ದೆಹಲಿ ಮೆಟ್ರೊದೊಳಗಿನ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಪ್ರೇಮಿಗಳ ವರ್ತನೆ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಹ್ಯಕರ ಕೃತ್ಯ ಎಸಗಿದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ವಾಸ್ತವದಲ್ಲಿ, ವೈರಲ್ ಕ್ಲಿಪ್ನಲ್ಲಿ, ತಂಪು ಪಾನೀಯವನ್ನು ಸೇವಿಸಿದ ಈ ಜೋಡಿ ಪರಸ್ಪರ ಪರಸ್ಪರರ ಬಾಯಿಗೆ ಹಾಕುವುದನ್ನು ನೀವು ನೋಡಬಹುದು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಾಯಿಗೆ ಬಂದಂತೆ ಪ್ರೇಮಿಗಳನ್ನು ರುಬ್ಬುತ್ತಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಒಂದಿಲ್ಲೊಂದು ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಪ್ರೇಮಿಗಳಿಬ್ಬರು ಸಾರ್ವಜನಿಕವಾಗಿ ಇಂತಹ ಕೃತ್ಯ ಎಸಗಿದ್ದು, ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಮುಜುಗರ ಪಟ್ಟುಕೊಳ್ಳುವಂತಾಗಿದೆ. ಮೆಟ್ರೋದಲ್ಲಿ ಹೆಚ್ಚು ಜನಸಂದಣಿ ಇಲ್ಲದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಂಪತಿಗಳು ತಂಪು ಪಾನೀಯ ಸೇವಿಸುತ್ತಿದ್ದಾರೆ. ಇದಾದ ನಂತರ ಇಬ್ಬರೂ ಹೇಯ ಕೃತ್ಯಗಳನ್ನು ಎಸಗಲು ಆರಂಭಿಸುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನೆಟ್ಟುಗರೊಬ್ಬರು X ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಈಗ ದೆಹಲಿ ಮೆಟ್ರೋವನ್ನು ಮುಚ್ಚಬೇಕೇ? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ಗೆ ಅನೇಕ ಬಳಕೆದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯವಾಗಿಯೂ ಕೂಡ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ದೆಹಲಿ ಮೆಟ್ರೋ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.