ಬಿ ಟೌನ್ ನಲ್ಲಿ ಯಾವಾಗಲೂ ಸದ್ದು ಮಾಡುವ ಹೆಸರು ಎಂದರೆ ಅದು “ಚಾಲೇಂಜಿಂಗ್ ಸ್ಟಾರ್ ದರ್ಶನ್” ಅವರದ್ದು.ಈ ನಟ ಬಹಳ ಪ್ರಸಿದ್ದಿ ಪಡೆದಿರುವುದು ತನ್ನ ನಟನೆಯನ್ನು ಹೊರತುಪಡಿಸುವುದಾದರೆ ತನ್ನ ನೇರ ನುಡಿಗಳಿಂದ.ಈ ನಟನ ಮಾತು ಸಿಕ್ಕಾಪಟ್ಟೆ ಖಾರವಾಗಿರುತ್ತದೆ.ತನಗೆ ಅನ್ನಿಸುವುದನ್ನು ಯಾವ ಫಿಲ್ಟರ್ ಇಲ್ಲದೆ ಹೇಳುವ ವ್ಯಕ್ತಿ.ಇದೀಗ ಎರಡು ವರ್ಷಗಳಿಂದಲೂ ಕೊಡ ದರ್ಶನ್ ಅವರ ಯಾವ ಸಿನಿಮಾ ಕೂಡ ದೊಡ್ಡ ಪರೆದೆ ಏರಿಲ್ಲ.

ಹೀಗಿದ್ದರೂ ಇವರ ಕ್ರೇಜ್ ಕೊಡ ಕಡಿಮೆಯಾಗಿಲ್ಲ ಯಾಗುವುದಿಲ್ಲ ಎಂದರೆ ತಪ್ಪಾಗಲಾರದು. ಈ ನಟ ಎಲ್ಲರ ನಟರಿಗಿಂತಲು ಬಹಳ ವಿಭಿನ್ನ ಈತನ ಅಭಿಮಾನಿಗಳು ಕೂಡ ಈತನಂತೆ ಎಂದು ಹೇಳಬಹುದು.ಇನ್ನು ಇವರ ಹುಟ್ಟುಹಬ್ಬದಂದು ಈ ನಟನ ಹೆಸರಿನಲ್ಲಿ ಹಾಗೂ ಅವರ ಅಭಿಮಾನಿ ಗಳ ಸಲುವಾಗಿ ಅದೆಷ್ಟೋ ಅನಾಥಾಶ್ರಮ ಹಾಗೂ ವೃದಾಶ್ರಮಗಳಿಗೆ ನೆರವಾಗುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.ಹೀಗೆ ಕೇವಲ ಸತ್ಕಾರ್ಯ ಗಳಲ್ಲಿ ತೊಡಗಿಸಿಕೊಳ್ಳುವ ನಟ.
ಈಗ ಇವರ “ಕ್ರಾಂತಿ” ಸಿನಿಮಾ ಗಾಂಧಿ ನಗರದಲ್ಲಿ ಬಹಳ ಸದ್ದು ಮಾಡುತ್ತಿದೆ ಈ ಹಿಂದೆ ಕೂಡ ಅಡೆತಡೆಗಳನ್ನು ಎದುರಿಸುತ್ತಾ ದೊಡ್ಡ ಸದ್ದು ಮಾಡುತ್ತಿತ್ತು.ಈಗ ಅದೆಲ್ಲವನ್ನು ಮೆಟ್ಟಿ ನಿಂತು ತನ್ನ ಬಿಡುಗಡೆ ದಿನಾಂಕವನ್ನು ಕೋಡಾ ತಿಳಿಸಿದ್ದಾರೆ.ಜನವರಿ 26ರಂದು ಬಿಡುಗಡೆ ತಯಾರಿ ನಡೆಸುತ್ತಿರುವ ಕ್ರಾಂತಿ ತಂಡ ಎಲ್ಲಾ ಮಾಧ್ಯಮಗಳಿಗೂ ಕೋಡ್ ಇಂಟರ್ವ್ಯೂ ಕೊಡುವ ಮೂಲಕ ತನ್ನ ಸಿನಿಮಾ ಪ್ರಚಾರ ನಡೆಸುತ್ತಿದೆ.
ಇದೇ ವೇಳೆ ಫಿಲ್ಮಿ ಬೀಟ್ ನಲ್ಲಿ ಸಂದರ್ಶನದಲ್ಲಿ ಭಾಗಿಯಾಗಿದ್ದ ದರ್ಶನ್ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು.ಅದರಲ್ಲಿ ಅವರ ಮಗನ ಬಗ್ಗೆ ಕೇಳಿದಾಗ ಒಂದು ಘಟನೆಯನ್ನು ವಿವರಿಸಿ ಹೇಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.ಇನ್ನು ತಮ್ಮ ಮಗನ ಶಾಲೆಯಲ್ಲಿ ಪೋಷಕರ ಸಭೆ ಗೆ ತೆರಳುತ್ತೀರಾ ಎಂದಾಗ.ದರ್ಶನ ಅವರು ಬಳಿ ಒಂದು ಬಾರಿ “ವಿನೀಶ್” ಅವರು ಬಹಳ ಹಠ ಮಾಡಿದಾಗ ಬಹಳ ಹಠ ಮಾಡಿದ್ದ ಆಗ ಹೋಗಿದ್ದೆ ಅಂದೇ ಬಹಳ ಕೋಪಗೊಂಡು ಎಲ್ಲರ ಮೇಲೆ ಕೂಗಾಡಿ ಅರ್ಧಕ್ಕೆ ಎದ್ದು ಬಂದೆ ಎಂದರು.
ನನ್ನ ಆ ವರ್ತನೆಗೆ ಅವರು ಕೇಳಿದ ಪ್ರಶ್ನೆಯೇ ಕಾರಣ ಎಂದರು.ನಿಮ್ಮ ಮಗನಿಗೆ ಎಷ್ಟು ಸಮಯ ಕೊಡುತ್ತೀರಾ ದಿನಕ್ಕೆ ಎಂದು ಕೇಳಿದಾಗ ನಾನು ಎರಡು ಗಂಟೆ ಎಂದೇ ಆಗ ಇನ್ನುಮುಂದೆ ಐದು ಗಂಟೆ ಸಮಯ ಕೊಡಬೇಕು ಎಂದರು.ಆಗ ಸಿಟ್ಟು ಬಂದು ನಾನು ನಿಮ್ಮ ಶಾಲೆಗೆ ಲಕ್ಷ ಲಕ್ಷ ಕಟ್ಟುವುದು ನನ್ನ ಕೆಲಸದಿಂದ ನಾನು ಕೆಲಸ ಬಿಟ್ಟು ಅವನ ಮುಂದೆ ಕೂರಲು ಸಾಧ್ಯವಿಲ್ಲ. ನೀವು ಸೈನಿಕರ ಮಕ್ಕಳಿಗೆ ಸೀಟ್ ಕೋಡುವುದಿಲ್ಲವ ಎಂಬ ಪ್ರಶ್ನೆ ಕೇಳಿ ಅರ್ಧಕ್ಕೆ ಎದ್ದು ಬಂದ್ದಿದ್ದೇ ಎಂದು ತಿಳಿಸಿದ್ದಾರೆ.



