ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಕೀರ್ತಿ ಸುರೇಶ್ ಸಹ ಒಬ್ಬರು. ಇವರನ್ನು ಎಲ್ಲರೂ ಮಹಾನಟಿ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣ 2018ರಲ್ಲಿ ಇವರು ಅಭಿನಯಿಸಿದ ಮಹಾನಟಿ ಸಿನಿಮಾ. 50 ಮತ್ತು 60ರ ದಶಕದ ವೇಳೆ ದಕ್ಷಿಣ ಭಾರತ ಚಿತ್ರರಂಗದ ಅತಿದೊಡ್ಡ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಅದ್ಭುತ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ ಇದಾಗಿತ್ತು, ಸಾವಿತ್ರಿ ಅವರ ಪಾತ್ರದಲ್ಲಿ ಕೀರ್ತಿ ಸುರೇಶ್ ಅವರು ಇಂದಿಗೂ ಮರೆಯದಂಥ ಪರ್ಫಾರ್ಮೆನ್ಸ್ ನೀಡಿ, ಆ ಪಾತ್ರಕ್ಕೆ ನ್ಯಾಶನಲ್ ಅವಾರ್ಡ್ ಕೂಡ ಪಡೆದುಕೊಂಡರು.

ಅಲ್ಲಿಂದ ಕೀರ್ತಿ ಸುರೇಶ್ ಅವರು ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಿದರು ಸಹ, ಯಾವುದೇ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸನ್ನು ತಂದುಕೊಡಲಿಲ್ಲ. ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಹೆಚ್ಚಾಗಿ ಮಹಿಳಾ ಆಧಾರಿತ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದರು, ಕಥೆ ಅಷ್ಟೇನು ಚೆನ್ನಾಗಿಲ್ಲದ ಕಾರಣ ಸಿನಿಮಾಗಳು ಯಶಸ್ಸು ಕಾಣಲಿಲ್ಲ. ಬಳಿಕ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಈಗ ಬಾಲಿವುಡ್ ಗೆ ಕೂಡ ಎಂಟ್ರಿ ಕೊಡುತ್ತಿದ್ದಾರೆ ಕೀರ್ತಿ ಸುರೇಶ್. ತಮಿಳಿನ ತೆರಿ ಸಿನಿಮಾ ರಿಮೇಕ್ ನಲ್ಲಿ ಕೀರ್ತಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ..
ಅಷ್ಟೇ ಅಲ್ಲದೇ ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಜೊತೆಗೆ ರಘುತಾತ ಎನ್ನುವ ಸಿನಿಮಾದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡರು. ಈ ಸಿನಿಮಾಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಬಂದಿತು. ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಇರುವ ಕೀರ್ತಿ ಸುರೇಶ್ ಅವರು ಮದುವೆಗೆ ರೆಡಿ ಆಗಿದ್ದಾರೆ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಒಂದು ಸುದ್ದಿ, ಈಗ ಬಹಳ ವೈರಲ್ ಆಗಿದೆ. ಅದು ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರೊಡನೆ ಕೀರ್ತಿ ಸುರೇಶ್ ಹಸೆಮಣೆ ಏರುತ್ತಾರೆ ಎನ್ನುವ ವಿಷಯ ವೈರಲ್ ಆಗುತ್ತಿದ್ದು, ಈ ಬಗ್ಗೆ ಕೀರ್ತಿ ಸುರೇಶ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಾನು ಹಾಗೂ ಅನಿರುದ್ಧ್ ಒಳ್ಳೆಯ ಸ್ನೇಹಿತರು ಅಷ್ಟೇ, ನಮ್ಮಿಬ್ಬರ ನಡುವೆ ಪ್ರೀತಿ ಇಲ್ಲ. ಅವರೊಡನೆ ನನ್ನ ಮದುವೆ ಅನ್ನೋದೆಲ್ಲಾ ಸುಳ್ಳು ಸುದ್ದಿಗಳು ಅಷ್ಟೇ ಎಂದು ಕೀರ್ತಿ ಸುರೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಇವರಿಬ್ಬರ ಬಗ್ಗೆ ಈ ಥರದ ಗಾಸಿಪ್ ಬರೋದಕ್ಕೆ ಒಂದು ಕಾರಣ ಇದೆ. ಕೀರ್ತಿ ಸುರೇಶ್ ಹಾಗೂ ಅನಿರುದ್ಧ್ ಇಬ್ಬರು ಸಹ ಹಲವು ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು, ಪಾರ್ಟಿಯಲ್ಲಿ ಇವರಿಬ್ಬರ ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಕಾರಣಕ್ಕೆ ಇವರಿಬ್ಬರ ನಡುವೆ ಪ್ರೀತಿ ಇದೆ, ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಆದರೆ ಅದ್ಯಾವುದು ನಿಜವಲ್ಲ ಎಂದು ಕೀರ್ತಿ ಸುರೇಶ್ ಸ್ಪಷ್ಟನೆ ಕೊಟ್ಟಿದ್ದು ಆಗಿದೆ. ಇನ್ನು ಅನಿರುದ್ಧ್ ಅವರು ಸಹ ಈಗ ಕೆರಿಯರ್ ನ ಉತ್ತುಂಗದಲ್ಲಿ ಇದ್ದಾರೆ ಎಂದರೆ ತಪ್ಪಲ್ಲ. ಇವರು ಸಂಗೀತ ನಿರ್ದೇಶನ ಮಾಡಿದ ರಜನಿಕಾಂತ್ ಅವರ ಜೈಲರ್ ಸಿನಿಮಾ, ಇತ್ತೀಚೆಗೆ ತೆರೆಕಂಡ ವೇಟೈಯನ್ ಸಿನಿಮಾ ಎಲ್ಲವೂ ಸೂಪರ್ ಹಿಟ್ ಆಗಿದೆ. ಇನ್ನು ಅನಿರುದ್ಧ್ ಅವರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದ್ದು, ಮದುವೆ ಆಗೋ ಹುಡುಗಿ ಕೀರ್ತಿ ಸುರೇಶ್ ಅವರಲ್ಲ ಎಂದಮೇಲೆ, ಇನ್ಯಾರ ಜೊತೆಗೆ ಮದುವೆ ಆಗುತ್ತಾರೆ ಎಂದು ಕಾದು ನೋಡಬೇಕಿದೆ.



