ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲಿನಿಂದಲೂ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಸೇರಿ ರೂಪೇಶ್ ರಾಜಣ್ಣಗೆ ಬ#ಕ್ರಾ ಕೂಡ ಮಾಡಿದ್ದರು. ಇದೀಗ ಸಾನ್ಯ ಮತ್ತು ಸಂಬರ್ಗಿ ನಡುವೆ ಕಿಡಿ ಹೊತ್ತಿಕೊಂಡಿದೆ. ಪ್ರಶಾಂತ್ ಸಂಬರ್ಗಿ ಅವರು ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಸಾನ್ಯಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಸಾನ್ಯ ಮಾತು ಪ್ರಶಾಂತ್ ಸಂಬರ್ಗಿ ಅವರ ಬೇಸರಕ್ಕೆ ಕಾರಣವಾಗಿದೆ. ಗರ್ಲ್ಫ್ರೆಂಡ್ಸ್ ಬಗ್ಗೆ ಕಿಚ್ಚನ ಮುಂದೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಕಿಡಿಕಾರಿದ್ದಾರೆ.

ಪ್ರಶಾಂತ ಸಾಂಬಾರಿಗೆ ಅವರು ಇಮೇಜ್ ಕುರಿತಾಗಿ ಸಾನ್ಯ ಅಯ್ಯರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚನ ವಾರ ಪಂಚಾಯಿತಿಯಲ್ಲಿ ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ ಎಂದು ಸಾನ್ಯಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ, ಪ್ರಶಾಂತ್ ಸಂಬರ್ಗಿ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್ಫ್ರೆಂಡ್ಸ್ ಫೋಟೋ ಬೇಕೋ, ಯಾವುದು ಬೇಕೋ ಅದು ಪಾಲಾಗುತ್ತೆ ಸರ್ ಎಂದು ಸಾನ್ಯ ಅವರು ಹೇಳಿದರು.
ಗರ್ಲ್ಫ್ರೆಂಡ್ಸ್ ವಿಚಾರ ಯಾಕೆ ಎಂದು ಕಿಚ್ಚ ಸುದೀಪ್ ಕೇಳಿದಾಗ, ಅವರ ಜಮಾನದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕಾಪಟ್ಟೆ ಗರ್ಲ್ಫ್ರೆಂಡ್ಸ್ ಇದ್ದರು. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಇದಾದ ಬಳಿಕ ಇದು ಡ್ಯಾಮೇಜಿಂಗ್ ಆಗಿದೆ ಎಂದು ಸಂಬರ್ಗಿ ಕಿಡಿಕಾರಿದ್ದಾರೆ. ಈ ರೀತಿಯ ಮಾತುಗಳು ನನ್ನ ಇಮೇಜ್ಗೆ ಡ್ಯಾಮೇಜ್ ತರುತ್ತವೆ ಎಂದು ಪ್ರಶಾಂತ್ ಸಂಬರ್ಗಿ ಅವರು ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ – ಗರ್ಲ್ಫ್ರೆಂಡ್ಸ್ ಅಂತ ಹೇಳಿ ನನ್ನ ಇಮೇಜ್ನ ಡ್ಯಾಮೇಜ್ ಮಾಡಬೇಡ. ನನ್ನ ಫ್ಯಾಮಿಲಿ, ನನ್ನ ಹೆಂಡತಿ.. ಎಲ್ಲಾ ನೋಡುತ್ತಿರುತ್ತಾರೆ. ಸಖತ್ ಪ್ರಾಬ್ಲಂ ಆಗುತ್ತೆ. ನಾನು ಹೇಳಿದ್ನಾ ಯಾವತ್ತಾದರೂ ಗರ್ಲ್ಫ್ರೆಂಡ್ ಅಂತ.
ಸಾನ್ಯ ಅಯ್ಯರ್ – ಹೌದು.. ಹೇಳಿದ್ದೀರಾ. ಅದಕ್ಕೆ ನಾನು ಹೇಳಿದ್ದು. ಇಲ್ಲಾಂದ್ರೆ ಹೇಳುತ್ತಿರಲಿಲ್ಲ.
ಪ್ರಶಾಂತ್ ಸಂಬರಗಿ – ಯಾವಾಗ ಹೇಳಿದ್ದೆ ನಾನು?
ಸಾನ್ಯ ಅಯ್ಯರ್ – ನೀವೇ ಕ್ಯಾಮರಾ ಮುಂದೆಯೇ ಹೇಳಿದ್ದೀರಾ
ಪ್ರಶಾಂತ್ ಸಂಬರಗಿ – ಕ್ಯಾಮರಾ ಮುಂದೆ ಹೇಳೋಕೂ, ಸ್ಟೇಜ್ ಮುಂದೆ ಹೇಳೋಕೂ ವ್ಯತ್ಯಾಸ ಇದೆ.
ಸಾನ್ಯ ಅಯ್ಯರ್ – ಇದೂ ಕೂಡ ವೇದಿಕೆ
ಪ್ರಶಾಂತ್ ಸಂಬರಗಿ – ನಾನು ಏನೂ ಹೇಳಿಲ್ಲ. ನನ್ನ ಇಮೇಜ್ಗೆ ಡ್ಯಾಮೇಜ್ ಮಾಡೋಕೆ ಇಷ್ಟ ಇದ್ದರೆ ಮಾಡು
ಸಾನ್ಯ ಅಯ್ಯರ್ – ಇಷ್ಟ ಅಂತ ಇಲ್ಲ.
ಪ್ರಶಾಂತ್ ಸಂಬರಗಿ – ಇದು ಸೆಕೆಂಡ್ ವಾರ್ನಿಂಗ್. ನನ್ನ ಇಮೇಜ್ ಡ್ಯಾಮೇಜ್ ಮಾಡಿದ ಹಾಗಾಗಿದೆ.
ಸಾನ್ಯ ಅಯ್ಯರ್ – ಅದು ತುಂಬಾ ಫನ್ನಿಯಾಗಿ ಮಾತನಾಡಿದ್ದು. ಇನ್ನೊಂದು ಅವರೇ (ಪ್ರಶಾಂತ್ ಸಂಬರಗಿ) ಹೇಳಿದ್ದಾರೆ.. ಗರ್ಲ್ಫ್ರೆಂಡ್ಸ್ ಕೊಟ್ಟ ಗಿಫ್ಟ್ ಬಗ್ಗೆ ಎಲ್ಲಾ. ಅವರು ಅಷ್ಟು ಓಪನ್ ಆಗಿ ಹೇಳಿದ್ಮೇಲೆ ನನಗೇನೂ ತಪ್ಪು ಅನಿಸಲಿಲ್ಲ. ನನಗೆ ಆಸೆ ಇದ್ಯಾ ಇಮೇಜ್ ಡ್ಯಾಮೇಜ್ ಮಾಡೋಕೆ ಎಂದಿದ್ದಾರೆ.



