ಟಾಲಿವುಡ್ನ ಖ್ಯಾತ ನಟಿ ಸಮಂತಾ ಸಾಂಸಾರಿಕ ಜೀವನದಿಂದ ವಿಚ್ಚೇದನ ಪಡೆದ ನಂತರ ತುಸು ಮೌನವಾಗಿದ್ದರು. ಜೊತೆಗೆ ಖಾಯಿಲೆಯೊಂದರಿಂದ ಬಳಲುತ್ತಿದ್ದರು. ಆದರೆ ಸದ್ಯ, ಮತ್ತೆ ಸಿನಿಮಾದತ್ತ ಮುಖ ಮಾಡಿರುವ ಟಾಲಿವುಟ್ ಬ್ಯೂಟಿ ವೆಕೇಶನ್ ಮೂಡ್ ನಲ್ಲಿದ್ದಾರೆ. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಸಮಂತಾ ದೂರದ ಬಾಲಿಯಲ್ಲಿ ಆತ್ಮೀಯ ಸ್ನೇಹಿತೆಯ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಕೋತಿಯೊಂದು ಸಮಂತಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿದ್ದು ಫೋಟೋಗಳು ಸಕ್ಕತ್ ವೈರಲ್ ಆಗುತ್ತಿವೆ.

ಸದ್ಯಕ್ಕೆ ಸಮಂತಾ ಮೈಯೋಸಿಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅದರ ಚಿಕಿತ್ಸೆಗಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಯ ವಿದೇಶಕ್ಕೆ ತೆರಳಿದ್ದಾರೆ. ಅದರೊಂದಿಗೆ ಎಂಜಾಯ್ ಮಾಡಲು ಬಾಲಿಗೆ ತೆರಳಿರುವ ಆಕೆ ತನ್ನ ಆತ್ಮೀಯ ಗೆಳತಿಯೊಂದಿಗೆ ಕಾಡಿನಲ್ಲಿ ಸುತ್ತಾಡುತ್ತ, ಕೋತಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ.
ಬಾಲಿಯಲ್ಲಿ ಎಂಜಾಯ್ ಮಾಡುತ್ತಿರುವ ಸಮಂತಾ ಬಾಲಿಯ ಉಬುದ್ನಲ್ಲಿರುವ ಮಂಕಿ ಫಾರೆಸ್ಟ್ಗೆ ಭೇಟಿ ನೀಡಿ ಒಂದು ಕೋತಿಯೊಂದಿಗೆ ಕೆಲ ಕಾಲ ಸಮಯ ಕಳೆದಿದ್ದಾರೆ. ಆ ಕೋತಿಯು ಸಮಂತಾ ತೊಡೆಯ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿದೆ. ಇದಾದ ಬಳಿಕ ಆ ಕೋತಿ ಸಮಂತಾ ಅವರ ಸನ್ ಗ್ಲಾಸ್ ಕದ್ದು ಓಡಿ ಹೋಗಿದೆಯಂತೆ. ಈ ವಿಚಾರವನ್ನು ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ.



