ಕಿಚ್ಚ ಸುದೀಪ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಮುಸ್ಸಂಜೆ ಮಾತು ಕೂಡ ಒಂದು. ಈ ಸಿನಿಮಾ ಸುದೀಪ್ ಅವರ ಕೆರಿಯರ್ ನಲ್ಲಿ ಬಹಳ ವಿಶೇಷವಾದ ಸಿನಿಮಾ ಎಂದು ಹೇಳಿದರೆ ತಪ್ಪಲ್ಲ. ರೇಡಿಯೋ ಜಾಕಿ ಪಾತ್ರದಲ್ಲಿ ಮೊದಲ ಬಾರಿಗೆ ಸುದೀಪ್ ಅವರು ನಟಿಸಿದ್ದರು. ಹಾಗೆಯೇ ರಮ್ಯಾ ಅವರು ಸುದೀಪ್ ಅವರಿಗೆ ಜೋಡಿಯಾಗಿ ನಟಿಸಿದರು. ಇತ್ತೀಚೆಗೆ ಮುಸ್ಸಂಜೆ ಮಾತು ಸಿನಿಮಾ ತೆರೆಕಂಡು 18 ವರ್ಷ ಪೂರೈಸಿತು. ಈ ಸಿನಿಮಾದ ಹಾಡುಗಳು ಇವತ್ತಿಗೂ ಎಷ್ಟು ಸ್ಪೆಷಲ್ ಎಂದು ಗೊತ್ತೇ ಇದೆ. ಕಿಚ್ಚ ಸುದೀಪ್ ಅವರು ಕೂಡ ಈ ಸಮಯದಲ್ಲಿ ಒಂದು ಟ್ವೀಟ್ ಮಾಡಿ, ಸಿನಿಮಾ ತಮಗೆ ಎಷ್ಟು ಸ್ಪೆಷಲ್ ಎಂದು ತಿಳಿಸಿದರು. 17 ವರ್ಷಗಳ ಹಿಂದೆ ಅಂದರೆ 2008ರಲ್ಲಿ ಈ ಸಿನಿಮಾದ ಬಜೆಟ್ ಎಷ್ಟಿತ್ತು? ಬಿಡುಗಡೆಯಾದ ನಂತರ ಸಿನಿಮಾ ಗಳಿಸಿದ್ದೆಷ್ಟು ? ಮುಸ್ಸಂಜೆ ಮಾತು ಸಿನಿಮಾಗೆ ಸುದೀಪ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್..
ಮುಸ್ಸಂಜೆ ಮಾತು ಸಿನಿಮಾ ಕಿಚ್ಚ ಸುದೀಪ್ ಅವರ ಕೆರಿಯರ್ ಮಾತ್ರ ವಿಶೇಷವಾದ ಸಿನಿಮಾ ಅಲ್ಲ ಕನ್ನಡ ಸಿನಿಮಾ ಪ್ರಿಯರಿಗೆ ಕೂಡ ಬಹಳ ಇಷ್ಟವಾದ ಸಿನಿಮಾ ಇದು. ಮುಸ್ಸಂಜೆ ಮಾತು ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ರಮ್ಯಾ ಅವರ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾದ ಹಾಡುಗಳು ಇವತ್ತಿಗೂ ಎವರ್ ಗ್ರೀನ್. ಕನ್ನಡ ಸಿನಿಮಾ ಪ್ರಿಯರು ಸದಾ ತುಂಬಾ ಇಷ್ಟಪಡುವ ಏನಾಗಲಿ ಮುಂದೆ ಸಾಗು ನೀ ಹಾಡು ಎಲ್ಲರ ಮೆಚ್ಚಿನ ಹಾಡು. ಎಷ್ಟೋ ಜನರ ಬದುಕಿಗೆ ಸ್ಪೂರ್ತಿ ಆಗಿರುವ ಹಾಡು ಎಂದು ಹೇಳಿದರೆ ತಪ್ಪಲ್ಲ. ಇನ್ನು ರೋಮ್ಯಾಂಟಿಕ್ ಹಾಡು ನಿನ್ನ ನೋಡಲೆಂತೋ ಯುವ ಜನತೆಯ ಆಲ್ ಟೈಮ್ ಫೇವರೆಟ್. ಕದ್ದಳು ಮನಸ್ಸನ್ನ ಹಾಡು, ಅನುರಾಗ ಅರಳೋ ಸಮಯ ಹಾಡು ಎಲ್ಲವೂ ಜನರಿಗೆ ಬಹಳ ಇಷ್ಟವಾದ ಹಾಡುಗಳು. ರಮ್ಯಾ ಅವರ ಪಾತ್ರವಾಗಲಿ, ಸುದೀಪ್ ಅವರ ಪಾತ್ರವಾಗಲಿ ಸಾಮಾನ್ಯ ಜನರ ಬದುಕಿಗೆ ಬಹಳ ಹತ್ತಿರ ಎನ್ನಿಸುವ ಪಾತ್ರಗಳಾಗಿವೆ.

ಸುದೀಪ್ ಅವರು ಇದಕ್ಕಿಂತ ಮೊದಲು ಗೂಳಿ ಸಿನಿಮಾದಲ್ಲಿ ನಟಿಸಿದ್ದರು. ಅದು ಪಕ್ಕಾ ಮಾಸ್ ಸಿನಿಮಾ ಆಗಿತ್ತು, ಅದರ ನಂತರ ನಟಿಸಿದ ಮುಸ್ಸಂಜೆ ಮಾತು, ಲವರ್ ಬಾಯ್ ಲುಕ್ ನಲ್ಲಿ ಕಾಣಿಸಿಕೊಂಡ ಸಿನಿಮಾ. ಗೂಳಿ ಸಿನಿಮಾದಲ್ಲಿ ಉದ್ದ ಕೂದಲು, ರೌಡಿ ಲುಕ್ ನಲ್ಲಿದ್ದ ಸುದೀಪ್ ಅವರು, ಮುಸ್ಸಂಜೆ ಮಾತು ಸಿನಿಮಾಗಾಗಿ ತೂಕ ಇಳಿಸಿಕೊಂಡು, ಕೂದಲನ್ನು ಶಾರ್ಟ್ ಮಾಡಿಸಿ, ಥೇಟ್ ರೇಡಿಯೋ ಜಾಕಿ ಅಂತೆಯೇ ಕಾಣಿಸಿಕೊಂಡಿದ್ದರು. ಇವರ ಪಾತ್ರದ ಹೆಸರು ಪ್ರದೀಪ. ಪ್ರತಿದಿನ ಸಂಜೆ ರೇಡಿಯೋದಲ್ಲಿ ಮುಸ್ಸಂಜೆ ಮಾತು ಎನ್ನುವ ಕಾರ್ಯಕ್ರಮ ನಡೆಸಿಕೊಡುವ ಪಾತ್ರವದು. ನೊಂದವರ ಮನಸ್ಸಿಗೆ ನೆಮ್ಮದಿ ನೀಡುವಂತಹ ಪಾತ್ರ. ಇದು ಸುದೀಪ್ ಅವರ ಕೆರಿಯರ್ ನ ಬೆಸ್ಟ್ ಪಾತ್ರಗಳಲ್ಲಿ ಒಂದು ಎಂದು ಹೇಳಿದರು ಸಹ ತಪ್ಪಲ್ಲ. ಇನ್ನು ರಮ್ಯಾ ಅವರ ಪಾತ್ರದ ಹೆಸರು ತನು, ಅಮ್ಮನನ್ನು ಕಳೆದುಕೊಂಡು, ತಂದೆ ಕುಡುಕರಾದ ಕಾರಣ ದಿನಾ ನೋವಲ್ಲೇ ಕಳೆಯುತ್ತಿರುವ ಹುಡುಗಿ.
ಆರ್.ಜೆ ಪ್ರದೀಪ ಜೊತೆಗೆ ಮುಸ್ಸಂಜೆ ಮಾತು ಕಾರ್ಯಕ್ರಮದಲ್ಲಿ ಮಾತಾಡೋ ಮಾತುಗಳು ತನು ಮನಸ್ಸಿಗೆ ಭರವಸೆ ಮತ್ತು ಸಮಾಧಾನ ತರುತ್ತದೆ. ತನು ಬೆಂಗಳೂರಿಗೆ ಬಂದು ಹೊಸ ಬದುಕು ಕಟ್ಟಿಕೊಳ್ಳುತ್ತಾಳೆ. ಅಲ್ಲಿ ಪ್ರದೀಪ್ ಪರಿಚಯ ಆಗುತ್ತದೆ, ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ. ಪ್ರದೀಪನಿಗೆ ತನು ಮೇಲೆ ಪ್ರೀತಿ ಇರುತ್ತದೆ. ಇನ್ನೇನು ತನು ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎನ್ನುವ ಹೊತ್ತಲ್ಲೇ ತನುಗೆ ಮದುವೆ ಫಿಕ್ಸ್ ಆಗಿದೆ ಎಂದು ಗೊತ್ತಾಗುತ್ತದೆ. ಮುಂದೆ ಏನಾಗುತ್ತದೆ? ಇವರಿಬ್ಬರು ಒಂದಾಗುತ್ತಾರಾ? ಎನ್ನುವುದೇ ಸಿನಿಮಾದ ಕಥೆ. ಮುಸ್ಸಂಜೆ ಮಹೇಶ್ ಅವರು ನಿರ್ದೇಶನ ಮಾಡಿದ ಈ ಸಿನಿಮಾಗೆ ಭರ್ಜರಿ ಯಶಸ್ಸು ಕಂಡಿತ್ತು. 2008ರ ಬ್ಲಾಕ್ ಬಸ್ಟರ್ ಆಗಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಜನರಿಗೆ ಕನೆಕ್ಟ್ ಆಗುವಂಥ ಪಾತ್ರ ಆಗಿತ್ತು.

ನಾಯಕ ಮತ್ತು ನಾಯಕಿಯಾಗಿ ಸುದೀಪ್ ಅವರು ಮತ್ತು ರಮ್ಯಾ ಅವರು ನಟಿಸಿದರೆ, ರಮ್ಯಾ ಅವರ ಬೆಸ್ಟ್ ಫ್ರೆಂಡ್ ಪಾತ್ರದಲ್ಲಿ ಅನುಪ್ರಭಾಕರ್ ಅವರು ನಟಸಿದ್ದರು. ಸುಮಿತ್ರಾ ಅವರು, ಪದ್ಮಾ ಅವರು, ರಮೇಶ್ ಭಟ್ ಅವರು ಇವರೆಲ್ಲರೂ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಅನು ಪ್ರಭಾಕರ್ ಅವರ ಪಾತ್ರ ಸಹ ಜನರಿಗೆ ಬಹಳ ಇಷ್ಟವಾದ ಪಾತ್ರ ಆಗಿದೆ. ಇವತ್ತಿಗೂ ಈ ಸಿನಿಮಾ ಟಿವಿಯಲ್ಲಿ ಬಂದರೆ ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ. ಇಂಥ ಸಿನಿಮಾಗೆ ಅದ್ಭುತವಾದ ಸಂಗೀತ ನೀಡಿ, ಸದಾ ನೆನಪಿನಲ್ಲಿ ಉಳಿಯುವಂಥ ಹಾಡುಗಳನ್ನು ನೀಡಿದವರು ಶ್ರೀಧರ್ ವಿ ಸಂಭ್ರಮ್ ಅವರು. ಏನಾಗಲಿ ಮುಂದೆ ಸಾಗು ನೀ ಹಾಡು ಸಿನಿಮಾ ಪ್ರಿಯರಿಗೆ ಮಾತ್ರವಲ್ಲ ಸುದೀಪ್ ಅವರಿಗೂ ಬಹಳ ವಿಶೇಷವಾದ ಹಾಡು. ಯಾವುದೇ ಕಾರ್ಯಕ್ರಮದಲ್ಲಿ ಅಥವ ಎಲ್ಲಾ ಕಡೆ ಈ ಹಾಡನ್ನು ಜನರು ತುಂಬಾ ಇಷ್ಟಪಡುತ್ತಾರೆ.
ಸುದೀಪ್ ಅವರ ತಾಯಿಗೆ ಸಹ ಏನಾಗಲಿ ಮುಂದೆ ಸಾಗು ನೀ ಬಹಳ ಇಷ್ಟವಾದ ಹಾಡು. ಬಹಳ ವರ್ಷಗಳ ಕಾಲ ಇದೇ ಹಾಡು ಸುದೀಪ್ ಅವರ ತಾಯಿಯ ಫೋನ್ ನಂಬರ್ ನ ಕಾಲರ್ ಟ್ಯೂನ್ ಆಗಿತ್ತಂತೆ. ಈ ವಿಷಯವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಸಿನಿಮಾ ಬಗ್ಗೆ ಮಾತನಾಡಿರುವ ವಿಶೇಷ ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟ್ವೀಟ್ ಮಾಡಿ, ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಸುದೀಪ್ ಅವರು. ಮುಸ್ಸಂಜೆ ಮಾತು ಸಿನಿಮಾ 17 ವರ್ಷ ಪೂರೈಸಿದ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳು ಕೂಡ ಈ ವಿಶೇಷ ಸಿನಿಮಾ ಬಗ್ಗೆ ಸ್ಪೆಷಲ್ ಪೋಸ್ಟ್ ಗಳನ್ನು ಹಂಚಿಕೊಂಡು, ಸುದೀಪ್ ಅವರಿಗೆ ಮತ್ತು ರಮ್ಯಾ ಅವರಿಗೆ ಧನ್ಯವಾದವನ್ನು ಸಹ ತಿಳಿಸಿದ್ದಾರೆ. ಈ ಸಿನಿಮಾದ ಬಜೆಟ್ ಮತ್ತು ಹಣಗಳಿಕೆ ಬಗ್ಗೆ ಹೇಳುವುದಾದರೆ, ಅದು ಕೂಡ ಬಹಳ ಸ್ಪೆಷಲ್ ಆಗಿಯೇ ಇದೆ. ಮಾಹಿತಿಗಳ ಅನುಸಾರ ಮುಸ್ಸಂಜೆ ಮಾತು ಸಿನಿಮಾದ ಒಟ್ಟು ಬಜೆಟ್ 3.20 ಕೋಟಿ ರೂಪಾಯಿ ಆಗಿತ್ತು.
17 ವರ್ಷಗಳ ಹಿಂದೆ ಆ ಸಿನಿಮಾ ಗಳಿಸಿದ್ದು ಸುಮಾರು 4.20 ಕೋಟಿ ರೂಪಾಯಿಗಳು. ಸ್ಯಾಟಿಲೈಟ್ ರೈಟ್ಸ್ ಎಲ್ಲವನ್ನು ಸೇರಿಸಿ ಸಿನಿಮಾ 4.20 ಕೋಟಿ ರೂಪಾಯಿ ಗಳಿಸಿತ್ತು. ಇನ್ನು ಮುಸ್ಸಂಜೆ ಮಾತು ಸಿನಿಮಾಗೆ ಸುದೀಪ್ ಅವರು 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಈ ರೀತಿ ಇತ್ತು ಸಿನಿಮಾದ ಕಲೆಕ್ಷನ್ ಮತ್ತು ಸಕ್ಸಸ್ ಸ್ಟೋರಿ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸ್ಟೋರಿ ಗಳಲ್ಲಿ, ಸಿನಿಮಾಗಳಲ್ಲಿ ಇದು ಕೂಡ ಒಂದು. ಸುದೀಪ್ ಅವರು ಇಂಥದ್ದೊಂದು ಲವ್ ಸ್ಟೋರಿ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವನ್ನು ಸುದೀಪ್ ಅವರು ಮತ್ತೆ ಮಾಡಬೇಕು ಅನ್ನೋದು ಸುದೀಪ್ ಅವರ ಫ್ಯಾನ್ಸ್ ಆಸೆ.



