ಎಂ ಎಸ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿಯೇ ಚಿರಪರಿಚಿತ ಹೆಸರು. ಕ್ಯಾಪ್ಟನ್ ಕೂಲ್ ಯಾರು ಎಂದರೆ ಪುಟ್ಟ ಮಗು ಕೂಡಾ ಧೋನಿ ಹೆಸರನ್ನು ಹೇಳುತ್ತದೆ. ಚಿಕ್ಕವಯಸ್ಸಿನಿಂದಲೇ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಧೋನಿ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ತೋರಿಸುತ್ತಾ ಬಂದಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ತಂಡದ ಕ್ಯಾಪ್ಟನ್ ಆಗಿ ಸತತ ಐದನೇ ಬಾರಿ ಕಪ್ ಗೆಲ್ಲುವ ಮೂಲಕ ಫ್ಯಾನ್ಸ್ ಗಳ ಹೃದಯಯವನ್ನೂ ಗೆದ್ದಿದಾರೆ. ಇವರು ಮಾಡುವ ಒಳ್ಳೆ ಕೆಲಸಗಳಿಗೆ ಫ್ಯಾನ್ಸ್ ಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.

ಸದ್ಯ ಇತ್ತೀಚಿಗೆ ಧೋನಿ ತನ್ನ ಮನೆಯ ಸೆಕ್ಯೂರಿಟಿ ಗಾರ್ಡ್ ಗೆ ಬೈಕ್ ನಲ್ಲಿ ಲಿಫ್ಟ್ ಕೊಡುತ್ತಿರುವ ಫೋಟೋ ಒಂದು ತುಂಬಾನೇ ವೈರಲ್ ಆಗಿದೆ. ಇದನ್ನು ಕಂಡು ತಲಾ ಫ್ಯಾನ್ಸ್ ಫಿದಾ ಆಗಿದ್ದಾರೆ. “ಇರೋದು ಒಂದೇ ಹೃದಯ ಎಷ್ಟು ಸಲ ಗೆಲ್ಲುತ್ತೀರಾ” ಎಂಬ ಸಂತಸದ ಮಾತುಗಳನ್ನು ಕೂಡಾ ಫ್ಯಾನ್ಸ್ ವ್ಯಕ್ತ ಪಡಿಸಿದ್ದಾರೆ. ಧೋನಿ ಅವರಿಗೆ ಕ್ರಿಕೆಟ್ ಮೇಲಿರುವ ವ್ಯಾಮೋಹದಷ್ಟೇ ಬೈಕ್ ಮೇಲೂ ಇದೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಇವರ ಸಾಮಾಜಿಕ ಜಾಲತಾಣ.ಬೈಕ್ ರೈಡ್ ಮಾಡುವ ವಿಡಿಯೋ ಅಥವಾ ಫೋಟೋ ಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಫ್ಯಾನ್ಸ್ ಹಂಚಿಕೊಳ್ಳುತ್ತಿದ್ದರು.
ಆದರೆ ಈ ಬಾರಿ ತನ್ನ ಬೈಕ್ ಮೇಲೆ ಸೆಕ್ಯೂರಿಟಿ ಅನ್ನು ಕುಳ್ಳಿರಿಸಿಕೊಂಡು ಡ್ರಾಪ್ ಕೊಡಲು ಮುಂದಾಗಿದ್ದಾರೆ. ಇದರ ಫೋಟೋಗಳನ್ನು ಓರ್ವ ಫ್ಯಾನ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಅಷ್ಟು ದೊಡ್ಡ ಹೆಸರು ಮಾಡಿದ ವ್ಯಕ್ತಿ ಇಷ್ಟು ಸರಳವಾಗಿ ಇರಲು ಹೇಗೆ ಸಾಧ್ಯ ಎಂದು ಜನ ಕ್ಯಾಪ್ಟನ್ ಕೂಲ್ ಬಗ್ಗೆ ಪ್ರೀತಿಯ ಮಾತನ್ನಾಡಿದ್ದಾರೆ.
ಇನ್ನೇನು ಮೂರು ದಿನಗಳಲ್ಲಿ ಧೋನಿ ಅವರ ಹುಟ್ಟಿದ ಹಬ್ಬ. ಫ್ಯಾನ್ಸ್ ಗಳು ಆ ಸಂತೋಷದಲ್ಲಿದ್ದರೆ, ಧೋನಿ ತನ್ನ ಸರಳತೆಯನ್ನು ಮೆರೆಯುವ ಮೂಲಕ ಜನರಿಗೆ ಶಾಕ್ ನೀಡಿದ್ದಾರೆ. ಜುಲೈ 7ಕ್ಕೆ ಮಹೇಂದ್ರ ಸಿಂಗ್ ಧೋನಿ ತನ್ನ 42ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಜನ ಆ ದಿನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.



