ಮದುವೆ ಅನ್ನೋದು ಯಾವಾಗ ಆಗುತ್ತದೆ ಎಂದು ಊಹಿಸೋಕೆ ಸಾಧ್ಯವಿಲ್ಲ. ಯಾವ ವ್ಯಕ್ತಿಗೆ ಕಂಕಣ ಬಲ ಯಾವಾಗ ಕೂಡಿ ಬರುವುದೋ ಆಗ ಮದುವೆ ಆಗುತ್ತಾರೆ. ಕೆಲವರಿಗೆ ಬೇಗ, ಇನ್ನು ಕೆಲವರಿಗೆ ನಿಧಾನ, ಇನ್ನು ಕೆಲವರು ಮದುವೆ ಆಗುವುದೇ ಇಲ್ಲ. ಹೀಗೆ ಮದುವೆ ವಿಚಾರದಲ್ಲಿ ಒಬ್ಬೊಬ್ಬರ ಅಭಿಪ್ರಾಯವು ಬೇರೆ ಬೇರೆ ರೀತಿ ಇರುತ್ತದೆ. ಇದೀಗ ಟಾಲಿವುಡ್ ನ ಖ್ಯಾತ ನಟ ತಮ್ಮ 47ನೇ ವಯಸ್ಸಿಗೆ ಮದುವೆಯಾಗಿ, ಅಚ್ಚರಿ ಮೂಡಿಸಿದ್ದಾರೆ. ಮದುವೆಯ ಫೋಟೋಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಜೊತೆಗೆ ಸಂತೋಷವು ಆಗಿದ್ದು, ಎಲ್ಲರೂ ಈ ಜೋಡಿಗೆ ವಿಶ್ ಮಾಡುತ್ತಿದ್ದಾರೆ.

ಇದೀಗ ಮದುವೆಯಾಗಿ ಸುದ್ದಿಯಾಗಿರುವುದು ಬೇರೆ ಯಾರು ಅಲ್ಲ, ತೆಲುಗಿನ ಖ್ಯಾತ ನಟ ಸುಬ್ಬರಾಜು ಅವರು. ಇವರು ತೆಲುಗು ಮಾತ್ರವಲ್ಲದೇ, ಹಿಂದಿ, ಕನ್ನಡ, ತಮಿಳು ಭಾಷೆಗಳಲ್ಲಿ ಸಹ ನಟಿಸಿದ್ದಾರೆ. ಸುಬ್ಬರಾಜು ಅವರು ಕನ್ನಡದಲ್ಲಿ ದರ್ಶನ್ ಅವರ ಗಜ, ಶಿವಣ್ಣ ಅವರ ಸತ್ಯ ಇನ್ ಲವ್, ಇತ್ತೀಚಿನ ಸಿನಿಮಾ ರೋಗ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಹಿಂದಿಯಲ್ಲಿ ಸ್ಟಾರ್ ಹೀರೋ ಅಮಿತಾಭ್ ಬಚ್ಚನ್ ಅವರ ಜೊತೆಗೆ ಬುಡ್ಡಾ ಹೋಗ ತೇರಾ ಬಾಪ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಹಲವು ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿ, ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಇವರು ಎಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದರೆ ವರ್ಷಕ್ಕೆ 10 ರಿಂದ 12 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಈಗ ಇವರು ನಟಿಸುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಹಾಗೆಯೇ ಶುರುವಿನಲ್ಲಿ ಅವರು ವಿಲ್ಲನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ನಂತರದ ವರ್ಷಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುವುದಕ್ಕೆ ಶುರು ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಹ ಸುಬ್ಬರಾಜು ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹೆಚ್ಚು ಖ್ಯಾತಿ ಪಡೆದಿದ್ದು ಬಾಹುಬಲಿ ಸಿನಿಮಾದ ಪಾತ್ರದ ಮೂಲಕ. ಈ ಸಿನಿಮಾದಲ್ಲಿ ಇವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು.

ನಟನೆಯ ವಿಚಾರದಲ್ಲಿ ಸುಬ್ಬರಾಜು ಅವರು ಬಹಳ ಪ್ರತಿಭೆ ಇರುವ ವ್ಯಕ್ತಿ. ಇವರು ಕೆರಿಯರ್ ನಲ್ಲಿ ಅಷ್ಟೆಲ್ಲಾ ಯಶಸ್ಸು ಗಳಿಸಿದ್ದರೂ ಸಹ ವೈಯಕ್ತಿಕ ಜೀವನದ ವಿಷಯದಲ್ಲಿ ಇನ್ನು ಮದುವೆಯಾಗದೆ ಹಿಂದೆಯೇ ಉಳಿದಿದ್ದರು. ಇದೀಗ ಇವರು ಕೊನೆಗೂ ಮದುವೆ ಆಗಿದ್ದಾರೆ. ತಮ್ಮ ಮದುವೆಯ ಸುಂದರವಾದ ಫೋಟೋಸ್ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊನೆಗೂ ಮದುವೆ ಆದೇ ಎಂದು ಕ್ಯಾಪ್ಶನ್ ಬರೆದು, ಪತ್ನಿಯ ಜೊತೆಗಿರುವ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇವರಿಗೆ ಎಲ್ಲಾ ಅಭಿಮಾನಿಗಳು ಕಾಮೆಂಟ್ಸ್ ಮೂಲಕ ವಿಶ್ ಮಾಡುತ್ತಿದ್ದಾರೆ.
ಇವರು ಮದುವೆ ಆಗಿರುವ ಹುಡುಗಿಯ ಹೆಸರು ಶ್ರಾವಂತಿ, ಗಂಡನಿಗೆ ತಕ್ಕ ಹೆಂಡತಿ ಆಗಿದ್ದಾರೆ. ಈ ಜೋಡಿ ಸಮುದ್ರದ ತೀರದಲ್ಲಿ ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಈ ಜೋಡಿ ನೂರು ಕಾಲ ಚೆನ್ನಾಗಿರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಸುಬ್ಬರಾಜು ಅವರು ಮೂಲತಃ ಓದಿರುವುದು ಇಂಜಿನಿಯರಿಂಗ್, ಕಂಪ್ಯೂಟರ್ ರಿಪೇರಿ ಮಾಡುವುದಕ್ಕೆ ನಿರ್ದೇಶಕ ಕೃಷ್ಣ ವಂಶಿ ಅವರ ಮನೆಗೆ ಹೋಗಿ, ಬಳಿಕ ನಟನೆಯಲ್ಲಿ ಇವರ ಕೆಲಸ ಮುಂದುವರೆಯಿತು. ಇಂದು ಬಹಳ ಹೆಸರು ಮಾಡಿರುವ ಖ್ಯಾತ ನಟ ಆಗಿದ್ದಾರೆ.



