ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳ ಮೂಲಕ ಯಶಸ್ಸು ಪಡೆದುಕೊಂಡ ಪ್ರಸಿದ್ಧ ನಟ. ರಕ್ಷಿತ್ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದೆ. ಇದೆ ಸಂದರ್ಭದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಒಂದು ಗುಡ್ ನ್ಯೂಸ್ ನೀಡಿದೆ. ಜನ್ಮದಿನಾಚರಣೆಯ ಪ್ರಯುಕ್ತ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇಷ್ಟು ದಿನ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ,ಇದೀಗ ಡಬಲ್ ಧಮಾಕಾ ನೀಡಿದ ಚಿತ್ರತಂಡ ಸಪ್ತ ಸಾಗರದಾಚೆ ಎಲ್ಲೋ ಚಿತ್ರ 2 ಭಾಗವಾಗಿ ಹೊರಬರುತ್ತಿದೆ ಎಂದು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಸಪ್ತ ಸಾಗರದಾಚೆ ಎಲ್ಲೋ-1 ಹಾಗೂ ಸಪ್ತ ಸಾಗರದಾಚೆ ಎಲ್ಲೋ -2 ಎನ್ನುವ ಎರಡು ಪೋಸ್ಟರ್ ರಿಲೀಸ್ ಮುಖಾಂತರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಸಿನಿಮಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆ ನೋಡುವುದಾದರೆ ಬಾಹುಬಲಿ ನಂತರ ಪಾರ್ಟ್ 2 ಟ್ರೆಂಡ್ ಗಳು ಕನ್ನಡ ಚಿತ್ರರಂಗದಲ್ಲೂ ಪ್ರಾರಂಭವಾಗಿದ್ದವು, ಕೆಜಿಎಫ್, ಕಬ್ಜ ಚಿತ್ರ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಪಾರ್ಟ್ 2 ಚಿತ್ರಗಳ ಪಟ್ಟಿಗೆ ಇದೀಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರವು ಸೇರ್ಪಡೆಗೊಂಡಿದೆ. 777 ಚಾರ್ಲಿ ಸಿನಿಮಾ ರಿಲೀಸ್ ನಂತರ ಸೂಪರ್ ಹಿಟ್ ಆಗಿದ್ದು,ತದನಂತರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಬ್ಯುಸಿಯಾಗಿದ್ದ ರಕ್ಷಿತ್ ಶೆಟ್ಟಿ, ಎಂದಿಗೂ ಕೆಲಸದಲ್ಲಿ ತಾಳ್ಮೆ ಹಾಗೂ ಶ್ರದ್ದೆಯಿಂದ ಮಾಡುವ ಮುಖಾಂತರ ಯಶಸ್ವಿಯಾದವರು.
ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಅಧಿಕ ಸಮಯ ತಗೆದುಕೊಂಡ ಚಿತ್ರತಂಡ ಇದೀಗ 2 ಪಾರ್ಟ್ ನಲ್ಲಿ ಕೂಡ ಸಪ್ತ ಸಾಗರದಾಚೆ ಎಲ್ಲೋ ಎನ್ನುವ ಚಿತ್ರ ಬರಲಿದೆ ಎನ್ನುವ ಮಾಹಿತಿ ನೀಡಿದೆ.ರಕ್ಷಿತ್ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಚಿತ್ರರಂಗಕ್ಕೆ ಬಂದವರು ಪ್ರಾರಂಭದ ದಿನಗಳಲ್ಲಿ ರಿಕ್ಕಿ, ಉಳಿದವರು ಕಂಡಂತೆ ಚಿತ್ರದ ಮೂಲಕ ಸಿನಿಮಾ ಜರ್ನಿ ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಉತ್ತಮ ಯಶಸ್ಸನ್ನ ಪಡೆದುಕೊಂಡು ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಕೀರ್ತಿ ಸಂಪಾದಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ ನಿಮ್ಮ ಮನು ಒಂದು ವಿಶೇಷ ಪ್ರಕಣೆಯೊಂದನ್ನ ಮಾಡಿದ್ದಾನೆ. ಪ್ರೀತಿ ಹಾಗೂ ಕನಸುಗಳನ್ನ ಕೂಡಿದ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗವಾಗಿ ನಿಮ್ಮ ಮುಂದೆ ಬರಲಿದೆ ಎಂದು ತಿಳಿಸಿದ್ದಾರೆ. ಸೈಡ್ ಎ ಹಾಗೂ ಸೈಡ್ ಬಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ಬಿಡುಗಡೆ ದಿನಾಂಕ 15 ರಂದು ಪ್ರಕಟಿಸಲಾಗುವುದು ಎನ್ನಲಾಗಿದೆ. ಈ ಚಿತ್ರವು ಗಂಭೀರವಾದ ಪ್ರೀತಿ ಕತೆ ಇದಾಗಿದ್ದು, ರಕ್ಷಿತ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್ ನಟಿಸಲಿದ್ದಾರೆ.
ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಈ ಹಿಂದೆ ಬಿಡುಗಡೆ ಕಂಡಿದ್ದ ರಕ್ಷಿತ್ ಹಾಗೂ ಹೇಮಂತ್ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಕೂಡ ಗಂಭೀರ ಕಥೆಯುಳ್ಳ ಚಿತ್ರವಾಗಿತ್ತು. ರಕ್ಷಿತ್ ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಪಡೆದುಕೊಂಡಿದ್ದಾರೆ. ಒಟ್ಟಾರೆ ರಕ್ಷಿತ್ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರವು ಕೂಡ ಆದಷ್ಟು ಬೇಗನೆ ಬಿಡುಗಡೆ ಕಂಡು ಯಶಸ್ವಿಯಾಗಲಿ ಎನ್ನುವುದೇ ನಮ್ಮ ಆಶಯ.



