗೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿದ ಸಿನಿಮಾ ಕಣ್ರೀ.. ಈಗಾಗಲೇ ನಿಮಗೆ ಗೊತ್ತಾಗೋರಬೇಕು.. ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ.
ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಂದೇ ಹೆಸರು ಮಾಡಿರುವ ಮಣಿರತ್ನಂ ಅವರು ನಿರ್ದೇಶನ ಮಾಡಿರುವ ಸಿನಿಮಾ ಥಗ್ ಲೈಫ್. ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ ಇವರೆಲ್ಲರೂ ಅಭಿನಯಿಸಿರುವ ಸಿನಿಮಾ. ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇತ್ತು, ಮಣಿರತ್ನಂ ಅವರ ಸಿನಿಮಾ ಎಂದರೆ ನಿರೀಕ್ಷೆ ಹೆಚ್ಚಾಗಿಯೇ ಇರುತ್ತದೆ, ಅದಕ್ಕೆ ಕಾರಣ ಅವರು ಅಂಥ ಕಥೆಗೆಳನ್ನು ಆಯ್ಕೆ ಮಾಡಿ ಸಿನಿಮಾ ಮಾಡುತ್ತಾರೆ ಅನ್ನೋದು. 80ರ ದಶಕದಲ್ಲಿ ಮತ್ತು 90ರ ದಶಕದಲ್ಲಿ, 2000ಇಸವಿಯ ಶುರುವಿನ ವೇಳೆ ಇವರ ಸಿನಿಮಾಗಳಿಗೆ ಸರಿಸಾಟಿ ಇನ್ಯಾವುದು ಇಲ್ಲ ಎಂದು ಹೇಳಿದರೆ ತಪ್ಪಲ್ಲ. ಮಣಿರತ್ನಂ ಅವರ ಸಿನಿಮಾ ಎಂದರೆ ಅದೊಂದು ಬ್ರ್ಯಾಂಡ್ ಎಂದು ಹೇಳಬಹುದು. ಆ ರೀತಿ ಕ್ರೇಜ್ ಇರುವ ಇವರ ಸಿನಿಮಾ ಥಗ್ ಲೈಫ್.
ಆದರೆ ಥಗ್ ಲೈಫ್ ಸಿನಿಮಾ ಮಕಾಡೆ ಮಲಗಿದೆ.

ಸಿನಿಮಾ ನೋಡಿದ ವೀಕ್ಷಕರು ಒಂದು ಚೂರು ಚೆನ್ನಾಗಿಲ್ಲ, ಎಲ್ಲರ ಅಭಿನಯ ಚೆನ್ನಾಗಿದೆ ಆದರೆ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ಜನ ತಪ್ಪಿಸಿಕೊಂಡು ಬಿಟ್ರು, ನಾವೆಲ್ಲಾ ಸಿಕ್ಕಿ ಹಾಕಿಕೊಂಡ್ವಿ ಅಂತಿದ್ದಾರೆ ತಮಿಳುನಾಡಿನ ಜನ . ಸಿನಿಮಾ ಲೆಂತ್ ಜಾಸ್ತಿ ಇದೆ, ಎಷ್ಟೋ ಜನ ಅರ್ಧಕ್ಕೆ ಎದ್ದು ಹೊರಟು ಹೋದ್ರು ಅಷ್ಟು ಬೋರ್ ಹೊಡೆಯುವಂಥ ಸಿನಿಮಾ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿ ರಿವ್ಯೂ ಬಂದ ನಂತರ ದುಲ್ಕರ್ ಸಲ್ಮಾನ್ ಅವರ ಫ್ಯಾನ್ಸ್ ಗೆ ಬಹಳ ಸಂತೋಷ ಆಗಿದೆ. ಅರೆ, ಥಗ್ ಲೈಫ್ ಸಿನಿಮಾ ಸೋಲಿಗೂ ದುಲ್ಕರ್ ಸಲ್ಮಾನ್ ಫ್ಯಾನ್ಸ್ ಖುಷಿಯಾಗೋದಕ್ಕೂ ಸಂಬಂಧ ಏನು ಎಂದು ನಿಮಗೆ ಪ್ರಶ್ನೆ ಮೂಡಿರಬಹುದು. ಅದಕ್ಕೊಂದು ಪ್ರಮುಖ ಕಾರಣ ಇದೆ. ಈ ಸಿನಿಮಾ ಆಫರ್ ದುಲ್ಕರ್ ಅವರಿಗೆ ಬಂದಿತ್ತು.
ಹೌದು, ಥಗ್ ಲೈಫ್ ಸಿನಿಮಾದ ಪ್ರಮುಖ ಪಾತ್ರ ಒಂದಲ್ಲಿ ನಟಿಸುವುದಕ್ಕೆ ದುಲ್ಕರ್ ಸಲ್ಮಾನ್ ಅವರಿಗೆ ಆಫರ್ ಹೋಗಿತ್ತು, ಆದರೆ ದುಲ್ಕರ್ ಅವರು ನಟಿಸುವುದಕ್ಕೆ ಒಪ್ಪಲಿಲ್ಲ. ಇಂಥ ಕಥೆಯನ್ನ ದುಲ್ಕರ್ ಒಪ್ಪಿದ್ರೆ, ಅವರ ಕೆರಿಯರ್ ಹಾಳಾಗುತ್ತಿತ್ತು, ಅವರು ಒಪ್ಪದೆಯೇ ಇದ್ದಿದ್ದೇ ಒಳ್ಳೆಯದಾಯ್ತು. ಒಳ್ಳೇ ಕಥೆಯನ್ನ ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದನ್ನ ದುಲ್ಕರ್ ಅವರಿಂದ ಕಲಿಯಬೇಕು ಅಂತಿದ್ದಾರೆ ಫ್ಯಾನ್ಸ್. ದುಲ್ಕರ್ ಅವರು ಈಗಾಗಲೇ ಮಣಿರತ್ನಂ ಅವರು ನಿರ್ದೇಶನ ಮಾಡಿರುವ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದು 2015ರಲ್ಲಿ ತೆರೆಕಂಡ ಓಕೆ ಕಣ್ಮಣಿ, ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಥಗ್ ಲೈಫ್ ಸಿನಿಮಾದಲ್ಲಿ ಇವರು ನಟಿಸಲಿಲ್ಲ.



