ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳ ಪೈಕಿ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಪ್ರಮುಖ ಸ್ಥಾನದಲ್ಲಿದೆ. ಇದು ಭಾಗ್ಯಳ ಕಥೆ, ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಖ್ಯಾತ ಕಿರುತೆರೆ ನಟಿ ಮತ್ತು ನೃತ್ಯಗಾರ್ತಿ ಸುಶ್ಮಾ ರಾವ್ ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಜನರು ತುಂಬಾ ಇಷ್ಟಪಡುತ್ತಿರುವ ಧಾರಾವಾಹಿಗಳ ಪೈಕಿ ಭಾಗ್ಯಲಕ್ಷ್ಮಿ ಕೂಡ ಒಂದು. ಈ ಧಾರಾವಾಹಿಯ ದಿಕ್ಕು ಈಗ ಬದಲಾಗಿದೆ, ಭಾಗ್ಯ ತನ್ನ ಜೀವನವನ್ನು ತಾನು ರೂಪಿಸಿಕೊಳ್ಳುವ ಹಾದಿಯಲ್ಲಿದ್ದಾಳೆ. ಈ ನಡುವೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮೊದಲು ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಿದ್ದ ಗೌತಮಿ ಅವರು ಮಗಳ ಹುಟ್ಟುಹಬ್ಬವನ್ನು ಸುಂದರವಾಗಿ ಆಚರಿಸಿದ್ದಾರೆ.
ಭಾಗ್ಯಲಕ್ಷ್ಮೀ ಧಾರವಾಹಿಯ ಪ್ರಮುಖ ಪಾತ್ರಗಳು ಭಾಗ್ಯ, ತಾಂಡವ್, ಶ್ರೇಷ್ಠ ಮತ್ತು ಭಾಗ್ಯಳ ಅತ್ತೆ ಕುಸುಮ. ಈ 4 ಪಾತ್ರಗಳ ಅಭಿನಯ ಅದ್ಭುತ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಮೊದಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಾ ಇದ್ದಿದ್ದು, ಗೌತಮಿ ಗೌಡ ಅವರು. ಇವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ಇರುವವರು. ಚಿ ಸೌ ಸಾವಿತ್ರಿ ಧಾರವಾಹಿ ಮೂಲಕ ಗೌತಮಿ ಅವರು ನಟನೆ ಶುರು ಮಾಡಿದ್ದು, ಈ ಧಾರಾವಾಹಿಯಲ್ಲಿ ಗೌತಮಿ ನಾಯಕಿ, ಹಿರಿಯನಟ ಜೈ ಜಗದೀಶ್ ಅವರು ನಾಯಕ. ಶ್ರುತಿ ನಾಯ್ಡು ಅವರು ನಿರ್ಮಾಣ ಮಾಡಿದ ಧಾರಾವಾಹಿ ಇದಾಗಿತ್ತು. ಮಗಳ ವಯಸ್ಸಿನ ಹುಡುಗಿಯನ್ನ ಮದುವೆಯಾಗೋ ಕಥೆ ಇದಾಗಿತ್ತು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು.

ಇದಷ್ಟೇ ಅಲ್ಲದೇ ತಾಯವ್ವ, ಅಮ್ಮನಿಗಾಗಿ, ಚೆಲುವಿ, ಚಲಿಸುವ ಮೋಡಗಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದ ಗೌತಮಿ ಅವರು, ಫಿನಾಲೆ ವರೆಗು ತಲುಪಿದ್ದರು. ಗೌತಮಿ ಅವರು ಚಿಕ್ಕವರಿದ್ದಾಗಲೇ, ಮನೆಯ ಜವಾಬ್ದಾರಿ ಅವರ ಮೇಲಿತ್ತು, ಸಿನಿಮಾ ಧಾರಾವಾಹಿ ಇಂದ ಸಿಗುತ್ತಿದ್ದ ಹಣದಲ್ಲಿ, ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಧಾರಾವಾಹಿ ನಟನೆ ಇದೆಲ್ಲದರ ಜೊತೆಗೆ ಗೌತಮಿ ಅವರು ವಿದ್ಯಾಭ್ಯಾಸವನ್ನು ಸಹ ಮುಂದುವರೆಸಿದ್ದರು. ಇಂಜಿನಿಯರಿಂಗ್ ಮುಗಿಸಿಕೊಂಡು, ಆ ಕ್ಷೇತ್ರದಲ್ಲಿ ಕೂಡ ಕೆಲಸ ಮಾಡಬೇಕು ಎನ್ನುವ ಆಸೆ ಅವರಿಗೆ ಇತ್ತು. ಸಿನಿಮಾ ಧಾರಾವಾಹಿಯಲ್ಲಿ ಪ್ರಾಜೆಕ್ಟ್ ಗಳು ಯಾವಾಗ್ಲೂ ಸಿಗುತ್ತದೆ ಎಂದು ಹೇಳೋಕಾಗಲ್ಲ ಎನ್ನುವ ಒಂದು ಯೋಚನೆ ಕೂಡ ಅವರಲ್ಲಿತ್ತು.
ಅದೇ ಕಾರಣಕ್ಕೆ ಅವರು ನಟನೆಗೆ ಬ್ರೇಕ್ ಹಾಕಿ, ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಈಗಲೂ ಕೂಡ ತಮ್ಮ ಕಾರ್ಪೊರೇಟ್ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಫುಲ್ ಟೈಮ್ ಎಂಪ್ಲಾಯಿ ಆಗಿದ್ದಾರೆ. ಗೌತಮಿ ಅವರಿಗೆ ಈಗಲೂ ನಟನೆಯ ಬಗ್ಗೆ ಆಸಕ್ತಿ ಇದೆ, ಆಸೆ ಕೂಡ ಇದೆ. ಒಳ್ಳೇ ಪ್ರಾಜೆಕ್ಟ್ ಬಂದು, ಒಳ್ಳೆಯ ಪಾತ್ರ ಸಿಕ್ಕರೆ, ಖಂಡಿತವಾಗಿ ನಟಿಸುತ್ತೇನೆ ಎಂದು ಹೇಳುತ್ತಾರೆ ಗೌತಮಿ. ಗೌತಮಿ ಅವರು ನಟನೆಯಿಂದ ದೂರವೇ ಉಳಿದಿದ್ದಾರೆ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. 2018ರಲ್ಲಿ ಜಾರ್ಜ್ ಕ್ರಿಸ್ಟಿ ಅವರ ಜೊತೆಗೆ ಮದುವೆಯಾದರು, ಈ ಜೋಡಿ ಮಗು ಬೇಕು ಅನ್ನೋ ಪ್ಲಾನ್ ನಲ್ಲಿದ್ದ ಕಾರಣ ಧಾರಾವಾಹಿ ಇಂದ ಕೂಡ ಇವರು ಹೊರಗಡೆ ಬರಬೇಕಾಯಿತು.

ಈಗ ಇವರಿಗೆ ಒಬ್ಬಳು ಮುದ್ದಾದ ಮಗಳು ಇದ್ದಾಳೆ, ಮಗಳನ್ನು ಸಹ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರ ಮಗಳ ಹುಟ್ಟುಹಬ್ಬವನ್ನು ಸಹ ಭರ್ಜರಿಯಾಗಿ ಆಚರಿಸಿ, ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗೌತಮಿ ಅವರು ತಮ್ಮ ಪರ್ಸನಲ್ ಲೈಫ್ ನಲ್ಲಿ ಬಹಳ ಚೆನ್ನಾಗಿದ್ದಾರೆ, ಮಗು ಸಂಸಾರ ಎಂದು ಸಂತೋಷವಾಗಿದ್ದಾರೆ. ಆದರೆ ತೆರೆಯಮೇಲೆ ಇವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾ ಇರುವುದಂತೂ ಹೌದು. ಶ್ರೇಷ್ಠ ಪಾತ್ರದಲ್ಲಿ ಗೌತಮಿ ಅವರು ಬಹಳ ಅಚ್ಚುಕಟ್ಟಾಗಿ ನಟಿಸುತ್ತಿದ್ದರು. ಆದಷ್ಟು ಬೇಗ ಗೌತಮಿ ಅವರು ಮತ್ತೊಂದು ಹೊಸ ಪಾತ್ರದ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಲಿ ಎನ್ನುವುದು ಇವರ ಅಭಿಮಾನಿಗಳ ಆಸೆ ಆಗಿದೆ.



