ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿ, ಗುರುತಿಸಿಕೊಂಡಿರುವವರು ನಟಿ ಶೋಭಾ ಶೆಟ್ಟಿ. ಕಳೆದ ವರ್ಷ ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು, ಜೋರಾಗಿಯೇ ಹವಾ ಸೃಷ್ಟಿಸಿದ್ದರು, ಜಗಳದಿಂದಲೇ ಹೆಚ್ಚು ಫೇಮಸ್ ಆಗಿದ್ದರು. ಶೋಭಾ ಶೆಟ್ಟಿ ಅವರು ಕನ್ನಡಕ್ಕೆ ಬಂದರು ಸಹ ಇದೇ ರೀತಿ ಬಹಳ ಸ್ಟ್ರಾಂಗ್ ಆಗಿ ಇರುತ್ತಾರೆ ಎಂದು ಎಲ್ಲಾ ಅಭಿಮಾನಿಗಳು ಕೂಡ ಭಾವಿಸಿದ್ದರು. ಆದರೆ ಯಾಕೋ ಶೋಭಾ ಶೆಟ್ಟಿ ಅವರು ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳಲಿಲ್ಲ. ಎರಡೇ ವಾರಕ್ಕೆ ತಮ್ಮಿಂದ ಬಿಗ್ ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿ, ಕಣ್ಣೀರು ಹಾಕಿ, ಸೆಲ್ಫ್ ಎಲಿಮಿನೇಟ್ ಆಗಿ ಹೊರಬಂದರು.

ಶೋಭಾ ಶೆಟ್ಟಿ ಅವರು ಹೊರಬಂದಿದ್ದು, ಆರೋಗ್ಯದ ಕಾರಣ ಕೊಟ್ಟು. ಆದರೆ ಅಸಲಿ ವಿಚಾರ ಏನು? ಶೋಭಾ ಶೆಟ್ಟಿ ಅವರು ನಿಜಕ್ಕೂ ಹೊರಬಂದಿದ್ದು ಯಾಕೆ? ಈ ವಿಚಾರದ ಬಗ್ಗೆ ಆಗಿರುವುದು ಏನು ಎಂದು ನೋಡುವುದಾದರೆ.. ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬಂದ ಎರಡರಿಂದ ಮೂರು ದಿನಗಳ ಕಾಲ ಬಹಳ ಸ್ಟ್ರಾಂಗ್ ಆಗಿ, ಎಲ್ಲರೊಡನೆ ವಾದ, ವಿವಾದ ಮಾಡುತ್ತಾ ತುಂಬಾ ಚೆನ್ನಾಗಿದ್ದರು, ಸ್ಪರ್ಧಿಗಳ ಮುಖವಾಡ ಕಳಚುತ್ತೇನೆ ಎಂದು ಬಹಳ ಜೋರಾಗಿಯೂ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಶೋಭಾ ಅವರಲ್ಲಿ ಆ ಫೋರ್ಸ್ ಹಾಗೂ ಸ್ಟ್ರಾಂಗ್ ನೆಸ್ ಉಳಿದುಕೊಳ್ಳಲಿಲ್ಲ. ವೀಕ್ ಆಗುತ್ತಾ, ಸೈಲೆಂಟ್ ಆಗುತ್ತಾ ಹೋದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!1
ಎಲಿಮಿನೇಟ್ ಆಗುವ ದಿವಸ ಸಹ ಶೋಭಾ ಅವರು ಮೊದಲೇ ಸೇವ್ ಆಗಿದ್ದರು. ಅಂದು ಬಾಟಮ್ 2 ನಲ್ಲಿ ಇದ್ದದ್ದು ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ. ಅವರಿಬ್ಬರಲ್ಲಿ ಎಲಿಮಿನೇಟ್ ಆಗೋದು ಯಾರು ಎಂದು ಸುದೀಪ್ ಅವರು ಹೇಳುವ ಮೊದಲೇ, ಶೋಭಾ ಶೆಟ್ಟಿ ಅವರು ತಮಗೆ ಬಿಗ್ ಬಾಸ್ ಮನೆಯೊಳಗೆ ಇರಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿ, ತಮಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿ, ತಮಗೆ ಮನೆಯಿಂದ ಹೊರ ಹೋಗಬೇಕು ಅನ್ನಿಸುತ್ತಿದೆ ಎಂದು ಹೇಳಿದರು. ಕಿಚ್ಚ ಸುದೀಪ್ ಅವರು ವೋಟ್ ಮಾಡಿದ ಜನರಿಗೆ ಮೋಸ ಮಾಡಲು ಆಗುವಿದಿಲ್ಲ ಎಂದು ಹೇಳಿದರು. ಆದರೆ ಆಳುತ್ತಿದ್ದ ಶೋಭಾ ಶೆಟ್ಟಿ ಅವರು ತಮ್ಮ ಆರೋಗ್ಯ ಸಪೋರ್ಟ್ ಮಾಡುತ್ತಿಲ್ಲ ಎಂದರು.

ಮನೆಯಲ್ಲಿದ್ದು ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳೋಕೆ ಆಗುತ್ತಿಲ್ಲ ಅನ್ನಿಸುತ್ತಿದೆ, ನನಗೆ ಹೋಗಬೇಕು ಅನ್ನಿಸುತ್ತಿದೆ ಎಂದು ಹೇಳಿದರು. ಕೊನೆಗೆ ಸುದೀಪ್ ಅವರು ನಿಮಗೆ ಇರೋಕೆ ಇಷ್ಟ ಇಲ್ಲ ಅಂದ್ರೆ ಬೇಡ ಎಂದು ಹೇಳಿ, ಮೇನ್ ಗೇಟ್ ಓಪನ್ ಮಾಡಿಸಿ ಹೊರಹೋಗಲು ಹೇಳಿದರು, ಹಾಗೆಯೇ ಸುದೀಪ್ ಅವರು ವೀಕ್ಷಕರಲ್ಲಿ ಕ್ಷಮೆ ಕೂಡ ಕೇಳಿದರು. ಇನ್ನು ಶೋಭಾ ಶೆಟ್ಟಿ ಅವರು ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಅವರ ಆರೋಗ್ಯದ ಸಮಸ್ಯೆ ಎಂದು ಹೇಳಿದರು. ನಿಜಕ್ಕೂ ಶೋಭಾ ಅವರಿಗೆ ಆರೋಗ್ಯ ಸಮಸ್ಯೆ ಇದ್ದಿದ್ದಂತೂ ನಿಜ. ಶೋಭಾ ಶೆಟ್ಟಿ ಅವರು ಟಾಸ್ಕ್ ಮಾಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು..
ಆ ನೋವು ಅವರಿಗೆ ಹೆಚ್ಚಾಗಿ ಜೆದ್ದ ಕಾರಣ, ಶೋಭಾ ಅವರು ಮತ್ತೆ ಅಲ್ಲಿದ್ದು ಟಾಸ್ಕ್ ಮಾಡುವುದಕ್ಕೆ ಅವರ ಕಾಲು ಸಪೋರ್ಟ್ ಮಾಡುತ್ತಿಲ್ಲ ಎಂದಿದ್ದಾರೆ. ಆರೋಗ್ಯದಲ್ಲಿ ಈ ಥರದ ಸಮಸ್ಯೆಗಳು ಇದ್ದ ಕಾರಣ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯೊಳಗೆ ಇರಲು ಆಗುವುದಿಲ್ಲ ಎಂದು ಹೇಳಿ, ಕಣ್ಣೀರು ಹಾಕುತ್ತಾ ಹೊರಬಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಒಂದು ಪತ್ರವನ್ನು ಸಹ ಬರೆದಿದ್ದು, ತಮ್ಮ ಅಭಿಮಾನಿಗಳನ್ನು ಬೇರೆ ಪ್ರಾಜೆಕ್ಟ್ ಮೂಲಕ ರಂಜಿಸುವುದಾಗಿ ಹೇಳಿದ್ದಾರೆ ಶೋಭಾ ಶೆಟ್ಟಿ. ಇವರು ಈ ಥರದ ಕಠಿಣ ನಿರ್ಧಾರ ತೆಗೆದುಕೊಂಡು ಸೆಲ್ಫ್ ಎಲಿಮಿನೇಟ್ ಆಗಿದ್ದು ಎಲ್ಲರಿಗೂ ನಿರಾಸೆ ಆಗಿದೆ. ಮುಂದೆ ಹೊಸ ನಿರ್ಧಾರವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.



