ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಫ್ಯಾನ್ ಬೇಸ್ ಹೊಂದಿರುವ ನಟರಲ್ಲಿ ಶಾರುಖ್ ಖಾನ್ ಮತ್ತು ಯಶ್ ಸೇರುತ್ತಾರೆ. ಇವರಿಬ್ಬರು ಕೂಡ ಸೆಲ್ಫ್ ಮೇಡ್ ಸ್ಟಾರ್ಸ್ ಎಂದರೆ ತಪ್ಪಲ್ಲ. ಇಬ್ಬರು ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಹೆಸರು ಮಾಡಿ, ಗುರುತಿಸಿಕೊಂಡಿದ್ದಾರೆ. ಇಬ್ಬರ ನಡುವೆ ಪೈಪೋಟಿ ಇದೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಇದೀಗ ಮುಂಬೈನಲ್ಲಿ ಶಾರುಖ್ ಖಾನ್ ಅವರ ಮನೆಗೆ ಭೇಟಿ ನೀಡಿದ್ದಾರೆ ನಟ ಯಶ್. ಇವರಿಬ್ಬರ ಭೇಟಿ ಬಗ್ಗೆ ಬಿ ಟೌನ್ ಮಾತ್ರವಲ್ಲದೇ ಸೌತ್ ನಲ್ಲಿ ಕೂಡ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಇಬ್ಬರು ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

ನಟ ಯಶ್ ಅವರ ಟಾಕ್ಸಿಕ್ ಸಿನಿಮಾ ಅನೌನ್ಸ್ ಆಗಿ ಬಹಳಷ್ಟು ದಿನಗಳು ಕಳೆದಿದೆ, ಯಶ್ ಅವರ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಏಪ್ರಿಲ್ ಗೆ ಟಾಕ್ಸಿಕ್ ಸಿನಿಮಾ ತೆರೆ ಕಾಣಬೇಕಿತ್ತು, ಆದರೆ ಶೂಟಿಂಗ್ ಎಲ್ಲರೂ ತಡ ಆಗಿರುವ ಕಾರಣ, ಟಾಕ್ಸಿಕ್ ಸಿನಿಮಾ ತೆರೆಮೇಲೆ ಬರುವುದು ಕೂಡ ತಡವೆ ಆಗುತ್ತಿದೆ. ಟಾಕ್ಸಿಕ್ ಸ್ಟಾರ್ ಕ್ಯಾಸ್ಟ್ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ, ಸೌತ್ ಇಂಡಿಯಾ, ಬಾಲಿವುಡ್ ಸೇರಿದಂತೆ ಹಾಲಿವುಡ್ ನವರು ಸಹ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿದೆ ಟಾಕ್ಸಿಕ್, ಪ್ರಸ್ತುತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿರುವುದು ಮುಂಬೈನಲ್ಲಿ, ಹಾಗಾಗಿ ಯಶ್ ಅವರು ಹೆಚ್ಚಾಗಿ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್, ಯಶ್ ಹಾಗೂ ಮಕ್ಕಳೆಲ್ಲರು ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಯಶ್ ಅವರು ಸಧ್ಯಕ್ಕೆ ಅಲ್ಲೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಯಶ್ ಅವರು ಸಿನಿಮಾ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಬಾಲಿವುಡ್ ಬಾದ್ ಶಾ ಆಗಿರುವ ನಟ ಶಾರುಖ್ ಖಾನ್ ಅವರ ಮನೆ ಮನ್ನತ್ ಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಫಿಲ್ಮ್ ಫೇರ್ ಮ್ಯಾಗಜಿನ್ ನಲ್ಲಿ ವರದಿ ಮಾಡಲಾಗಿತ್ತು.

ಈ ಇಬ್ಬರು ಸ್ಟಾರ್ ಹೀರೋಗಳು ಇದ್ದಕ್ಕಿದ್ದಂತೆ ಭೇಟಿ ಆಗಿರುವುದು ಭಾರಿ ಕುತೂಹಲ ಮೂಡಿಸಿದೆ. ಏಕೆಂದರೆ ಇತ್ತೀಚೆಗೆ ವೇದಿಕೆ ಒಂದರಲ್ಲಿ ಯಶ್ ಅವರ ಬಗ್ಗೆ ಮಾತನಾಡಿದ್ದ ಶಾರುಖ್ ಖಾನ್ ಅವರು, ಯಶ್ ಅವರೇ ನೀವು ಬೇಗ ಒಂದು ಸಿನಿಮಾ ಮಾಡಿ, ನಾವೆಲ್ಲರು ನಿಮ್ಮ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದು ಹೇಳಿದರು. ಅದಾದ ಬೆನ್ನಲ್ಲೇ ಇಬ್ಬರೂ ಭೇಟಿಯಾಗಿದ್ದಾರೆ. ಇದರಿಂದ ಅಭಿಮಾನಿಗಳು ಇವರಿಬ್ಬರು ಜೊತೆಯಾಗಿ ಹೊಸ ಸಿನಿಮಾದಲ್ಲಿ ನಟಿಸುತ್ತಾರ ಎಂದು ಕುತೂಹಲದಿಂದ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ. ಆದರೆ ಇಬ್ಬರು ಕೂಡ ಭೇಟಿ ಆಗಿರುವ ಬಗ್ಗೆ ಸಹ ಎಲ್ಲಯು ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ.
ಹಾಗೆಯೇ ಇಬ್ಬರು 1000 ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ನಟರು ಜೊತೆಯಾಗಿ ಸಿನಿಮಾ ಮಾಡೋದು ಅಷ್ಟು ಸುಲಭ ಅಂತು ಅಲ್ಲ. ಇಬ್ಬರಿಗು ಸರಿ ಹೊಂದುವಂತೆ ಎಲ್ಲವೂ ಆಗಬೇಕುಮ್ ಅಭಿಮಾನಿಗಳು ಕನಸು ಕಾಣುತ್ತಿರುವ ಹಾಗೆ ಯಶ್ ಹಾಗೂ ಶಾರುಖ್ ಖಾನ್ ಇಬ್ಬರಿಗೂ ಒಪ್ಪುವಂಥ ಕಥೆ ಏನಾದರೂ ಸಿಕ್ಕಿದೆಯ ಎನ್ನುವ ಬಗ್ಗೆ ಮಾಹಿತಿ ಇಲ್ಲ. ರಾಮಾಯಣ ಸಿನಿಮಾದಲ್ಲಿ ಈಗಾಗಲೇ ಯಶ್ ಅವರು ನಟಿಸುತ್ತಿದ್ದು, ನಿರ್ಮಾಪಕ ಸಹ ಆಗಿದ್ದಾರೆ. ಇದರ ನಡುವೆಯೇ ಶಾರುಖ್ ಖಾನ್ ಅವರ ಜೊತೆಗೆ ಮತ್ತೊಂದು ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕರೆ, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ಒಟ್ಟಿನಲ್ಲಿ ಯಶ್ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.



