ಕಳೆದ ವಾರ ಐಪಿಎಲ್ ಫೈನಲ್ಸ್ ನಲ್ಲಿ ಆರ್ಸಿಬಿ ಕಪ್ ಗೆದ್ದಿತು, ಇದು ನಮಗೆಲ್ಲಾ ಎಷ್ಟು ಸಂತೋಷ ತಂದ ವಿಷಯ ಅನ್ನೋದನ್ನ ವಿಶೇಷವಾಗಿ ವಿವರಿಸಿ ಹೇಳುವ ಅಗತ್ಯವೇ ಇಲ್ಲ. ಕರ್ನಾಟಕದಲ್ಲಿ ಇರುವ ಕನ್ನಡಿಗರು ಮಾತ್ರವಲ್ಲ, ವಿಶ್ವಾದ್ಯಂತ ಇರುವ ಕನ್ನಡಿಗರು ಈ ಗೆಲುವಿಗಾಗಿ ಕಾಯುತ್ತಿದ್ದರು. 18 ವರ್ಷಗಳ ಸತತ ಪರಿಶ್ರಮ, ಕಷ್ಟ, ನೋವು ಇವುಗಳ ಬಳಿಕ ಆರ್ಸಿಬಿ ತಂಡ ಕೊನೆಗೂ ಕಪ್ ಗೆದ್ದಿದ್ದು, ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಂತೆ ಆಗಿದ್ದಂತು ಸತ್ಯಾ. ಆ ದಿವಸ ಕಪ್ ಗೆದ್ದ ಕ್ಷಣ, ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲ, ದೆಹಲಿ, ಪುಣೆ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಎಲ್ಲೆಡೆ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದರು. ಮರುದಿನ ಬೆಂಗಳೂರಿನಲ್ಲಿ ಇಡೀ ತಂಡ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಆಸೆಯನ್ನು ಹೊಂದಿತ್ತು. ಆದರೆ ಆಗಿದ್ದು ಬೇರೆ.. ಯಾರು ಊಹಿಸದ ಘಟನೆ ನಡೆದು ಹೋಯಿತು..

ಹೌದು, ಆರ್ಸಿಬಿ ತಂಡ ವಿಧಾನಸೌಧದ ಎದುರು ಸಿಎಂ ಮತ್ತು ಡಿಸಿಎಂ ಇಂದ ಸನ್ಮಾನ ಮಾಡಿಸಿಕೊಂಡು, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ವೇಳೆ, ಅಥವಾ ಬಂದ ನಂತರ ನಡೆಯಿತು ದುರಂತಗಳು. ಸುಮಾರು 11 ಜನರು ಪ್ರಾಣ ಕಳೆದುಕೊಂಡರು, ಎಲ್ಲೆಡೆ ಜನ, ಕಾಲ್ತುಳಿತ ನಡೆಯಿತು. ಎಲ್ಲರಿಗೂ ಸ್ಟೇಡಿಯಂ ಒಳಗೆ ಹೋಗಬೇಕು ಎನ್ನುವ ಒಂದೇ ಆಸೆ ಇದ್ದಿದ್ದು, ಆದರೆ ಬೇರೆಯೇ ನಡದು ಹೋಯಿತು. ಈ ಘಟನೆ ಆದ ಬಳಿಕ ಹಲವರು ವಿರಾಟ್ ಕೊಹ್ಲಿ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೊಹ್ಲಿ ಅವರನ್ನು ಅರೆಸ್ಟ್ ಮಾಡಬೇಕು ಎಂದೆಲ್ಲ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಇದರ ಬಗ್ಗೆ ಈಗ ಸುಮಲತಾ ಅವರು ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿ ಅವರ ಪರವಾಗಿ ನಿಂತಿದ್ದಾರೆ. ಸುಮಲತಾ ಅವರ ಮಾತುಗಳಿಗೆ ಅಭಿಮಾನಿಗಳಿಂದ ಸಹ ಮೆಚ್ಚುಗೆ ಸಿಕ್ಕಿದೆ. ಸುಮಲತಾ ಅವರು ಬರೆದಿರುವುದು ಏನು ಎಂದರೆ..
“ಶಕ್ತಿ ಸರವಣನ್ ಅವರ ಫೇಸ್ಬುಕ್ನಲ್ಲಿನ ಈ ಕೆಳಗಿನ ಪೋಸ್ಟ್ ಆನ್ನು ಸಂಪೂರ್ಣವಾಗಿ ಒಪ್ಪುತ್ತೇನೆ… ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಕೋಪವನ್ನು ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ, ಒಂದು ದುರಂತ ಘಟನೆಯನ್ನು ಬಳಸಿಕೊಂಡು ಅವರನ್ನು ಟೀಕಿಸಲು, ಮೆದುಳು ಮತ್ತು ಆತ್ಮಸಾಕ್ಷಿಯನ್ನು ಪಡೆಯಲು ಮತ್ತು ಸಾಧ್ಯವಾದರೆ ಮೂಲಭೂತ ಸಾಮಾನ್ಯ ಜ್ಞಾನವನ್ನು ಪಡೆಯಲು ಪ್ರಯತ್ನಿಸಬೇಕು. ಸಾರ್ವಜನಿಕ ಸುರಕ್ಷತೆಯ ಏಕೈಕ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿದೆ, ಅವರು ಶೋಚನೀಯವಾಗಿ ವಿಫಲರಾಗಿದ್ದಾರೆ ಮತ್ತು ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಬದಲಾಗಿ ಅವರ ಅಪರಾಧವನ್ನು ಬಿಳಿಚಿಸುವ ಪ್ರಯತ್ನದಲ್ಲಿ ತಲೆಗಳನ್ನು ಬಲಿಪಶುಗಳಾಗಿ ಸುತ್ತಿಕೊಳ್ಳಲಾಗುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿಯೇ 11 ಅಮಾಯಕರ ಜೀವಗಳು ಬಲಿಯಾಗಿವೆ. ಮತ್ತು ಯಾವುದೇ ನ್ಯಾಯವಿದ್ದರೆ, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಇದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಈ ರೀತಿಯ ದುರಂತವನ್ನು ತಂಡ ಅಥವಾ ಆಟಗಾರರ ವಿರುದ್ಧ ಹೊರಹಾಕುವುದು ನಿಮ್ಮ ಅಜ್ಞಾನ ಅಥವಾ ಸಣ್ಣ ಮನಸ್ಸನ್ನು ಬಹಿರಂಗಪಡಿಸುತ್ತದೆ.
”ವಿರಾಟ್ ಕೊಹ್ಲಿ ವಿರುದ್ಧ ನಡೆಯುತ್ತಿರುವ ದ್ವೇಷ ಅಭಿಯಾನಕ್ಕೆ ಅವರು ಅರ್ಹರಲ್ಲ. ಆರ್ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ದುರಂತ ಕಾಲ್ತುಳಿತ ಘಟನೆಗೆ ವಿರಾಟ್ ಕೊಹ್ಲಿ ಮೇಲೆ ವ್ಯಕ್ತವಾಗುತ್ತಿರುವ ಕೋಪ ಮತ್ತು ದ್ವೇಷವನ್ನು ನೋಡಿ ನನಗೆ ಆಘಾತವಾಗಿದೆ ಮತ್ತು ಪ್ರಾಮಾಣಿಕವಾಗಿ ದುಃಖವಾಗಿದೆ.
ಸಂಭಾಷಣೆಯನ್ನು ಪ್ರಾರಂಭಿಸಿ…
ಆರ್ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ದುರಂತ ಕಾಲ್ತುಳಿತ ಘಟನೆಗೆ ವಿರಾಟ್ ಕೊಹ್ಲಿ ಮೇಲೆ ವ್ಯಕ್ತವಾಗುತ್ತಿರುವ ಕೋಪ ಮತ್ತು ದ್ವೇಷವನ್ನು ನೋಡಿ ನನಗೆ ಆಘಾತವಾಗಿದೆ ಮತ್ತು ಪ್ರಾಮಾಣಿಕವಾಗಿ ದುಃಖವಾಗಿದೆ. ಕೊಹ್ಲಿ ಜನಸಮೂಹವನ್ನು ಸಂಘಟಿಸಲಿಲ್ಲ, ಅವರು ಲಾಜಿಸ್ಟಿಕ್ಸ್ ಅನ್ನು ನಿಯಂತ್ರಿಸಲಿಲ್ಲ, ಮತ್ತು ಯಾವುದೇ ಹಾನಿ ಸಂಭವಿಸುವ ಉದ್ದೇಶವನ್ನು ಅವರು ಖಂಡಿತವಾಗಿಯೂ ಹೊಂದಿರಲಿಲ್ಲ. ಸಾವಿರಾರು ಅಭಿಮಾನಿಗಳಂತೆ ಅವರು ತಂಡದ ಪ್ರಯಾಣವನ್ನು ಆಚರಿಸಲು, ವರ್ಷಗಳಿಂದ ಆರ್ಸಿಬಿ ಜೊತೆ ನಿಂತ ಜನರೊಂದಿಗೆ ಸಂಪರ್ಕ ಸಾಧಿಸಲು ಅಲ್ಲಿಗೆ ಬಂದರು. ನಡೆದ ಘಟನೆಗೆ ಕೊಹ್ಲಿಯನ್ನು ದೂಷಿಸುವುದು ತಪ್ಪು ಭಾವನೆ. ಅದು ವ್ಯವಸ್ಥೆಯ ವೈಫಲ್ಯ.
ಕಳಪೆ ಜನಸಂದಣಿ ನಿರ್ವಹಣೆ, ಅಸಮರ್ಪಕ ಸುರಕ್ಷತಾ ಯೋಜನೆ ಮತ್ತು ಅಧಿಕಾರಿಗಳಿಂದ ನಿರೀಕ್ಷೆಯ ಕೊರತೆ. ಒಬ್ಬ ವ್ಯಕ್ತಿಯ ಕಡೆಗೆ ಬೆರಳು ತೋರಿಸುವುದು, ವಿಶೇಷವಾಗಿ ಈ ದೇಶಕ್ಕೆ ತುಂಬಾ ಸಂತೋಷ, ಹೆಮ್ಮೆ ಮತ್ತು ಸ್ಫೂರ್ತಿ ನೀಡಿದ ವ್ಯಕ್ತಿಯ ಕಡೆಗೆ ಬೆರಳು ತೋರಿಸುವುದು ಅನ್ಯಾಯ. ತನ್ನ ಅಭಿಮಾನಿಗಳಿಗೆ ಮಾತ್ರ ಪ್ರತಿಫಲ ನೀಡಲು ಬಯಸುವ ಆಟಗಾರನನ್ನು ಗುರಿಯಾಗಿಸಿಕೊಂಡು ದುಃಖವನ್ನು ದ್ವೇಷವಾಗಿ ಪರಿವರ್ತಿಸಬಾರದು. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ, ಆರೋಪ ಮಾಡುವ ಸಮಯವಲ್ಲ. ನಾವು ಉತ್ತಮರಾಗೋಣ. ಮನುಷ್ಯರಾಗೋಣ.” ಎಂದು ಸುಮಲತಾ ಅಂಬರೀಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ಒಂದು ಪೋಸ್ಟ್ ಗೆ ಆರ್ಸಿಬಿ ಫ್ಯಾನ್ಸ್ ಮತ್ತು ವಿರಾಟ್ ಫ್ಯಾನ್ಸ್ ಇಂದ ಬೆಂಬಲ ವ್ಯಕ್ತವಾಗುತ್ತಿದೆ.
ಸುಮಲತಾ ಅವರು ಸರಿಯಾಗಿಯೇ ಬರೆದಿದ್ದಾರೆ, ಇದರಲ್ಲಿ ಕೊಹ್ಲಿ ಅವರ ಯಾವ ತಪ್ಪು ಇಲ್ಲ, ಅವರ ಪಾತ್ರವೂ ಇಲ್ಲ. ಸರಿಯಾದ ಸುರಕ್ಷತೆ ಒದಗಿಸಬೇಕಾಗಿ ಇದ್ದಿದ್ದು ರಾಜ್ಯ ಸರ್ಕಾರದ ಜವಾಬ್ದಾರಿ, ಇಲ್ಲಿ ಸರ್ಕಾರ ವಿಫಲವಾಗಿ ಆಟಗಾರರ ಮೇಲೆ ಇಲ್ಲ ಸಲ್ಲದ ಅಪವಾದ ಬರುವ ಹಾಗೆ ಮಾಡಿದೆ. ವಿರಾಟ್ ಕೊಹ್ಲಿ ಅವರಿಗೆ ಬೆಂಗಳೂರು ಮತ್ತು ಅಭಿಮಾನಿಗಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಇದೆ. ಅವರನ್ನು ನಾವು ಕೂಡ ಗೌರವಿಸಬೇಕು ಎಂದು ಅಭಿಮಾನಿಗಳು ಸುಮಲತಾ ಅವರ ಪೋಸ್ಟ್ ಗೆ ಬೆಂಬಲ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿದೆ.



