ಅಮ್ಮ ಅನ್ನೋದು ಒಂದು ಪದ ಮಾತ್ರವಲ್ಲ, ಅಮ್ಮ ಅಂದ್ರೆ ಒಬ್ಬ ವ್ಯಕ್ತಿ ಮಾತ್ರ ಅಲ್ಲ, ಜೀವ ಕೊಟ್ಟು, ತುತ್ತು ಕೊಟ್ಟು ಸಾಕಿ ಬೆಳೆಸುವ ಕರುಣಾಮಯಿ. ಮಗುವಿನ ಪಾಲನೆ ಪೋಷಣೆ ಮಾಡಿ, ಓದಿಸಿ, ಬುದ್ಧಿ ಕಲಿಸಿ, ಪ್ರಪಂಚದಲ್ಲಿ ಬದುಕೋದು ಹೇಗೆ ಅಂತ ಕಲಿಸಿಕೊಡೋ ದೇವತೆ ಅಮ್ಮ. ಅಂಥ ತಾಯಿನೇ ನಮ್ಮಿಂದ ಶಾಶ್ವತವಾಗಿ ದೂರ ಆಗೋ ದಿನ ಬಂದಾಗ, ಮಕ್ಕಳಾದವರಿಗೆ ಎಂಥಾ ನೋವಾಗತ್ತೆ ಅಂತ ಊಹೆ ಮಾಡಿಕೊಳ್ಳೋದಕ್ಕೂ ಸಾಧ್ಯ ಆಗೋದಿಲ್ಲ. ಇಂದು ಅಂಥದ್ದೇ ಸಂದರ್ಭದಲ್ಲಿ ಇರುವವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು.
ಕೆಲ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 11ರ ವೀಕೆಂಡ್ ಪಂಚಾಯ್ತಿ ಎಪಿಸೋಡ್ ನಲ್ಲಿ ಖಡಕ್ ಆಗಿ ಮಾತನಾಡಿ, ಸ್ಪರ್ಧಿಗಳಿಗೆ ಬುದ್ಧಿ ಹೇಳಿದ್ದ ಕಿಚ್ಚ ಸುದೀಪ್ ಅವರು ಇಂದು ಅಮ್ಮನನ್ನ ಕಳೆದುಕೊಂಡು ಅತೀವವಾದ ದುಃಖದಲ್ಲಿ ಇರೋದನ್ನ ನೋಡೋದಕ್ಕೆ ಬಹಳ ಬೇಸರ ಆಗುತ್ತದೆ.

ಎಲ್ಲರ ಹಾಗೆ ಸುದೀಪ್ ಅವರಿಗು ತಾಯಿ ಅಂದ್ರೆ ಬೆಟ್ಟದಷ್ಟು ಪ್ರೀತಿ. ಸುದೀಪ್ ಅವರು ಇಂದು ಇಷ್ಟು ಎತ್ತರಕ್ಕೆ ಬೆಳೆದು, ಸಾಧನೆ ಮಾಡಿದ್ದಾರೆ ಅಂದ್ರೆ ಅಮ್ಮನ ಹಾರೈಕೆ, ಆಶೀರ್ವಾದ, ಮಾರ್ಗದರ್ಶನ ಬಹಳ ಮುಖ್ಯವಾಗಿ ಅವರೊಡನೆ ಇದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಅಂಥ ಅಮ್ಮನನ್ನ ಕಳೆದುಕೊಂಡ ಸುದೀಪ್ ಅವರು ಇಂದು ಕಣ್ಣೀರು ಹಾಕುತ್ತಾ, ಬೇಸರಲಿದ್ದಾರೆ. ಸುದೀಪ್ ಅವರನ್ನ ಹಾಗೂ ಅವರ ಕುಟುಂಬದವರನ್ನ ಸಂತೈಸಿ ಸಮಾಧಾನ ಮಾಡೋದಕ್ಕೆ ಚಿತ್ರರಂಗದವರು, ಸ್ನೇಹಿತರು ಹಾಗೂ ಸಂಬಂಧಿಗಳೆಲ್ಲರು ಅವರ ಮನೆಗೆ ಧಾವಿಸಿ ಬರುತ್ತಿದ್ದಾರೆ.
ತಾಯಿಯಿಲ್ಲದ ಆ ನೋವನ್ನು ಸಹಿಸುವ ಶಕ್ತಿಯನ್ನು ಆ ದೇವರೇ ಸುದೀಪ್ ಅವರಿಗೆ ಕೊಡಬೇಕು. ಹಳೆಯ ಸಂದರ್ಶನಗಳಲ್ಲಿ ಸುದೀಪ್ ಅವರ ತಾಯಿಯವರೇ ಹೇಳಿರುವ ಹಾಗೆ, ಮಗ ಎಲ್ಲೇ ಇದ್ದರೂ, ಯಾವುದೇ ಊರಿಗೆ ಶೂಟಿಂಗ್ ಗಾಗಿ ಹೋಗಿದ್ದರು, ಪ್ರತಿದಿನ ತಾಯಿಗೆ ಕರೆಮಾಡಿ ಮಾತಾಡೋದನ್ನ ಮರೀತಿರಲಿಲ್ಲ. ಪ್ರತಿದಿನ ವಿಡಿಯೋ ಕಾಲ್ ಅಥವಾ ಆಡಿಯೋ ಕಾಲ್ ಮಾಡಿ ಅಮ್ಮನ ಜೊತೆಗೆ ಮಾತಾಡಿ, ಅಮ್ಮನ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಅಷ್ಟು ಪ್ರೀತಿ ಮಾಡ್ತಿದ್ದ ತಾಯಿ ಇನ್ನಿಲ್ಲ ಅಂದ್ರೆ ಆ ಮಗನ ಜೀವಕ್ಕೆ ಹೇಗಾಗಿರಬೇಡ?
ಹುಟ್ಟಿದಾಗಿನಿಂದ ಹಾಲುಣಿಸಿ, ತುತ್ತು ಕೊಟ್ಟು, ಎತ್ತಿ ಆಡಿಸಿ, ಬೆಳೆಸಿ, ದೊಡ್ಡವನ್ನಾಗಿ ಮಾಡಿ, ಮಕ್ಕಳಿಂದ ಏನನ್ನು ಅಪೇಕ್ಷೆ ಪಡದೇ ಇರೋ ಆ ತಾಯಿ ಋಣಾನ ಆ ದೇವರಿಂದಲೂ ತೀರಿಸೋಕೆ ಸಾಧ್ಯವಿಲ್ಲ. ಕಿಚ್ಚ ಸುದೀಪ್ ಅವರಿಗೆ ಅಮ್ಮನ ಅಗಲಿಕೆ ಸಹಿಸೋ ಶಕ್ತಿಯನ್ನ ಆ ದೇವರೇ ಕೊಡಬೇಕು. ಇಂಥ ಸಮಯದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಎಲ್ಲರೂ ಸುದೀಪ್ ಅವರ ಜೊತೆಗೆ ನಿಲ್ಲಬೇಕು..



