ನಿನ್ನೆಯಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ವಿಷಯ, ವಿಂಗ್ ಕಮಾಂಡರ್ ಶಿಲಾದಿತ್ಯ ವಿಚಾರ. ಈ ವ್ಯಕ್ತಿ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ತಾನು ಕನ್ನಡ ಮಾತಾಡಲ್ಲ ಅಂದಿದ್ದಕ್ಕೆ ತನ್ನ ಮೇಲೆ ಬೆಂಗಳೂರಿನ ಲೋಕಲ್ ಜನರು ಹ*ಲ್ಲೆ ಮಾಡಿದರು ಎಂದು ಸಾಲು ಸಾಲು ಆರೋಪ ಮಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿತ್ತು. ಇದನ್ನು ನೋಡಿದ ನೆಟ್ಟಿಗರು ಕನ್ನಡಿಗರನ್ನು ಮತ್ತು ಬೆಂಗಳೂರು ಜನರನ್ನು ತರಾಟೆಗೆ ತೆಗೆದುಕೊಂಡರು. ಕನ್ನಡಿಗರು ವಿಪರೀತ ಮಾಡುತ್ತಿದ್ದಾರೆ ಎನ್ನುವ ಎಲ್ಲಾ ಆರೋಪಗಳು ಕೇಳಿಬಂದಿತ್ತು. ಆದರೆ ಅಸಲಿಗೆ ನಡೆದ ವಿಷಯವೇ ಬೇರೆ ಆಗಿತ್ತು. ಆಗಿದ್ದೇನು ಎಂದು ಇಂದು ಬಯಲಾಗಿದೆ.
ನಿಜಕ್ಕೂ ನಡೆದಿರುವುದು ಏನು ಎಂದರೆ, ಆ ವ್ಯಕ್ತಿ ಹೇಳಿದ್ದೆಲ್ಲವು ಸುಳ್ಳು. ಆತನೇ ಬೆಂಗಳೂರು ಲೋಕಲ್ ಹುಡುಗನ ಮೇಲೆ ಹ*ಲ್ಲೆ ಮಾಡಿದ್ದಾನೆ. ಆದರೆ ತನ್ನ ಮೇಲೆ ಆರೋಪ ಬರಬಾರದು, ಬಂದರೆ ತನ್ನ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಆ ಆರೋಪವನ್ನು ಕನ್ನಡದ ಹುಡುಗನ ಮೇಲೆ ಹಾಕಿದ್ದಾನೆ. ಘಟನೆ ನಡೆದ ಬಳಿಕ ಪೊಲೀಸರಿಗೆ ರಿಪೋರ್ಟ್ ಮಾಡದೇ, ವೆಸ್ಟ್ ಬೆಂಗಾಲ್ ಗೆ ಓಡಿ ಹೋಗಿದ್ದಾನೆ. ಹಾಗೆಯೇ ಈತನೇ ಇಂಥ ಕೆಲಸ ಮಾಡಿರುವುದು ಎನ್ನುವುದಕ್ಕೆ ಸಿಸಿಟಿವಿ ಫುಟೇಜ್ ಸಾಕ್ಷಿ ಕೂಡ ಸಿಕ್ಕಿದೆ. ಇದೆಲ್ಲವೂ ಇರುವಾಗ, ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಹುಡುಕುವುದಕ್ಕೆ ಶುರು ಮಾಡಿದಾಗ, ಆತ ಪರಾರಿ ಆಗಿದ್ದಾನೆ ಎಂದು ತಿಳಿದುಬಂದಿರೆ. ಒಟ್ಟಿನಲ್ಲಿ ಈ ವಿಷಯ ದೊಡ್ಡ ಕಿಚ್ಚನ್ನೇ ಹೊತ್ತಿಸಿದೆ.
ಎಲ್ಲಿಂದಲೋ ನಮ್ಮೂರಿಗೆ ಬಂದ ಜನರು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹೊರ ರಾಜ್ಯದಿಂದ ಬಂದು, ಕರ್ನಾಟಕದಲ್ಲಿ ವರ್ಷಗಳಿಂದ ಇದ್ದು, ಕನ್ನಡ ಬರೋದಿಲ್ಲ, ಕನ್ನಡ ಮಾತಾಡೋದಿಲ್ಲ ಎಂದು ಹೇಳುತ್ತಾರೆ. ನಾವು ಕನ್ನಡ ಮಾತನಾಡೋದಿಲ್ಲ, ನೀವು ಇಂಗ್ಲಿಷ್ ನಲ್ಲಿ ಅಥವಾ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುತ್ತಾರೆ. ಯಾರು ಕೂಡ ಕನ್ನಡ ಕಲಿಯುವ ಕಡೆಗೆ ಒಂಚೂರು ಎಫರ್ಟ್ಸ್ ಕೂಡ ಹಾಕೋದಿಲ್ಲ. ಆದರೆ ಬೆಂಗಳೂರಿನವರ ಮೇಲೆ ಕನ್ನಡಿಗರ ಮೇಲೆಯೇ ಅಪವಾದ ಹಾಕುತ್ತಾರೆ. ಕನ್ನಡ ಕಲಿಬೇಕು ಅಂತ ಹೇರಿಕೆ ಮಾಡ್ತಾರೆ ಎಂದು ಹೇಳುತ್ತಾರೆ. ಆದರೆ ತಾವಿರುವ ನೆಲಕ್ಕೆ ಬೆಲೆ ಕೊಡಬೇಕು ಎಂದು ಯಾರು ಸಹ ಯೋಚನೆ ಮಾಡಿರುವುದಿಲ್ಲ. ಈಗ ನಡೆದಿರುವ ಘಟನೆ ಕೂಡ ಅಂಥದ್ದೇ.
ಈ ಘಟನೆ ಕನ್ನಡಿಗರ ಗೌರವಕ್ಕೆ, ಕನ್ನಡಿಗರ ಮರಿಯಾದೆಗೆ ಗಾಯದ ಬರೆ ಎಳೆದಿರುವ ಘಟನೆ ಆಗಿದೆ. ಈ ಘಟನೆ ಬಹಳ ಗಂಭೀರವಾದದ್ದು, ಇದರ ಬಗ್ಗೆ ಈಗ ನಮ್ಮ ಸಿಎಂ ಸಿದ್ದರಾಮಯ್ಯ ಅವರು ಒಂದು ಪ್ರಮಖವಾದ ನಿರ್ಧಾರ ತೆಗೆದುಕೊಂಡು, ಅದರ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿದ್ದರಾಮಯ್ಯ ಅವರು ಹೇಳಿರುವುದು ಏನು ಎಂದರೆ..
“ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ.
ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ. ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ. ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.
ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ.
ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ.
ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ..” ಎಂದು ಸಿಎಂ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿದ್ದು, ಜನರಿಂದ ಸಿಎಂ ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿಎಂ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಆ ವ್ಯಕ್ತಿಯ ವಿಚಾರಕ್ಕೆ ಸರಿಯಾದ ಕ್ರಮ ಕೈಗೊಳ್ಳಬೇಕು, ಆತನನ್ನು ಹುಡುಕಿಸಬೇಕು, ನಿಜಕ್ಕೂ ತೊಂದರೆ ಆಗಿರುವವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿರುವುದು ಕನ್ನಡಿಗರಿಗೆ ಸಿಗಲಿರುವ ಜಯಕ್ಕೆ ಮೊದಲ ಹೆಜ್ಜೆ ಆಗಿದೆ. ಇಂಥವರಿಗೆ ಈ ಬಾರಿ ಸರಿಯಾಗಿ ಬುದ್ಧಿ ಕಲಿಸಿದರೆ, ಮುಂದಿನ ದಿನಗಳಲ್ಲಿ ಇನ್ಯಾರಾದರೂ ಈ ರೀತಿ ತೊಂದರೆ ಮಾಡುವುದು ತಪ್ಪುತ್ತದೆ. ಒಬ್ಬರ ಬಗ್ಗೆ ತಪ್ಪಾಗಿ ಸುಳ್ಳು ಹೇಳುವ ಮೊದಲು ನೂರು ಸಾರಿ ಯೋಚನೆ ಮಾಡಬೇಕು.



