ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೋಡಿ ಮಾಡಿರುವ ಮೋಡಿ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರಿಬ್ಬರು ಜೊತೆಯಾಗಿ ಚಿತ್ರರಂಗ ಪ್ರವೇಶಿಸಿ, ಜೊತೆಯಾಗಿ ಬೆಳೆದು, ಯಶಸ್ವಿಯಾಗಿ, ಪ್ರೀತಿ ಮಾಡಿ, ಮದುವೆಯಾಗಿ ಇಂದು ಐಡಿಯಲ್ ಕಪಲ್ ಎಂದು ಹೆಸರು ಪಡೆದಿದ್ದಾರೆ. ಬದುಕು ಕಟ್ಟಿಕೊಂಡರೆ ಇವರಿಬ್ಬರ ಹಾಗೆ ಕಟ್ಟಿಕೊಳ್ಳಬೇಕು ಎಂದು ಅಂದುಕೊಂಡ ಮಂದಿ ಸಾಕಷ್ಟು ಜನ. ಈ ಜೋಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇದೀಗ ರಾಧಿಕಾ ಪಂಡಿತ್ ಅವರ ತಂಗಿಯ ವಿಚಾರ ಭಾರಿ ಸದ್ದು ಮಾಡುತ್ತಿದೆ. ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ರಾಧಿಕಾ ಪಂಡಿತ್ ಅವರ ತಂಗಿ ಯಾರು ಗೊತ್ತಾ?
ನಟಿ ರಾಧಿಕಾ ಪಂಡಿತ್ ಅವರು ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿದವರು, ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದವರು. ಆ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ರಿಸ್ಕ್ ತೆಗೆದುಕೊಂಡು ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಶ್ರಮದ ಪ್ರತಿಫಲವೆ ಇಂದು ಅವರನ್ನು ಸ್ಟಾರ್ ನಟಿಯಾಗಿ ಮಾಡಿದೆ. ಈಗ ಅವರು ಚಿತ್ರರಂಗದಿಂದ ದೂರ ಇದ್ದರು ಸಹ, ಜನರು ಮಾತ್ರ ಅವರನ್ನು ಮರೆತಿಲ್ಲ. ರಾಧಿಕಾ ಅವರು ಮತ್ತೆ ನಟನೆ ಶುರು ಮಾಡಲಿ ಎಂದೇ ಬಯಸುತ್ತಿದ್ದಾರೆ. ಇನ್ನು ಯಶ್ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಕೂಡ ಇದೇ ರೀತಿ ಬಹಳ ಕಷ್ಟಪಟ್ಟು ಬೆಳೆದವರು.

ಇಂದು ಇಬ್ಬರು ತಮ್ಮದೇ ಆದ ಪ್ರಪಂಚವನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಬಹಳ ಸಂತೋಷವಾಗಿದ್ದಾರೆ. ಈಗ ರಾಧಿಕಾ ಪಂಡಿತ್ ಅವರ ತಂಗಿಯ ಬಗ್ಗೆ ನೋಡೋಣ. ರಾಧಿಕಾ ಪಂಡಿತ್ ಅವರ ತಂಗಿ ಟಾಲಿವುಡ್ ನ ಸ್ಟಾರ್ ನಟಿ, ಆಕೆ ಮತ್ಯಾರು ಅಲ್ಲ ನಟಿ ಶ್ರೀಲೀಲಾ. ಹೌದು, ನಟಿ ಶ್ರೀಲೀಲಾ ರಾಧಿಕಾ ಪಂಡಿತ್ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಯಶ್ ಅವರನ್ನು ಜೀಜು ಅಂದ್ರೆ ಭಾವ ಎಂದು ಕರೆಯುತ್ತಾರೆ. ಈ ರೀತಿ ಕರೆಯುವುದಕ್ಕೆ ಒಂದು ಮುಖ್ಯವಾದ ಕಾರಣ ಕೂಡ ಇದೆ. ಶ್ರೀಲೀಲಾ ರಾಧಿಕಾ ಪಂಡಿತ್ ಅವರ ಒಡಹುಟ್ಟಿದ ತಂಗಿ, ದೂರ ಸಂಬಂಧಿಯು ಅಲ್ಲ. ಆದರೆ ಬೇರೆ ರೀತಿಯ ಬಾಂಧವ್ಯ ಇವರ ನಡುವೆ ಇದೆ.

ಶ್ರೀಲೀಲಾ ಅವರ ತಾಯಿ ಡಾಕ್ಟರ್ ಎನ್ನುವ ವಿಷಯ ಗೊತ್ತಿರುವುದೇ. ರಾಧಿಕಾ ಪಂಡಿತ್ ಅವರನ್ನು ಟ್ರೀಟ್ ಮಾಡುತ್ತಿದ್ದ ಶ್ರೀಲೀಲಾ ಅವರ ತಾಯಿ ಎನ್ನಲಾಗಿದೆ. ಹಾಗಾಗಿ ಶ್ರೀಲೀಲಾ ಅವರ ಕುಟುಂಬ ಹಾಗೂ ರಾಧಿಕಾ ಪಂಡಿತ್ ಅವರ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈ ಸ್ನೇಹ ಮತ್ತು ಸಲುಗೆ ಇಂದ ಶ್ರೀಲೀಲಾ ಅವರು ರಾಧಿಕಾ ಪಂಡಿತ್ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಅಕ್ಕನ ಪತಿ ಆಗಿರುವುದರಿಂದ ಯಶ್ ಅವರನ್ನು ಜೀಜು ಎಂದು ಕರೆಯುತ್ತಾರೆ. ಈ ವಿಷಯವನ್ನು ಖುದ್ದು ಶ್ರೀಲೀಲಾ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾಧಿಕಾ ಪಂಡಿತ್ ಹಾಗೂ ಶ್ರೀಲೀಲಾ ನಡುವೆ ಅಕ್ಕ ತಂಗಿಯ ಬಾಂಧವ್ಯ ಇದೆ. ಇಬ್ಬರು ತುಂಬಾ ಕ್ಲೋಸ್ ಆಗಿದ್ದಾರೆ.

ಇನ್ನು ನಟಿ ಶ್ರೀಲೀಲಾ ಈಗ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಬಹು ನಿರೀಕ್ಷಿತ ಪುಷ್ಪ2 ಸಿನಿಮಾ ಐಟಂ ಸಾಂಗ್ ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಈ ಐಟಂ ಸಾಂಗ್ ಇಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೇ ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಕ್ಕಿದೆ. ಈ ಕಾರಣಗಳಿಂದ ಅವರು ಪ್ರಸ್ತುತ ಟಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿ ಆಗಿದ್ದಾರೆ ಎಂದರೂ ತಪ್ಪಲ್ಲ. ಶ್ರೀಲೀಲಾ ಅವರ ಡ್ಯಾನ್ಸ್ ಸ್ಕಿಲ್ಸ್ ಗೆ ತೆಲುಗು ಮಾತ್ರವಲ್ಲ ಸೌತ್ ಇಂಡಿಯಾದ ಎಲ್ಲಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಷ್ಪ2 ಚಿತ್ರತಂಡ ಕೂಡ ಇವರನ್ನು ಡ್ಯಾನ್ಸಿಂಗ್ ಕ್ವೀನ್ ಎಂದೇ ಪೋಸ್ಟರ್ ಮೂಲಕ ಪರಿಚಯ ಮಾಡಿಕೊಟ್ಟಿತ್ತು.



