ನಟಿ ಸುಹಾಸಿನಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟಿ ಇವರು. ಕನ್ನಡದಲ್ಲಿ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅವರ ಜೋಡಿ ಸಿಕ್ಕಾಪಟ್ಟೆ ಫೇಮಸ್. ಇವತ್ತಿಗೂ ಕೂಡ ಜನರು ಬಂಧನ ಸಿನಿಮಾದ ಹರೀಶ್ ಹಾಗೂ ನಂದಿನಿಯನ್ನ ಮರೆತಿಲ್ಲ. ಅಂಥಾ ಎವರ್ ಗ್ರೀನ್ ಸಿನಿಮಾ, ಎವರ್ ಗ್ರೀನ್ ಪಾತ್ರಗಳು ಅವು. ಇಂಥ ಸುಹಾಸಿನಿ ಅವರು ಮದುವೆ ಆಗಿರುವುದು ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆಗೆ. ಮದುವೆಗಿಂತ ಮೊದಲು ಸುಹಾಸಿನಿ ಅವರು ಒಂದು ಕಂಡೀಷನ್ ಹಾಕಿದ್ದರಂತೆ, ಅದಕ್ಕೆ ಓಕೆ ಹೇಳಿದ ನಂತರವೇ ಇವರಿಬ್ಬರ ಮದುವೆಯಾಗಿದ್ದು ಎಂದು ಖುದ್ದು ಸುಹಾಸಿನಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಕಂಡೀಷನ್ ಏನು ಗೊತ್ತಾ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಸಿನಿಮಾ ಅಂದ್ರೆ ಇನ್ನಿಲ್ಲದ ಕ್ರೇಜ್. ಕಾಲಿವುಡ್ ಇಂದ ಬಾಲಿವುಡ್ ವರೆಗು ಎಲ್ಲಾ ಕಲಾವಿದರು ಕೂಡ ಇವರು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸುವ ಅವಕಾಶ ಬೇಕು ಎಂದು ಕಾಯುತ್ತಾರೆ. ಎಲ್ಲಾ ಜೆನೆರೇಷನ್ ಗಳಿಗೆ ಸೂಕ್ತ ಆಗುವಂಥ ಕಥೆಗಳನ್ನು ಜನರಿಗೆ ನೀಡುವುದು ಮಣಿರತ್ನಂ ಅವರ ಸ್ಪೆಷಾಲಿಟಿ. ವರ್ಷಗಳ ಹಿಂದೆ ಇವರು ನಿರ್ದೇಶನ ಮಾಡಿರುವ ಸಿನಿಮಾಗಳು ಇವತ್ತಿಗೂ ಕೂಡ ಸೂಪರ್ ಹಿಟ್ ಅನ್ನಿಸಿಕೊಂಡಿವೆ. ಅಂಥ ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರು ಸುಹಾಸಿನಿ ಅವರ ಜೊತೆಗೆ ಮದುವೆಯಾದಾಗ ಅವರಿಗೆ ಇಷ್ಟು ಯಶಸ್ಸು ಇರಲಿಲ್ಲ. ಕೆಲವು ಸಿನಿಮಾಗಳನ್ನು ನಿರ್ದೇಶಿಸಿ, ಉತ್ತಮವಾದ ಡೈರೆಕ್ಟರ್ ಅನ್ನಿಸಿಕೊಂಡಿದ್ದರು ಸಹ, ಸ್ಟಾರ್ ಡೈರೆಕ್ಟರ್ ಪಟ್ಟವಂತು ಇನ್ನು ಸಿಕ್ಕಿರಲಿಲ್ಲ.

ಇನ್ನು ಮಣಿರತ್ನಂ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಪೂರ್ತಿಯಾಗಿ ಚಿತ್ರರಂಗದಲ್ಲೇ ಇದ್ದವರು. ಇವರ ತಂದೆ ಸಿನಿಮಾ ವಿತರಕರಾಗಿದ್ದರು, ಇವರ ಅಣ್ಣ ಕೂಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಹಾಗಾಗಿ ಮಣಿರತ್ನಂ ಅವರಿಗೆ ಚಿತ್ರರಂಗದ ಕಡೆಗೆ ಹೆಚ್ಚು ಆಸಕ್ತಿ ಮತ್ತು ಒಲವು ಇತ್ತು. ಅದೇ ನಿಟ್ಟಿನಲ್ಲಿ ನಿರ್ದೇಶಕರಾಗಬೇಕು ಅನ್ನೋ ಹಂಬಲದಲ್ಲಿಯೇ ಚಿತ್ರರಂಗಕ್ಕೆ ಬಂದರು. ಮಣಿರತ್ನಂ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ, ಇದು ಕನ್ನಡ ಸಿನಿಮಾ ಅನ್ನೋದು ನಾವು ಹೆಮ್ಮೆ ಪಡುವಂಥ ವಿಷಯ. ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿ ಹಿರಿಯನಟಿ ಲಕ್ಷ್ಮೀ ನಾಯಕಿಯಾಗಿ, ಬಾಲಿವುಡ್ ನಟ ಅನಿಲ್ ಕಪೂರ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ಕಿರಣ್ ರಾವ್ ಸಹ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದರು.
ಪ್ರಣಯರಾಜ ಶ್ರೀನಾಥ್ ಅವರ ಮಗ ಸಹ ಈ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಪಲ್ಲವಿ ಅನುಪಲ್ಲವಿ ಸಿನಿಮಾ ಹಾಗೂ ಈ ಸಿನಿಮಾದ ಹಾಡುಗಳು ಇಂದಿಗೂ ಎವರ್ ಗ್ರೀನ್. ಇಲ್ಲಿಂದ ಶುರುವಾದ ಮಣಿರತ್ನಂ ಅವರ ವೃತ್ತಿ ಜೀವನದ ಪಯಣ ಇಂದು ದೊಡ್ಡ ಮಟ್ಟಕ್ಕೆ ಬಂದು ನಿಂತಿದೆ. ಭಾರತದ ಚಿತ್ರರಂಗದ ಕಲಾವಿದರು ಹಾಗೂ ನಿರ್ದೇಶಕರು ಇವರ ಸಿನಿಮಾಗಳನ್ನು ನೋಡಿ, ಸ್ಪೂರ್ತಿ ಪಡೆಯುತ್ತಾರೆ. ಲವ್ ಸ್ಟೋರಿ ಸಿನಿಮಾಗಳು ಅಂದರೆ ಮಣಿರತ್ನಂ ಅವರ ಸಿನಿಮಾಗಳು ಎಂದು ಹೇಳಬಹುದು. ಅಷ್ಟು ಅದ್ಭುತವಾಗಿ ಮೂಡಿಬರುತ್ತವೆ ಇವರ ಸಿನಿಮಾಗಳು. ಇಂಥ ಮಣಿರತ್ನಂ ಅವರು ಸಿನಿಮಾದಲಿ ಆಗಷ್ಟೇ ಯಶಸ್ಸು ಕಾಣುತ್ತಿದ್ದ ವೇಳೆಯಲ್ಲೇ ಸುಹಾಸಿನಿ ಅವರನ್ನು ಪ್ರೀತಿಸುವುದಕ್ಕೆ ಶುರು ಮಾಡಿದ್ದರು, ತಾವಾಗಿಯೇ ಸುಹಾಸಿನಿ ಅವರಿಗೆ ಪ್ರೊಪೋಸ್ ಕೂಡ ಮಾಡಿದ್ದರಂತೆ.

ಆದರೆ ಸುಹಾಸಿನಿ ಅವರು ಮೊದಲ ಸಾರಿಗೆ, ನಾನು ತುಂಬಾ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಸಿಂಪಲ್ ಹುಡುಗಿ ಎಂದು ಹೇಳಿ ಪ್ರೊಪೋಸಲ್ ನ ರಿಜೆಕ್ಟ್ ಮಾಡಿದ್ದರಂತೆ. ಬಳಿಕ 1988 ರಲ್ಲಿ ಇವರಿಬ್ಬರ ಮದುವೆ ಏನೋ ನಡೆಯಿತು. ಆದರೆ ಮದುವೆ ನಡೆದಿದ್ದು ಸುಹಾಸಿನಿ ಅವರು ಹಾಕಿದ ಆ ಒಂದು ಕಂಡೀಷನ್ ಗೆ ಮಣಿರತ್ನಂ ಅವರು ಓಕೆ ಹೇಳಿದ ನಂತರ. ಅಷ್ಟಕ್ಕೂ ಆ ಕಂಡೀಷನ್ ಏನು ಎಂದರೆ, ಪ್ರೀತಿ ಗೀತಿ ಅಂತ ಸುತ್ತೋದಕ್ಕೆ ನನಗೆ ಇಷ್ಟವಿಲ್ಲ, ನೇರವಾಗಿ ಮದುವೆ ಆಗೋಣ ಎಂದು ಸುಹಾಸಿನಿ ಅವರು ಕಂಡೀಷನ್ ಹಾಕಿದ್ದರಂತೆ. ಇದಕ್ಕೆ ಮಣಿರತ್ನಂ ಅವರು ಒಪ್ಪಿ, ನೇರವಾಗಿ ಮದುವೆಯಾಗುವುದಕ್ಕೆ ಓಕೆ ಹೇಳಿದ ನಂತರವೇ ಇವರಿಬ್ಬರ ಮದುವೆ ನಡೆಯಿತು. ಇಲ್ಲಿಯವರೆಗೆ ಆದರ್ಶ ದಂಪತಿಗಳಾಗಿ ಇವರಿಬ್ಬರು ಜೀವನ ನಡೆಸುತ್ತಿದ್ದಾರೆ.
ಮಣಿರತ್ನಂ ಹಾಗೂ ಸುಹಾಸಿನಿ ಜೋಡಿ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಮಣಿರತ್ನಂ ಅವರ ಸಿನಿಮಾದ ಕೆಲಸಗಳಲ್ಲಿ ಸುಹಾಸಿನಿ ಅವರ ಪಾತ್ರ ಕೂಡ ಇದ್ದೇ ಇರುತ್ತದೆ. ಆದರೆ ಸುಹಾಸಿನಿ ಅವರು ಮಣಿರತ್ನಂ ಅವರು ನಿರ್ದೇಶನ ಮಾಡಿರುವ ಯಾವುದೇ ಸಿನಿಮಾದಲ್ಲಿ ಕೂಡ ನಟಿಸಿಲ್ಲ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿರದ ವಿಚಾರ. ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸುಹಾಸಿನಿ ಅವರು ಕೆಲವು ಸಂದರ್ಶನಗಳಲ್ಲಿ ಮಣಿರತ್ನಂ ಅವರ ಬಗ್ಗೆ ಸಂತೋಷದಿಂದ, ಹೆಮ್ಮೆಯಿಂದ ಮಾತನಾಡಿದ್ದಾರೆ. ನಿಜ ಜೀವನದಲ್ಲಿ ಮಣಿರತ್ನಂ ಅವರಿಗೆ ಕೋಪ ಬರುವುದೇ ಇಲ್ಲವಂತೆ. ಒಂದು ವೇಳೆ ಸುಹಾಸಿನಿ ಅವರು ಕೆಲಸದಲ್ಲಿ ಬ್ಯುಸಿ ಇದ್ದಾಗ, ಮನೆಯಲ್ಲಿ ಏನಾದರು ಸಮಸ್ಯೆ ಎದುರಾದರೆ, ಸುಹಾಸಿನಿ ಅವರ ವರೆಗು ಆ ವಿಷಯವನ್ನು ತರದೇ, ತಾವೇ ನಿಭಾಯಿಸುತ್ತಾರಂತೆ.

ಇನ್ನು ತಾವು ಕೆಲಸದ ಮೇಲೆ ಇದ್ದಾಗ ,ಮನೆಯಲ್ಲಿ ಏನಾದರೂ ಸಮಸ್ಯೆ ಬಂದರೆ ತಕ್ಷಣವೇ ಮನೆಗೆ ಬಂದು ಬಿಡುತ್ತಾರಂತೆ. ಸುಹಾಸಿನಿ ಅವರು ಏನೇ ಆದರೂ ಕೂಡ, ಮಣಿರತ್ನಂ ಅವರ ಜೊತೆಗೆ ಹೇಳಿಕೊಳ್ಳುತ್ತಾರಂತೆ. ತಮ್ಮ ಜೀವನದಲ್ಲಿ ತಾವು ಅತಿಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಅಂದರೆ ಅದು ಮಣಿರತ್ನಂ ಎಂದು ಹೇಳುತ್ತಾರೆ ಸುಹಾಸಿನಿ ಅವರು. ಇನ್ನು ಈ ಜೋಡಿಗೆ ನಂದನ್ ಹೆಸರಿನ ಮುದ್ದಾದ ಮಗ ಇದ್ದಾನೆ. ಇವರ ಮಗನಿಗೆ ತಂದೆ ತಾಯಿಯ ಹಾಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲ, ಇವರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಒಟ್ಟಿನಲ್ಲಿ ಸುಹಾಸಿನಿ ಅವರ ಇಡೀ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ನಾವೆಲ್ಲರೂ ಕೂಡ ಹಾರೈಸೋಣ..



