ಇತ್ತೀಚೆಗಷ್ಟೇ 69ನೇ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡದ ‘ಚಾರ್ಲಿ777’ ಸಿನಿಮಾ ಕೂಡ ಈ ಪ್ರಶಸ್ತಿ ಗೆದ್ದುಕೊಂಡಿದೆ. ಹಲವು ಸಿನಿಮಾನ ನಟ-ನಟಿಯರಿಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು. ಇದೇ ವೇಳೆ ಈ ಪ್ರಶಸ್ತಿಗೆ ಭಾಜನರಾಗಿದ್ದ ಬಾಲಿವುಡ್ ನಟಿ ಆಲೀಯಾ ಭಟ್ ಮದುಮಗಳಂತೆ ರೆಡಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

https://www.instagram.com/reel/Cyg12EPSsBj/?utm_source=ig_web_copy_link
ನಟ ರಣಬೀರ್ ಕಪೂರ್ ಅವರೊಂದಿಗೆ ಆಗಮಿಸಿದ ಆಲಿಯಾ, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಸಿದ್ಧ ವಸ್ತ್ರವಿನ್ಯಾಸಕ ಸಬ್ಯಸಾಚಿಯವರ ಸೂಕ್ಷ್ಮವಾದ ಗೋಲ್ಡನ್ ಕಸೂತಿಯನ್ನು ಒಳಗೊಂಡಿರುವ ಮದುವೆ ದಿನ ಧರಿಸಿದ್ದ ಬಿಳಿ ಬಣ್ಣದ ಸೀರೆಯಲ್ಲಿ ಆಲಿಯಾ ಕಾಂತಿಯುತವಾಗಿ ಕಾಣುತ್ತಿದ್ದರು. ನಟಿ ತನ್ನ ಕೂದಲನ್ನು ಬನ್ನಲ್ಲಿ ಕಟ್ಟಿದರು, ಈವೆಂಟ್ಗಾಗಿ ವಿಭಿನ್ನವಾದ ಆಭರಣಗಳನ್ನು ಧರಿಸಿದ್ದರು. ಪ್ರಶಸ್ತಿ ಸಮಾರಂಭದ ಚಿತ್ರಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಇದೇ ವೇಳೆ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಅವರ ಮಾಡಿಸಿಕೊಂಡಿರುವ ಕ್ಯೂಟ್ ವಿಡಿಯೋಶೂಟ್ ವೈರಲ್ ಆಗಿದೆ. ಆಕೆ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಪತಿ ರಣಬೀರ್ ತನ್ನ ಮೊಬೈಲ್ನಲ್ಲಿ ವಿಶೇಷ ಕ್ಷಣವನ್ನು ಸೆರೆಹಿಡಿಯುತ್ತಿದ್ದರು. ಅಂದಹಾಗೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷ ಏಪ್ರಿಲ್ 14 ರಂದು ಮುಂಬೈನಲ್ಲಿ ಮದುವೆಯ ದಿನದಂದು ಚಿನ್ನದ ಆಭರಣಗಳೊಂದಿಗೆ ಇದೇ ಬಿಳಿಯ ಸೀರೆಯಲ್ಲಿ ಆಲಿಯಾ ಮಿಂಚುತ್ತಿದ್ದರು. ಜನಪ್ರಿಯ ಕುಂದನ್ ಆಭರಣಗಳೊಂದಿಗೆ ಮೇಕ್ಅಪ್ ಅನ್ನು ಸರಳವಾಗಿ ಮಾಡಿಕೊಂಡಿದ್ದರು.