ಬಾಲಿವುಡ್ನ ಎವರ್ ಗ್ರೀನ್ ಕ್ವೀನ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಇದೀಗ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ. ಜಾನ್ವಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಎಲ್ಲೆ ಬ್ಯೂಟಿ ಅವಾರ್ಡ್ಸ್ 2023ರಲ್ಲಿ ಬೋಲ್ಡ್ ಲುಕ್ ನಲ್ಲಿ ಮಿಂಚಿದ್ದಾರೆ. ಆದರೆ ಜಾನ್ವಿ ಮಾಡಿದ್ದ ಎಡವಟ್ಟಿನಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಜೊತೆಗೆ ಈ ಫೋಟೋಗಳು ವೈರಲ್ ಆಗುತ್ತಿವೆ. ಜಾನ್ವಿ ಕಪೂರ್ ಮಾಡಿಕೊಂಡ ಎಡವಟ್ಟೇನು?, ಆಕೆಯ ಬಟ್ಟೆಯಲ್ಲಿ ಅಂತಹದ್ದೇನಿತ್ತು? ಎಂಬುದಕ್ಕಾಗಿ ಈ ಫೋಟೋ ಮತ್ತು ವರದಿ ನೋಡಿ.


ಸಮಾರಂಭದಲ್ಲಿ ತೊಡೆ ಕಾಣಿಸುವಂತ ಸೀಳು ಬಟ್ಟೆ ಧರಿಸಿ ವೇದಿಕೆಗೆ ಬಂದ ಜಾನ್ವಿ ಕಪೂರ್ ವೇದಿಕೆಯಿಂದ ಇಳಿಯುವ ತನಕ ತಮ್ಮ ತೊಡೆಯನ್ನು ಕೈಯಿಂದ ಮುಚ್ಚಿಕೊಂಡಿದ್ದರು. ಬಳಿಕ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನು ಕಂಡ ನೆಟ್ಟಿಗರಲ್ಲಿ ಒಬ್ಬ, ‘ನೀವು ಯಾವುದಕ್ಕೂ ಕಡಿಮೆಯಿಲ್ಲ, ಆದರೂ ನಿಮಗೆ ಕಂಫರ್ಟ್ ಇಲ್ಲದ ಡ್ರೆಸ್ ಧರಿಸೋದ್ಯಾಕೆ’ ಎಂದು ಪ್ರಶ್ನೆ ಮಾಡಿದ್ದರೆ, ಮತ್ತೊಬ್ಬ ‘ಜಗತ್ತಿನಲ್ಲಿ ದೇವರು ನಿಮಗೆ ಹೆಚ್ಚಾಗಿ ಕೊಟ್ಟಿರುವ ಈ ಕೊಡುಗೆಯನ್ನು ಇತರರಂತೆ ಎಲ್ಲರಿಗೂ ತೋರಿಸಿಕೊಳ್ಳಬೇಡಿ’ ಎಂದು ವಿನಂತಿ ಮಾಡಿಕೊಂಡಿದ್ದಾನೆ.
ಇನ್ನು ಬಾಲಿವುಡ್ನಲ್ಲಿ ಜಾನ್ವಿ ಮೊದಲ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ನಟನೆ ಮತ್ತು ಸೌಂದರ್ಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು. ಸದಾ ತಮಗಿಷ್ಟ ಬಂದ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಜಾನ್ವಿ ಕಪೂರ್ ಇದೇ ಮೊದಲ ಬಾರಿಗೆ ಬಟ್ಟೆಯ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಜೂ.ಎನ್.ಟಿ.ಆರ್ ಅವರ ‘ದೇವರ’ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಲು ಸಜ್ಜಾಗಿರುವ ಜಾನ್ವಿ ಇದೀಗ ಬಟ್ಟೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.



