ಮೊನ್ನೆಯಷ್ಟೇ ನಮ್ಮ ಆರ್ಸಿಬಿ ತಂಡ ಐಪಿಎಲ್ ನಲ್ಲಿ ಕಪ್ ಗೆದ್ದಿತು. 18 ವರ್ಷಗಳ ಕಾಯುವಿಕೆ ನಂತರ ಬಂದ ಈ ಗೆಲುವು ಅಭಿಮಾನಿಗಳಲ್ಲಿ ಅತಿಹೆಚ್ಚು ಉತ್ಸಾಹವನ್ನು ತಂದಿತು. ಮೊನ್ನೆ ಅಹಮದಾಬಾದ್ ನಲ್ಲಿ ಪಂದ್ಯ ನಡೆದು ಕಪ್ ಗೆದ್ದ ನಂತರ, ನಿನ್ನೆ ಇಡೀ ತಂಡ ಬೆಂಗಳೂರಿಗೆ ಬಂದು ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು. ಓಪನ್ ಬಸ್ ಪರೇಡ್ ಎಲ್ಲವೂ ಪ್ಲಾನ್ ಆಗಿತ್ತು. ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು, ಆದರೆ ನಡೆದಿದ್ದೆ ಬೇರೆ. ಆರ್ಸಿಬಿಯ ಇಡೀ ತಂಡ ಬೆಂಗಳೂರಿಗೆ ಬಂದು, ತಾಜ್ ವೆಸ್ಟನ್ಡ್ ಹೋಟೆಲ್ ನಲ್ಲಿ ಇದ್ದು, ಮಧ್ಯಾಹ್ನದ ವೇಳೆಗೆ ವಿಧಾನಸೌಧ ತಲುಪಿತು. ಅಲ್ಲಿ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲರೂ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನಿಸಿದರು.
ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ನಂತರ ನಡೆದಿದ್ದೆ ದುರಂತ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನಸಾಗರವೇ ನೆರೆದಿತ್ತು. ಭಾರತದ ಎಲ್ಲೆಡೆ ಇಂದ ಅಭಿಮಾನಿಗಳು ಬಂದು, ಆಟಗಾರರನ್ನು ನೋಡಲು ಮತ್ತು ಕಪ್ ಅನ್ನು ಕಣ್ಣುತುಂಬಿಕೊಳ್ಳಲು ಕಾತುರರಾಗಿದ್ದರು, ಆದರೆ ನೂಕು ನುಗ್ಗಲಿನಲ್ಲಿ ದುರಂತವೇ ನಡೆದು ಹೋಯಿತು. ಸುಮಾರು 12 ಜನರು ಈ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡರು, 10 ಕ್ಕಿಂತ ಹೆಚ್ಚಿನ ಜನರು ಕೈಕಾಲು ಮುರಿದು ಕೊಂಡಿದ್ದಾರೆ, 50 ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಗಿವೆ. ಇದೆಲ್ಲವೂ ಆಗಿದ್ದಕ್ಕೆ ಕಾರಣ ಸರಿಯಾದ ವ್ಯವಸ್ಥೆ ಇಲ್ಲದೇ ಇದ್ದಿದ್ದು. ಹೌದು ಸರ್ಕಾರ ಆಗಲಿ, ಆರ್ಸಿಬಿ ಮ್ಯಾನೇಜ್ಮೆಂಟ್ ಆಗಲಿ ಅಭಿಮಾನಿಗಳು ಸ್ಟೇಡಿಯಂ ಗೆ ಬರುವ ಬಗ್ಗೆ ಸರಿಯಾದ ವ್ಯವಸ್ಥಿತ ಮಾರ್ಗವನ್ನು ನಿರ್ಮಿಸಲಿಲ್ಲ. ಎಲ್ಲರಿಗೂ ಉಚಿತ ಎಂಟ್ರಿ ಎಂದು ಹೇಳಿದ್ದು, ಜನರ ಖುಷಿಯನ್ನು ಹೆಚ್ಚಿಸಿತ್ತು..
ಲಕ್ಷಾಂತರ ಜನರು ಆರ್ಸಿಬಿ ತಂಡವನ್ನ ನೋಡಲು ಸ್ಟೇಡಿಯಂ ಬಳಿ ಬಂದಿದ್ದರು, ಆದರೆ ಯಾರಿಗೂ ಕೂಡ ಸರಿಯಾಗಿ ಹೋಗಲು ಆಗಲಿಲ್ಲ. ಸೆಲೆಬ್ರಿಟಿಗಳಿಗೆ ಕೂಡ ಸ್ಟೇಡಿಯಂ ಒಳಗೆ ಹೋಗುವುದಕ್ಕೆ ಕಷ್ಟವಾಗಿತ್ತು. ಅಲ್ಲಿನ ಭೀಕರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ನಿನ್ನೆ ಸ್ಟೇಡಿಯಂ ಗೆ ಹೋಗಲು ಪ್ರಯತ್ನ ಮಾಡಿದ ಚಂದನ್ ಶೆಟ್ಟಿ ಅವರು ತಿಳಿಸಿದ್ದಾರೆ. ಮಾಧ್ಯಮದ ಎದುರು ಮಾತನಾಡಿದ ಚಂದನ್ ಶೆಟ್ಟಿ ಅವರು ನಿನ್ನೆಯ ಘಟನೆ ಬಗ್ಗೆ ಬಹಳಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಂದನ್ ಶೆಟ್ಟಿ ಅವರು ಜೆಸಿ ರೋಡ್ ನಲ್ಲಿ ಕಾರ್ ಪಾರ್ಕ್ ಮಾಡಿ, ನಡೆದುಕೊಂಡೇ ಚಿನ್ನಸ್ವಾಮಿ ಸ್ಟೇಡಿಯಂ ವರೆಗು ತಲುಪಿದರಂತೆ. ಒಬ್ಬ ಆರ್ಸಿಬಿ ಫ್ಯಾನ್ ಆಗಿ ಸ್ಟೇಡಿಯಂ ಬಳಿ ಹೋಗಿದ್ದು, ಫ್ಯಾನ್ಸ್ ಜೊತೆಗೆ ಆರ್ಸಿಬಿ ಸ್ಲೋಗನ್ ಗಳನ್ನು ಜೋರಾಗಿ ಕೂಗುತ್ತಾ ಚಂದನ್ ಶೆಟ್ಟಿ ಕೂಡ ಹೋಗಿದ್ದಾರೆ. ಆದರೆ ಗೇಟ್ 10 ಬಳಿ ಹೋದಾಗ ಆಗಿದ್ದೇ ಬೇರೆ..

ಗೇಟ್ ಇನ್ನು 500 ಮೀಟರ್ ದೂರವಿದೆ ಎನ್ನುವಾಗಲೇ ಬಹಳಷ್ಟು ಜನ ಸೇರಿದ್ದರಂತೆ, ಜನರ ಮನಸ್ಥಿತಿ ಹೇಗಿತ್ತು ಎಂದರೆ ಅಲ್ಲಿ ಏನೇ ನಡೆದರು ತಾವು ಸ್ಟೇಡಿಯಂ ಒಳಗೆ ಹೋಗಬೇಕು ಎನ್ನುವುದು ಮಾತ್ರ ಆಗಿತ್ತು. ಪಕ್ಕದಲ್ಲೇ ಒಬ್ಬ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗುತ್ತಿದ್ದರು ಸಹ ಯಾರಿಗೂ ಅದರ ಬಗ್ಗೆ ಕಾಳಜಿ ಇಲ್ಲ, ಒಳಗೆ ಹೋಗಬೇಕು ಎಂದು ನೂಕಾಟ ನಡೆದಿತ್ತು ಎಂದು ಚಂದನ್ ಶೆಟ್ಟಿ ಅವರು ತಿಳಿಸಿದ್ದಾರೆ. ಚಂದನ್ ಶೆಟ್ಟಿ ಅವರು ಅಲ್ಲಿದ್ದಾಗ ಪ್ರಾಣ ಕಳೆದುಕೊಂಡಿದ್ದ ಒಬ್ಬ ವ್ಯಕ್ತಿಯ ದೇಹವನ್ನು ತೆಗೆದುಕೊಂಡು ಹೋಗುತ್ತಿದ್ದರು, ಇನ್ನೊಬ್ಬ ವ್ಯಕ್ತಿ ಉಸಿರಾಡುವುದಕ್ಕೆ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಆ ವ್ಯಕ್ತಿಗಳನ್ನು ಕರೆದುಕೊಂಡು ಹೋಗುತ್ತಿದ್ದು ಕೂಡ ಅಲ್ಲಿಗೆ ಬಂದ ಫ್ಯಾನ್ಸ್ ಗಳೇ ಆಗಿದ್ದರು. ವಾಲೆಂಟಿಯರ್ ಗಳಾಗಲಿ, ಅಥವಾ ಇನ್ಯಾರು ಕೂಡ ಅಲ್ಲಿ ಸಹಾಯಕ್ಕೆ ಇರಲಿಲ್ಲ ಎಂದು ತಿಳಿಸಿದ್ದಾರೆ.
ನಂತರ ಚಂದನ್ ಶೆಟ್ಟಿ ಅವರು ಗೇಟ್ 10 ಇಂದ ಗೇಟ್ 3 ಬಳಿ ಬಂದರಂತೆ. ಅಲ್ಲಿ ಕೂಡ ಇನ್ನಷ್ಟು ದುರಂತ ದೃಶ್ಯಗಳ ಬಗ್ಗೆ ತಿಳಿಸಿದ್ದಾರೆ. ಮಣಿಪುರ ಕಡೆಯ ಆರ್ಸಿಬಿ ಫ್ಯಾನ್ ಒಬ್ಬ ಹುಡುಗಿ, ಒಳಗೆ ಹೋಗಬೇಕು ಎನ್ನುವ ಪ್ರಯತ್ನದಲ್ಲಿದ್ದಾಗ, ಆಕೆ ಕೂಡ ಕಾಲ್ತುಳಿತಕ್ಕೆ ಸಿಕ್ಕಿಕೊಂಡಿದ್ದಾಳೆ. ಆಕೆಯ ಮೇಲೆ ತುಳಿದುಕೊಂಡು ಜನರು ಓಡಾಡಿದ್ದಾರೆ, ಆಕೆಯ ಹೊಟ್ಟೆಯ ಭಾಗ ದೇಹದ ಬೇರೆ ಭಾಗಗಳನ್ನು ತುಳಿದುಕೊಂಡು ಓಡಾಡಿದ್ದರಂತೆ. ಆಕೆ ಉಸಿರಾಡುವುದಕ್ಕೆ ಸಾಧ್ಯವಾಗದ ಕಾರಣ, ಆಕೆ ಅಳುತ್ತಿದ್ದಳಂತೆ. ಆಕೆಗೆ ಸಹಾಯ ಮಾಡುವುದಕ್ಕೆ ಕೂಡ ಯಾರು ಇರಲಿಲ್ಲ. ಅಲ್ಲಿಗೆ ಆಂಬ್ಯುಲೆನ್ಸ್ ಬರುವಷ್ಟು ಜಾಗ ಕೂಡ ಇರಲಿಲ್ಲ. ಹೀಗೆ ಅನೇಕ ಜನರು ನಿನ್ನೆ ನಡೆದ ಘಟನೆಯಲ್ಲಿ ಕಷ್ಟಪಟ್ಟಿದ್ದಾರೆ. ನೋವು ಅನುಭವಿಸಿದ್ದಾರೆ.
ಚಂದನ್ ಶೆಟ್ಟಿ ಅವರು ಈ ಬಗ್ಗೆ ಹೇಳಿ, ಇದೆಲ್ಲವೂ ಆಗಿರುವುದು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ತಿರುಪತಿ ಧರ್ಮಸ್ಥಳ ಈ ಎಲ್ಲಾ ದೇವಸ್ಥಾನಗಳಲ್ಲಿ ಅತಿಹೆಚ್ಚಿನ ಜನರು ಬಂದಾಗ ಅವರೆಲ್ಲರೂ ದೇವರ ದರ್ಶನ ಪಡೆಯುವುದಕ್ಕೆ ಒಳ್ಳೆಯ ವ್ಯವಸ್ಥೆ ಮಾಡಿರುತ್ತಾರೆ. ಬ್ಯಾರಿಕೆಡ್ ಗಳನ್ನು ಹಾಕಿ, ಯಾವ ದಿಕ್ಕಿನಲ್ಲಿ ಒಳಗೆ ಹೋಗಬೇಕು ಎಂದು ಡೈರೆಕ್ಷನ್ ಕೊಡುತ್ತಾರೆ. ಅದನ್ನು ಫಾಲೋ ಮಾಡಿಕೊಂಡು ಹೋದರೆ, ಯಾವುದೇ ಸಮಸ್ಯೆ ಆಗುವುದಿಲ್ಲ. ಇದು ಕೂಡ ಒಂದು ದೇವಸ್ಥಾನದ ರೀತಿ, ಆರ್ಸಿಬಿ ಫ್ಯಾನ್ಸ್ ಗೆ ಚಿನ್ನಸ್ವಾಮಿ ಸ್ಟೇಡಿಯಂ ಒಂದು ದೇವಸ್ಥಾನದ ಹಾಗೆ, ಪ್ಲೇಯರ್ ಗಳು ದೇವರು ಎಂದರೆ, ಅವರನ್ನು ನೋಡಲು ಬರುವವರಿಗೆ ಒಂದು ಸರಿಯಾದ ವ್ಯವಸ್ಥೆ ಮಾಡಬೇಕಿತ್ತು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಹಾಗೆಯೇ ಅಷ್ಟು ಜನ, ಆ ರೀತಿಯ ಕ್ರೇಜ್ ಕ್ರೌಡ್ ಅನ್ನು ತಮ್ಮ ಜೀವನದಲ್ಲೇ ನೋಡಿರಲಿಲ್ಲ ಎಂದಿದ್ದಾರೆ.
ನಿನ್ನೆ ನಡೆದ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ತನಿಖೆ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು 15 ದಿನಗಳಲ್ಲಿ ತನಿಖೆ ನಡೆಯಲಿದೆ. ನಿನ್ನೆ ನಡೆದ ಅವಘದಲ್ಲಿ ಮೃತವಾದ ಜನರ ಬದುಕಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಇನ್ನೇನು ಕೂಡ ಉಳಿದಿಲ್ಲ. ಅವರೆಲ್ಲರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಾವೆಲ್ಲರೂ ಕೂಡ ಪ್ರಾರ್ಥಿಸೋಣ..



