ನಟಿ ಜೂಹಿ ಚಾವ್ಲಾ ಭಾರತ ಚಿತ್ರರಂಗದ ದೊಡ್ಡ ಕ್ರಶ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಅತಿದೊಡ್ಡ ಬ್ಯೂಟಿ ಪೆಜೇಂಟ್ ಗೆದ್ದ ಜೂಹಿ ಚಾವ್ಲಾ ಅವರು ನಟನೆ ಶುರು ಮಾಡಿದ್ದು, ಕನ್ನಡ ಚಿತ್ರರಂಗದ ಮೂಲಕ. ವಿ. ರವಿಚಂದ್ರನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಪ್ರೇಮಲೋಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಜೂಹಿ ಚಾವ್ಲಾ ಅವರು ನಟನೆ ಶುರು ಮಾಡಿದರು. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ಸಹ ನಟಿಸಿದರು. ಆದರೆ ಜೂಹಿ ಚಾವ್ಲಾ ಅವರು ಬಾಲಿವುಡ್ ನಲ್ಲಿ ಹೆಚ್ಚು ಸಕ್ರಿಯವಾದ ಜೂಹಿ ಚಾವ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದರು.

ಶಾರುಖ್ ಖಾನ್, ಆಮೀರ್ ಖಾನ್ ಅವರಿಂದ ಹಿಡಿದು ಬಾಲಿವುಡ್ ಸ್ಟಾರ್ ಹೀರೋಗಳು, ದಕ್ಷಿಣ ಭಾರತದ ಸ್ಟಾರ್ ಹೀರೋಗಳು ಎಲ್ಲರ ಜೊತೆಗೆ ತೆರೆಹಂಚಿಕೊಂಡು ಬಹುಬೇಡಿಕೆಯ ಸ್ಟಾರ್ ಹೀರೋಯಿನ್ ಆಗಿದ್ದ ಜೂಹಿ ಅವರು ಖ್ಯಾತ ಉದ್ಯಮಿ ಜಯ್ ಮೆಹ್ತಾ ಅವರೊಡನೆ ಮದುವೆಯಾದರು. ಇವರಿಬ್ಬರದ್ದು ಲವ್ ಮ್ಯಾರೇಜ್. ಆದರೆ ಮದುವೆಯಾಗಿ ಕೆಲವು ವರ್ಷಗಳ ವರೆಗು ಜೂಹಿ ಚಾವ್ಲಾ ಅವರು ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ತಮ್ಮ ಕೆರಿಯರ್ ಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಗೌಪ್ಯವಾಗಿ ಇಟ್ಟಿದ್ದರು. ಇವರಿಬ್ಬರ ಮದುವೆ 1995ರಲ್ಲೇ ನಡೆದು ಹೋಗಿತ್ತು.
ಜೂಹಿ ಚಾವ್ಲಾ ಅವರು ಜಯ್ ಮೆಹ್ತಾ ಅವರನ್ನು ಒಂದು ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಬಳಿಕ ಇವರಿಬ್ಬರ ನಡುವೆ ಸ್ನೇಹ ಶುರುವಾಗಿ, ನಂತರ ಪ್ರೀತಿ ಬೆಳೆಯಿತು. ಇಬ್ಬರೂ ಪ್ರೀತಿಸಿ 1995ರಲ್ಲಿ ಮದುವೆಯಾದರು. ಆದರೆ ಆಗಿನ ಸಮಯದಲ್ಲಿ ನಾಯಕಿಯರಿಗೆ ಮದುವೆಯಾಗಿ ಬಿಟ್ಟರೆ, ಸಿನಿಮಾ ಅವಕಾಶಗಳು ಸಿಗುವುದೇ ಕಡಿಮೆ ಆಗುತ್ತಿತ್ತು. ಆ ವೇಳೆ, ಜೂಹಿ ಅವರು ಕೆರಿಯರ್ ನ ಉತ್ತುಂಗದಲ್ಲಿ ಇದ್ದ ಕಾರಣಕ್ಕೆ ಅವರು ಮದುವೆಯಾದ ವಿಷಯವನ್ನು ಗುಟ್ಟಾಗಿಯೇ ಇಟ್ಟಿದ್ದರು. ಮೊದಲ ಮಗುವಿಗೆ ಗರ್ಭಿಣಿಯಾದ ನಂತರವೇ ಬಹಿರಂಗವಾಗಿ ಈ ವಿಷಯವನ್ನು ಜೂಹಿ ಚಾವ್ಲಾ ಅವರು ಹೇಳಿಕೊಂಡಿದ್ದು.

ಇನ್ನು ಇವರ ಪತಿ ಜಯ್ ಮೆಹ್ತಾ ಅವರ ಬಗ್ಗೆ ಹೇಳುವುದಾದರೆ, ಇವರೊಬ್ಬ ದೊಡ್ಡ ಉದ್ಯಮಿ. ಇವರ ಒಟ್ಟು ಆಸ್ತಿ 2600 ಕೋಟಿ ರೂಪಾಯಿ ಎನ್ನಲಾಗಿದ್ದು, 4600 ಕೋಟಿ ಮೌಲ್ಯದ ಬ್ಯುಸಿನೆಸ್ ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಇವರ ಸಂಸ್ಥೆಗಳಲ್ಲಿ ಸುಮಾರು 15,000 ಜನರು ಕೆಲಸ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಜೂಹಿ ಚಾವ್ಲಾ ಅವರು ಸಹ 4600 ಕೋಟಿ ಆಸ್ತಿಗೆ ಒಡತಿ ಆಗಿದ್ದಾರೆ. ನಟಿಯರು ಹೆಚ್ಚಾಗಿ ಉದ್ಯಮಿಗಳನ್ನು ಪ್ರೀತಿಸಿ ಮದುವೆ ಆಗುತ್ತಿದ್ದರು. ಜೂಹಿ ಚಾವ್ಲಾ ಅವರದ್ದು ಸಹ ಅದೇ ಕೇಸ್. ಜಯ್ ಅವರಿಗೆ ಜೂಹಿ ಅವರು ಎರಡನೇ ಹೆಂಡತಿ.
ಜಯ್ ಮೆಹ್ತಾ ಅವರ ಮೊದಲನೇ ಹೆಂಡತಿ, ಪ್ಲೇನ್ ಕ್ರ್ಯಾಶ್ ನಲ್ಲಿ ಮರಣ ಹೊಂದಿದರು. ಬಳಿಕ ಜೂಹಿ ಚಾವ್ಲಾ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಗೆ ಮುದ್ದಾದ ಮಕ್ಕಳು ಕೂಡ ಇದ್ದಾರೆ. ಜೂಹಿ ಚಾವ್ಲಾ ಅವರು ಐಪಿಎಲ್ ನಲ್ಲಿ ಕೆಕಆರ್ ತಂಡದ ಕೋ ಓನರ್ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ 2024ರಲ್ಲಿ ಹರುನ್ ಇಂಡಿಯಾ ಭಾರತದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿತು, ಅದರಲ್ಲಿ ಜೂಹಿ ಚಾವ್ಲಾ ಅವರ ಹೆಸರು ಕೂಡ ಇತ್ತು ಎನ್ನುವುದು ವಿಶೇಷ. ಒಟ್ಟಿನಲ್ಲಿ ಜೂಹಿ ಚಾವ್ಲಾ ಅವರು ಒಳ್ಳೆಯ ಜೀವನವನ್ನೇ ಕಟ್ಟಿಕೊಂಡಿದ್ದಾರೆ.