ಸದ್ಯ, ಸಮಾಜದಲ್ಲಿ ಪ್ರತಿಷ್ಟೆಗೆ ಇರುವ ಬೆಲೆ ಮತ್ಯಾವುದಕ್ಕೂ ಇಲ್ಲ. ಇತ್ತೀಚೆಗಂತೂ ಯುವ ಜನಾಂಗ iPhone ಬಳಕೆಯನ್ನೂ ಕೂಡ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಆದರೆ ದುಬಾರಿ iPhone ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಣ ಇದ್ದವರೇ ಇದನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ. ಅಂತದ್ದರಲ್ಲಿ ಇಲ್ಲೊಬ್ಬ ಭಿಕ್ಷುಕ ತಾನು ಭಿಕ್ಷೆ ಎತ್ತಿ ಒಟ್ಟು ಮಾಡಿದ ಚಿಲ್ಲರೆ ಹಣದಿಂದ ದುಬಾರಿ iPhone15 ಖರೀದಿ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

https://www.instagram.com/reel/CyBJ6s6PJZw/?utm_source=ig_web_copy_link
ಹಾಗಂತ ಸದ್ಯ, ವಿಡಿಯೋದಲ್ಲಿ ಕಾಣುವ ವ್ಯಕ್ತಿ ನಿಜ ಜೀವನದಲ್ಲಿ ಒಬ್ಬ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರೀಯೆಟರ್. ಈತ ಭಿಕ್ಷುಕನೋರ್ವ ಐಫೋನ್ ಖರೀದಿಸಲು ಹೋದರೆ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿಯುವುದಕ್ಕಾಗಿ ಈ ವಿಶೇಷ ಪ್ರಯೋಗ ನಡೆಸಿದ್ದಾನೆ. ಎಕ್ಸ್ಪೆರಿಮೆಂಟ್ ಕಿಂಗ್ ಎಂಬ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ವೀಡಿಯೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ಈತನ ಹೊಸ ಪ್ರಯೋಗವನ್ನು ಕೊಂಡಾಡಿದ್ದಾರೆ.
ವೀಡಿಯೋದಲ್ಲಿ ಯುವಕನೋರ್ವ ಭಿಕ್ಷುಕನ ವೇಷದಲ್ಲಿ ಚೀಲದ ತುಂಬಾ ನಾಣ್ಯದೊಂದಿಗೆ ಜೋಧ್ಪುರದ ಮೊಬೈಲ್ ಶೋರೂಮ್ ಒಂದಕ್ಕೆ ಬಂದು ನಂತರ ಯುವಕ ತನ್ನ ಕೈಯಲ್ಲಿದ್ದ ನಾಣ್ಯಗಳ ಚೀಲವನ್ನು ಮೊಬೈಲ್ ಶೋರೂಮ್ನ ಮೇಜಿನ ಮೇಲೆ ಸುರಿಯುತ್ತಾನೆ.ನಂತರ ಅಲ್ಲಿದ್ದ ಸಿಬ್ಬಂದಿ ಎಲ್ಲರೂ ಜೊತೆಯಾಗಿ ಈ ನಾಣ್ಯವನ್ನು ಲೆಕ್ಕ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ನಂತರ ಆತನಿಗೆ ಐಫೋನ್ 15 ನೀಡುತ್ತಾರೆ. ಅಲ್ಲದೇ ಈ ಭಿಕ್ಷುಕ ಶಾಪ್ ಮಾಲೀಕರ ಜೊತೆ ಫೋಟೋವನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿದ್ದ ಕೆಲವರು ಅಚ್ಚರಿಯಿಂದ ಈತನನ್ನು ನೋಡುವುದನ್ನು ಕಾಣಬಹುದು.



