ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 731ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ತಾಳಿ ತೆಗೆದುಕೊಟ್ಟಾಗಿನಿಂದ ತಾಂಡವ್ ಪದೆ ಪದೇ ಅದನ್ನು ನೆನಪಿಸಿಕೊಂಡು ಭಾಗ್ಯಾ ಮೇಲೆ ಸಿಟ್ಟಾಗುತ್ತಿದ್ದಾನೆ. ಭಾಗ್ಯಾ ಯಾವುದೇ ಕಾರಣಕ್ಕೂ ಗೆಲ್ಲಬಾರದು. ಅವಳು ನನ್ನ ಮುಂದೆ ಸೋಲಬೇಕು. ಗಂಡ ಇಲ್ಲದೆ ಅವಳು ಬದುಕಲು ಸಾಧ್ಯವೇ ಇಲ್ಲ, ಎಲ್ಲದಕ್ಕೂ ಅವಳು ನನ್ನ ಮೇಲೆ ಡಿಪೆಂಡ್ ಆಗಬೇಕು. ಅಪ್ಪ ಅಮ್ಮನಿಗೆ ನನ್ನ ಬೆಲೆ ತಿಳಿಯಬೇಕು ಎಂದುಕೊಂಡು ತಾಂಡವ್ ಭಾಗ್ಯಾಗೆ ಎಷ್ಟು ತೊಂದರೆ ಕೊಡಬೇಕೋ ಅಷ್ಟು ತೊಂದರೆ ಕೊಡಲು ಶುರು ಮಾಡುತ್ತಾನೆ.
ಇಎಂಐ ಕಟ್ಟದ ಕಾರಣ ಮನೆ ಸೀಜ್ ಆಗುವ ಪರಿಸ್ಥಿತಿ ಬರುತ್ತದೆ. ಈ ಬಾರಿಯಂತೂ ತಾಂಡವ್ಗೆ ಇನ್ನಷ್ಟು ಖುಷಿಯಾಗುತ್ತದೆ. ಅದೇ ಖುಷಿಗೆ ಶ್ರೇಷ್ಠಾ ಹಾಗೂ ತಾಂಡವ್, ಶೌರ್ಯನನ್ನು ಮನೆಗೆ ಡಿನ್ನರ್ಗೆ ಕರೆಯುತ್ತಾರೆ. ಅವರ ಖುಷಿಗೆ ಕಾರಣ ಕೇಳುವ ಶೌರ್ಯ, ನನ್ನ ಪ್ರಕಾರ ಭಾಗ್ಯಾ ಬಹಳ ಸ್ಟ್ರಾಂಗ್, ಅವರು ಸೋಲು ಒಪ್ಪಿಕೊಳ್ಳುವುದಿಲ್ಲ, ಅವರು ಖಂಡಿತ ಮನೆ ಉಳಿಸಿಕೊಳ್ಳುತ್ತಾರೆ ಎನ್ನುತ್ತಾನೆ. ಅವನ ಮಾತು ಕೇಳಿ ತಾಂಡವ್ ಸಿಟ್ಟಾಗುತ್ತಾನೆ. ಮನೆ ಉಳಿಸಿಕೊಳ್ಳಲು ಭಾಗ್ಯಾ ಖಂಡಿತ ಏನಾದರೂ ಪ್ಲ್ಯಾನ್ ಮಾಡುತ್ತಿರುತ್ತಾಳೆ. ಅದೇನು ತಿಳಿದುಕೊಳ್ಳಬೇಕು ಎಂದು ತಾಂಡವ್ ಒಂದು ಪ್ಲ್ಯಾನ್ ಮಾಡುತ್ತಾನೆ.
ತಾಂಡವ್, ಮಗಳು ತನ್ವಿಗೆ ಕರೆ ಮಾಡುತ್ತಾನೆ. ಹೇಗಿದ್ದೀಯ, ಊಟ ಆಯ್ತಾ ಎಂದು ಮಗಳ ಬಗ್ಗೆ ಬಹಳ ಕೇರ್ ಇರುವಂತೆ ನಾಟಕವಾಡುತ್ತಾನೆ. ನಿಮ್ಮನ್ನೆಲ್ಲಾ ನೆನಪಿಸಿಕೊಂಡು ನನಗೆ ಊಟ ಸೇರುತ್ತಿಲ್ಲ, ನನಗೆ ನಿಮ್ಮದೇ ಚಿಂತೆಯಾಗಿದೆ. ಈಗ ಮನೆ ಹರಾಜಿಗೆ ಬಂದಿದೆಯಂತೆ ನನ್ನ ಬಳಿಯೂ ದುಡ್ಡಿಲ್ಲ, ನಿಮ್ಮ ಅಮ್ಮನಿಗೆ ಮನೆ ಉಳಿಸಿಕೊಳ್ಳಲು ಬಹಳ ಕಷ್ಟ ಆಗುತ್ತಿರುಬಹುದೇನೋ ಎನ್ನುತ್ತಾನೆ. ತಾಂಡವ್ ಕಾಳಜಿಯಿಂದ ಈ ಮಾತುಗಳನ್ನು ಆಡುತ್ತಿದ್ದಾನೆ ಎಂದು ತಪ್ಪು ತಿಳಿದ ತನ್ವಿ, ಹೌದು ಪಪ್ಪಾ, ಅಮ್ಮ ಬಹಳ ಕಷ್ಟ ಪಡುತ್ತಿದ್ದಾಳೆ. ಇಎಂಐ ಹಣ ಕಟ್ಟಲು ಒಡವೆಗಳನ್ನು ಗಿರವಿ ಇಡುತ್ತಿದ್ದಾಳೆ. ಎಂದು ತನ್ವಿ ಹೇಳುತ್ತಾಳೆ. ಅದನ್ನು ಕೇಳಿ ತಾಂಡವ್ ನೋಡು ಶೌರ್ಯ ಹೇಳಿದಂತೆ ಭಾಗ್ಯಾ ಏನಾದರೂ ಒಂದು ಪ್ಲ್ಯಾನ್ ಮಾಡೇ ಮಾಡುತ್ತಾಳೆ. ಆದರೆ ಅವಳು ನನ್ನ ಮುಂದೆ ಗೆಲ್ಲಬಾರದು, ಏನಾದರೂ ಮಾಡಲೇಬೇಕು ಎನ್ನುತ್ತಾನೆ.
ನನ್ನ ಬಳಿ ಒಂದು ಐಡಿಯಾ ಇದೆ. ನಾನು ಹೇಳಿದಂತೆ ಕೇಳಿದರೆ ಖಂಡಿತ ಭಾಗ್ಯಾ ನಿನ್ನ ಮುಂದೆ ಸೋಲುತ್ತಾಳೆ ಎಂದು ಶ್ರೇಷ್ಠಾ, ಹೇಳುತ್ತಾಳೆ. ಅವಳು ಹೇಳಿದ್ದು ತಾಂಡವ್ಗೆ ಕೂಡಾ ಇಷ್ಟವಾಗುತ್ತದೆ. ಮರುದಿನ ಭಾಗ್ಯಾ, ಒಡವೆಗಳನ್ನೆಲ್ಲಾ ಒಂದು ಬ್ಯಾಗ್ನಲ್ಲಿಟ್ಟುಕೊಂಡು ಕೆಲಸಕ್ಕೆ ಹೊರಡುತ್ತಾಳೆ. ಜಾಗ್ರತೆ ಭಾಗ್ಯಾ, ಹೊರಗೆ ಕಳ್ಳರು ಹೆಚ್ಚಾಗಿದ್ದಾರೆ. ನಿಮ್ಮ ಮಾವನ ಪಿಎಫ್ ಹಣ ಕಳ್ಳತನವಾಗಿದೆ, ನೀನು ಎಚ್ಚರವಾಗಿರಬೇಕು ಎಂದು ಕುಸುಮಾ, ಸೊಸೆಗೆ ಹೇಳುತ್ತಾಳೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗ್ ಆಗುತ್ತದೆ. ಪೂಜಾ ಬಾಗಿಲು ತೆಗೆದಾಗ ಹೊರಗೆ ಶ್ರೇಷ್ಠಾ-ತಾಂಡವ್ ನಿಂತಿರುತ್ತಾರೆ. ಯಾರೂ ನನ್ನನ್ನು ಒಳಗೆ ಕರೆಯುವುದಿಲ್ಲವಾ? ಪರವಾಗಿಲ್ಲ ನಾನೇ ಬರುತ್ತೇನೆ ಎಂದು ತಾಂಡವ್, ಶ್ರೇಷ್ಠಾ ಕೈ ಹಿಡಿದು ಒಳಗೆ ಬರುತ್ತಾನೆ.
ಭಾಗ್ಯಾ ಮೇಡಂ ಒಡವೆಗಳನ್ನೆಲ್ಲಾ ಹಿಡಿದುಕೊಂಡು ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳುತ್ತಾನೆ. ಅವನ ಪ್ರಶ್ನೆಗೆ ಯಾರೂ ಉತ್ತರ ಕೊಡುವುದಿಲ್ಲ, ಮನೆ ಉಳಿಸಿಕೊಳ್ಳಲು ನಾನು ಸಂಪಾದನೆ ಮಾಡಿ ಕೊಡಿಸಿದ ಒಡವೆಗಳನ್ನು ನೀನು ಹೇಗೆ ಗಿರವಿ ಇಡುತ್ತಿದ್ದೀಯ. ತಾಳಿ ತೆಗೆದುಕೊಟ್ಟ ನಂತರ ಆ ಒಡವೆಗಳೆಲ್ಲಾ ನನ್ನ ಹೆಂಡತಿ ಶ್ರೇಷ್ಠಾಗೆ ಸೇರಿದ್ದು ತಾನೇ, ಅದಕ್ಕೆ ಅದನ್ನೆಲ್ಲಾ ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ತಾಂಡವ್ ಹೇಳುತ್ತಾನೆ. ನೀನು ಬೇಕಂತಲೇ ಹೀಗೆಲ್ಲಾ ಮಾಡುತ್ತಿದ್ದೀಯ ಎಂದು ಕುಸುಮಾ, ಮಗನಿಗೆ ಕೇಳುತ್ತಾಳೆ. ನೀನು ಏನಾದರೂ ತಿಳಿದುಕೋ ಅಂತೂ, ಈ ಮನೆ ಉಳಿಸಿಕೊಳ್ಳಲು ಭಾಗ್ಯಾಗೆ ನನ್ನ ಒಡವೆಯೇ ಬೇಕಾಯ್ತು ಎಂದು ತಾಂಡವ್ ವ್ಯಂಗ್ಯವಾಡುತ್ತಾನೆ. ಅದನ್ನು ಕೇಳಿ ತಾಂಡವ್ಗೆ ಕಸಿವಿಸಿ ಉಂಟಾಗುತ್ತದೆ.
ಅವರ ಒಡವೆಯಿಂದ ಮನೆ ಬಿಡಿಸಿಕೊಳ್ಳುವುದು ಬೇಡ , ಅವರ ಒಡವೆ ಅವರು ತೆಗೆದುಕೊಂಡು ಹೋಗಲಿ ಎಂದು ಭಾಗ್ಯಾ ಒಡವೆ ಬ್ಯಾಗನ್ನು ಟೇಬಲ್ ಮೇಲೆ ಇಡುತ್ತಾಳೆ. ಶ್ರೇಷ್ಠಾ ಅದನ್ನು ಆಸೆಯಿಂದ ತೆಗೆದುಕೊಂಡು ತಾಂಡವ್ ಜೊತೆ ಅಲ್ಲಿಂದ ಹೊರಡುತ್ತಾಳೆ. ಅವರಿಬ್ಬರೂ ನಗುತ್ತಾ ಮಾತನಾಡಿಕೊಳ್ಳುವುದನ್ನು ನೋಡಿದ ಪೂಜಾ ಬೇಸರಗೊಳ್ಳುತ್ತಾಳೆ. ನೋಡಿ ಅತ್ತೆ, ಭಾವನಿಗೆ ತನ್ನ ಅಪ್ಪ-ಅಮ್ಮ ಕಷ್ಟಪಡುತ್ತಾರೆ ಎಂಬ ನೋವು ಸ್ವಲ್ಪವೂ ಇಲ್ಲ, ಇದನ್ನೆಲ್ಲಾ ಬೇಕಂತಲೆ ಮಾಡುತ್ತಿದ್ದಾರೆ. ಅಕ್ಕ ನೀನು ಯಾವುದೇ ಕಾರಣಕ್ಕೂ ಭಾವನ ಮುಂದೆ ಸೋಲಬೇಡ, ಹೇಗಾದರೂ ಮಾಡಿ ಹಣ ಹೊಂದಿಸು ಎಂದು ಪೂಜಾ ಹೇಳುತ್ತಾಳೆ. ಇವತ್ತು 40 ಸಾವಿರ ಹಣ ಹೊಂದಿಸುತ್ತೇನೆ ಎಂದು ಭಾಗ್ಯಾ ಅತ್ತೆ ಮಾವನ ಆಶೀರ್ವಾದ ಪಡೆದು ಹೊರಡುತ್ತಾಳೆ.
ಹಣ ಹೊಂದಿಸಲು ಭಾಗ್ಯಾ ಯಾವ ದಾರಿ ಹುಡುಕುತ್ತಾಳೆ? ಭಾಗ್ಯಾಗೆ ಯಾರು ಸಹಾಯ ಮಾಡುತ್ತಾರೆ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.



