ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗವನ್ನು ತಿರುಗಿನೋಡುವಂತೆ ಮಾಡಿದವರು. ಯಶ್ ಕನ್ನಡ ಚಿತ್ರರಂಗಕ್ಕೆ 2002ರಲ್ಲಿ ಜಂಭದ ಹುಡುಗಿ ಎಂಬ ಸಿನಿಮಾದ ಮೂಲಕ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು. ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ಅವರ ಎರಡನೆಯ ಚಿತ್ರವಾದ ಮೊಗ್ಗಿನ ಮನಸು ಸಿನಿಮಾದಲ್ಲಿ ಅವರು ರಾಧಿಕಾ ಪಂಡಿತ್ ಜೊತೆ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರವು ಅತ್ಯಂತ ಯಶಸ್ಸು ಗಳಿಸಿತು ಮತ್ತು ಅವರಿಗೆ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ಮೊದಲ ಸಲ, ಕಿರಾತಕ, ಡ್ರಾಮ, ಗೂಗ್ಲಿ, ರಾಜಾ ಹುಲಿ, ಗಜಕೇಸರಿ, ಮುಂತಾದ ಹಲವು ಸಿನಿಮಾದಲ್ಲಿ ನಾಯಕನ ಪಾತ್ರವನ್ನು ನಿಭಾಯಿಸಿದ್ದಾರೆ ಹಾಗೂ ಯಶಸ್ಸನ್ನೂ ಗಳಿಸಿದ್ದಾರೆ.

ಇದೀಗ ಯಶ್ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಸಂದೇಶ ಎಲ್ಲಾ ಕಡೆ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಸುದ್ದಿ ಮಾಡುತ್ತಿದೆ. ನಟ ಯಶ್ ನನ್ನು ದೊಡ್ಡ ತೆರೆಯ ಮೇಲೆ ನೋಡಬೇಕು ಎಂದು ಅಸೆ ಇಟ್ಟುಕೊಂಡಿದ್ದ ಅಭಿಮಾನಿಗಳೇ ಹೀಗೊಂದು ಸಂದೇಶ ತಯಾರಿಸಿ ಸೋಶಿಯಲ್ ಮೀಡಿಯಾ ದಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ವೈರಲ್ ಆಗಿದ್ದು ಜನರಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಯಶ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಕೆಜಿಎಫ್ 2 ಸಿನಿಮಾದ ಬಳಿಕ ತನ್ನ ಹೊಸ ಸಿನಿಮಾವನ್ನು ಘೋಷಣೆ ಮಾಡ್ತೀನಿ ಅಂದಿದ್ದರು.
ಎರಡು ವರ್ಷ ಕಳೆದರೂ ಏನೂ ಅಪ್ಡೇಟ್ಸ್ ಬಾರದೆ ಇರುವ ಕಾರಣ ಅಭಿಮಾನಿಗಳು ಬೇಸತ್ತು ಹೀಗೊಂದು ಪೋಸ್ಟರ್ ಹರಿಯಬಿಟ್ಟಿದ್ದಾರೆ. ಅಭಿಮಾನಿಗಳು ನಿರಾಸೆಯಿಂದ ಯಾರಾದರೂ ಯಶ್ ರವರನ್ನು ಬೇಗ ಕಾಂಟಾಕ್ಟ್ ಮಾಡಿ, ಬರೀ ಒಂದು ಸಿನಿಮಾ ಅನೌನ್ಸ್ ಮಾಡೋಕೆ ಎರಡು ವರ್ಷ ತೆಗೆದುಕೊಂಡರೆ ಹೇಗೆ. ಅಭಿಮಾನಿಗಳ ಫೀಲಿಂಗ್ ಜೊತೆ ಆಟ ಅಡ್ತ ಇದ್ದೀರಾ ಎಂದು ಕೇಳಿ ಎಂದು ಬರೆದುಕೊಂಡಿದ್ದಾರೆ. ಎಲ್ಲಾ ನಟರು ತಮ್ಮ ಸಿನಿಮಾದ ಅಪ್ಡೇಟ್ಸ್ ಗಳನ್ನು ತೆಗೆದುಕೊಂಡು ಎಂಜಾಯ್ ಮಾಡುತ್ತಿರುವಾಗ ನೀವು ಇನ್ನೂ ಸಿನಿಮಾನೆ ಅನೌನ್ಸ್ ಮಾಡಿಲ್ಲ. ಎಲ್ಲಾ ಬಿಟ್ಟು ಚಿಕ್ಕ ಹಿಂಟ್ ಕೂಡಾ ಬಿಟ್ಟು ಕೊಟ್ಟಿಲ್ಲ. ಹೀಗಾದರೆ ನಿಮ್ಮ ಅಭಿಮಾನಿಗಳ ಕಥೆ ಏನು “ಎಂದು ಬರೆಯಲಾಗಿದೆ.
ಈ ಸಂದೇಶವನ್ನು ಯಾರೋ ಯಶ್ ನ ಡೈ ಹಾರ್ಡ್ ಫ್ಯಾನ್ ಏ ಬರೆದಿರಬಹುದು ಎಂದು ಸುದ್ದಿಯಾಗಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಮೇಲಾಗಿದೆ. ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ನಂತರ ಕಳೆದ ಏಳು ವರ್ಷಗಳಲ್ಲಿ ಯಶ್ ನಟಿಸಿರುವುದು ಕೇವಲ ಎರಡು ಸಿನಿಮಾದಲ್ಲಿ ಮಾತ್ರ. ಅದೇ ಕೆಜಿಎಫ್ ಭಾಗ ಒಂದು ಮತ್ತು ಭಾಗ ಎರಡು. ಅದಾದ ಬಳಿಕ ಯಾವುದೇ ಸಿನಿಮಾದ ಬಗ್ಗೆ ಅಪ್ಡೇಟ್ಸ್ ಬಂದಿಲ್ಲ ಎಂದು ಅಭಿಮಾನಿಗಳು ಸಹಜವಾಗಿಯೇ ಬೇಸರ ವ್ಯಕ್ತ ಪಡಿಸಿದ್ದಾರೆ. ಅಪ್ಡೇಟ್ಸ್ ಬಿಟ್ಟು ಕೊಡದೆ ಇದ್ದರೂ ಯಶ್ ಯಾವುದೋ ಸಿನಿಮಾದಲ್ಲಿ ಬ್ಯುಸಿ ಆಗಿರುವುದು ಮಾತ್ರ ನಿಜ.
ಮಲೇಷ್ಯಾ ಭೇಟಿ ಸಂದರ್ಭದಲ್ಲೂ ಯಶ್ ಈ ಬಗ್ಗೆ ಮಾತನಾಡಿದ್ದರು. ದೊಡ್ಡ ಸಿನಿಮಾ ಮಾಡದಿದ್ದರೂ ಒಂದೊಳ್ಳೆ ಕಥೆ ಮೂಲಕ ಜನರ ಮನ ಮುಟ್ಟುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಅವರ ಇನ್ನೊಂದು ಸಿನಿಮಾ ಬರಲಿದೆ ಎಂದು ಅಭಿಮಾನಿಗಳಲ್ಲಿ ಸಂತೋಷ ಮೂಡಿದೆ. ಯಶ್ರ ಮುಂದಿನ ಸಿನಿಮಾವನ್ನು ಹೆಂಗಸೊಬ್ಬರು ನಿರ್ದೇಶನ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸಿನಿಮಾವನ್ನು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಸಿನಿಮಾಕ್ಕೆ ವಿದೇಶಿ ಆಕ್ಷನ್ ಕೊರಿಯೋಗ್ರಾಫರ್ಗಳು ಕೆಲಸ ಮಾಡುವ ಸಾಧ್ಯತೆ ಇದೆ.



