ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಘಟನೆ ಇಡೀ ಕಾಂಗ್ರೆಸ್ ಗೆ ದೊಡ್ಡ ಡ್ಯಾಮೇಜ್ ಮಾಡಿದೆ. ಅದರಿಂದ ಹೊರ ಬರೋದಕ್ಕೆ ಏನೇನೋ ಕಸರತ್ತು ಮಾಡ್ತಿದೆ ಸರ್ಕಾರ. ಆದರೆ ಎಲ್ಲವೂ ಕೂಡ ಸರ್ಕಾರಕ್ಕೆ ಉಲ್ಟಾ ಹೊಡೆಯುತ್ತಿದೆ. ಅಧಿಕಾರಿಗಳ ತಲೆದಂಡ ಕೂಡ ಸರ್ಕಾರಕ್ಕೆ ಡ್ಯಾಮೇಜ್ ಆಗ್ತಾ ಇದೆ. ಈ ಮಧ್ಯೆ ಕಾಂಗ್ರೆಸ್ ಹೈ ಕಮಾಂಡ್ ಕೂಡ ರಾಜ್ಯ ನಾಯಕರ ವಿರುದ್ಧ ಭಾರೀ ಗರಂ ಆಗಿದೆ. ಅಷ್ಟೆ ಅಲ್ಲ ತುರ್ತು ಬುಲಾವ್ ನೀಡಿ ದೆಹಲಿಗೂ ಕರೆಸಿಕೊಂಡಿತ್ತು.
ಹೌದು ಸದ್ಯ ಕಾಲ್ತುಳಿತ ಪ್ರಕರಣ ಈಗಾಗಲೇ ಕಾಂಗ್ರೆಸ್ ನರಳುವಂತೆ ಮಾಡಿದೆ. ಇತ್ತ ಕಾಂಗ್ರೆಸ್ ವರಿಷ್ಠರು ಕೂಡ ಕೆರಳಿ ಕೆಂಡವಾಗಿದ್ದಾರೆ. ಸರ್ಕಾರದ ವೈಲ್ಯದಿಂದಲೇ ಘಟನೆ ನಡೆದಿದೆ ಅಂತಾ ಸಾರ್ವಜನಿಕವಾಗಿ ಚರ್ಚೆ ಹಾಗೂ ವಿರೋಧ ವ್ಯಕ್ತವಾಗ್ತಿದ್ದಂತೆ, ಸಿಎಂ ಡಿಸಿಎಂಗೆ ಹೈ ಕಮಾಂಡ್ ತುರ್ತು ಬುಲಾವ್ ನೀಡಿದ್ರು. ಇದ್ದಕ್ಕಿದ್ದಂತೆ ದೆಹಲಿಗೆ ತೆರಳಿದ ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ಗಾಂಧಿ, ಖರ್ಗೆ ಭೇಟಿ ಮಾಡಿ, ಕಾಲ್ತುಳಿತದ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿಗಳ ಮೇಲಿನ ಕ್ರಮದ ಬಗ್ಗೆಯೂ ವರದಿ ಒಪ್ಪಿಸಿದ್ದಾರೆ.

ಆರ್ ಸಿಬಿ ವಿಜಯೋತ್ಸವ ವೇಳೆ ಆದ ಕಾಲ್ತುಳಿತ ಘಟನೆ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಬೆಳಿಗ್ಗೆ ಒಂದೇ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಹೋಗಿ, ರಾಹುಲ್ ಗಾಂಧಿ, ಖರ್ಗೆ, ಸುರ್ಜೇವಾಲ, ಕೆ.ಸಿ ವೇಣುಗೋಪಾಲ ಜೊತೆ ನಿರಂತರ ಸಭೆ ನಡೆಸಿದ್ರು. ಕಾಲ್ತುಳಿತ ಪ್ರಕರಣ ಹೇಗೆ ಸಂಭವಿಸಿತು. ಯಾರು ಹೊಣೆ ಅನ್ನೋ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಕೊಟ್ಟಿದ್ದಾರೆ. ಕಾಲ್ತುಳಿತ ಘಟನೆಗೆ ಕೆಎಸ್ ಸಿಎ, ಆರ್ ಸಿಬಿ, ಡಿಎನ್ ಎ ಸಂಸ್ಥೆಗಳೇ ಕಾರಣ.. ಜೊತೆಗೆ ಪೊಲೀಸ್ ಅಧಿಕಾರಿಗಳ ವೈಫಲ್ಯವೂ ಇದೆ ಅಂತಾ ರಾಹುಲ್ ಗಾಂಧಿ ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.
ಪೋಲಿಸ್ ಇಲಾಖೆ ಸರಿಯಾದ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿಲ್ಲ. ಈ ಹಿನ್ನಲೆ ಪೋಲಿಸ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಘಟನೆ ಗೊತ್ತಾಗುತ್ತಿದ್ದಂತೆ ನಾನೆ ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ನಿಭಾಯಿಸಲು ಸೂಚಿಸಿದ್ದೆ ಅಂತಾ ದುರ್ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಧಾನಸೌಧದಲ್ಲಿ ಆಯೋಜನೆ ಮಾಡಿದ್ದು ಮಾತ್ರ ಸರ್ಕಾರ. ಅಲ್ಲಿ ಯಾವ ಅಹಿತಕರ ಘಟನೆ ಆಗಿಲ್ಲ ಅಂತಾನೂ ರಾಹುಲ್ ಗಾಂಧಿ ಹಾಗೂ ಖರ್ಗೆಗೆ ಹೇಳಿದ್ದಾರೆ. ಆದರೆ ತೀವ್ರವಾಗಿ ಗರಂ ಆದ ನಾಯಕರು ಇದನ್ನ ನಿಭಾಯಿಸೋಕೆ ಆಗಲಿಲ್ವಾ ಅಂತ ಇಬ್ಬರೂ ನಾಯಕರ ಮೇಲೆ ಗರಂ ಆಗಿರೋ ಘಟನೆ ಕೂಡ ನಡೆದಿದೆಯಂತೆ.

ಇನ್ನು ಕಾಲ್ತುಳಿತ ದುರ್ಘಟನೆ ನಡೆದಿದ್ರೂ ಡಿಸಿಎಂ ಡಿ.ಕೆ ಶಿವಕುಮಾರ್, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದ ವಿಚಾರವನ್ನೂ ರಾಹುಲ್ ಗಾಂಧಿ ಪ್ರಸ್ತಾಪಿಸಿ, ತರಾಟೆ ತೆಗೆದುಕೊಂಡಿದ್ದಾರೆ. ಘಟನೆ ಆದ್ಮೇಲೆ ಏನಕ್ಕೆ ಹೋಗಿದ್ರಿ. ಈ ವಿಚಾರವೂ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ ಅಂತಾ ಡಿಸಿಎಂಗೆ ಪ್ರಶ್ನೆ ಹಾಕಿದ್ರಂತೆ. ಅದಕ್ಕೆ ಘಟನೆಯ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ ಅಂತಾ ಸಿಎಂ ಸಬೂಬು ನೀಡಿದ್ದಾರೆ. ಪೋಲಿಸ್ ಅಧಿಕಾರಿಗಳು ಈ ಬಗ್ಗೆ ನನಗಾಗಲಿ ಸಿಎಂಗಾಗಲಿ ಮಾಹಿತಿಯನ್ನೇ ನೀಡಿಲ್ಲ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಟೇಡಿಯಂ ಕಾರ್ಯಕ್ರಮವನ್ನ ತಕ್ಷಣ ನಿಲ್ಲಿಸಿದ್ದೇವೆ ಅಂತಾ ರಾಹುಲ್ ಗಾಂಧಿಗೆ ಡಿಸಿಎಂ ಡಿಕೆಶಿ ಮಾಹಿತಿ ನೀಡಿದ್ರಂತೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಲಾಗುವುದು. ಜನಸಮೂಹ ನಿಯಂತ್ರಿಸಲು ಹೊಸ ಕಾಯ್ದೆ ತರ್ತೀವಿ ಅಂತಾ ರಾಹುಲ್ ಗೆ ಸಿಎಂ ಮನವರಿಕೆ ಮಾಡಿದ್ದಾರೆ. ರಾಹುಲ್ ಗಾಂಧಿ ಕೂಡ ಎಚ್ಚರಿಕೆ ನಿಭಾಯಿಸುಂತೆ ಸೂಚನೆ ನೀಡಿದ್ದಾರೆ.
:ಒಟ್ನಲ್ಲಿ ಕಾಲ್ತುಳಿತ ದುರಂತ ಸರ್ಕಾರದ ಇಮೇಜ್ ಗೆ ಕಳಂಕ ತಂದಿರೋದು ಮಾತ್ರವಲ್ಲದೇ, ಹೈಕಮಾಂಡ್ ಗೂ ಮುಜುಗರ ತಂದಿಟ್ಟಿದೆ. ಈ ಹಿನ್ನೆಯಲ್ಲಿ ಸಿಎಂ, ಡಿಸಿಎಂ ಅವ್ರನ್ನ ದೆಹಲಿಗೆ ಕರೆಸಿಕೊಂಡು ವರಿಷ್ಠರು ವರದಿ ಪಡೆದುಕೊಂಡಿದ್ದಾರೆ. ಮುಂದೆ ಇಂಥ ಘಟನೆಗಳು ಆಗಬಾರದು ಅಂತಾ ತಾಕೀತು ಮಾಡಿದ್ದಾರೆ. ಅಷ್ಟೆ ಅಲ್ಲ ಸರ್ಕಾರದ ವೈಪಲ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೈ ಕಮಾಂಡ್ ನಾಯಕರು.



