ಬಿಗ್ ಬಾಸ್ ಸೀಸನ್ 9 ದಿನ ಕಳೆಯುತ್ತಿದ್ದಂತೆ ತನ್ನ ಹಳೇ ಛಾಪನ್ನು ಮತ್ತೆ ಸೃಷ್ಟಿಸಿಕೊಳ್ಳುತ್ತಿದೆ.ಹೌದು! ಈ ಬಾರಿಯ ಬಿಗ್ ಬಾಸ್ ತನ್ನ ಮೊದಲ ದಿನಗಳಲ್ಲಿ ಬಹಳ ಹೈಪ್ ಪಡೆದುಕೊಂಡಿತ್ತು.ಇದ್ರ ಹೈಪ್ ಗೆ ಕಾರಣವಾಗಿದ್ದು ಮಾತ್ರ ಈ ಬಾರಿಯ ಬಿಗ್ ಬಾಸ್ ನ ಹೊಸ ಪ್ರಯತ್ನ.ತನ್ನ ಮೊದಲ ಓಟಿಟಿ ಸೀಸನ್ ನಲ್ಲೂ ಕೂಡ ಯಶಸ್ವಿ ಪಡೆದುಕೊಂಡು ಇದ್ರ ಮುಂದುವರೆದ ಭಾಗ ಸೀಸನ್ 9 ಕೂಡ ಶುರುವಾಗಿ ತನ್ನ ಮೊದಲ ದಿನಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿತ್ತು. ಆದರೆ ದಿನ ಕಳೆಯುತ್ತಿದ್ದಂತೆ ಈ ಬಾರಿಯ ಸ್ಪರ್ದಿಗಳ ಮೇಲೆ ಇಟ್ಟಿದ್ದ ಯಶಸ್ವಿ ಸಂಪೂರ್ಣ ನೆಲಕ್ಕೆ ಕುಸಿದಿತ್ತು. ಇದೀಗ ಬಿಗ್ ಬಾಸ್ ಮನೆ ಮನೋರಂಜನೆ ವಿಷಯದಲ್ಲಿ ಈ ಸೀಸನ್ ನಲ್ಲಿ ಎಡವಿತ್ತು.ಆದರೆ ಇದೀಗ ಬಿಗ್ ಬಾಸ್ ತಮ್ಮ ಚತುರ್ಯತೆ ಯಿಂದ ದುಪಟ್ಟು ಮನೋರಂಜನೆಯನ್ನು ನೀಡಿವ ಸಲುವಾಗಿ ವಿಭಿನ್ನ ಟಾಸ್ಕ್ ಹಾಗೂ ಊಹಿಸಲಾರದ ಟ್ವಿಸ್ಟ್ ನೀಡುತ್ತಿದ್ದಾರೆ.

ಈ ಸೀಸನ್ ಎಲ್ಲಾ ಸೀಸನ್ ಗಳಿಗಿಂತಲು ಬಹಳ ವಿಭಿನ್ನ ವಾಗಿದ್ದು ಇದೀಗ ಟ್ವಿಸ್ಟ್ ಗಳಲ್ಲಿಯೂ ಕೂಡ ದೊಡ್ಡ ಮಟ್ಟದ ಸದ್ದು ಮಾಡುತ್ತಾ ಬರುತ್ತಿದೆ. ಇತ್ತೀಚೆಗೆ ಈ ಸೀಸನ್ ನ ದೊಡ್ಡ ಮಟ್ಟದ ಸುದ್ದಿ ಎಂದರೆ ಈ ಬಾರಿಯ ವೈಲ್ಡ್ ಕಾರ್ಡ್ ಯಾರಿರರಬಹುದು ಎಂದು.ಈ ವಿಚಾರವಾಗಿ ಎರಡು ಹೆಸರು ಹರಿದಾಡುತ್ತಿತ್ತು.ಆದರೆ ಯಾರೂ ಊಹಿಸಲಾರದ ಟ್ವಿಸ್ಟ್ ನೊಂದಿಗೆ ಬಿಗ್ ಬಾಸ್ ನ ಸಿಸನ್ 9 ವೈಲ್ಡ್ ಕಾರ್ಡ್ ಯಾರೆಂಬುದು ಈ ವಾರದ ಆರಂಭದಲ್ಲಿ ತಿಳಿದಿತ್ತು.ಈ ವಾರದ ಕಾಡಿನ ಟಾಸ್ಕ್ ನಲ್ಲಿ ಮನೆ ಮಂದಿಗೆ ಆಹಾರ ಪದಾರ್ಥಗಳನ್ನು ಗೆದ್ದುಕೊಡುವ ಮೂಲಕ ದೀಪಿಕಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡರು.
ದೀಪಿಕಾ ದಾಸ್ ಅವರು ಸೀಸನ್ 8ರಲ್ಲಿ ಟಫ್ ಕಂಪಿಟೇಶನ್ ಕೊಡ ನೀಡಿದ್ದರು.ಆದರೆ ಈ ಸೀಸನ್ ನಲ್ಲಿ ಯಾಕೋ ಗೊತ್ತಿಲ್ಲ ಕಂಪಿಟೇಶನ್ ಹಾಗೂ ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಎಡವಿದ್ದರು.ಆ ಕಾರಣದಿಂದಲೇ ಕಳೆದ ಎರಡು ಮೂರು ವಾರಗಳಿಂದ ಬಾಟಮ್ ಪೊಸಿಷನ್ ನಲ್ಲಿಯೇ ಬರುತ್ತಿದ್ದರು.ಆದರೆ ಕಳೆದ ವಾರ ಅಷ್ಟೇ ಕಡಿಮೆ ವೋಟ್ ಕಾರಣದಿಂದ ಮನೆ ಇಂದ ಹೊರಬಿದ್ದಿದ್ದರು.ಇದೀಗ ವೈಲ್ಡ್ ಕಾರ್ಡ್ ಆಗಿ ಮರಳಿದ್ದಾರೆ.ಇವರನ್ನೇ ಯಾಕೆ ಆಯ್ಕೆ ಮಾಡಲಾಗಿತ್ತು ಎಂದು ಕಾರಣ ತಿಳಿದು ಬಂದಿದೆ.ಅದೇನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ವೈಲ್ಡ್ ಕಾರ್ಡ್ ಆಗಿ ಪ್ರತಿ ಸೀಸನ್ ನಲ್ಲಿಯೂ ಕೂಡ ಈ ನಿಯಮ ಇದ್ದೆ ಇರುತ್ತದೆ.ಈ ಬಾರಿಯೂ ಯಾರಿರಬಹೂದು ಎಂದು ಸಾಕಷ್ಟು ಗೊಂಡಲವಿತ್ತು.ಅದರೊಟ್ಟಿಗೆ “ಸೋನು ಶ್ರೀನಿವಾಸ್ ಹಾಗೂ ಚಕ್ರವರ್ತಿ ಚಂದ್ರಚೂಡ್” ಅವರ ಹೆಸರು ಕೊಡ ಕೇಳಿ ಬರುತ್ತಿತ್ತು. ಮೊದಲ ಆಯ್ಕೆ ಸೋನು ಅವರೇ ಆಗಿದ್ದು ಎಲ್ಲವೂ ತಯಾರಿ ಕೂಡ ನಡೆದಿತ್ತು. ಆದರೆ ಎಲ್ಲರೂ ಕೂಡ ಬಹಳ ಸುದ್ದಿ ಹಬ್ಬಿಸಿದ್ದರಿಂದ ಅವರನ್ನು ಅರ್ಧಕ್ಕೆ ಕೈಬಿಡಲಾಯಿತು.ಹಾಗಾಗಿ ಯಾರೋ ಊಹಿಸಲಾರದೆ ಇರುವಂತೆ ಎಲ್ಲರ ಮನವಿಯಂತೆ “ದೀಪಿಕಾ” ಅವರನ್ನು ವೈಲ್ಡ್ ಕಾರ್ಡ್ ಆಗಿ ಕರೆತಂದಿದ್ದಾರೆ.ಕಳೆದ ದಿನಗಳಲ್ಲಿ ಮಾಡಿದ ತಪ್ಪನ್ನು ತಿದ್ದು ಕೊಂಡು ತಮ್ಮ ಆಟ ಬಡಲಾಯಿಸಿಕೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.