ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ. ಬಿಗ್ ಬಾಸ್ ಮೂಲಕ ಪರಿಚಯವಾಗಿದ್ದ ಈಕೆ ಅನಂತರ ಸುದ್ದಿಯಾಗಿದ್ದೆಲ್ಲವೂ ಬಟ್ಟೆಯಿಂದ. ವಿಚಿತ್ರ ಬಟ್ಟೆ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು, ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುವುದೇ ಈಕೆಯ ನಿತ್ಯದ ಕಾಯಕ. ಸದಾ ಬಟ್ಟೆಗಳಿಂದ ಸುದ್ದಿಯಾಗುವ ಉರ್ಫಿ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡಿ ಸುದ್ದಿಯಾಗಿದ್ದಾರೆ. ವ್ಯಕ್ತಿಯೊಬ್ಬನಿಗೆ ಉರ್ಫಿ ಬಾಯಿಗೆ ಬಂದಂತೆ ಬಯ್ದು ಮಂಗಳಾರತಿ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಉರ್ಫಿ ಜಾವೇದ್ ಯಾವಾಗಲೂ ವಿಚಿತ್ರ ಬಟ್ಟೆ ಧರಿಸುತ್ತಾಳೆ. ಆಕೆ ನಿನ್ನೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಪೂರ್ತಿ ಬೆನ್ನು ಕಾಣುವಂತೆ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಳು. ಇದನ್ನು ಕಂಡ ವ್ಯಕ್ತಿಯೊಬ್ಬ, ‘ನಿನ್ನ ಬೆನ್ನು ಕಾಣುತ್ತಿದೆ. ನೀನು ನಮ್ಮ ಸಂಸ್ಕೃತಿಗೆ ಮಾರಕ. ಇಂತಹ ಬಟ್ಟೆ ಯಾಕೆ ಧರಿಸುತ್ತೀಯಾ’ ಎಂದು ಪ್ರಶ್ನಿಸಿದ್ದ. ಇದರಿಂದ ಕೆರಳಿದ ಉರ್ಫಿ, ‘ನಾನು ಹೀಗೆ ಬಟ್ಟೆ ಧರಿಸುವುದರಿಂದ ನಿಂಗೆ, ನಿನ್ನಪ್ಪನಿಗೆ ಏನಾದರು ಪ್ರಾಬ್ಲಂ ಇದೆಯಾ’ ಎಂದು ಗಲಾಟೆ ಶುರು ಮಾಡಿದ್ದಾಳೆ.
ಉರ್ಫಿ ಹಾಗೂ ಆ ವ್ಯಕ್ತಿಯ ಗಲಾಟೆ ಹೆಚ್ಚಾಗುತ್ತಿರುವಂತೆ ಅಲ್ಲದ್ದ ಜನರು ಅವರಿಬ್ಬರನ್ನು ಸಮಾದಾನ ಪಡಿಸಿದ್ದಾರೆ.ಇನ್ನೂ ಕೆಲವರು ವಿಡಿಯೋ ಮಾಡಿದ್ದಾರೆ. ಇದನ್ನು ಕಂಡು ಉರ್ಫಿ ವಿಡಿಯೋ ಮಾಡದಂತೆ ಒತ್ತಾಯಿಸಿದರೂ ಕೇಳದೆ, ವಿಡಿಯೋ ಮಾಡಿದವರು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಸದ್ಯ, ಉರ್ಫಿಯ ಗಲಾಟೆ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಕ್ಕೆ ಸಕ್ಕತ್ ವೈರಲ್ ಆಗುತ್ತಿದೆ.



