ಇಂದು 23 ಏಪ್ರಿಲ್ 2025 ಬುಧವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದಶಮಿ. ಮಧ್ಯಾಹ್ನ 12:22 ರಿಂದ 01:55 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರು ವೈಯಕ್ತಿಕ ವಿಚಾರಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳದಿರಿ. ಮೀನ ರಾಶಿಯವರಿಗೆ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುತ್ತದೆ.
ಮೇಷ ರಾಶಿ
ಈ ದಿನ ಮನಸ್ಸಿನ ಇಷ್ಟಾರ್ಥಗಳು ನೆರವೇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಮಟ್ಟಿಗೆ ಲಾಭ ಇರುತ್ತದೆ. ಕಲಾಕ್ಷೇತ್ರದಲ್ಲಿ ಇರುವವರಿಗೆ ಇಂದು ಒಳ್ಳೆ ದಿನವಾಗಿರುತ್ತದೆ. ಆದರೆ ನಿಮ್ಮ ಯಾವುದೇ ವೈಯಕ್ತಿಕ ವಿಚಾರಗಳನ್ನು ಯಾರೊಬ್ಬರ ಬಳಿಯೂ ಹೇಳಿಕೊಳ್ಳದಿರಿ, ಇಲ್ಲದಿದ್ದರೆ ಸಮಸ್ಯೆ ಅನುಭವಿಸಬಹುದು, ಮತ್ತೊಬ್ಬರೊಂದಿಗೆ ಮಾತನಾಡುವಾಗ ಎಚ್ಚರ.
ವೃಷಭ ರಾಶಿ
ಈ ದಿನ ಯಾವುದೇ ಕೆಲಸ ಮಾಡಿದರೂ ಅಭಿವೃದ್ಧಿ ಉಂಟಾಗಲಿದೆ. ಭೂಮಿ ವಿಚಾರದಲ್ಲಿ ನಿಮ್ಮ ಆಸೆಗಳು ನೆರವೇರುತ್ತದೆ. ಆಟೋ ಚಾಲಕರಿಗೆ ಉತ್ತಮ ಲಾಭವಾಗಲಿದೆ. ಗೃಹಿಣಿಯರಿಗೂ ಇಂದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಮುಂದಿನ ಭವಿಷ್ಯಕ್ಕೆ ಹಣ ಉಳಿತಾಯ ಮಾಡಿ.
ಮಿಥುನ ರಾಶಿ
ಹಿರಿಯ ಅಧಿಕಾರಿಗಳಿಂದ ಕಚೇರಿಯಲ್ಲಿ ಕಿರುಕುಳ ಇರುತ್ತದೆ, ಎಚ್ಚರಿಕೆಯಿಂದ ಇರಿ. ಜವಾಬ್ದಾರಿ ಹೆಚ್ಚರಲಿದೆ, ಮತ್ತೊಬ್ಬರ ಕೆಲಸವನ್ನು ನೀವೇ ಮಾಡಬೇಕಾಗಬಹುದು. ಕುಟುಂಬದಲ್ಲಿ ಘರ್ಷಣೆ ಇರಲಿದೆ. ಮಾನಸಿಕ ಆರೋಗ್ಯ ಕುಗ್ಗಲಿದೆ, ಕೃಷಿಕರಿಗೆ ಲಾಭ ಇರುತ್ತದೆ. ಜಾಗ್ರತೆಯಿಂದ ಇರಿ.
ಕಟಕ ರಾಶಿ:
ಹಿಂದಿನ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಭೂಮಿ ವಿಚಾರದಲ್ಲಿ ವ್ಯಾಜ್ಯಗಳಿದ್ದರೆ ಅದಕ್ಕೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನೀವು ಆರಂಭಿಸುವ ಕೆಲಸಕ್ಕೆ ಮನೆಯವರ ಬೆಂಬಲ ದೊರೆಯಲಿದೆ. ಇದರಿಂದ ನಿಮಗೆ ಸಂತೋಷ ಇರಲಿದೆ. ಕ್ರೀಡೆಯಲ್ಲಿರುವವರು ಉತ್ತಮ ಸಾಧನೆ ಮಾಡಲಿದ್ದಾರೆ.
ಸಿಂಹ ರಾಶಿ
ನೀವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲಿದ್ದೀರಿ, ಲಾಭ ಇರಲಿದೆ. ಮುಂದಿನ ಭವಿಷ್ಯಕ್ಕೆ ಹೂಡಿಕೆ ಮಾಡಲಿದ್ದೀರಿ, ಮನಸ್ಸಿಗೆ ನೆಮ್ಮದಿ ಇರಲಿದೆ. ಪಿತ್ರಾರ್ಜಿತ ಅಥವಾ ಯಾವುದೇ ಆಸ್ತಿ ವಿಚಾರದಲ್ಲಿ ವ್ಯಾಜ್ಯ ಇದ್ದರೆ ಜಾಗ್ರತೆಯಿಂದ ಇರಿ, ಇಲ್ಲದಿದ್ದರೆ ಸಮಸ್ಯೆ ಎದುರಾಗಲಿದೆ.
ಕನ್ಯಾ ರಾಶಿ
ನಿಮ್ಮ ಮನಸ್ಸಿಗೆ ಖುಷಿ ನೀಡುವ ಕೆಲಸ ಮಾಡುವಿರಿ, ಪೆಟ್ರೋಲಿಯಂ ಬಿಸ್ನೆಸ್ ಮಾಡುವವರಿಗೆ ಲಾಭ ದೊರೆಯಲಿದೆ. ಹೊಸ ಕೆಲಸ ಆರಂಭಿಸಲು ಕಾಯುತ್ತಿರುವವರಿಗೆ ಇಂದು ಒಳ್ಳೆ ದಿನ. ಕೆಲಸದಲ್ಲಿ ಯಶಸ್ಸೂ ದೊರೆಯಲಿದೆ. ಹಿತಶತ್ರುಗಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಎಚ್ಚರದಿಂದಿರಿ. ಮತ್ತೊಬ್ಬರ ಜೊತೆ ಮಾತನಾಡುವಾಗ ಮಾತುಗಳ ಬಗ್ಗೆ ಹಿಡಿತವಿರಲಿ.
ತುಲಾ ರಾಶಿ
ಅತಿಯಾದ ಬುದ್ಧಿವಂತಿಕೆಯಿಂದಲೇ ಸಮಸ್ಯೆಯ ಸುಳಿಗೆ ಸಿಲುಕುವಿರಿ, ಏನೇ ಸಮಸ್ಯೆಗಳಿದ್ದರೂ, ಭಿನ್ನಾಭಿಪ್ರಾಯಗಳಿದ್ದರೂ ತಾಳ್ಮೆಯಿಂದ ಇರಿ, ಎಲ್ಲವೂ ತಾನಾಗಿಯೇ ಬಗೆಹರಿಯಲಿದೆ. ಗೃಹಿಣಿಯರಿಗೆ ಒತ್ತಡದ ದಿನವಿದು. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇಂದು ಒಳ್ಳೆಯ ದಿನವಾಗಿದೆ.
ವೃಶ್ಚಿಕ ರಾಶಿ
ಆರೋಗ್ಯದಲ್ಲಿ ಏರುಪೇರಾಗಲಿದೆ, ಇಷ್ಟಮಿತ್ರರನ್ನು ಭೇಟಿ ಆಗುವುದರಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಇಂದು ಎಚ್ಚರದಿಂದ ಇರಬೇಕು, ಇಲ್ಲದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.
ಧನು ರಾಶಿ
ವ್ಯಾಪಾರದಲ್ಲಿ ಹೆಚ್ಚಿನ ಲಾಭ ಇರುತ್ತದೆ. ಕೃಷಿಕರು ಜಾಗ್ರತೆಯಿಂದ ಇರಬೇಕು, ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆ ಇದೆ. ದೂರದ ಊರಿಗೆ ಪ್ರಯಾಣಿಸುವಾಗ ಜಾಗ್ರತೆಯಿಂದಿರಿ, ಕುಟುಂಬದವರ ಸಹಾಯದಿಂದ ಮನಸ್ಸಿಗೆ ಇಷ್ಟ ನೀಡುವ ಕೆಲಸ ಮಾಡುವಿರಿ, ಲಕ್ಷ್ಮೀ ಕಟಾಕ್ಷ ದೊರೆಯಲಿದೆ.
ಮಕರ ರಾಶಿ
ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರಿಗೆ ಸಾಲ ನೀಡದಿರಿ. ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಹೊಸ ಉದ್ಯೋಗ ಆರಂಭಿಸಲು ಯೋಚಿಸುತ್ತಿರುವವರು ಇಂದು ಮುಂದುವರೆಯಬಹುದು, ಇದರಿಂದ ಲಾಭ ದೊರೆಯಲಿದೆ.
ಕುಂಭ ರಾಶಿ
ಇಡೀ ದಿನ ಮನಸ್ಸು ಖುಷಿಯಿಂದ ಇರುತ್ತದೆ, ಮನಸ್ಸಿಗೆ ಖುಷಿ ಇರುತ್ತದೆ. ಮಾಡುವ ಕೆಲಸದಲ್ಲಿ ಲಾಭ ದೊರೆಯುತ್ತದೆ. ನಿಮಗಿಷ್ಟವಾದ ಭೋಜನ ಸೇವಿಸುವಿರಿ, ಬಟ್ಟೆ, ತರಕಾರಿ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರೆಯಲಿದೆ. ಸಹೋದರರಿಂದ ಹಣದ ಸಹಾಯ ಪಡೆಯಬೇಕು ಎಂದುಕೊಂಡಿರುವವರು ಯೋಚಿಸಿ ಮುಂದುವರೆಯಿರಿ, ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಲಿದೆ.
ಮೀನ ರಾಶಿ
ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುತ್ತದೆ, ಅನಾವಶ್ಯಕವಾಗಿ ಖರ್ಚು ಮಾಡದಿರಿ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇಡೀ ದಿನ ಒತ್ತಡದಿಂದ ಕೂಡಿರುತ್ತದೆ. ಏನೇ ಕೆಲಸ ಮಾಡಿದರೂ ಜಾಗ್ರತೆಯಿಂದ ಇರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.



