ನಾವು ಟೀಂ ಇಂಡಿಯಾದ ಪಂದ್ಯಗಳನ್ನು ಯಾವ ಟಿವಿ ಚಾನೆಲ್ ಗಳಲ್ಲಿ ನೋಡಬಹುದು ಹಾಗೂ ಯಾವ ಆಪ್ ಗಳಲ್ಲಿ ಫ್ರೀಯಾಗಿ ನೋಡಬಹುದು ಎಂದು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇದರಲ್ಲಿ ಮೂರು ಸರಣಿಗಳು ಬೇರೆ ಬೇರೆ ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗುತ್ತದೆ, ಮುಂದೆ ಏಷ್ಯಾ ಕಪ್, ವರ್ಲ್ಡ್ ಕಪ್, ಏಷ್ಯನ್ ಗೇಮ್ಸ್, ಈ ರೀತಿ ವಿಭಿನ್ನವಾದ ಸರಣಿಗಳು ಬರಲಿವೆ. ಮೊದಲನೇಯದಾಗಿ ಇಂಡಿಯಾ ಐರ್ಲ್ಯಾಂಡ್ ಗೆ ಟೂರ್ ಮಾಡಲಿದೆ. ಈ ಸರಣಿ ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಮೂರು ಪಂದ್ಯಗಳ ಟಿ 20 ಸರಣಿ ನಡೆಯಲಿದೆ. ಇದರಲ್ಲಿ ಜಸ್ಪ್ರಿತ್ ಬೂಮ್ರ ನಾಯಕನಾಗಿ ಟೀಂಗೆ ವಾಪಸ್ ಮರಳಿದ್ದಾರೆ.

ಈ ಸರಣಿಯನ್ನು ನೀವು ನೋಡಲು ಸ್ಪೋರ್ಟ್ಸ್ 18 ಎಂಬ ಟಿವಿ ಚಾನೆಲ್ ನಲ್ಲಿ ನೀವು ನೋಡಬಹುದಾಗಿದೆ. ನೀವು ಫ್ರೀಯಾಗಿ ಮೊಬೈಲ್ ಆಪ್ ನಲ್ಲಿ ನೋಡುವುದಾದರೆ, ಜಿಯೋ ಸಿನಿಮಾದವರು ಐಪಿಎಲ್ ನಂತರ ವೆಸ್ಟ್ ಇಂಡೀಸ್ ಸರಣಿಯನ್ನು ಕೂಡ ಫ್ರೀಯಾಗಿ ತೋರಿಸಿದರು. ನಂತರ ಐರ್ಲ್ಯಾಂಡ್ ಸರಣಿಯನ್ನು ಕೂಡ ಜಿಯೋ ಸಿನಿಮಾದವರು ಫ್ರೀಯಾಗಿ ಪ್ರಸಾರ ಮಾಡುತ್ತಿದ್ದಾರೆ. ಅದರ ನಂತರ ಆಗಸ್ಟ್ 30ರಿಂದ ಏಷ್ಯಾ ಕಪ್ ಶುರುವಾಗಲಿದೆ. ಇದರಲ್ಲಿ ಏಷ್ಯಾದ ತಂಡಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ್ ಮತ್ತು ಅಫ್ಘಾನಿಸ್ಥಾನ ಬಾಗವಹಿಸಲಿದೆ.

ಈ ಸರಣಿಯ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಅವರು ಪಡೆದುಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನ ವಿವಿಧ ಭಾಷೆಗಳ ಟಿವಿ ಚಾನಲ್ ಗಳಲ್ಲಿ ಇದು ಪ್ರಸಾರವಾಗಲಿದೆ. ಆನ್ಲೈನ್ ನಲ್ಲಿ ನೋಡುವವರು ಹಾಟ್ ಸ್ಟಾರ್ ಆಪ್ ನಲ್ಲಿ ಫ್ರೀಯಾಗಿ ನೋಡಬಹುದಾಗಿದೆ. ಈ ಸಲ ಹಾಟ್ ಸ್ಟಾರ್ ನವರು ಏಷ್ಯಾ ಕಪ್ ಅನ್ನು ಪ್ರೀಯಾಗಿ ಪ್ರಸಾರ ಮಾಡುವುದಾಗಿ ಹೇಳಿಕೊಂಡಿದ್ದಾರೆ, ಅದರ ನಂತರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡ ಭಾಗವಹಿಸಲಿದೆ. ಋತುರಾಜ್ ಗಾಯಕ್ ವಾಡ್ ನನ್ನು ನಾಯಕ ನನ್ನಾಗಿ ಮಾಡಿ ಯಂಗ್ ಟೀಂ ಇಂಡಿಯಾವನ್ನು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಗೆ ಕಳುಹಿಸಲಾಗುತ್ತಿದೆ.
ಇದರ ಪ್ರಸಾರದ ಹಕ್ಕನ್ನು ಸೋನಿ ಟಿವಿ ನೆಟ್ವರ್ಕ್ ನವರು ಪಡೆದುಕೊಂಡಿದ್ದಾರೆ. ಈ ಸರಣಿಯನ್ನು ಸೋನಿ ಟಿವಿ ನೆಟ್ವರ್ಕ್ ಟಿವಿ ಚಾನೆಲ್ ನಲ್ಲಿ ನೋಡಬಹುದಾಗಿದೆ. ಜೊತೆಗೆ ಆನ್ಲೈನ್ ನಲ್ಲಿ ನೋಡುವುದಾದರೆ ಸೋನಿ ಲೀವ್ ಆಪ್ ನಲ್ಲಿ ನೋಡಬಹುದು. ಆದರೆ ಇದು ಫ್ರೀ ಇರುವುದಿಲ್ಲ, ಸಬ್ಸ್ಕ್ರಿಪ್ಸನ್ ತೆಗೆದುಕೊಳ್ಳಬೇಕಾಗುತ್ತದೆ, ಅದರ ನಂತರ 5 ಅಕ್ಟೋಬರ್ ರಿಂದ 19 ನವೆಂಬರ್ ತನಕ ಏಕದಿನ ವಿಶ್ವಕಪ್ ನಡೆಯಲಿದೆ . ಈ ಟೂರ್ನಮೆಂಟ್ ನ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್ ನ ವಿಭಿನ್ನ ಭಾಷೆಗಳ ಚಾನಲ್ ಗಳಲ್ಲಿ ಇದನ್ನು ನೋಡಬಹುದಾಗಿದೆ. ಆನ್ಲೈನ್ ನಲ್ಲಿ ನೋಡುವವರು ಹಾಟ್ ಸ್ಟಾರ್ ಆಪ್ ನಲ್ಲಿ ನೋಡಬಹುದು.



